ನಮ್ಮ ಪರಿಚಯ

ನಾವು ಪ್ರತಿಯೊಬ್ಬ ವ್ಯಕ್ತಿಯನ್ನೂ ಬಲಿಷ್ಠವನ್ನಾಗಿಸಿ, ಈ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತೇವೆ.

ಜಾಗತಿಕ ಚಳುವಳಿ...

  • 44 ವರ್ಷಗಳ ಪರಂಪರೆ
  • 180 ದೇಶಗಳಲ್ಲಿ 10,000 ಕ್ಕಿಂತಲೂ ಹೆಚ್ಚಿನ ಕೇಂದ್ರಗಳಿವೆ
  • 80 ಕೋಟಿಗೂ ಅಧಿಕ ಜನರನ್ನು ತಲುಪಿದೆ

180 ದೇಶಗಳಲ್ಲಿ ಕಾರ್ಯಪ್ರವೃತ್ತವಾಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಒಂದು ಲಾಭರಹಿತವಾದ, ಶೈಕ್ಷಣಿಕ ಹಾಗೂ ಮಾನವತಾವಾದಿಯಾಗಿರುವ ಸಂಸ್ಥೆಯಾಗಿದ್ದು , 1981ರಲ್ಲಿ ವಿಶ್ವ ಪ್ರಸಿದ್ಧ ಮಾನವತಾವಾದಿಗಳು ಮತ್ತು ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರಿಂದ ಸ್ಥಾಪಿಸಲ್ಪಟ್ಟಿತು. ನಮ್ಮ ಎಲ್ಲಾ ಕಾರ್ಯಕ್ರಮಗಳೂ ಪೂಜ್ಯ ಗುರುದೇವರು ಅನುಗ್ರಹಿಸುತ್ತಿರುವ ತತ್ವಬೋಧನೆಗಳ ಆಧಾರದ ಮೇಲೆ ಮಾರ್ಗದರ್ಶನವನ್ನು ನೀಡುತ್ತಿವೆ. “ನಾವು ಒತ್ತಡ-ರಹಿತವಾದ ಮನಸ್ಸನ್ನು ಮತ್ತು ಹಿಂಸಾ-ಮುಕ್ತವಾಗಿರುವ ಸಮಾಜವನ್ನು ಸ್ಥಾಪಿಸುವ ವರೆಗೆ, ವಿಶ್ವಶಾಂತಿಯನ್ನು ಪಡೆದುಕೊಳ್ಳುವುದು ಅಸಾಧ್ಯ” ಎಂಬುದೇ ಪೂಜ್ಯ ಗುರುದೇವರ ಮುಖ್ಯ ತತ್ವವಾಗಿದೆ.

ಆರ್ಟ್ ಆಫ್ ಲಿವಿಂಗ್ ಸಮುದಾಯವು ವೈವಿಧ್ಯಮಯವಾಗಿದ್ದು, ಜೀವನದ ಎಲ್ಲಾ ವರ್ಗಗಳ ಜನರನ್ನೂ ಆಕರ್ಷಿಸುತ್ತಿದೆ.

ಆರ್ಟ್ ಆಫ್ ಲಿವಿಂಗ್” , ಇದು ಜೀವನವನ್ನು ಪರಿಪೂರ್ಣವಾಗಿ ಜೀವಿಸುವ ಒಂದು ತತ್ವವಾಗಿದೆ. ಇದನ್ನು ಒಂದು ಸಂಸ್ಥೆ ಎಂದು ಹೇಳುವ ಬದಲಿಗೆ, ಒಂದು ಚಳುವಳಿ ಎಂದೇ ಉಲ್ಲೇಖಿಸಬಹುದು. ಇದರ ಮೂಲಭೂತ ಮೌಲ್ಯವೆಂದರೆ- ಎಲ್ಲರೂ ತಮ್ಮಲ್ಲೇ ಶಾಂತಿಯನ್ನು ಕಂಡುಕೊಳ್ಳುವಂತೆ ಮಾಡಿ ,ವಿವಿಧ ಸಂಸ್ಕೃತಿಗಳ, ವಿವಿಧ ಪದ್ಧತಿಗಳ, ವಿವಿಧ ಧರ್ಮಗಳ, ವಿವಿಧ ರಾಷ್ಟ್ರೀಯತೆಗಳ ಜನರೆಲ್ಲರನ್ನೂ ಒಗ್ಗೂಡಿಸಿ ಅವರ ನಡುವೆ ಐಕ್ಯತೆಯನ್ನು ತರುವುದಾಗಿದೆ. ತನ್ಮೂಲಕ ವಿಶ್ವದಾದ್ಯಂತ ಎಲ್ಲಾ ಕಡೆಗಳಲ್ಲಿರುವ ಮಾನವನ ಜೀವನವನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವುದೇ ನಮ್ಮೆಲ್ಲರ ಏಕೈಕ ಗುರಿ, ಎನ್ನುವುದನ್ನು ನಮ್ಮೆಲ್ಲರಿಗೂ ಮನವರಿಕೆ ಮಾಡಿ ನೆನಪಿಸುವುದಾಗಿದೆ.

