ಸುದರ್ಶನ ಕ್ರಿಯೆಯು  ಒಂದು ವಿಶಿಷ್ಟವಾದ ಉಸಿರಾಟದ ಪ್ರಕ್ರಿಯೆಯಾಗಿದ್ದು, ಇದು , ಒತ್ತಡ, ಆಯಾಸ, ಕೋಪ, ಹತಾಶೆ ಮತ್ತು ಖಿನ್ನತೆಯಂತಹ ನಕಾರಾತ್ಮಕ ಭಾವನೆಗಳನ್ನು ನಿರ್ಮೂಲಗೊಳಿಸುತ್ತದೆ . ಇಷ್ಟೇ ಅಲ್ಲದೆ ನಿಮ್ಮನ್ನು ಇನ್ನೂ ಶಕ್ತಿಯುತರನ್ನಾಗಿ ಮತ್ತು ಹೆಚ್ಚು ಕೇಂದ್ರೀಕೃತ ವಾಗುವಂತೆ ಮಾಡಿ,  ಶಾಂತವಾದ ಮನಸ್ಸಿನೊಂದಿಗೆ ವಿಶ್ರಮಿಸುವಂತೆ ಮಾಡುತ್ತದೆ.ಸುದರ್ಶನ ಕ್ರಿಯೆಯು ನಮ್ಮ ಉಸಿರಾಟದ  ನೈಸರ್ಗಿಕ ಲಯವನ್ನು ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಸಂಯೋಜನೆಗೊಳಿಸುವಂತೆ ಮಾಡಿ, ನಮ್ಮ ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮನ್ವಯಗೊಳಿಸುತ್ತದೆ. ಪ್ರಪಂಚದಾದ್ಯಂತವೂ ಸಾಕಷ್ಟು ಜನರು ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿ, ತಮ್ಮ  ಜೀವನ ಶೈಲಿಯಲ್ಲಿ ಸಾಕಷ್ಟು ಸುಧಾರಣೆಯನ್ನು ತಂದುಕೊಂಡಿದ್ದಾರೆ ಹಾಗೂ ತಮ್ಮ ಎಲ್ಲಾ  ಜವಾಬ್ದಾರಿಗಳನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸುತ್ತಾ, ಒತ್ತಡರಹಿತ ಜೀವನವನ್ನು ನಡೆಸುತ್ತಿದ್ದಾರೆ.

ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಗುರುದೇವ ಶ್ರೀ ಶ್ರೀ ರವಿಶಂಕರ್ ಇವರಿಗೆ, ಶಿವಮೊಗ್ಗದ ಭದ್ರಾ ನದಿಯ ದಡದಲ್ಲಿ ಹತ್ತು ದಿನಗಳ ಮೌನ ಮತ್ತು ಉಪವಾಸದಲ್ಲಿರುವಾಗ, ಸೆಪ್ಟೆಂಬರ್ 17, 1981 ರಂದು ಸುದರ್ಶನ ಕ್ರಿಯೆಯ ಅನುಗ್ರಹವಾಯಿತು.

ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ  ಶ್ರೀ ಶ್ರೀ ರವಿಶಂಕರ್ ಗುರುದೇವರು, ಸುದರ್ಶನಕ್ರಿಯು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿಸಿದ್ದಾರೆ. ” ಉಸಿರಾಟವು ದೇಹ ಮತ್ತು ಮನಸ್ಸಿಗೆ ಸಂಪರ್ಕ ನೀಡುತ್ತದೆ.  ಪ್ರತಿಯೊಂದು ಭಾವನೆಗೆ ಅನುಗುಣವಾಗಿ ನಮ್ಮ ಉಸಿರಾಟದಲ್ಲಿ  ಒಂದು ಲಯವಿರುತ್ತದೆ. ಈ ಭಾವನೆಗಳು ನಮ್ಮ ಉಸಿರಾಟದ ಮೇಲೆ ತಮ್ಮ ಪರಿಣಾಮವನ್ನು ಹೇಗೆ ಬೀರುತ್ತದೆಯೋ, ಅದೇ ರೀತಿಯಲ್ಲಿ ನಮ್ಮ ಉಸಿರಾಟದ ಲಯವನ್ನು ಬದಲಾಯಿಸುವ ಮೂಲಕ ನಮ್ಮ ಮಾನಸಿಕ ಸ್ಥಿತಿಯಲ್ಲಿ ಮತ್ತು ನಡವಳಿಕೆಯ ಮಾದರಿಗಳಲ್ಲಿ ಬದಲಾವಣೆಗಳನ್ನು ತರಬಹುದು. ಇದು ಕೋಪ , ಆತಂಕ ಮತ್ತು ಚಿಂತೆಗಳನ್ನು ದೂರ ಮಾಡುತ್ತದೆ ಹಾಗೂ ಮನಸ್ಸನ್ನು ಸಂಪೂರ್ಣವಾಗಿ ಶಾಂತಗೊಳಿಸಿ ಶಕ್ತಿಯುತವಾಗಿ ಮಾಡುತ್ತದೆ.

