ನಿದ್ರಿಸಲು ಸರಿಯಾದ ದಿಕ್ಕು ಯಾವುದು?
ಆಯುರ್ವೇದದ ಪ್ರಕಾರ ಆರೋಗ್ಯದ ತ್ರಿಕೋನ ಎಂದರೆ ಆಹಾರ (ಪಥ್ಯ), ವಿಹಾರ (ಸಮತೋಲಿತ ಜೀವನ ) ಮತ್ತು ನಿದ್ರೆ. ಸಂಪೂರ್ಣ ವಿಶ್ರಾಂತಿ ಕೊಡುವ ನಿದ್ದೆಗೆ ಆಯುರ್ವೇದದಲ್ಲಿ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆಂದರೆ, ಚೆನ್ನಾಗಿ ನಿದ್ರಿಸುವ ಬಗ್ಗೆ ಆಯುರ್ವೇದದಲ್ಲಿ ಅನೇಕಾನೇಕ ಸಲಹೆಗಳಿವೆ. ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ : ನಿದ್ರಿಸುವಾಗ ನಮ್ಮ ತಲೆ ಯಾವ ದಿಕ್ಕಿಗೆ ಇರಬೇಕು?, ವಿಜ್ಞಾನದ ಪ್ರಕಾರ ಯಾವ ದಿಕ್ಕಿಗೆ ತಲೆ ಇಡುವುದು ಉತ್ತಮ ನಿದ್ರೆಗೆ ಒಳ್ಳೆಯದು ? ವಾಸ್ತುಶಾಸ್ತ್ರದ ಪ್ರಕಾರ ನಿದ್ದೆಗೆ ಯಾವ ದಿಕ್ಕು ಅತ್ಯುತ್ತಮ? ಪ್ರತಿನಿತ್ರ್ಯ ನಾವು ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು ? ಗಾಢ ನಿದ್ದೆಗೆ ಸರಿಯಾದ ದಿಕ್ಕು ಯಾವುದು ? ಯಾವ ಬದಿಗೆ ತಿರುಗಿ ಮಲಗಬೇಕು?
ನಿದ್ರೆಯ ಸರಿಯಾದ ದಿಕ್ಕು ಕುರಿತು ವಿಜ್ಞಾನವೇನು ಹೇಳುತ್ತದೆ?
ನಿದ್ರೆ ಮಾಡುವ ದಿಕ್ಕು ಭೂಕಾಂತೀಯ ವಲಯವನ್ನು ತಪ್ಪಿಸಬೇಕು ಎಂದು ವಿಜ್ಞಾನ ಸೂಚಿಸುತ್ತದೆ. ಭೂಮಿ ಒಂದು ದೊಡ್ಡ (ಆದರೂ ದುರ್ಬಲ) ಅಯಸ್ಕಾಂತವಾಗಿದೆ; ಆದರೆ ಇದರ ಪ್ರಭಾವವು ಮಾನವನ ಮೇಲೆ ಮಹತ್ವಪೂರ್ಣವಾಗಿದೆ.
ಭೂಮಿಯ ಅಯಸ್ಕಾoತದ ಧನಾತ್ಮಕ ಧ್ರುವವು ಉತ್ತರಧ್ರುವದ ಕಡೆಗಿದೆ ಮತ್ತು ನಕಾರಾತ್ಮಕ ಧ್ರುವವು ದಕ್ಷಿಣದಲ್ಲಿದೆ. ಮಾನವನ ತಲೆ ಅಯಸ್ಕಾoತದ ಧನಾತ್ಮಕ ಭಾಗವನ್ನು, ಪಾದಗಳು ನಕಾರಾತ್ಮಕ ಭಾಗವನ್ನು ಪ್ರತಿನಿಧಿಸುತ್ತವೆ. ಧನಾತ್ಮಕ ಧ್ರುವಗಳು ಪರಸ್ಪರ ತಳ್ಳುತ್ತವೆ, ಆದ್ದರಿಂದ ನಾವು ನಮ್ಮ ತಲೆ ಉತ್ತರಕ್ಕೆ ಇಟ್ಟರೆ, ಆ ತಳ್ಳುವ ಶಕ್ತಿಗಳು ನಮಗೆ ದಣಿವನ್ನುಂಟುಮಾಡಬಹುದು.
