ಧ್ಯಾನದ ಕಾರ್ಯಕ್ರಮಗಳು
ಧ್ಯಾನವೆಂದರೆ, ಏನೂ ಮಾಡದಿರುವ ಒಂದು ಸೂಕ್ಷ್ಮ ಕಲೆ
ಜೀವನವನ್ನೇ ಪರಿವರ್ತಿಸುತ್ತದೆ

ಸುದರ್ಶನ ಕ್ರಿಯೆಯು ಇದು ಜನರಲ್ಲಿರುವ ಆತಂಕವನ್ನು 44 ಶೇಕಡಾದಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.

ಸುದರ್ಶನ ಕ್ರಿಯೆಯು ನಮ್ಮ ಶರೀರದಲ್ಲಿ, ಸಾಮರಸ್ಯದೊಂದಿಗೆ ಸೌಹಾರ್ದತೆಯನ್ನು ತರುವಲ್ಲಿ ಸಹಕಾರಿಯಾಗಿದೆ.

ಜೀವನ ಪರಿವರ್ತಕವಾದಂತಹ ಉಸಿರಾಟದ ಪ್ರಕ್ರಿಯೆ
ಸುದರ್ಶನ ಕ್ರಿಯೆ™
ಈ ಕಾರ್ಯಕ್ರಮದ ಹೃದ್ಭಾಗವೆಂದರೆ ಶಕ್ತಿಶಾಲಿಯಾದ ಸುದರ್ಶನ ಕ್ರಿಯೆಯೆಂಬ ಉಸಿರಾಟದ ಪ್ರಕ್ರಿಯೆ. 50 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಲಾದ ವೈಜ್ಞಾನಿಕ ಸಂಶೋಧನೆಗಳು- ಒತ್ತಡವನ್ನು ನಿಭಾಯಿಸುವಲ್ಲಿ ಮತ್ತು ಒಳಿತನ್ನು ಹೆಚ್ಚಿಸುವಲ್ಲಿ, ಸುದರ್ಶನ ಕ್ರಿಯೆಯು ಪರಿಣಾಮಕಾರಿ ಎಂದು ಸಿದ್ಧಪಡಿಸಿವೆ. ಆರ್ಟ್ ಆಫ್ ಲಿವಿಂಗ್ ನ ಶಾಲಾ ಕಾರ್ಯಕ್ರಮಗಳು ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಪ್ರಯೋಜನಕಾರಿಯಾದ ಅಭ್ಯಾಸ ಮತ್ತು ಪ್ರಕ್ರಿಯೆಗಳನ್ನು ಹೊಂದಿವೆ.
ಮೂಲ ಮತ್ತು ಪ್ರಯೋಜನಗಳುಯೋಗ ಕಾರ್ಯಕ್ರಮಗಳು
ಶರೀರ ಮತ್ತು ಮನಸ್ಸುಗಳ ಸಂಯೋಗವೇ ಯೋಗ
ನನ್ನ ಚೈತನ್ಯ ಹೆಚ್ಚಾಗಿದೆ, ಮತ್ತು ಮುಖ್ಯವಾಗಿ, ನನಗೆ ನನ್ನ ಮನಸ್ಸಿನಿಂದ ನಕಾರಾತ್ಮಕತೆಯನ್ನು ಹೊರಹಾಕಲು ಒಂದು ಸಾಧನ ದೊರೆತಂತಾಗಿದೆ. ಒತ್ತಡ ಭರಿತ ದಿನದ ನಂತರ ನಾನು ಚೈತನ್ಯಕ್ಕಾಗಿ, ಸಂಪೂರ್ಣವಾಗಿ ಸುದರ್ಶನ ಕ್ರಿಯೆಯ ಮೇಲೆ ಅವಲಂಬಿಸಬಹುದು.