ಉಸಿರಾಟದ ಲಯಗಳು

ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ಒಂದು ನಿರ್ದಿಷ್ಟವಾದ ಲಯವಿದೆ. ಉದಾಹರಣೆಗೆ, ನಿಮಗೆ ಕ್ಲುಪ್ತವಾದ ಸಮಯದಲ್ಲಿಯೇ ಊಟ ಮಾಡಬೇಕು ಹಾಗೂ ಮಲಗಬೇಕು ಎಂದು ಕಾಣುತ್ತದೆ. 

ಗುರುದೇವ ಶ್ರೀ ಶ್ರೀ ರವಿಶಂಕರ್ ಹೇಳುತ್ತಾರೆ:” ಪ್ರಕೃತಿಯಲ್ಲಿ ಒಂದು ಲಯವಿದೆ. ಇದೇ ರೀತಿಯಲ್ಲಿ, ನಮ್ಮದೇಹ ಮತ್ತು ಭಾವನೆಗಳಿಗೂ(ಮನಸ್ಸಿನಲ್ಲಿ)  ಒಂದು ನಿರ್ದಿಷ್ಟವಾದ ಲಯವಿದೆ. ನೀವು  ನಿಮ್ಮ ಆಲೋಚನೆಗಳನ್ನು ಸರಿಯಾಗಿ ಗಮನಿಸಿದರೆ, ನಿಮ್ಮ ಅನುಮಾನಗಳಿಗೆ ಮತ್ತು ಆತಂಕಗಳಿಗೆ ಕೂಡಾ ಒಂದು ಲಯವಿದೆ. ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ  ಅದೇ ರೀತಿಯ ಭಾವನೆಗಳು ನಿಮ್ಮಲ್ಲಿರುತ್ತವೆ.ಸುದರ್ಶನ ಕ್ರಿಯೆಯು ನಿಮ್ಮ ದೇಹ ಮತ್ತು ಮನಸ್ಸುಗಳ ನಡುವೆ ಸೌಹಾರ್ದತೆಯೊಂದಿಗೆ ಸಾಮರಸ್ಯವನ್ನು ಮರು ಸ್ಥಾಪಿಸುತ್ತದೆ. ಈ ಲಯಗಳಲ್ಲಿ ಹೊಂದಾಣಿಕೆಯಾದಾಗ , ಮತ್ತೆ ನಮ್ಮ ಮನಸ್ಸಿನಲ್ಲಿ ಸಾಮರಸ್ಯದ ಭಾವನೆಯು ಮೂಡಿಬರುತ್ತದೆ. ಈ ಲಯಗಳಲ್ಲಿ ಹೊಂದಾಣಿಕೆ ಇಲ್ಲದಿರುವಾಗ, ನಾವು ಅಸ್ವಸ್ಥತೆಯನ್ನು ಹಾಗೂ ಅತೃಪ್ತಿಯನ್ನು ಅನುಭವಿಸುತ್ತೇವೆ.”

ಪ್ರತಿಯೊಂದು ಭಾವನೆಗೂ, ನಮ್ಮಉಸಿರಾಟಕ್ಕೆ ಅನುಗುಣವಾದ ಒಂದು ಲಯವಿದೆ .ಭಾವನೆಗಳು ನಮ್ಮ ಉಸಿರಾಟದ ಮೇಲೆ ಪರಿಣಾಮವನ್ನು ಉಂಟು ಮಾಡುವಂತೆಯೇ, ನಾವು ನಮ್ಮ ಉಸಿರಾಟದ ಲಯಗಳನ್ನು (ಮಾದರಿಗಳನ್ನು) ಬದಲಾಯಿಸಿ,ನಮ್ಮ ಮಾನಸಿಕ ಸ್ಥಿತಿ ಹಾಗೂ ನಡವಳಿಕೆಗಳಲ್ಲಿ ಬದಲಾವಣೆಯನ್ನು ತರಬಹುದು.

