intuition process

ಇನ್ಟ್ಯೂಷನ್ ಪ್ರೋಸಸ್

ಸರಿಯಾದ ಸಮಯಕ್ಕೆ ಸರಿಯಾದ ಆಲೋಚನೆಗಳನ್ನು ಮಾಡುವುದು.

ಕಲಿಕೆಯಲ್ಲಿ ಸುಧಾರಣೆ • ಉತ್ತಮ ಗ್ರಹಣಶೀಲತೆ • ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ಹೆಚ್ಚಳ

10 ದಿನಗಳು (5 - 8 ವರ್ಷದವರೆಗೆ), 17 ದಿನಗಳು (8 - 18 ವರ್ಷದವರೆಗೆ)

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನಿಮ್ಮ ಮಗುವು ಈ ಕೆಳಗಿನ ವಿಷಯಗಳನ್ನು ಕಲಿಯುತ್ತದೆ

icon

ಅಂತಃಸ್ಪುರಣೆ

ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಮಕ್ಕಳಿಗೆ ಈ ಶಕ್ತಿಯು ಮಾರ್ಗದರ್ಶನ ಮಾಡುತ್ತದೆ.

icon

ಕ್ರಿಯಾಶೀಲತೆ

ಒತ್ತಡರಹಿತವಾದ ಹಾಗೂ ಉತ್ತಮವಾದ ಕ್ರಿಯಾಶೀಲ ಮನಸ್ಥಿತಿಯನ್ನು ಪಡೆಯುವುದು.

icon

ಹೊಸ ಆವಿಷ್ಕಾರಗಳು

ಸೃಜನಾತ್ಮಕವಾದ ಆಲೋಚನೆ ಹಾಗೂ ಹೊಸ ಹೊಸ ಆವಿಷ್ಕಾರಗಳ ಕಲಿಕೆ.

icon

ನಿರ್ಣಯಗಳನ್ನು ಕೈಗೊಳ್ಳುವುದು

ಉತ್ತಮವಾದ ತೀರ್ಮಾನಗಳನ್ನು ಅಂತಃಸ್ಪುರಣೆಯ ಮೂಲಕ ತೆಗೆದುಕೊಳ್ಳಲು ಸಮರ್ಥರಾಗುವುದು.

ಜೀವನ ಕಲೆಯ ಅಂತಃಪ್ರಜ್ಞೆಯ (Intuition Process) ಕಾರ್ಯವಿಧಾನವೆಂದರೆ ಏನು?

ಈ ಕಾರ್ಯಕ್ರಮವು, ಮಕ್ಕಳ ಮತ್ತು ಹದಿಹರೆಯದವರ ಮನಸ್ಸಿನಲ್ಲಿ ಸಂಪೂರ್ಣ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವ ಕಾರ್ಯವಿಧಾನವಾಗಿದೆ. ಅವರು ತಮ್ಮ ಅಂತಃಸ್ಪುರಣೆಯ ಆಯಾಮವನ್ನು ಬೆಳೆಸಿಕೊಳ್ಳುವಲ್ಲಿ ಇದು ಸಹಾಯಕವಾಗಿದೆ. ನಿಜ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವುದರಿಂದ ಅವರಲ್ಲಿ ಅತ್ಯುತ್ತಮ ಬದಲಾವಣೆ ಉಂಟಾಗುವುದಲ್ಲದೆ, ದೂರದೃಷ್ಟಿ, ಪ್ರಯೋಗಾತ್ಮಕತೆ ಹಾಗೂ ಜೀವನದ ಎಲ್ಲಾ ಘಟ್ಟಗಳಲ್ಲಿಯೂ ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಸಮರ್ಥರಾಗುತ್ತಾರೆ.