ಶಶಾಂಕ್ ದೀಕ್ಷಿತ್, 40
ಐಟಿ ಸೆಕ್ಯುರಿಟಿ ತಜ್ಞ
ಇದರ ಅತ್ಯುತ್ತಮ ಭಾಗವೆಂದರೆ, ಕಡಿಮೆ ಸಮಯದಲ್ಲಿ ಮಾಡ ಬಯಸಿದ ಸಾಧನೆ ಹಾಗು ನಿರ್ವಹಿಸ ಬಯಸಿದ ಕೆಲಸಗಳಲ್ಲಿ ಸಮರ್ಥನಾಗಿದ್ದೇನೆ. ನನ್ನ ಕೆಲಸದ ಮೇಲೆ ಸುಲಭವಾಗಿ ಗಮನ ಕೇಂದ್ರೀಕರಿಸಬಹುದು, ಹೊಸ ಹೊಸ ಪ್ರಾಜೆಕ್ಟ್ಗಳನ್ನು ತೆಗೆದುಕೊಳ್ಳಬಹುದು, ಈಜು ಕಲಿತೆ, ಸಂಗೀತ ಕಲಿತೆ, ಮತ್ತು ಒಟ್ಟಾರೆ ನನ್ನ…

ಅಮನ್ ಕೆ. ಲೋಹಿಯಾ, 35
ಸಾಫ್ಟ್ವೇರ್ ತಜ್ಞ
ಸುದರ್ಶನ ಕ್ರಿಯೆಯ ನಂತರ, ನಾನು ನನ್ನ ಕೌಶಲ್ಯಗಳನ್ನು ವಿಸ್ತರಿಸಲು ಸಾಧ್ಯವಾಗಿದೆ, ಉದಾಹರಣೆಗೆ, ಕಾರ್ಯಕ್ರಮಗಳನ್ನು ಆಯೋಜಿಸುವ ಮತ್ತು ಸಂಯೋಜಿಸುವ ನನ್ನ ಸಾಮರ್ಥ್ಯ ಉತ್ತಮವಾಗಿದೆ. ಇದು ನನಗೆ ವಿವಿಧ ರೀತಿಯ ಜನರೊಂದಿಗೆ ಮತ್ತು ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ಸಹಾಯ ಮಾಡಿದೆ.

ಸೌರಭ್ ಪಾಲ್
ಇಂಜಿನಿಯರ್ ಮತ್ತು ತಬಲಾ ವಾದಕ
ದುಃಖದಿಂದಿರುವುದು ಸಾಮಾನ್ಯವಾದ ಸ್ಥಿತಿ ಎಂದು ನಾನು ಭಾವಿಸಿದ್ದೆ. ಆದರೆ ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡಲು ಆರಂಭಿಸಿದ ನಂತರ ನನ್ನ ಹೆಸರು ಈಗ “ಖುಷಿ” ಎಂದೇ ಬದಲಾಗಿದೆ. ಈಗ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದೇನೆ.

ಶೈಲಜಾ, 38
ಪ್ರಶಿಕ್ಷಕಿ, ಐಟಿ ತಜ್ಞ
ಸಂಸ್ಥಾಪಕರು, ದಿ ಆರ್ಟ್ ಆಫ್ ಲಿವಿಂಗ್
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕ ಮತ್ತು ಶಾಂತಿಯ ರಾಯಭಾರಿಯೆಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಪೂಜ್ಯ ಗುರು ದೇವರ ವಿಶಾಲವಾದ ದೃಷ್ಟಿಕೋಣದಿಂದಾಗಿ, ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ,ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಸ್ವಾಸ್ತ್ಯಗಳಿಗೆ ಆದ್ಯತೆಯನ್ನು ನೀಡುವಂತಾಗಿ, 182ಕ್ಕೂ ಹೆಚ್ಚಿನ ದೇಶಗಳಲ್ಲಿ ಸಾಮಾಜಿಕ ಪರಿವರ್ತನೆಯುಂಟಾಗಿದೆ . ಇದು ಜಾಗತಿಕ ಮಟ್ಟದಲ್ಲಿಯೇ ಒಂದು ದೊಡ್ಡ ಚಳುವಳಿಯನ್ನು ಹುಟ್ಟುಹಾಕಿದೆ. ಇದರಿಂದಾಗಿ ಸುಮಾರು 80 ಕೋಟಿಗೂಗಿಂತಲೂ ಹೆಚ್ಚಿನ ಜನರ ಜೀವನದಲ್ಲಿ ಧನಾತ್ಮಕವಾಗಿ ಪರಿವರ್ತನೆಯು ಉಂಟಾಗಿದೆ.
ಜೀವನಚರಿತ್ರೆನಾನು ಕಾರ್ಯಕ್ರಮಕ್ಕೆ ಸೇರಲು ಬಯಸುತ್ತೇನೆ ಆದರೆ...
ಧ್ಯಾನವನ್ನು ಕಲಿಯಬೇಕಾದದ್ದು 60 ವರ್ಷಕ್ಕಿಂತ ಮೇಲ್ಪಟ್ಟವರು, ಅಲ್ಲವೇ?
ಧ್ಯಾನವು ನಮ್ಮ ಜೀವನದಲ್ಲಿ ತಂದು ಕೊಡುವ ಪ್ರಯೋಜನಗಳನ್ನು ನೋಡಿದರೆ, ನಮಗೆ ಎಷ್ಟೊಂದು ಅದರ ಅಗತ್ಯವಿದೆ ಎನ್ನುವುದು ನಿಮಗೆ ವೇದ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ, ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲಿಕ್ಕಾಗಿ ಧ್ಯಾನವನ್ನು ಒಂದು ಮಾರ್ಗವನ್ನಾಗಿ ಬಳಸಲಾಗುತ್ತಿತ್ತು. ದುಃಖ ಮತ್ತು ಸಮಸ್ಯೆಗಳನ್ನು ಜಯಿಸಲು ಕೂಡ ಧ್ಯಾನವು ಒಂದು ಮಾರ್ಗವಾಗಿತ್ತು. ಅದು ವ್ಯಕ್ತಿಯಲ್ಲಿರುವ ಸಾಮರ್ಥ್ಯವನ್ನು ಹೆಚ್ಚಿಸಿ, ಅವನಿಗೆ ಅಭಿವೃದ್ಧಿಯನ್ನು ತಂದು ಕೊಡುವ ಒಂದು ಪಥವಾಗಿತ್ತು.