– ಗುರುದೇವ ಶ್ರೀ ಶ್ರೀ ರವಿಶಂಕರ್

ಅವರು ಮುಂದುವರಿಸುತ್ತಾರೆ: “ಸುದರ್ಶನ  ಕ್ರಿಯೆಯನ್ನು ಮಾಡಿದ ಬಳಿಕ ಜನರಿಗೆ , ತಮ್ಮೊಳಗೆ  ಪರಿಶುದ್ಧವಾದ ಭಾವನೆಯು ಉಂಟಾದಂತೆ ಭಾಸವಾಗುತ್ತದೆ, ಮನಸ್ಸಿನಲ್ಲಿ ಸ್ಪಷ್ಟತೆಯು ಮೂಡಿ ಪರಿಪೂರ್ಣತೆಯ ಅನುಭವವು ದೊರೆಯುತ್ತದೆ. ಇದಕ್ಕೆ ಕಾರಣವೇನೆಂದರೆ, ನಮ್ಮ ಚೈತನ್ಯವು ಬಾಹ್ಯದ ಪ್ರಪಂಚದಿಂದ ಅನಗತ್ಯವಾದ ವಸ್ತು ವಿಷಯಗಳನ್ನು ತನ್ನೊಳಗೆ ಇರಿಸಿಕೊಂಡು ಒದ್ದಾಡುತ್ತಿತ್ತು.ಈಗ ಅದೆಲ್ಲವೂ ಹೊರದೂಡಲ್ಪಟ್ಟು, ಅದರಿಂದ ಬಿಡುಗಡೆಯಾದಾಗ, ಮತ್ತೆ ಮರಳಿ ಮನೆಗೆ ಬಂದ ಅನುಭವವು ನಮಗೆ ದೊರೆಯುವುದು. ಹೀಗಾದಾಗ ನಮ್ಮ ಅಂತರಾಳದಲ್ಲಿ ಈಗಾಗಲೇ ಇದ್ದ ಪರಿಶುದ್ಧವಾದ ಭಾವದೊಂದಿಗೆ ನಾವು ಒಂದಾಗುತ್ತೇವೆ.ಈ ಶುದ್ಧೀಕರಣದ ಪ್ರಕ್ರಿಯೆಗಳನ್ನು ನಾವು ಆಗಾಗ ಮಾಡಬೇಕಾಗುತ್ತದೆ. ಪ್ರತಿದಿನ ನಿದ್ರೆಯಲ್ಲಿ ನಾವು ನಮ್ಮ ಆಯಾಸವನ್ನು ತೊಡೆದು ಹಾಕುತ್ತೇವೆ ಆದರೆ ಆಳವಾದ ಒತ್ತಡಗಳು ನಮ್ಮ ದೇಹ ಮತ್ತು ಮನಸ್ಸುಗಳಲ್ಲಿ ಹಾಗೆಯೇ ಉಳಿದು ಬಿಡುತ್ತವೆ. ಸುದರ್ಶನ ಕ್ರಿಯೆಯು ನಮ್ಮ ದೇಹವನ್ನು ಒಳಗಿನಿಂದಲೇ ಸ್ವಚ್ಛಗೊಳಿಸುತ್ತದೆ. ಸ್ವತಂತ್ರವಾಗಿ ನಡೆಸಿದ ನೂರಕ್ಕೂ ಹೆಚ್ಚಿನ ಅಧ್ಯಯನಗಳು, ಸುದರ್ಶನ ಕ್ರಿಯೆಯ ಮೂಲಕ, ನಮ್ಮ ಮನಸ್ಸು ಮತ್ತು ಶರೀರಗಳಲ್ಲಿ ಆಳವಾಗಿ ಹುದುಗಿರುವ ಒತ್ತಡಗಳನ್ನು ನಿವಾರಿಸಬಹುದು ಎಂದು ತಮ್ಮ ಸಂಶೋಧನೆಗಳಿಂದ ಕಂಡುಕೊಂಡಿವೆ.