ವಾಸ್ತು ಶಾಸ್ತ್ರವು ನಿದ್ರಾ ದಿಕ್ಕು ಕುರಿತು ಏನು ಹೇಳುತ್ತದೆ?
ವಾಸ್ತು, ಆಯುರ್ವೇದದ ಉಪ ಶಾಸ್ತ್ರವಾಗಿದೆ ಮತ್ತು ದಿಕ್ಕುಗಳ ಬಗ್ಗೆ ತಿಳಿವಳಿಕೆ ನೀಡುತ್ತದೆ ; ಇದು ಪ್ರಾಚೀನ ವಿಜ್ಞಾನ. ವಾಸ್ತುಶಾಸ್ತ್ರ ಪರಿಸರದ ಸಮನ್ವಯ ಮತ್ತು ಆರೋಗ್ಯದ ವೈಜ್ಞಾನಿಕ ಅಧ್ಯಯನವಾಗಿದೆ. ವಾಸ್ತು ಶಾಸ್ತ್ರದ ಉದ್ದೇಶವು ಐದು ಮಹಾಭೂತಗಳು (ಆಕಾಶ, ವಾಯು, ಅಗ್ನಿ, ಜಲ ಮತ್ತು ಭೂಮಿ), ದಿಕ್ಕುಗಳು ಮತ್ತು ಶಕ್ತಿ ಕ್ಷೇತ್ರಗಳನ್ನು ಉಪಯೋಗಿಸಿ ಉತ್ತಮ ಆರೋಗ್ಯ, ಐಶ್ವರ್ಯ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಸುಲಭವಾದ ಜೈವಿಕ ಪರಿಸರವನ್ನು ಸೃಷ್ಟಿಸುವುದು.
![](https://www.artofliving.org/in-en/app/uploads/2023/06/What-Vastu-says_Image-scaled.jpg)
ನಾನು ಮೈಕಲ್ ಮಾಸ್ಟ್ರೋ (ಉತ್ತರ ಅಮೆರಿಕಾದ ಪ್ರಮುಖ ವಾಸ್ತು ತಜ್ಞ) ಇವರೊಂದಿಗೆ ನಿದ್ರಾ ದಿಕ್ಕುಗಳ ಕುರಿತು ಕೇಳಿದೆ. ಅವರು ನೀಡಿದ ಸಲಹೆ ಇಂತಿದೆ: “ನಾವು ಎಂದಿಗೂ ತಲೆಯನ್ನು ಉತ್ತರಕ್ಕೆ ಇಟ್ಟುಕೊಂಡು ನಿದ್ರಿಸಕೂಡದು, ಏಕೆಂದರೆ ಉತ್ತರ ಧ್ರುವದಿಂದ ಧನಾತ್ಮಕ ಅಯಸ್ಕಾಂತೀಯ ಶಕ್ತಿ ಬರುತ್ತದೆ, ಮತ್ತು ನಮ್ಮ ದೇಹವು ಅಯಸ್ಕಾಂತವಾಗಿದ್ದು, ತಲೆ ಭಾಗವು ಧನಾತ್ಮಕ ಧ್ರುವವಾಗಿರುತ್ತದೆ, ಹೀಗಾಗಿ ಇದು ಎರಡು ಧನಾತ್ಮಕ ಅಯಸ್ಕಾಂತಗಳನ್ನು ಪರಸ್ಪರ ಹತ್ತಿರ ತರುವಂತೆ. ಅವು ಪರಸ್ಪರ ಹಿಂಜರಿದು ಹೋಗುತ್ತವೆ ಮತ್ತು ರಕ್ತ ಪರಿಚಲನೆ, ಸಂಚಲನ ಮತ್ತು ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತವೆ, ಇದು ಆರಾಮದಾಯಕ ನಿದ್ರೆ ನೀಡುವುದಿಲ್ಲ. ನಿಮಗೆ ಆರೋಗ್ಯ ಸಮಸ್ಯೆಗಳಿದ್ದರೆ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ನಿದ್ರಿಸುವುದು ಬಹಳ ಲಾಭದಾಯಕವಾಗಿದೆ (ಈ ಸಲಹೆಗಳು ದಕ್ಷಿಣ ಗೋಳದಲ್ಲಿಯೂ ಬದಲಾಗುವುದಿಲ್ಲ.