ನೀವು ಬೇಕಾದರೆ ಆತ್ಮ ಸಾಕ್ಷಾತ್ಕಾರ ದಂತಹ ಮಹಾನ್ ಗುರಿಗಳನ್ನು ಬದಿಗಿರಿಸಬಹುದು. ಆದರೆ ಈಗಿನ ಸಮಾಜದಲ್ಲಿರುವ ಒತ್ತಡ ಮತ್ತು ಉದ್ವೇಗಗಳನ್ನು ನಿವಾರಿಸಬೇಕಾದರೆ, ಧ್ಯಾನದ ಅವಶ್ಯಕತೆಯು ಅತ್ಯಂತ ಅಗತ್ಯವೆನ್ನುವುದು ಕಂಡು ಬರುತ್ತದೆ . ನೀವು ಹೆಚ್ಚಿನ ಮಟ್ಟದ ಜವಾಬ್ದಾರಿಯನ್ನು ತೆಗೆದುಕೊಂಡಷ್ಟು ಅಧಿಕವಾಗಿ ನೀವು ಧ್ಯಾನವನ್ನು ಮಾಡಲೇಬೇಕಾಗುತ್ತದೆ. ನಿಮ್ಮ ಜವಾಬ್ದಾರಿಗಳು ಮತ್ತು ಮಹತ್ವಾಕಾಂಕ್ಷೆಗಳು ಅಧಿಕವಾಗಿವೆ ಎಂದಾದರೆ, ಅವುಗಳನ್ನು ಪೂರೈಸಲು, ನಿಮಗೆ ಧ್ಯಾನವು ಒಂದು ಅನಿವಾರ್ಯತೆ ಹಾಗೂ ಅಗತ್ಯತೆ.
ನಿಮಗೆ ಮಾಡಲಿಕ್ಕೆ ಏನೂ ಇಲ್ಲವೆಂದಾದರೆ, ಬಹುಷ್ಯ: ನಿಮಗೆ ಧ್ಯಾನದ ಅಗತ್ಯವಿರಲಿಕ್ಕಿಲ್ಲ. ಒಂದು ವೇಳೆ ನೀವು ಅವಿಶ್ರಾಂತವಾಗಿ ಹೆಚ್ಚು ಹೆಚ್ಚು ಕೆಲಸಕಾರ್ಯಗಳನ್ನು ನಿರ್ವಹಿಸಬೇಕೆಂದಾದರೆ; ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮಲ್ಲಿ ಕಡಿಮೆ ಸಮಯವು ಇರುವುದೆಂದಾದರೆ; ನಿಮ್ಮಲ್ಲಿ ಹೆಚ್ಚುವರಿ ಆಸೆಗಳು ಮತ್ತು ಮಹತ್ವಾಕಾಂಕ್ಷೆಗಳಿದ್ದರೆ - ನಿಮಗೆ ಧ್ಯಾನ ಮಾಡುವ ಅವಶ್ಯಕತೆಯು ಇನ್ನೂ ಹೆಚ್ಚು. ಏಕೆಂದರೆ ಧ್ಯಾನವು ನಿಮ್ಮ ದಣಿವು ಮತ್ತು ಒತ್ತಡಗಳನ್ನು ನಿವಾರಿಸುವುದಷ್ಟೇ ಅಲ್ಲದೆ, ಅದು ನಿಮ್ಮ ಸಾಮರ್ಥ್ಯಗಳನ್ನು ಕೂಡ ಹೆಚ್ಚು ಮಾಡುತ್ತದೆ ಮತ್ತು ನಿಮ್ಮ ನರಮಂಡಲ ಹಾಗೂ ಮನಸ್ಸುಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಧ್ಯಾನವು ನಿಮ್ಮ ಒತ್ತಡ ಮತ್ತು ಉದ್ವೇಗಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ; ಧ್ಯಾನವು ನಿಮ್ಮ ದೇಹದಿಂದ ವಿಷಕಾರಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಧ್ಯಾನವು ನಿಮ್ಮ ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ ಎಲ್ಲಾ ವಿಧದಲ್ಲಿಯೂ ನಿಮ್ಮಲ್ಲಿ ಸುಧಾರಣೆಯನ್ನು ತರುತ್ತದೆ. ನಿಮಗೆ ಇನ್ನೇನು ಬೇಕು? ನೀವು ಸಂತೋಷದಿಂದ ಮತ್ತು ಆರೋಗ್ಯದಿಂದ ಬಾಳಬೇಕೆಂದು ಬಯಸುವುದಾದರೆ, ನೀವು ಧ್ಯಾನವನ್ನು ಮಾಡಲೇಬೇಕು!!!