ಸುದರ್ಶನ ಕ್ರಿಯೆಯಿಂದ ದೊರೆಯುವ ಪ್ರಯೋಜನಗಳು:

  1. ಆತಂಕ , ಖಿನ್ನತೆ ,(ಆಘಾತದ ನಂತರ – ಒತ್ತಡದಿಂದಾಗಿ ಉಂಟಾಗುವ ಅಸ್ವಸ್ಥತೆ), ಒತ್ತಡ, ಮುಂತಾದ ಎಲ್ಲಾ ಕ್ಷೋಭೆಗಳನ್ನು ನಿವಾರಿಸುತ್ತದೆ.
  2. ಹಠಾತ್ ಪ್ರವೃತ್ತಿಗಳನ್ನು ಮತ್ತು ವ್ಯಸನಕಾರಿ ನಡವಳಿಕೆಯನ್ನು ಕಡಿಮೆ ಮಾಡುತ್ತದೆ.
  3. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಜೀವನದಲ್ಲಿ ತೃಪ್ತಿಯನ್ನು ತರುತ್ತದೆ.
  4. ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  5. ನಿದ್ರೆಯ ಗುಣಮಟ್ಟವನ್ನು ಹೆಚ್ಚು ಮಾಡುತ್ತದೆ.
  6. ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  7. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
  8. ಶ್ವಾಸಕೋಶವನ್ನು ಬಲಪಡಿಸುತ್ತದೆ.

ಯಾರು ಸುದರ್ಶನ ಕ್ರಿಯೆಯನ್ನು ಕಲಿಯಬಹುದು ಮತ್ತು ಅಭ್ಯಾಸ ಮಾಡಬಹುದು?

ತಮ್ಮ ಜೀವನದ ಗುಣಮಟ್ಟವನ್ನು ಹೆಚ್ಚು ಮಾಡಲು ಬಯಸುವವರು ಮತ್ತು ಒತ್ತಡ ಮುಕ್ತವಾಗಿ ಬದುಕಲು ಇಚ್ಚಿಸುವವರು,ಯಾರು ಬೇಕಾದರೂ ಸುದರ್ಶನ ಕ್ರಿಯೆಯನ್ನು ಮಾಡಬಹುದಾಗಿದೆ. ಎಲ್ಲಾ ವರ್ಗದ ಜನರು ಮತ್ತು ಎಲ್ಲಾ ವಯಸ್ಸಿನ ಜನರು ಇದರ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ.ವಿದ್ಯಾರ್ಥಿಗಳು ತಮ್ಮಲ್ಲಿ   ಏಕಾಗ್ರತೆಯು ಹೆಚ್ಚಾಗಿರುವುದನ್ನು ಮತ್ತು ವೃತ್ತಿಪರರು, ತಮ್ಮ ಉತ್ಪನ್ನತೆಗಳು ಹೆಚ್ಚಾಗಿರುವುದನ್ನು ಕಂಡುಕೊಂಡಿದ್ದಾರೆ. ವಾಣಿಜ್ಯೋದ್ಯಮಿಗಳು ಮತ್ತು ಗ್ರಹಣಿಯರು ತಮ್ಮಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿರುವುದನ್ನು ಮತ್ತು ಆರೋಗ್ಯದಲ್ಲಿ ಸುಧಾರಣೆಯನ್ನು ಅನುಭವಿಸಿದ್ದಾರೆ.  ಜೈಲುಗಳಲ್ಲಿ ಇರುವ ಕೈದಿಗಳು , ತಮ್ಮಲ್ಲಿರುವ ಹಿಂಸಾತ್ಮಕ ಪ್ರವೃತ್ತಿಯನ್ನು ಬಿಟ್ಟಿದ್ದಾರೆ ಮತ್ತು ಅಂಥವರನ್ನು ಮುಖ್ಯ ವಾಹಿನಿಗೆ ಕರೆತಂದು, ಅವರಿಗೆಲ್ಲ ಪುನರ್ವಸತಿಯನ್ನು  ಕಲ್ಪಿಸಿ ಕೊಡಲಾಗಿದೆ. ಯುದ್ಧಗಳಲ್ಲಿದ್ದ ನಿರಾಶ್ರಿತರು, ಮಾಜಿ ಸೈನಿಕರು ಮತ್ತು ಬಲಿಪಶುಗಳು , ತಮಗೆ ಹಿಂದೆ ಆದ ಆಘಾತಗಳನ್ನು ಮರೆತು, ಹೊಸಜೀವನವನ್ನು ನಡೆಸಲು ಸಮರ್ಥರಾಗಿದ್ದಾರೆ.

