ಆತಂಕವು ನಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನವನ್ನು ಸರಾಗವಾಗಿ ನಡೆಸಲು ಅಡ್ಡಿಪಡಿಸುತ್ತದೆ ಮತ್ತು ತೊಂದರೆಗೊಳಿಸುತ್ತದೆ.  ಈ ಆಂತರಿಕ ಪ್ರಕ್ರಿಯೆಯು ದೇಹದಲ್ಲಿನ ಇತರ ಘಟನೆಗಳ (ಭಾವನೆ ಮತ್ತು ಸಂವೇದನೆಗಳ) ಜೊತೆಗೂಡಿರುತ್ತದೆ. ಉದಾಹರಣೆಗೆ, ಮೊದಲಿಗೆ ಬೆವೆತುಹೋಗುವುದು ಅಥವಾ ಕಂಪನವನ್ನು ತರಬಹುದು ಮತ್ತು ನಿಮ್ಮ ಬಾಯಿಯನ್ನು ಒಣಗಿಸಬಹುದು. ಇದೇ ಮುಂದುವರೆದು ನಂತರ ಮಲಬದ್ಧತೆ ಅಥವಾ ಎದೆಯಲ್ಲಿ ಬಿಗಿತ ಮತ್ತು ನಿದ್ರಾಹೀನತೆ ಉಲ್ಬಣಗೊಳ್ಳಬಹುದು.   ಆದಾಗ್ಯೂ, ಈ ಎಲ್ಲ ಲಕ್ಷಣಗಳ ಮೂಲ ಒಂದೇ : ದೇಹದ ವಾತದಲ್ಲಿನ (ಗಾಳಿಯ ಅಂಶ) ಅಸಮತೋಲನ.

ದೋಷವನ್ನು ಸಮತೋಲನದಲ್ಲಿಡಲು, ನಿರ್ದಿಷ್ಟ ದೋಷಕ್ಕೆ ವಿರುದ್ಧವಾದ ಗುಣಗಳನ್ನು ಹೊಂದಿರುವ ಆಹಾರ ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿಗೆ ಬದ್ಧವಾಗಿರುವುದು. ವಾತವು ಹಗುರ , ಶೀತಲ, ಮತ್ತು ಒರಟುತನದಂತಹ ಗುಣಗಳನ್ನು ಹೊಂದಿದೆ.

ಹಾಗಾಗಿ ಅದನ್ನು ಸಮತೋಲನದಲ್ಲಿ ಇರಿಸಲು, ಉಷ್ಣತೆ, ಭಾರ ಮತ್ತು ಎಣ್ಣೆಯ ಪದಾರ್ಥಗಳನ್ನು ಸೇವಿಸಬೇಕು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡಬೇಕೆಂದು ಶಿಫಾರಸು ಮಾಡಲಾಗುತ್ತದೆ.

ಅಡ್ಡ-ಪರಿಣಾಮಗಳಿಲ್ಲದಂತಹ ಸರಳ ಉಪಾಯಗಳು

ಮೇಲಿನ ತತ್ವವನ್ನು ಸರಳ ಪರಿಹಾರಗಳ ಮೂಲಕ ಸುಲಭವಾಗಿ ಆಚರಣೆಗೆ ತರಬಹುದು. ಆತಂಕಕ್ಕೆ ಕೆಳಗಿನ ಆಯುರ್ವೇದ ಪರಿಹಾರಗಳು:

  1. ವಾತವನ್ನು ಶಾಂತಿಗೊಳಿಸುವ ಆಹಾರಗಳನ್ನು ಅನುಸರಿಸಿ

    ನಿಮ್ಮ ಆಹಾರದಲ್ಲಿ ಸಿಹಿ, ಉಪ್ಪು ಮತ್ತು ಹುಳಿ ರುಚಿಗಳನ್ನು ಸೇರಿಸಿ.  ಕಹಿ, ಖಾರವಾದ ಆಹಾರವನ್ನು ದೂರವಿರಿಸಿ.  ಸಿಹಿ ಪದಾರ್ಥ ಎಂದು ಹೇಳಿದಾಗ, ಸಂಸ್ಕರಿಸಿದ ಸಕ್ಕರೆಯೊಂದಿಗೆ ತಯಾರಿಸಿದ ಪದಾರ್ಥಗಳಿಗಿಂತ ಹಣ್ಣುಗಳಂತಹ ನೈಸರ್ಗಿಕವಾಗಿ ಸಿಹಿಯಾದ ಪದಾರ್ಥಗಳನ್ನು ಶಿಫ಼ಾರಸು ಮಾಡುತ್ತೇವೆ. ಶೀತ ಮತ್ತು ಒಣ ಆಹಾರಗಳ ಬದಲಿಗೆ ಬೆಚ್ಚಗಿನ, ಎಣ್ಣೆಯ ಅಂಶವನ್ನು ಹೊಂದಿರುವ (ಬಾದಾಮಿ, ನೆಲಗಡಲೆ ಇತ್ಯಾದಿ) ಮತ್ತು ನೀರಿನಂಶ ಹೆಚ್ಚಿರುವಂತಹ (ಸೌತೆ, ಕಲ್ಲಂಗಡಿ ಇತ್ಯಾದಿ) ಆಹಾರವನ್ನು ಸೇರಿಸಿ.