ನಮ್ಮ ಶಾಸ್ತ್ರಗಳು ನಿದ್ರಾ ದಿಕ್ಕು ಕುರಿತು ಏನು ಹೇಳುತ್ತವೆ?
ಪ್ರಚ್ಯಾಂ ದಿಶೀ ಸ್ಥಿತಾ ದೇವಸ್ತತ್ಪೂಜಾರ್ಥಂ ಚ ತಚ್ಚಿರಃ
(ಸುಶ್ರುತಸಂಹಿತಾ 19.6)
ಸುಶ್ರುತ ಸಂಹಿತ ತಲೆ ಪೂರ್ವದತ್ತ ಇರಿಸುವುದನ್ನು ಸಲಹೆ ನೀಡುತ್ತದೆ. ದಕ್ಷಿಣಕ್ಕೆ ಪಾದಗಳನ್ನು ಇಟ್ಟುಕೊಂಡು ನಿದ್ರಿಸಿದರೆ ಪ್ರಾಣಶಕ್ತಿಯ ನಷ್ಟವಾಗುತ್ತದೆ. ಜೈವಿಕ ಚೈತನ್ಯದ ಹರಿವು ಉತ್ತರದಿಂದ ದಕ್ಷಿಣಕ್ಕೆ ಬರುತ್ತದೆ. ಪ್ರಾಣಶಕ್ತಿಯು ದೇಹದಲ್ಲಿ ಕಾಲಿನಿಂದ ಪ್ರವೇಶಿಸುತ್ತದೆ ಮತ್ತು ಹೆಣ್ಣುಗರ್ಭದಲ್ಲಿ ಆತ್ಮದ ಪ್ರವೇಶ ತಲೆಯ ಮೂಲಕ ಆಗುತ್ತದೆ.
ಯಥ ಸ್ವಕೀಯಾನ್ಯಜಿನಾನಿ ಸರ್ವೇ ಸಂಸ್ಥಿಯ್ರ ವೀರಾಃ ಸಿಷುಪುರಧರಣ್ಯಾಮ್ ಅಗಸ್ತಶಸ್ತಾಂ (ದಕ್ಷಿಣಾಮ್) ಅಭಿತೋ ದಿಶಂ ತು
ಶಿರಾಂಸಿ ತೆಷಾಂ ಕುರುಸ್ಸತ್ತಮಾನ್ (ಮಹಾಭಾರತ)
ಮಹಾಭಾರತದಲ್ಲಿ ಶ್ರೀಕೃಷ್ಣ ಯುದ್ಧಿಷ್ಠಿರನಿಗೆ ಸಲಹೆ ನೀಡುತ್ತಾನೆ – “ತಲೆಯನ್ನು ದಕ್ಷಿಣದತ್ತ ಇಟ್ಟುಕೊಂಡು, ಪಾದಗಳನ್ನು ಉತ್ತರಕ್ಕೆ ಇಟ್ಟುಕೊಂಡು ನಿದ್ರೆ ಮಾಡು.
ಉತ್ತರದಲ್ಲಿ ನಿದ್ರಿಸುವುದು
ಉತ್ತರಕ್ಕೆ ತಲೆ ಇಟ್ಟು ನಿದ್ರಿಸುವುದು ಸರ್ವಥಾ ಸಲಹನೀಯವಲ್ಲ. ಇದು ಶರೀರದಿಂದ ಶಕ್ತಿಯನ್ನು ಹೊರಕ್ಕೆ ಆಕರ್ಷಿಸಿ, ದೇಹ-ಮನಸ್ಸು-ಆತ್ಮದ ಸಮನ್ವಯವನ್ನು ಅಲುಗಿಸುತ್ತದೆ. ವೈದ್ಯಕೀಯವಾಗಿ ಹೇಳುವುದಾದರೆ , ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ನಮ್ಮ ಶರೀರದಲ್ಲಿನ ಕಬ್ಬಿಣದ ಅಂಶವು ಮೆದುಳಿನಲ್ಲಿ ಹೆಪ್ಪುಗಟ್ಟುತ್ತದೆ. ಇದು ರಕ್ತ ಸಂಚಾರಕ್ಕೆ ಅಡ್ಡಿ ಮಾಡಿ, ಮಾನಸಿಕ ಒತ್ತಡ, ಭೌತಿಕ ಮತ್ತು ಮಾನಸಿಕ ಸಮಸ್ಯೆಗಳು ಮತ್ತು ನಿದ್ರಾಹೀನತೆಯನ್ನು ಉಂಟುಮಾಡುತ್ತದೆ.