ಸುದರ್ಶನ ಕ್ರಿಯೆಯನ್ನು ಮಾಡುವುದರಿಂದ ತಕ್ಷಣವೇ ಪಡೆಯುವ ಪ್ರಯೋಜನಗಳ ಸಾರಾಂಶವನ್ನು ಈ  ಕೆಳಗೆ ನೀಡಲಾಗಿದೆ.

6 ways to make your relationships stronger

ಆಳವಾದ ನಿರ್ವಿಶೀಕರಣ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ಉಸಿರಾಟವು ದೇಹದಿಂದ 90% ವಿಷ ವಸ್ತುಗಳನ್ನು ತೆಗೆದು ಹಾಕುತ್ತದೆ. ಸುದರ್ಶನ ಕ್ರಿಯೆಯ ಲಯಬದ್ಧವಾದ ಉಸಿರಾಟವು ದೇಹವನ್ನು ಅದರ ಆಳದಿಂದ, ಜೀವಕೋಶಗಳ ಮಟ್ಟದಿಂದಲೇ ನಿರ್ವಿಷಗೊಳಿಸುತ್ತದೆ.  ನಮ್ಮ ಶರೀರದಲ್ಲಿ ಸೂಕ್ಷ್ಮಜೀವಿಗಳ ಹಾಗೂ ಬ್ಯಾಕ್ಟೀರಿಯಾಗಳ ಮೂಲಕ ಯಾವುದೇ ರೀತಿಯ ಸೋಂಕುಗಳು ಹರಡದಂತೆ, ಸುದರ್ಶನ ಕ್ರಿಯೆಯು ನಮ್ಮ ದೇಹದಲ್ಲಿ ನೈಸರ್ಗಿಕವಾಗಿಯೇ ತಡೆಗಟ್ಟುತ್ತದೆ . ಇದು  ಹೇಗೆ ಸಾಧ್ಯವೆಂದರೆ, ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುವುದರಿಂದ, ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕೋಶಗಳು ನಮ್ಮ ಶರೀರದಲ್ಲಿ ಹೆಚ್ಚಾಗಿ, ನಮ್ಮಲ್ಲಿ ರೋಗ ಪ್ರತಿರೋಧಕ ಶಕ್ತಿಯು ಕೂಡ ಹೆಚ್ಚಾಗುತ್ತದೆ.

social anxiety women depression

ಒತ್ತಡ , ಆತಂಕ ಮತ್ತು ಖಿನ್ನತೆಯಿಂದ ಪರಿಹಾರ

ಇಂದಿನ ಬೇಡಿಕೆಯ ಜಗತ್ತಿನಲ್ಲಿ ,ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ ನಿಮಗೆ ತಿಳಿಯದಂತೆಯೇ ನೀವು ಮಾನಸಿಕವಾಗಿ ದಣಿಯುತ್ತೀರಿ. ಪ್ರತಿನಿತ್ಯವೂ 20 ನಿಮಿಷಗಳ ಕಾಲ ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡಿದರೆ, ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನಿನ ಮಟ್ಟವು ಗಮನಾರ್ಹವಾದ ರೀತಿಯಲ್ಲಿ ಕಡಿಮೆಯಾಗುತ್ತದೆ. ಜಗದಾದ್ಯಂತ ನಡೆಸಿದ ಹಲವಾರು ಅಧ್ಯಯನಗಳು ಮತ್ತು ಸಂಶೋಧನೆಗಳು, ಸುದರ್ಶನ ಕ್ರಿಯೆಯು ಖಿನ್ನತೆಯ ಮತ್ತು ಆತಂಕದ ಲಕ್ಷಣಗಳನ್ನು ನಿವಾರಿಸುತ್ತದೆ ಎಂದು ಪ್ರಕಟಪಡಿಸಿವೆ.