ನನ್ನ ಶರೀರವು ಬೇಕಾದ ಹಾಗೆ ಬಗ್ಗಿಸಲು ಸಹಕರಿಸುವುದಿಲ್ಲ
ಆರ್ಟ್ ಆಫ್ ಲಿವಿಂಗ್ ನೀಡುವ ಕೋರ್ಸ್ಗಳ ಪ್ರಯೋಜನವನ್ನು ಪಡೆಯಬೇಕಾದರೆ ನೀವು ನಿಮ್ಮ ತಲೆ ಕೆಳಗೆ ಮಾಡಿ ಅದರ ಮೇಲೆ ನಿಲ್ಲುವ ಅಗತ್ಯವೇನಿಲ್ಲ!
ನಮ್ಮ ಕಾರ್ಯಕ್ರಮಗಳಲ್ಲಿ ಕಲಿಸುವ ಉಸಿರಾಟ ಮತ್ತು ಧ್ಯಾನದ ಪ್ರಕ್ರಿಯೆಗಳಿಗೆ ಯಾವುದೇ ರೀತಿಯ ವಿಶೇಷವಾದ ದೈಹಿಕ ಕೌಶಲ್ಯಗಳ ಅಗತ್ಯವಿಲ್ಲ ಮತ್ತು ಪ್ರಪಂಚದಾದ್ಯಂತ ಸುಮಾರು ಐದರಿಂದ, ತೊಂಬತ್ತು ವರ್ಷ ವಯಸ್ಸಿನ ವರೆಗಿನ ಲಕ್ಷಾಂತರ ಜನರು ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದಾರೆ!
ನಾನೀಗ ಬ್ಯುಸಿಯಾಗಿದ್ದೇನೆ
ಈಗ ನೀವು ಬ್ಯುಸಿಯಾಗಿದ್ದೀರಿ. ಹಾಗಾದರೆ ನೀವು ಯಾವಾಗ ಸಂತೋಷವಾಗಿರುತ್ತೀರಿ? ಸಂತೋಷವು ವರ್ತಮಾನ ಕ್ಷಣದಲ್ಲಿ ಮಾತ್ರ ದೊರೆಯುವಂತಹುದು. ಆದರೂ ಸಾಮಾನ್ಯವಾಗಿ ಮನಸ್ಸು ಮಾತ್ರ ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ನಡುವೆ , ಹಿಂದಕ್ಕೆ ಮತ್ತು ಮುಂದಕ್ಕೆ ,ತೂಗಾಡುತ್ತಲೇ ಇರುವುದನ್ನು ನೀವು ಗಮನಿಸಿರಬಹುದು. ಹಿಂದೆ ಸಂಭವಿಸಿದ ಯಾವುದೋ ವಿಷಯದ ಬಗ್ಗೆ ನಾವು ಪಶ್ಚಾತ್ತಾಪ ಪಡುತ್ತೇವೆ ಅಥವಾ ಕೋಪಗೊಳ್ಳುತ್ತೇವೆ ಅಥವಾ ಮುಂದಿನ ಪರಿಸ್ಥಿತಿಗಳ ಬಗ್ಗೆ ಆತಂಕಪಟ್ಟುಕೊಂಡು ಚಿಂತೆ ಮಾಡುತ್ತೇವೆ. ನಿಮ್ಮ ಮನಸ್ಸನ್ನು ನೀವು ಗಮನಿಸಿ ನೋಡಿ. ನಿಮ್ಮದೇ ಮನಸ್ಸನ್ನು ನೀವು ಸರಿಯಾಗಿ ಅವಲೋಕಿಸಿದರೆ, ನೀವು ಯಾವಾಗಲೂ ಒಳ್ಳೆಯ ವಿಷಯಗಳನ್ನು ಮುಂದೂಡುತ್ತೀರಿ ; ಆದರೆ ನಕಾರಾತ್ಮಕ ವಿಚಾರಗಳನ್ನು ಎಂದೂ ಮುಂದೂಡುವುದಿಲ್ಲ ಎನ್ನುವುದು ನಿಮಗೆ ತಿಳಿಯುತ್ತದೆ. ನೀವು ಎಂದಿಗೂ "ನಾನು ನನ್ನ ಕೋಪವನ್ನು ಮುಂದೂಡುತ್ತೇನೆ" ಎಂದು ಹೇಳುವುದಿಲ್ಲ, ಅಲ್ಲವೇ? ಎಲ್ಲವೂ ಪರಿಪೂರ್ಣವಾಗಿ ಸರಿಹೊಂದುವ ದಿನದಂದು ನಾನು ಸಂತೋಷವಾಗಿರುತ್ತೇನೆ ಎಂಬುದಾಗಿ, ನೀವು ನಿಮ್ಮ ಸಂತೋಷವನ್ನು ಮುಂದೂಡುತ್ತಾ ಹೋಗುತ್ತೀರಿ. ಆದರೆ ನಿಮ್ಮ ಜೀವನದಲ್ಲಿ ಆ ದಿನವು ಎಂದಿಗೂ ಬರುವುದಿಲ್ಲ. ನೀವು ಈ ಕ್ಷಣದಲ್ಲಿ ಈಗಿನ ಜೀವನವನ್ನು ಅನುಭವಿಸಿದರೆ, ನಾಳೆಯ ದಿನವು ನಾಳೆಯದನ್ನು ತನ್ನಂತಾನೇ ನೋಡಿಕೊಳ್ಳುತ್ತದೆ. ಇದುವೇ ಆರ್ಟ್ ಆಫ್ ಲಿವಿಂಗ್.ಈ ಕಾರ್ಯಕ್ರಮಗಳನ್ನು ರಚಿಸಿದವರು ಯಾರು?