ಡಾ. ವಸಂತ್ ಲಾದ್ ಹೇಳುತ್ತಾರೆ, “ಹೆಣಗಳನ್ನು ಮಾತ್ರ ಉತ್ತರಕ್ಕೆ ಮುಖ ಮಾಡಿ ಮಲಗಿಸುವರು.” ನಿಜವಾಗಿಯೂ, ಹಿಂದೂ ಸಂಪ್ರದಾಯದ ಪ್ರಕಾರ ಮೃತದೇಹವನ್ನು ಉತ್ತರದತ್ತ ತಲೆ ಮಾಡಿ ಮಲಗಿಸುತ್ತಾರೆ, ಅಂತ್ಯಕ್ರಿಯೆ ಶುರುವಾಗುವವರೆಗೆ. ಏಕೆಂದರೆ ಉತ್ತರ ದಿಕ್ಕು ಆತ್ಮವು ದೇಹದಿಂದ ಹೊರಹೋಗುವ ಮಾರ್ಗ, ಎಂಬ ನಂಬಿಕೆಯಿದೆ.
ಪೂರ್ವದಿಕ್ಕಿಗೆ ತಲೆಯಿಟ್ಟು ನಿದ್ರಿಸುವುದು
ಸೂರ್ಯನು ಪೂರ್ವದಿಂದ ಉದಯಿಸುತ್ತಾನೆ, ಮತ್ತು ಇದು ಧನಾತ್ಮಕ ಅಲೆಗಳು, ಕ್ರಿಯಾಶೀಲತೆಯ ಶಕ್ತಿ, ಪುನರುಜ್ಜೀವನ ಮತ್ತು ಶಕ್ತಿಯ ದಿಕ್ಕಾಗಿಯೆಂದು ಪರಿಗಣಿಸಲಾಗಿದೆ. ನಾವು ನಮ್ಮ ತಲೆ ಪೂರ್ವದತ್ತ ಇಟ್ಟುಕೊಂಡು ನಿದ್ರಿಸುವಾಗ, ಸೂರ್ಯನ ಶಕ್ತಿ ತಲೆಯ ಮೂಲಕ ದೇಹಕ್ಕೆ ಪ್ರವೇಶಿಸಿ, ಕಾಲಿನಿಂದ ಹೊರ ಹೋಗುತ್ತದೆ, ಇದರಿಂದ ತಲೆ ತಣ್ಣಗೆ ಇದ್ದು ಪಾದಗಳು ಉಷ್ಣವಾಗಿರುತ್ತವೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ, ಏಕೆಂದರೆ ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ, ಏಕಾಗ್ರತೆಯನ್ನು ಸುಧಾರಿಸುತ್ತದೆ, ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
ಇದು ಧ್ಯಾನ ಮತ್ತು ಇತರ ಆಧ್ಯಾತ್ಮಿಕ ಸಾಧನೆಗಳಿಗೆ ಸಹ ಉಪಯುಕ್ತವಾಗಿದೆ. ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ನಿದ್ರಿಸುವುದು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ಗರ್ಭಧಾರಣೆಗೆ ಸಹಾಯಕವಾಗಿದೆ ಮತ್ತು ಮೂರು ದೋಷಗಳಲ್ಲಿ (ವಾತ, ಪಿತ್ತ ಮತ್ತು ಕಫ) ಸಮತೋಲನ ತರುತ್ತದೆ.
ಅಧ್ಯಯನಗಳಿಂದ ಇದು ಸಾಬೀತಾಗಿದೆ : ಈ ದಿಕ್ಕಿನಲ್ಲಿ ನಿದ್ರಿಸುವವರು ಕಡಿಮೆ REM (Rapid Eye Movement) ನಿದ್ರೆ ಚಕ್ರಗಳನ್ನು ಮತ್ತು ಕಣ್ಣು ಚಲನೆಯನ್ನೂ (ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿದ್ರಿಸುವವರಿಗೆ ಹೋಲಿದರೆ) ಹೊಂದಿದ್ದಾರೆ, ಇದು ಕನಸುಗಳು ಕಡಿಮೆ ಮತ್ತು ಗುಣಮಟ್ಟದ ನಿದ್ರೆಯನ್ನು ಸೂಚಿಸುತ್ತದೆ.