6 ways to make your relationships stronger

ಉತ್ತಮ ನಿದ್ರೆ

ದೇಹದಲ್ಲಿರುವ ಅಂಗಾಂಶಗಳು ಮತ್ತು ವಿವಿಧ ಅಂಗಗಳ ಪುನರುಜ್ಜೀವನಕ್ಕೆ , ಉತ್ತಮ ಗುಣಮಟ್ಟದ ನಿದ್ರೆಯು ಅತ್ಯಗತ್ಯವಾಗಿದೆ. ಕಳಪೆ ಗುಣಮಟ್ಟದ ನಿದ್ರೆಯು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮವನ್ನು ಬೀರುತ್ತದೆ. ಪ್ರತಿದಿನವೂ ಅಭ್ಯಾಸ ಮಾಡುವ ಸುದರ್ಶನ ಕ್ರಿಯೆಯಿಂದ ನಿಮಗೆ ಉತ್ತಮ ಗುಣಮಟ್ಟದ ನಿದ್ರೆಯು ಲಭ್ಯವಾಗುತ್ತದೆ. ಉಸಿರಾಟದ ಪ್ರಕ್ರಿಯೆಯು ನಿದ್ರೆಯ ಗುಣಮಟ್ಟವನ್ನು ಮೂರು ಪಟ್ಟು ಸುಧಾರಿಸಲು ಸಹಾಯ ಮಾಡುತ್ತದೆ.

social anxiety women depression

ಶಕ್ತಿಶಾಲಿಯಾದ ಹೃದಯ

ಳಾಡುತ್ತಿದ್ದಾರೆ. ನಮ್ಮ ದಿನನಿತ್ಯದ ಜೀವನ ಶೈಲಿಯು, ನಾವು ಪ್ರತಿದಿನವೂ  ನಮ್ಮ ಹೃದಯದ ಕಡೆಗೆ ಸ್ವಲ್ಪವಾದರೂ ಗಮನವನ್ನು ಕೊಡಲೇಬೇಕು ಎನ್ನುವುದನ್ನು ಎತ್ತಿ ತೋರಿಸುತ್ತದೆ. ಪ್ರತಿದಿನವೂ ಮಾಡುವ ಸುದರ್ಶನ ಕ್ರಿಯೆಯ ಅಭ್ಯಾಸವು ನಿಮ್ಮ ಹೃದಯವನ್ನು ಬಲಪಡಿಸುವಲ್ಲಿ, ಅತ್ಯಂತ ಪರಿಣಾಮಕಾರಿಯಾಗಿದೆ. ಇದು ನಿಮ್ಮ ಹೃದಯದ ಬಡಿತವನ್ನು ಮತ್ತು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ , ಎಂಬುದಾಗಿ ಅಧ್ಯಯನಗಳು ತೋರಿಸುತ್ತವೆ.ಇಡೀ ವಿಶ್ವದಲ್ಲಿ ಸುಮಾರು 60% ದಷ್ಟು  ಭಾರತೀಯರು ಹೃದ್ರೋಗಗಳಿಂದ ನರ.

ದಿನವೂ 20 ನಿಮಿಷಗಳ ಕಾಲ ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುವುದರಿಂದ, ಕಾರ್ಟಿಸೋಲ್ ಎನ್ನುವ ಹೆಸರಿನ ,ಒತ್ತಡದ ಹಾರ್ಮೋನಿನ ಮಟ್ಟವು ಕಡಿಮೆಯಾಗುತ್ತದೆ.

– ಗುರುದೇವ ಶ್ರೀ ಶ್ರೀ ರವಿಶಂಕರ್

ಸುದರ್ಶನ ಕ್ರಿಯೆಯನ್ನು ಹೇಗೆ ಕಂಡುಹಿಡಿಯಲಾಯಿತು?

ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು 1981ರಲ್ಲಿ 10 ದಿನಗಳ ಕಾಲ ತಾನು ಮೌನದೊಂದಿಗೆ ಧ್ಯಾನಸ್ಥ ಸ್ಥಿತಿಯಲ್ಲಿದ್ದು, ಸುದರ್ಶನ ಕ್ರಿಯೆಯನ್ನು ಕಂಡುಹಿಡಿಯುವಂತೆ, ಪ್ರೇರಣೆ ನೀಡಿದ ವಿಷಯದ ಬಗ್ಗೆ ಹಂಚಿಕೊಳ್ಳುತ್ತಾರೆ : ನಾನು ಈಗಾಗಲೇ ಪ್ರಪಂಚದಾದ್ಯಂತ ಸಾಕಷ್ಟು ಪ್ರಯಾಣಿಸಿದ್ದೇನೆ. ನಾನು ಕೆಲವು ವರ್ಷಗಳಿಂದ ಜನರಿಗೆ ಯೋಗ ಮತ್ತು ಧ್ಯಾನವನ್ನು ಕಲಿಸುತ್ತಿದ್ದೇನೆ. ಆದರೆ ಜನರು ತಮ್ಮ ಬೇಗುದಿಗಳಿಂದ ಹೊರಗೆ ಬಂದು  ಸಂತೋಷದಿಂದ ಬದುಕಲು, ಅವರಿಗೆ ನಾನು ಹೇಗೆ ಸಹಾಯ ಮಾಡಬಹುದು ಎನ್ನುವ ಕಾಳಜಿಯು ನನ್ನಲ್ಲಿ ಇತ್ತು. ಎಲ್ಲೋ ಒಂದು ಕಡೆ ಏನೋ ಕೊರತೆ ಇರುವಂತೆ ನನಗೆ ಭಾಸವಾಗುತ್ತಿತ್ತು. ಜನರು ಆಧ್ಯಾತ್ಮಿಕ ಸಾಧನೆಗಳನ್ನು ಮಾಡುತ್ತಲೇ ಇದ್ದರೂ, ಅವರು ಜೀವನವು ಒಂದು ಕೋಣೆಯೊಳಗೆಯೇ ಬಂಧಿಸಲ್ಪಟ್ಟಿದೆ ಎಂದು ನನಗೆ ಅನಿಸುತ್ತಿತ್ತು . ಅವರು ಸಾಧನೆಗಳಿಂದ ಹೊರಗೆ ಬಂದ ಬಳಿಕ ಅವರ ವಿಭಿನ್ನ ವ್ಯಕ್ತಿತ್ವವು ಎದ್ದು ಕಾಣುತ್ತಿತ್ತು. ಆದ್ದರಿಂದ ,  ಅವರ ಬಾಹ್ಯದ ಜೀವನ ಮತ್ತು ಆಂತರಿಕ ಮೌನಗಳ  ನಡುವಿನ ಅಂತರವನ್ನು ಹೇಗೆ ಕಡಿಮೆ ಮಾಡಬಹುದು ಎಂದು ನಾನು ಯೋಚಿಸುತ್ತಿದ್ದೆ. ನಾನು ಮೌನದಲ್ಲಿರುವಾಗ ಒಂದು ಸ್ಪೂರ್ತಿಯ ರೂಪದಲ್ಲಿ ಸುದರ್ಶನ ಕ್ರಿಯೆಯು ಮನಸ್ಸಿನಲ್ಲಿ ಮೂಡಿ ಬಂತು. ಯಾವಾಗ ಏನನ್ನು  ಕೊಡಬೇಕು ಮತ್ತು ಎಷ್ಟನ್ನು ಕೊಡಬೇಕು, ಎನ್ನುವುದು ಪ್ರಕೃತಿಗೆ ಚೆನ್ನಾಗಿ ತಿಳಿದಿದೆ. ನಾನು ಮೌನದಿಂದ ಹೊರಬಂದ ಬಳಿಕ,  ನನಗೆ ತಿಳಿದಿರುವ ಎಲ್ಲವನ್ನೂ ಜನರಿಗೆ ಕಲಿಸಲು ಪ್ರಾರಂಭಿಸಿದೆ. ಮತ್ತು ಜನರಿಗೆ ಅದರಿಂದ ಅತ್ಯುತ್ತಮ ಅನುಭವಗಳು  ದೊರೆತವು . ತಾವು ತಮ್ಮ ಅಂತರಾಳದಲ್ಲಿ ಪರಿಶುದ್ಧವಾದಂತೆ ಅವರಿಗೆ ಅನಿಸಿತು.

ಕ್ರಮೇಣ ಆರ್ಟ್ ಆಫ್ ಲಿವಿಂಗ್‌ನ ಎಲ್ಲಾ ಶಿಬಿರಗಳಿಗೆ  ಮತ್ತು ಕಾರ್ಯಕ್ರಮಗಳಿಗೆ, ಸುದರ್ಶನ ಕ್ರಿಯೆಯೇ  ಮೂಲವಾದ ಆಧಾರವಾಯಿತು ಮತ್ತು  ಅದೇ ವರ್ಷದಲ್ಲಿ ಗುರುದೇವರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಸ್ಥಾಪನೆ ಮಾಡಿದರು.

    Hold On!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity

    *
    *
    *
    *