- ಗುರುದೇವ್ ಶ್ರೀ ಶ್ರೀ ರವಿಶಂಕರ್

ನಮ್ಮ ಕೇಂದ್ರಗಳು

180 ದೇಶಗಳಲ್ಲಿದ್ದು, 10,000 ಕ್ಕೂ ಹೆಚ್ಚಿನ, ಕೇಂದ್ರಗಳಲ್ಲಿ ಶಾಂತಿಯನ್ನು ಪಸರಿಸುವ ಮೂಲಕ, “ವಸುಧೈವ ಕುಟುಂಬಕಂ”, ಎನ್ನುವ ನುಡಿಯಂತೆ,ಇಡೀ ವಿಶ್ವದಲ್ಲಿರುವುದು ಒಂದೇ ಒಂದು ಕುಟುಂಬ, ಎನ್ನುವ ಸಂದೇಶವನ್ನು ಎಲ್ಲೆಡೆಯೂ ಹರಡಿ , ಜನರನ್ನು ಒಗ್ಗೂಡಿಸುವ ಕಾರ್ಯಗಳಲ್ಲಿ ತೊಡಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕೇಂದ್ರಗಳನ್ನು ಶೋಧನೆ ಮಾಡಲು.

ನಮ್ಮನ್ನು ಸಂಪರ್ಕಿಸಿ

ಭಾರತದ ಕಚೇರಿ

+91 80 6761 2345, +91 80 2843 2833 (ಫ್ಯಾಕ್ಸ್)

ಕಾರ್ಯಕ್ರಮಗಳು ಮತ್ತು ನೋಂದಣಿ ವಿಚಾರಣೆ: 
support@artofliving.online

ಆಫೀಸ್ ಆಫ್ ಗುರುದೇವ್ Sಶ್ರೀ ಶ್ರೀ ರವಿಶಂಕರ್,
ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರ,
21ನೆಯ ಕಿ.ಮೀ, ಕನಕಪುರ ರಸ್ತೆ, ಉದಯಪುರ, ಬೆಂಗಳೂರು ದಕ್ಷಿಣ, ಕರ್ನಾಟಕ - 560 082, ಭಾರತ
secretariat@artofliving.org

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರು, ವಿವಿಧ ಜನಾಂಗಗಳ, ವಿವಿಧ ಸಂಪ್ರದಾಯಗಳ, ವಿವಿಧ ಆರ್ಥಿಕ ಮಟ್ಟದಲ್ಲಿರುವ ಮತ್ತು ಬೇರೆ ಬೇರೆ ಸಾಮಾಜಿಕ ಸ್ಥಾನಮಾನಗಳನ್ನು ಹೊಂದಿರುವ ಎಲ್ಲಾ ರಾಷ್ಟ್ರಗಳ ಜನರನ್ನು ಒಂದುಗೂಡಿಸಿದ್ದಾರೆ. 180 ದೇಶಗಳಲ್ಲಿ ವ್ಯಾಪಿಸಿರುವ ಈ ಸಮುದಾಯವು ಇಡೀ ಪ್ರಪಂಚದಲ್ಲಿಯೇ ಒಂದು ಆಧ್ಯಾತ್ಮಿಕ ಕುಟುಂಬವನ್ನು ಸೃಷ್ಟಿಸಿದೆ.
ಗುರುದೇವರ ಸಂದೇಶವು ಅತ್ಯಂತ ಸರಳವಾಗಿದೆ: "ಪ್ರೇಮ ಮತ್ತು ವಿವೇಕಗಳ ಮೂಲಕ, ದ್ವೇಷ ಮತ್ತು ಹಿಂಸೆಗಳನ್ನು ಗೆಲ್ಲಬಹುದು." ಈ ಸಂದೇಶವು ಕೇವಲ ಘೋಷಣೆಯಲ್ಲ; ಇದನ್ನು ,ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ತಂದು, ಸತತವಾಗಿ,ಫಲಿತಾಂಶಗಳನ್ನು ಪಡೆಯುತ್ತಾ ಮುಂದುವರಿಯುತ್ತಿದೆ.

ಇನ್ನಷ್ಟು ತಿಳಿಯಿರಿ