![](https://www.artofliving.org/in-en/app/uploads/2023/06/sleep-direction-scaled.jpg)
ಪಶ್ಚಿಮಕ್ಕೆ ತಲೆಯಿಟ್ಟು ನಿದ್ರಿಸುವುದು
ಪಶ್ಚಿಮದಿಂದ ಪೂರ್ವದ ಕಡೆಗೆ ನಿದ್ರಿಸುವುದನ್ನು ಶಿಫಾರಸು ಮಾಡಲಾಗುವುದಿಲ್ಲ. ಕೆಲವು ಜನರು ಇದನ್ನು ರಜಸ್ಸು ಅಥವಾ ಆಕಾಂಕ್ಷೆ ಮತ್ತು ಅಶಾಂತಿಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಇದನ್ನು ತಟಸ್ಥ ನಿದ್ರಾ ಸ್ಥಿತ ಎಂದು ಪರಿಗಣಿಸುತ್ತಾರೆ. ಆದಾಗ್ಯೂ, ವಾಸ್ತು ಪ್ರಕಾರ, ತಲೆ ಪಶ್ಚಿಮದತ್ತ ಇಟ್ಟುಕೊಂಡು ನಿದ್ರಿಸುವುದರಿಂದ ಅಶಾಂತ ಮತ್ತು ವ್ಯತ್ಯಸ್ತ ನಿದ್ರೆ, ಕೆಟ್ಟ ಕನಸುಗಳು, ಮತ್ತು ಹಿಂಸೆಯ ಪ್ರವರ್ತನೆಗಳು ಸಂಭವಿಸಬಹುದು.
ದಕ್ಷಿಣ ದಿಕ್ಕಿಗೆ ತಲೆಯಿಟ್ಟು ನಿದ್ರಿಸುವುದು
ಆಯಸ್ಕಾoತ ಸಿದ್ಧಾಂತದ ಪ್ರಕಾರ, ಋಣಾತ್ಮಕ ದಕ್ಷಿಣ ಮತ್ತು ಧನಾತ್ಮಕ ತಲೆ ನಡುವಿನ ಪರಸ್ಪರ ಆಕರ್ಷಣೆ ನಿದ್ರೆಯಲ್ಲಿ ಸಮತೋಲನವನ್ನು ಸೃಷ್ಟಿಸುತ್ತದೆ. ಪುರಾಣಗಳ ಪ್ರಕಾರ, ದಕ್ಷಿಣವು ಯಮದೇವರ ದಿಕ್ಕಾಗಿದ್ದು, ಇದು ಗುಹ್ಯ ಮತ್ತು ಆಳವಾದ ನಿದ್ರೆಯನ್ನು ಉತ್ತೇಜಿಸುತ್ತದೆ, ಇದು ಮರಣದ ಪುನರುಜ್ಜೀವನದಂತಹ ನಿದ್ರೆ. ವಾಸ್ತು ತಜ್ಞರು ಈ ದಿಕ್ಕಿಗೆ ತಲೆಯಿಟ್ಟು ಮಾಡುವ ನಿದ್ದೆಯನ್ನು ಅತ್ಯುತ್ತಮ ನಿದ್ರೆ ಎಂದು ಪರಿಗಣಿಸುತ್ತಾರೆ. ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಧನಾತ್ಮಕ ಶಕ್ತಿ, ಐಶ್ವರ್ಯ, ಸಮೃದ್ಧಿ ಮತ್ತು ಸಮನ್ವಯವನ್ನು ಉತ್ತೇಜಿಸುತ್ತದೆ.
ವಾತ ದೋಷ ಹೊಂದಿರುವ ಜನರಿಗೆ, ಮತ್ತು ತೀವ್ರ ಆತಂಕ ಮತ್ತು ಶೀತ ಪಾದಗಳನ್ನು ಹೊಂದಿರುವವರಿಗಾಗಿ, ತಲೆಯನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿಗೆ ಇಟ್ಟುಕೊಂಡು ನಿದ್ರಿಸುವುದನ್ನು ಶಿಫಾರಸು ಮಾಡಲಾಗಿದೆ.