  2. ಗಿಡಮೂಲಿಕೆಗಳಿಂದ  ಮಾಡಿರುವ ಔಷಧಿಗಳೊಂದಿಗೆ ನಿಮ್ಮ ಶಾರೀರಿಕ ವ್ಯವಸ್ಥೆಯನ್ನು ಸಂತುಲಿತಗೊಳಿಸಿ

    ಅಶ್ವಗಂಧ, ಶಂಖಪುಷ್ಪಿ ಮತ್ತು ಬ್ರಾಹ್ಮಿಯಂತಹ ಗಿಡಮೂಲಿಕೆಗಳ ಔಷಧಿಗಳು ನರಮಂಡಲವನ್ನು ವಿಶ್ರಾಂತಿ ಗೊಳಿಸುತ್ತದೆ ಮತ್ತು ಮೆದುಳನ್ನು ವಿಷರಹಿತಗೊಳಿಸುತ್ತದೆ. ಆದಾಗ್ಯೂ, ಅವುಗಳನ್ನು ಸೇವಿಸುವ ಮೊದಲು ಆಯುರ್ವೇದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಆಯುರ್ವೇದ ವೈದ್ಯರು ಪ್ರತಿಯೊಬ್ಬರ ದೇಹ ರಚನೆಯ(ನಾಡಿ ಪರೀಕ್ಷೆಯ ಮೂಲಕ ) ಆಧಾರದ ಮೇಲೆ ಅಗತ್ಯವಾದ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಉತ್ತಮ ಸೂಕ್ತವಾದ ವೈದ್ಯಕೀಯ ಶಿಫಾರಸುಗಳನ್ನು ಪಡೆಯಲು ಶ್ರೀ ಶ್ರೀ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.

  3. ವಿಶೇಷ ಆಯುರ್ವೇದೀಯ ಅಂಗಮರ್ದನ(ಮಸಾಜ್) ಪಡೆಯಿರಿ

    ಶಿಲಾ ಅಭ್ಯಂಗವು ವಿಶೇಷವಾದ ಆಯುರ್ವೇದ ಮಸಾಜ್ ಆಗಿದ್ದು ದೇಹವನ್ನು ಆಳವಾದ ವಿಶ್ರಾಂತಿಗೆ ಒಳಪಡಿಸುತ್ತದೆ . ಈ ಮಸ್ಸಾಜುಗಳಲ್ಲಿ ಕೇವಲ ವಿಶೇಷವಾದ ತೈಲಗಳು ಮಾತ್ರವಲ್ಲದೆ  ಬಿಸಿಮಾಡಿದ ಅಗ್ನಿಶಿಲೆಗಳನ್ನು  ಬಳಸಲಾಗುತ್ತದೆ. ಈ ಕಲ್ಲುಗಳ ಶಾಖವು ಅಸಮತೋಲನವಾದ  ವಾತದ  ಅಂಶವನ್ನು ಶಾಂತಗೊಳಿಸಲು ಮತ್ತು ದೇಹ ಮತ್ತು ಮನಸ್ಸಿನಲ್ಲಿ ಶಾಂತಿಯನ್ನು ಪುನರ್ಸ್ಥಾಪಿಸಲು ಸಹಾಯ ಮಾಡುತ್ತದೆ.

  4. ಆರೋಗ್ಯಕರ ದಿನಚರಿಯನ್ನು ಮೈಗೂಡಿಸಿಕೊಳ್ಳಿ

    ಆರೋಗ್ಯಕರ ದಿನಚರಿಯನ್ನು ಅನುಸರಿಸುವುದು ವಾತವನ್ನು ಸಮತೋಲನದಲ್ಲಿ ತರಲು ಬಹಳವಾಗಿ  ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಮಲಗಲು, ಏಳಲು ಮತ್ತು ನಿಮ್ಮ ಊಟಕ್ಕೆ ನಿರ್ದಿಷ್ಟ ಸಮಯವನ್ನು ಅನುಸರಿಸಿರುವಿರೆಂದು ಖಚಿತಪಡಿಸಿಕೊಳ್ಳಿ.

  5. ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಿ

    ಯೋಗ, ಪ್ರಾಣಾಯಾಮ ಮತ್ತು ಧ್ಯಾನವು ಆತಂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ದರಿಂದ, ಈ ಪ್ರಾಚೀನ ಸಾಧನಗಳನ್ನು ಅಭ್ಯಾಸ ಮಾಡಲು ಪ್ರತಿದಿನ ಸ್ವಲ್ಪ ಸಮಯವನ್ನು ಕಾಯ್ದಿರಿಸಲು ಹೆಚ್ಚು ಶಿಫಾರಸು ಮಾಡಲಾಗಿದೆ. ಇದೆಲ್ಲದರ ಅಭ್ಯಾಸವು ನಿಮ್ಮನ್ನು ಶಾಂತವಾಗಿರಿಸುವುದಷ್ಟೇಯಲ್ಲದೆ ನಿಮ್ಮನ್ನು ಹೆಚ್ಚು ಉಲ್ಲಾಸಕರವಾಗಿ, ಕೇಂದ್ರೀಕರಿಸುವಂತೆ ಮಾಡುತ್ತದೆ.

    ಪ್ರಾಣಾಯಾಮ ಮತ್ತು ಧ್ಯಾನವನ್ನು ಶ್ರೀ ಶ್ರೀ ಯೋಗದಲ್ಲಿ ಕಲಿಯಿರಿ!

    Wait!

    Don’t miss this Once-In-A-lifetime opportunity to join the Global Happiness Program with Gurudev!

    Have questions? Let us call you back

     
    *
    *
    *
    *
    *