1982 ರಲ್ಲಿ, ಭಾರತ ದೇಶದ ಶಿವಮೊಗ್ಗ ಜಿಲ್ಲೆಯಲ್ಲಿ, ಈಗಿನ ಜಾಗತಿಕ ಮಾನವತಾವಾದಿಯಾಗಿದ್ದು, ಪ್ರಪಂಚದಾದ್ಯಂತ ಆಧ್ಯಾತ್ಮಿಕ ನಾಯಕರೆಂದು ಪ್ರಸಿದ್ಧಿ ಪಡೆದಿರುವ ಪೂಜ್ಯರಾದ ಶ್ರೀ ಶ್ರೀ ರವಿಶಂಕರ್ ಗುರುದೇವರು ಹತ್ತು ದಿನಗಳ ಮೌನದಲ್ಲಿದ್ದಾಗ, ಅವರ ಮೂಲಕ ದಿವ್ಯವಾದ ಸುದರ್ಶನ ಕ್ರಿಯೆಯು ಜನ್ಮ ತಾಳಿತು. ಪೂಜ್ಯ ಗುರುದೇವರ ಮಾತುಗಳಲ್ಲಿ ಹೇಳುವುದಾದರೆ, :"ನಾನು ಈಗಾಗಲೇ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ. ನಾನು ಯೋಗ ಮತ್ತು ಧ್ಯಾನವನ್ನು ಕಲಿಸಿದ್ದೇನೆ. ಆದರೂ, ಜನರು ಸಂತೋಷದಿಂದ ಬದುಕಲು ಹೇಗೆ ಸಹಾಯ ಮಾಡಬಹುದು ಎಂಬುದರ ಬಗ್ಗೆಯೇ ನಾನು ಸದಾ ಕಾಲವೂ ಚಿಂತಿಸುತ್ತಿದ್ದೆ. ಎಲ್ಲಿಯೋ,ಏನೋ , ಒಂದು ಕೊರತೆಯಿದೆಯೆಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಜನರು ಪ್ರತಿನಿತ್ಯ ಸಾಧನೆ ಅಥವಾ ಅಭ್ಯಾಸಗಳನ್ನು ಮಾಡುತ್ತಿದ್ದರೂ, ತಮ್ಮ ನಿಜ ಜೀವನದಲ್ಲಿ ಅವರ ಬದುಕು ವಿವಿಧ ದಿಶೆಗಳಲ್ಲಿ ಕವಲೊಡೆದು, ಬಹುಮಟ್ಟಿಗೆ ವಿಭಿನ್ನ ವ್ಯಕ್ತಿತ್ವವನ್ನು ಹೊರ ಹೊಮ್ಮಿಸುತ್ತಿರುವಂತೆ ಕಂಡು ಬರುತ್ತಿತ್ತು. ಆದ್ದರಿಂದ, ಆಂತರಿಕ ಮೌನ ಮತ್ತು ಜೀವನದ ಬಾಹ್ಯ ಅಭಿವ್ಯಕ್ತತೆಗಳ ನಡುವಿನ ಅಂತರವನ್ನು, ಸೇತುವೆಯಂತೆ ಹೇಗೆ ಜೋಡಿಸಬಹುದು ಎಂದು ನಾನು ಯೋಚಿಸುತ್ತಿದ್ದೆ”.
