ಪ್ರೋಗ್ರಾಮ್ಸ್ ಫಾರ್ ಚಿಲ್ಡ್ರನ್ ಅಂಡ್ ಟೀನ್ಸ್
ಈ ಕಾರ್ಯಕ್ರಮವು ಒತ್ತಡವನ್ನು ನಿವಾರಿಸುತ್ತದೆ, ಏಕಾಗ್ರತೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಕ್ಕಳಿಗಾಗಿ ಇರುವ ಈ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳನ್ನು ಮಕ್ಕಳ ಸಂಪೂರ್ಣ ಬೆಳವಣಿಗೆಯನ್ನು ಲಕ್ಷ್ಯದಲ್ಲಿರಿಸಿಕೊಂಡು ರೂಪಿಸಲಾಗಿದೆ. ಇದು ಮಕ್ಕಳ ಮನಸ್ಸಿನ ಶಾಂತಿಯನ್ನು ವರ್ಧಿಸುವ, ಮನಸ್ಸಿನ ನಿಚ್ಚಳತೆಯನ್ನು ಸಾಧಿಸುವ, ಏಕಾಗ್ರತೆ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಪೋಷಿಸುವ, ಮಕ್ಕಳಲ್ಲಿ ಸಾಮರಸ್ಯದಿಂದ ಮತ್ತು ಪರಸ್ಪರ ಆತ್ಮೀಯತೆಯಿಂದ ಬದುಕುವ ಗುಣಗಳನ್ನು ಬೆಳೆಸುವ ಪ್ರಕ್ರಿಯೆಗಳ ಮೂಲಕ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಹಕರಿಸುತ್ತದೆ.
ಹದಿಹರೆಯದ ಯುವಕರಿಗೆ ತಮ್ಮ ಮಾನಸಿಕ ಒತ್ತಡ ಮತ್ತು ಭಾವನೆಗಳನ್ನು ನಿಭಾಯಿಸಲು ಸರಳವಾದ ತಂತ್ರಗಳನ್ನು ಕಲಿಸಲಾಗುತ್ತದೆ. ಜೊತೆಗೆ ಸಂಶೋಧನೆಗಳಿಂದ ಸಾಬೀತಾಗಿರುವ ಸುದರ್ಶನಕ್ರಿಯೆ ಮತ್ತು ಇತರ ಜೀವನ ಕೌಶಲ್ಯಗಳನ್ನು ಕಲಿಸುವುದರ ಮೂಲಕ ಅವರಿಗೆ ಶಿಕ್ಷಣದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಏಕಾಗ್ರತೆಯನ್ನೂ ಹಿರಿಯರು, ಪೋಷಕರು ಮತ್ತು ಶಿಕ್ಷಕರ ಜೊತೆ ಸಕಾರಾತ್ಮಕವಾಗಿ ವ್ಯವಹರಿಸುವುದನ್ನೂ ಕಲಿಸುತ್ತದೆ.
ಸ್ಫೂರ್ತಿ ನೀಡುತ್ತದೆ, ಬಲ ನೀಡುತ್ತದೆ, ಸಾಧನೆಗೆ ಸಹಾಯ ಮಾಡುತ್ತದೆ
5 ರಿಂದ 18 ವರ್ಷಗಳ ಮಕ್ಕಳ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಬೆಳವಣಿಗೆಗಾಗಿ ಈ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಸುದರ್ಶನ ಕ್ರಿಯೆ
ಈ ಉಸಿರಾಟದ ತಂತ್ರವು ಒತ್ತಡ, ಕೋಪ ಮತ್ತು ಆತಂಕಗಳನ್ನು ಸಮರ್ಥವಾಗಿ ನಿಭಾಯಿಸಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.

ಯೋಗದ ತಂತ್ರಗಳು
ಆಸನಗಳು, ಮನಸ್ಸಿನ ಪ್ರಶಾಂತತೆಯನ್ನು ಸಾಧಿಸುವ ವ್ಯಾಯಾಮಗಳು, ನೆನಪಿನ ಶಕ್ತಿಯನ್ನು ಹೆಚ್ಚಿಸುವ ಸರಳ ವಿಧಾನಗಳು, ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ವಿಶೇಷ ಪ್ರಕ್ರಿಯೆಗಳು – ಇವೆಲ್ಲದರ ಸೂಕ್ತ ಸಂಯೋಜನೆ, ಈ ಕಾರ್ಯಕ್ರಮ.

ಪ್ರಾಯೋಗಿಕ ಸಾಧನಗಳು
ನಕಾರಾತ್ಮಕ ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸಲು, ಶಾಲೆಯಲ್ಲಿ ಯಶಸ್ವಿಯಾಗಲು, ಸದಾ ಮುಂದಾಗಿರಬೇಕೆಂಬ ಒತ್ತಡ ಮತ್ತು ಜೀವನದ ಸವಾಲುಗಳನ್ನು ಎದುರಿಸುವಾಗ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳಲು ಬೇಕಾದ ಸರಳವಾದ ಜೀವನಕೌಶಲ್ಯಗಳನ್ನು ಇಲ್ಲಿ ಕಲಿಯಬಹುದು.

ಸ್ಪರ್ಧಾತ್ಮಕ ಕ್ರೀಡೆಗಳು
ವಿನೋದಮಯ ಚಟುವಟಿಕೆಗಳು, ವ್ಯಕ್ತಿಗತ ಹಾಗೂ ಸಾಂಘಿಕ ವ್ಯಾಯಾಮಗಳು, ಗುರಿಯನ್ನು ನಿರ್ಧರಿಸಿಕೊಳ್ಳುವ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ, ಸಮಸ್ಯೆ ಮತ್ತು ಸಂಘರ್ಷಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಕಲಿಸುವ ಮತ್ತು ಸಮಾಜಪರ ವರ್ತನೆ ಹಾಗೂ ಸಹಕಾರ ಮನೋಭಾವವನ್ನು ಬೆಳೆಸುವ ಚರ್ಚೆಗಳು.