ಪಿತ್ತ ದೋಷವು ಹೆಚ್ಚಾಗಿರುವವರಿಗಾಗಿ, ವಾಯುವ್ಯ ದಿಕ್ಕಿನಲ್ಲಿ (ಮಿತವಾದ ಸಮಯಕ್ಕೆ) ನಿದ್ರಿಸುವುದನ್ನು ಶಿಫಾರಸು ಮಾಡಲಾಗುತ್ತದೆ.
ತಲೆ ಪಶ್ಚಿಮದತ್ತ ಇಟ್ಟುಕೊಂಡು (ಮಿತವಾದ ಸಮಯಕ್ಕೆ) ನಿದ್ರಿಸುವುದರಿಂದ ಕಫ ವಿಕೃತಿ ಸಮತೋಲನಕ್ಕೆ ಬರಬಹುದು.
2009 ರಲ್ಲಿ, ಭಾರತದಲ್ಲಿ ಹಿಮಾಲಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶರೀರ ಶಾಸ್ತ್ರ ವಿಭಾಗದಲ್ಲಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಶರೀರದ ಹೃದಯಬಡಿತ, ರಕ್ತದೊತ್ತಡ, ಕಾರ್ಟಿಸೋಲ್ ಇವುಗಳ ಮೇಲೆ ಪರಿಣಾಮ ಆಗಬಹುದು ಎಂಬುದನ್ನು ಕಂಡುಹಿಡಿಯಲು ಅಧ್ಯಯನ ನಡೆಸಲಾಯಿತು. ಇದರಲ್ಲಿ, ತಲೆ ದಕ್ಷಿಣದತ್ತ ಇಟ್ಟುಕೊಂಡು ನಿದ್ರಿಸಿದವರು ಕಡಿಮೆ SBP (ಸಿಸ್ಟೋಲಿಕ್ ರಕ್ತದ ಒತ್ತಡ), DBP (ಡಿಸ್ಟೋಲಿಕ್ ರಕ್ತದ ಒತ್ತಡ), HR (ಹೃದಯದ ದರ) ಮತ್ತು SC (ಸೆರಮ್ ಕೊರ್ಟಿಸೋಲ್) ಹೊಂದಿದ್ದವರು ಎಂಬುದನ್ನು ಕಂಡುಹಿಡಿದರು. ಈ ಫಲಿತಾಂಶಗಳು ಸಂಖ್ಯಾತ್ಮಕವಾಗಿ ಪ್ರಮುಖವಾಗಿದ್ದವು, ಆದರೆ ವಿವಿಧ ಗುಂಪುಗಳಲ್ಲಿ ಹೆಚ್ಚಿನ ಅಧ್ಯಯನಗಳು ಅವಶ್ಯಕ ಎಂದು ಶಿಫಾರಸು ಮಾಡಲಾಗಿದೆ.
ಆಧುನಿಕ ವಿಜ್ಞಾನವು ವಾಸ್ತು ಮತ್ತು ಆಯುರ್ವೇದದ ಗ್ರಂಥಗಳು ಶತಮಾನಗಳ ಹಿಂದೆ ಶಿಫಾರಸು ಮಾಡಿದ್ದುದನ್ನೇ ಪುನಃ ಕಂಡುಹಿಡಿಯುತ್ತಿವೆ.
ಪರಿಸಮಾಪ್ತಿ
- ದಕ್ಷಿಣ-ಉತ್ತರ: ತಲೆ ದಕ್ಷಿಣದತ್ತ ಮತ್ತು ಪಾದಗಳು ಉತ್ತರದತ್ತ ಇಟ್ಟುಕೊಂಡು ನಿದ್ರಿಸಿ.
- ಪೂರ್ವ-ಪಶ್ಚಿಮ: ತಲೆ ಪೂರ್ವದತ್ತ ಮತ್ತು ಪಾದಗಳು ಪಶ್ಚಿಮದತ್ತ ಇಟ್ಟುಕೊಂಡು ನಿದ್ರಿಸಿ.