“ಹತ್ತು ದಿನಗಳ ಮೌನದ ಅವಧಿಯಲ್ಲಿ, ಸುದರ್ಶನ ಕ್ರಿಯಾ™ , ಒಂದು ಸ್ಫೂರ್ತಿಯಂತೆ ಉಧ್ಭವಿಸಿತು. ಪ್ರಕೃತಿಗೆ ಏನನ್ನು ಕೊಡಬೇಕು ಮತ್ತು ಯಾವಾಗ ಕೊಡಬೇಕು ಎನ್ನುವುದು ಖಚಿತವಾಗಿ ತಿಳಿದಿದೆ. ಮೌನದಿಂದ ಹೊರಬಂದ ಬಳಿಕ, ನನಗೆ ತಿಳಿದಿರುವುದನ್ನು ನಾನು ಕಲಿಸಲು ಪ್ರಾರಂಭಿಸಿದೆ ಮತ್ತು ಜನರಿಗೆ ಇದರಿಂದ ಅದ್ಭುತವಾದ ಅನುಭವಗಳು ಲಭಿಸಿದುವು.”
~ ಗುರುದೇವ ಶ್ರೀ ಶ್ರೀ ರವಿಶಂಕರ್
ಅಂದಿನಿಂದ, ಸುದರ್ಶನ್ ಕ್ರಿಯಾ™ - ಎನ್ನುವ ಶಕ್ತಿಯುತವಾದ, ಲಯಬದ್ಧವಾದ ಉಸಿರಾಟದ ಪ್ರಕ್ರಿಯೆಯು ಆರ್ಟ್ ಆಫ್ ಲಿವಿಂಗ್ ನ ಎಲ್ಲಾ ಕೋರ್ಸ್ಗಳ ಮೂಲಾಧಾರವಾಗಿದೆ. ಮೊದಲನೆಯ ಕೋರ್ಸನ್ನು ಶಿವಮೊಗ್ಗದಲ್ಲಿ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರೇ ಕಲಿಸಿದರು. ಅವರು ಪ್ರಾಚೀನ ಜ್ಞಾನವನ್ನು ಆಧುನಿಕ ದಿನಗಳಿಗೆ ಸರಿಹೊಂದುವಂತೆ ಪ್ರತ್ಯಕ್ಷವಾಗಿ ಹಾಗೂ ಪ್ರಾಯೋಗಿಕವಾಗಿ ವಿಜ್ಞಾನದೊಂದಿಗೆ ಬೆಸೆದು ಒಂದಾಗಿಸಿ , ಜನತೆಗೆ ನೀಡಿದ್ದಾರೆ . ಕಳೆದ ನಾಲ್ಕು ದಶಕಗಳಿಂದ ಲಕ್ಷಾಂತರ ಜನರಿಗೆ- ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಹೇಳಿಕೊಟ್ಟು , ಅವರಿಗೆ ತಮ್ಮ ದೈನಂದಿನ ಜೀವನದಲ್ಲಿ ಪ್ರತ್ಯಕ್ಷವಾದ ಅನುಭವವು ದೊರೆಯುವಂತೆ ಮಾಡಿ, ಅವರೆಲ್ಲರ ಜೀವನದಲ್ಲಿ ಅಗಾಧವಾದ ಪರಿವರ್ತನೆಯನ್ನು ತಂದಿದ್ದಾರೆ.
ನಾನು ಎಷ್ಟು ಬೇಗ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ?
ಆರ್ಟ್ ಆಫ್ ಲಿವಿಂಗ್ ಕೋರ್ಸ್ಗಳ ಮೂಲಾಧಾರವೇ "ಸುದರ್ಶನ ಕ್ರಿಯೆ™" ಎನ್ನುವ ಪ್ರಕ್ರಿಯೆ. ‘ಸುದರ್ಶನ’ ಎಂದರೆ ನಾನು ಯಾರು ಎನ್ನುವುದರ ಬಗ್ಗೆ ಇರುವ ಸರಿಯಾದ ಮಾಹಿತಿ, ದರ್ಶನ ಅಥವಾ ದೃಷ್ಟಿ. "ಕ್ರಿಯೆ" ಎಂದರೆ ಶುದ್ಧೀಕರಣದ ಕೆಲಸ. ಉಸಿರಾಟದಿಂದ ಮಾಡುವ ಶುದ್ಧೀಕರಣದ ಕ್ರಿಯೆಯಿಂದಾಗಿ ಮನಸ್ಸಿಗೆ ಆಳವಾದ ವಿಶ್ರಾಂತಿಯು ದೊರೆತು, ಅದು ಶಾಂತವಾಗುತ್ತದೆ ಮತ್ತು ದೇಹದ ಪ್ರತಿಯೊಂದು ಜೀವಕೋಶವು ಶಕ್ತಿಯಿಂದ ತುಂಬಿತುಳುಕಿ ಪುನಶ್ಚೇತನಗೊಳ್ಳುತ್ತದೆ. ಈ ಶುದ್ಧೀಕರಣದ ಕ್ರಿಯೆಯು ಎಷ್ಟೊಂದು ಪ್ರಬಲವಾಗಿರುವುದೆಂದರೆ, ಇದು ನಡೆಯುತ್ತಿರುವಾಗ, ಎಲ್ಲಾ ವಿಧದ ಒತ್ತಡಗಳು ಕರಗಿ ನಿರ್ನಾಮವಾಗಿ ಹೋಗುತ್ತವೆ. . ನೀವು ಮೊದಲನೆಯ ಬಾರಿಗೆ ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡಿದ ಒಂದು ಗಂಟೆಯಲ್ಲಿಯೇ, ಹೇಗೆ ಶಕ್ತಿ ಮತ್ತು ಆಮ್ಲಜನಕಗಳು ನಿಮ್ಮ ದೇಹದ ಮತ್ತು ಮನಸ್ಸಿನ ಪ್ರತಿಯೊಂದು ಜೀವಕೋಶದೊಳಗೆ ಆಳವಾಗಿ ಇಳಿದು, ಎಷ್ಟೊಂದು ಆಳವಾದ ಮಟ್ಟದಲ್ಲಿ ಎಲ್ಲವನ್ನೂ ಶುದ್ಧೀಕರಿಸುತ್ತವೆ ಎಂಬುದನ್ನು ನೀವೇ ನೋಡುತ್ತೀರಿ. ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಹೀರಿಕೊಳ್ಳುವ ಕಾರಣ,ಅದು ಶುದ್ಧೀಕರಿಸಲ್ಪಡುತ್ತದೆ ಹಾಗೂ ಅತ್ಯಂತ ಶಕ್ತಿಯುತವಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಹೇಗೆ ಉದ್ಭವಿಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಕಾರಾತ್ಮಕ ಆಲೋಚನೆಗಳ ಮೂಲವನ್ನು ಶೋಧಿಸಿದಾಗ, ಉದ್ವೇಗ ಮತ್ತು ಒತ್ತಡದ ಕಾರಣದಿಂದಾಗಿ ಅವುಗಳು ಬರುತ್ತವೆ ಎನ್ನುವುದು ನಿಮಗೆ ತಿಳಿಯುತ್ತದೆ. ಸಂತೋಷದೊಂದಿಗೆ ಶಾಂತವಾಗಿದ್ದು ಆರಾಮವಾಗಿರುವ ವ್ಯಕ್ತಿಗೆ ನಕಾರಾತ್ಮಕ ಆಲೋಚನೆಗಳು ಬರುವುದಿಲ್ಲ. ಇದನ್ನು ನೀವು ಗಮನಿಸಿರುವಿರಾ? ವ್ಯಕ್ತಿಯು ಹೆಚ್ಚು ದುಃಖಿತನಾಗಿದ್ದಷ್ಟು, ಅವನಿಗೆ ಹೆಚ್ಚು ನಕಾರಾತ್ಮಕ ಆಲೋಚನೆಗಳು ಬರುತ್ತವೆ. ನಕಾರಾತ್ಮಕ ಆಲೋಚನೆಗಳಿಂದ ಹೊರಗೆ ಬರಬೇಕೆಂದು, ಬಲಾತ್ಕಾರವಾಗಿ ಸಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲಿ ತುಂಬಿಸುವ ಬದಲು, ಉಸಿರಾಟದ ಮೂಲಕ, ಧ್ಯಾನದ ಮೂಲಕ ನಿಮ್ಮೊಳಗೆ ಆಳವಾಗಿ ಹೋಗಿ ಮತ್ತು ಇಡೀ ರಚನೆಯನ್ನು ಶುದ್ಧೀಕರಿಸಿ. ಅದರ ಮೂಲಕ್ಕೆ ಹೋಗಿ, ನಕಾರಾತ್ಮಕತೆಯ ಮೂಲ ಕಾರಣವನ್ನು ತೊಡೆದುಹಾಕಿ. ಇದಕ್ಕೇನೂ ಬಹಳ ಸಮಯ ಬೇಕಾಗುವುದಿಲ್ಲ. ವಿಶೇಷವಾಗಿ ಸುದರ್ಶನ್ ಕ್ರಿಯೆ™ ಯನ್ನು ಮಾಡಿದರೆ ಇದು ತಕ್ಷಣವೇ ಸಾಧ್ಯವಾಗುತ್ತದೆ. ದಿನಕ್ಕೆ ಒಂದು ಗಂಟೆಯಂತೆ, ಕೇವಲ ಎರಡು ದಿನಗಳ ಕಾಲ ಇದನ್ನು ಅಭ್ಯಾಸ ಮಾಡಿದರೆ, ಅದು ನಿಮ್ಮ ದೇಹವನ್ನು ಎಷ್ಟೋ ವಿಧಗಳಲ್ಲಿ ಶುದ್ಧೀಕರಣ ಮಾಡುತ್ತದೆ, ಹಾಗೂ ನಿಮಗೆ ಅತ್ಯಂತ ಹಗುರವಾದ ಭಾವನೆಯು ಉಂಟಾಗುತ್ತದೆ.ನೀವು ಯಾಕೆ ಶುಲ್ಕವನ್ನು ವಿಧಿಸುತ್ತೀರಿ?
