Smiling woman with raised arms feeling grateful copy

ಬ್ಲೆಸ್ಸಿಂಗ್ಸ್ ಪ್ರೊಗ್ರಾಮ್

ನಿಮ್ಮೊಳಗೊಬ್ಬ ವೈದ್ಯನಿದ್ದಾನೆ; ಅವನನ್ನು ಗುರುತಿಸಿ

ನಿಮ್ಮ ಆಶೀರ್ವಾದವು ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಿಸಬಲ್ಲದು.

ಅರ್ಹತೆ: ಹ್ಯಾಪಿನೆಸ್‌ ಕಾರ್ಯಕ್ರಮ, 2 ಉನ್ನತ ಧ್ಯಾನದ ಕಾರ್ಯಕ್ರಮ, ಸಹಜ ಸಮಾಧಿ ಧ್ಯಾನ ಯೋಗ

ಮೂರು ದಿನಗಳ ಕಾರ್ಯಕ್ರಮ

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನೋಂದಾಯಿಸಿ

ಸಂತೃಪ್ತಿಯು ಚೈತನ್ಯದ ಅತೀ ಸುಂದರವಾದ ಲಕ್ಷಣ. ಸಂತೃಪ್ತ ವ್ಯಕ್ತಿಗೆ ಅನುಗ್ರಹಿಸುವ ಸಾಮರ್ಥ್ಯ ಬರುತ್ತದೆ; ಶಮನಕಾರಿ ಶಕ್ತಿ ದೊರೆಯುತ್ತದೆ. ಬ್ಲೆಸ್ಸಿಂಗ್ಸ್ ಕಾರ್ಯಕ್ರಮದ ವಿಶಿಷ್ಟ ಧ್ಯಾನಪ್ರಕ್ರಿಯೆಗಳ ಮೂಲಕ ಸಮೃದ್ಧಿ ಮತ್ತು ಸಂತೃಪ್ತಿಯ ಅನುಭವ ಉಂಟಾಗುತ್ತದೆ. ನಮ್ಮೆಲ್ಲರಲ್ಲಿಯೂ ಸಹಜವಾಗಿಯೇ ಇರುವ ಈ ಗುಣಗಳು ಈ ಕಾರ್ಯಕ್ರಮದ ಮೂಲಕ ಅನುಭವದ ಮುನ್ನೆಲೆಗೆ ಬರುತ್ತವೆ.

ಆಶೀರ್ವಾದವು ಇನ್ನೊಬ್ಬರಿಗೆ ಕೊಡುವಂಥದ್ದು; ವ್ಯಕ್ತಿಯು ತನಗಾಗಿ ಇಟ್ಟುಕೊಳ್ಳುವುದಲ್ಲ. ಆಶೀರ್ವಾದ ಮಾಡುವ ಸಾಮರ್ಥ್ಯವು ಇತರರ ಬಗ್ಗೆ ನಮ್ಮ ಕಾಳಜಿ ಮತ್ತು ಸಹಾಯ ಮಾಡುವ ಮನೋವೃತ್ತಿಯನ್ನು ಸೂಚಿಸುತ್ತದೆ. ಜೊತೆಗೆ, ನಮ್ಮ ಸಹಾಯವನ್ನು ಕೋರಿ ಬರುವವರಿಗೆ ಸೇವೆ ಸಲ್ಲಿಸುವ, ಅವರಿಗೆ ನೆಮ್ಮದಿಯನ್ನು ನೀಡುವ ಮನೋವೃತ್ತಿಯನ್ನೂ ಸೂಚಿಸುತ್ತದೆ.... ಈ ಶಿಬಿರದಲ್ಲಿ ಭಾಗವಹಿಸಿದ ಅನೇಕರು ತಮ್ಮ ಜೀವನದಲ್ಲಿ ನಡೆದ ಪವಾಡಸದೃಶ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮೊಳಗಿರುವ ಅದ್ಭುತ ಶಕ್ತಿಯನ್ನು ಅನಾವರಣ ಮಾಡಿ

icon

ಸಮೃದ್ಧಿ ಮತ್ತು ಸಂತೃಪ್ತಿಯ ಭಾವವನ್ನು ಅನುಭವಿಸಿ

icon

ಶಮನಕಾರಿ ಶಕ್ತಿಯನ್ನು ಗಳಿಸಿರಿ

icon

ಆಶೀರ್ವದಿಸುವ ಸಾಮರ್ಥ್ಯವನ್ನು ಪಡೆಯಿರಿ

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕ ಮತ್ತು ಶಾಂತಿಯ ರಾಯಭಾರಿಯೆಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು 180 ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಲಕ್ಷಾಂತರ ಜನರಿಗೆ ಯೋಗ, ಧ್ಯಾನ ಮತ್ತು ಜ್ಞಾನವನ್ನು ಪ್ರತ್ಯಕ್ಷವಾಗಿ ಹೇಳಿಕೊಡುವುದರ ಮೂಲಕ ,ಅವರೆಲ್ಲರ ಬದುಕಿನಲ್ಲಿ ಅಗಾಧವಾದ ಪರಿವರ್ತನೆಯನ್ನು ತಂದಿದ್ದಾರೆ.

ಇನ್ನಷ್ಟು ತಿಳಿಯಿರಿ