- ಪಶ್ಚಿಮ- ಪೂರ್ವ : ಪಶ್ಚಿಮದತ್ತ ತಲೆ ಇಟ್ಟುಕೊಂಡು ನಿದ್ರಿಸುವುದನ್ನು ತಪ್ಪಿಸಿ.
- ಉತ್ತರದತ್ತ ತಲೆ ಇಟ್ಟುಕೊಂಡು ಎಂದಿಗೂ ನಿದ್ರಿಸಬೇಡಿ.
![](https://www.artofliving.org/in-en/app/uploads/2023/06/A-wrap-up_Image-new.jpg)
ಪಕ್ಕಕ್ಕೆ ಹೊರಳಿ ನಿದ್ರಿಸುವುದು ಸರಿಯೇ?
ಆಯುರ್ವೇದ ಪ್ರಕಾರ, ನೀವು ಸರಿಯಾಗಿ ಉಸಿರಾಟ ಮಾಡಬಹುದು ಎಂಬ ಕಾರಣಕ್ಕೆ ಎಡ ಭಾಗಕ್ಕೆ ಹೊರಳಿ ನಿದ್ರಿಸುವುದನ್ನು ಶಿಫಾರಸು ಮಾಡಲಾಗುತ್ತದೆ. ಇದು ನಿಮ್ಮ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ. ನಿದ್ರಿಸುವ ಸಮಯದಲ್ಲಿ ದೇಹದ ಯಾವ ಪಕ್ಕಕ್ಕೆ ತಿರುಗಿ ಮಲಗಬೇಕೆಂಬುದನ್ನು ಈ ಉತ್ಕೃಷ್ಟ ಯೋಗಿಯ ಅಭಿವ್ಯಕ್ತಿ ತಿಳಿಸುತ್ತದೆ ;
”ಭೋಗಿ ಹೊಟ್ಟೆಯ ಮೇಲೆ ಮಲಗುತ್ತಾನೆ, ರೋಗಿಯು ಬೆನ್ನ ಮೇಲೆ ಮಲಗುತ್ತಾನೆ, ಯೋಗಿಯು ಪಕ್ಕಕ್ಕೆ ತಿರುಗಿ ಮಲಗುತ್ತಾನೆ”.
ದೇಹದ ಪಕ್ಕಕ್ಕೆ ತಿರುಗಿ ನಿದ್ರಿಸುವುದು ಸೂರ್ಯನಾಡಿ (ಮೂಗಿನ ಬಲಭಾಗದ ಹೊಳ್ಳೆ), ಚಂದ್ರನಾಡಿ (ಎಡ ಹೊಳ್ಳೆ ) ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ನಮ್ಮ ದೇಹದಲ್ಲಿ ಪ್ರಾಣದ ಹರಿವನ್ನು ಹೆಚ್ಚಿಸುತ್ತದೆ. ಇದು ಜೀವಕೋಶಗಳನ್ನು ದೈವಿಕಚೈತನ್ಯವನ್ನು ಹೊಂದಿದ ಜಾಗೃತಸ್ಥಿತಿಯಲ್ಲಿ ಇರಿಸುತ್ತದೆ ಮತ್ತು ನಮ್ಮ ದೇಹ ಹಾಗೂ ಮನಸ್ಸನ್ನು ರಕ್ಷಿಸುತ್ತದೆ.
ಈ ಚೈತನ್ಯವು ನಮ್ಮ ಶಕ್ತಿಕ್ಷೇತ್ರದ ಮೂಲಕ ಹರಿಯುವ ಪ್ರಕ್ರಿಯೆಯು ನಮ್ಮ ದೇಹವನ್ನು ಉಲ್ಲಾಸಗೊಳಿಸುತ್ತದೆ. ಅಷ್ಟೇ ಅಲ್ಲ, ನಮ್ಮ ಸುತ್ತಲೂ ಇರುವ ಪರಿಸರಕ್ಕೆ ಕೂಡ ಪ್ರಸಾರವಾಗುತ್ತದೆ.
ಹೀಗಾಗಿ, ಸರಿಯಾದ ಪಕ್ಕಕ್ಕೆ ತಿರುಗಿ ನಿದ್ರಿಸಿ, ಆದರೆ ಸರಿಯಾದ ದಿಕ್ಕಿನಲ್ಲಿ ನಿದ್ರಿಸಿ.