ಆರ್ಟ್ ಆಫ್ ಲಿವಿಂಗ್ ಕೋರ್ಸ್ಗಳು ದುಬಾರಿಯಲ್ಲ. ಕೋರ್ಸ್ಗಳನ್ನು ಆಯೋಜಿಸಿದಾಗ ವೆಚ್ಚಗಳಿರುತ್ತವೆ. ಸ್ವಯಂಸೇವಕರು ಹಾಲ್ನ್ನು ಬಾಡಿಗೆಗೆ ಪಡೆಯಬೇಕಾಗುತ್ತದೆ. ಅಗತ್ಯದ ಕೆಲವು ಸರಂಜಾಮುಗಳನ್ನು ಹೊಂದಿಸಬೇಕಾಗುತ್ತದೆ. ಆದ್ದರಿಂದ ಪಡೆದುಕೊಂಡ ಒಟ್ಟು ಮೊತ್ತದ ಒಂದು ಅಂಶವನ್ನು ಕೋರ್ಸ್ ನ ಖರ್ಚುಗಳಿಗೆ ಬಳಸಲಾಗುತ್ತದೆ. ಭಾರತದಾದ್ಯಂತ ನಡೆಯುತ್ತಿರುವ ಸೇವಾ ಯೋಜನೆಗಳ ಬೆಂಬಲಕ್ಕಾಗಿ ಉಳಿದ ಹಣವು ವಿನಿಯೋಗಿಸಲ್ಪಡುತ್ತದೆ .
ಇಷ್ಟೇ ಅಲ್ಲದೆ, ಕೋರ್ಸ್ ನ್ನು ಉಚಿತವಾಗಿ ನೀಡಿದರೆ, ಜನರು ಅದಕ್ಕೆ ಬೆಲೆ ಕೊಡುವುದಿಲ್ಲ. ಇಡೀ ಕೋರ್ಸ್ ಮುಗಿಯುವ ತನಕ ಕುಳಿತುಕೊಂಡು ಅದನ್ನು ಕಲಿಯುವ ಜವಾಬ್ದಾರಿಯನ್ನು ಕೂಡ ತೆಗೆದುಕೊಳ್ಳುವುದಿಲ್ಲ.
ಜೀವನ ಪರಿವರ್ತನೆಯ ಅನುಭವ
ನಾವು ಕಾಳಜಿ ವಹಿಸುತ್ತೇವೆ, ಹಾಗೂ ಹಂಚಿಕೊಳ್ಳುತ್ತೇವೆ
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಮಾಜದ ಮೇಲೆ ಬೀರಿದ ಪ್ರಭಾವ
‘ನಿಮ್ಮ ಬೇರುಗಳನ್ನು ಬಲಪಡಿಸಿ, ನಿಮ್ಮ ದೃಷ್ಟಿಯನ್ನು ವಿಸ್ತರಿಸಿ ಮತ್ತು ಇಡೀ ಮನುಕುಲಕ್ಕೆ ಸೇವೆಯನ್ನು ಸಲ್ಲಿಸಿ’, ಎನ್ನುವುದೇ ಆರ್ಟ್ ಆಫ್ ಲಿವಿಂಗ್ನ ಮೂಲ ತತ್ವಗಳಾಗಿವೆ. ಮಕ್ಕಳ ಶಿಕ್ಷಣದಿಂದ ಹಿಡಿದು ನದಿಯ ಪುನರುಜ್ಜೀವನದವರೆಗೆ, ಕೀಟನಾಶಕ ಮುಕ್ತ ಕೃಷಿಯಿಂದ ಹಿಡಿದು ವ್ಯಾಪಾರದಲ್ಲಿ ನೈತಿಕತೆಯನ್ನು ತರುವ ವರೆಗೆ, ಘರ್ಷಣೆಗಳನ್ನು ಪರಿಹರಿಸುವುದರಿಂದ, ಪ್ರಕೃತಿ ವಿಕೋಪಗಳಿಗೆ ತುತ್ತಾದ ವಿಪತ್ತುಗಳನ್ನು ಪರಿಹರಿಸುವ ವರೆಗೆ, ಭಾರತದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತವೂ ಇರುವ ಜನರಿಗೆ ಮಾನವೀಯತೆಯ ಸೇವೆಯನ್ನು ಸಲ್ಲಿಸುವಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಒಂದು ವೇದಿಕೆಯಂತಿದೆ.
ಇನ್ನಷ್ಟು ತಿಳಿಯಿರಿವಿವೇಕ
ವಿವೇಕದೊಂದಿಗಿನ ಪ್ರೀತಿಯು ಆನಂದ, ವಿವೇಕಹೀನ ಪ್ರೀತಿ ದುಃಖ