ನಮ್ಮ ಪ್ರಜ್ಞೆಯಲ್ಲಿ ಅತ್ಯದ್ಭುತವಾದ ಶಕ್ತಿ ಸಾಮರ್ಥ್ಯಗಳು ಹುದುಗಿವೆ. ಅಂತಃಪ್ರಜ್ಞೆಯ ಈ ಪ್ರಕ್ರಿಯೆಯು ಮಕ್ಕಳ ಮನಸ್ಸಿನ ಎಲ್ಲಾ ಸಾಮರ್ಥ್ಯ ಹಾಗೂ ಸಾಧ್ಯತೆಗಳನ್ನು ಸಹಜವಾಗಿ, ಸುರಕ್ಷಿತವಾಗಿ ಅನಾವರಣಗೊಳಿಸುತ್ತದೆ. ಪಂಚೇಂದ್ರಿಯಗಳನ್ನು ಮೀರಿದ ಗ್ರಹಿಕೆಯ ಸಾಮರ್ಥ್ಯವನ್ನು ಇದು ನೀಡುವುದಲ್ಲದೆ, ಆರನೆಯ ಇಂದ್ರಿಯ ಅಥವಾ ಅಂತಃಪ್ರಜ್ಞೆಯೊಂದಿಗೆ ಸಂಬಂಧವನ್ನು ಕಲ್ಪಿಸುತ್ತದೆ.

ಕಣ್ಣುಗಳಿಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು - ಓದುವುದು, ಚಿತ್ರಗಳಿಗೆ ಬಣ್ಣ ತುಂಬುವುದು, ನಡೆದಾಡುವುದು, ಆಟೋಟಗಳಲ್ಲಿ ಭಾಗವಹಿಸುವುದು ಹೀಗೆ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳ ಈ ಸಾಮರ್ಥ್ಯವನ್ನು ಪ್ರದರ್ಶಿಸಲಾಗಿದೆ. ಅಷ್ಟೇ ಅಲ್ಲದೆ ಹಲವಾರು ಶಕ್ತಿಯುತ ಸಾಮರ್ಥ್ಯದಿಂದ ಕೂಡಿರುವ ಈ ಕಲಿಕೆಯು, ಮಕ್ಕಳ ಜೀವನದ ಎಲ್ಲಾ ಹಂತಗಳಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತದೆ.

ಶಕ್ತಿಶಾಲಿಯಾದ, ಉತ್ತಮವಾದ ಅಂತಃಶಕ್ತಿಯು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಆಟೋಟ ಸ್ಪರ್ಧೆಗಳಲ್ಲಿ ಯಶಸ್ಸು,ವಾಕ್ಚಾತುರ್ಯ, ಪರಸ್ಪರ ಸಂಬಂಧಗಳಲ್ಲಿ ಸೌಹಾರ್ದಯುತ ಬೆಳವಣಿಗೆ ಹೀಗೆ ಎಲ್ಲದರ ಮೇಲೆ ಪ್ರಭಾವ ಬೀರುವುದಲ್ಲದೆ, ಹೊಸ ಹೊಸ ಆವಿಷ್ಕಾರಗಳಿಗೆ ಹಾಗೂ ಪ್ರಯೋಗಗಳಿಗೆ ಮಕ್ಕಳ ಮನಸ್ಸು ತೆರೆದುಕೊಳ್ಳುವಂತೆ ಮಾಡುತ್ತದೆ.

ಇನ್ಟ್ಯೂಷನ್ ಪ್ರೋಸಸ್ ಕಿರಿಯರಿಗಾಗಿ (5+ ರಿಂದ 8 ವರ್ಷದ)

ಕಾಲಾವಧಿ: 10 ದಿನಗಳು

ಕಾರ್ಯವಿಧಾನದ ವಿವರಣೆ

ದಿನ(ಗಳು) ಸ್ವರೂಪ ಕಾಲಾವಧಿ
ವಾರ 1: ಶುಕ್ರವಾರದಿಂದ ಭಾನುವಾರ ವೈಯಕ್ತಿಕ ಹಾಜರಾತಿ ದಿನಕ್ಕೆ 2 ಘಂಟೆಗಳು
ವಾರ 1: ಸೋಮವಾರದಿಂದ ಶನಿವಾರ ಆನ್ಲೈನ್ (ಜೂಮ್ ಆಪ್) ದಿನಕ್ಕೆ 15 ನಿಮಿಷಗಳು
ವಾರ 2: ಭಾನುವಾರ ವೈಯಕ್ತಿಕ ಹಾಜರಾತಿ 2 ಘಂಟೆಗಳು

ಕಾರ್ಯಕ್ರಮದ ವಿವರಣೆ

ವಾರ 1

  • ವೈಯಕ್ತಿಕ ಹಾಜರಾತಿ ಶುಕ್ರವಾರದಿಂದ ಭಾನುವಾರ:
    • ಪ್ರತಿದಿನ 2 ಘಂಟೆಗಳು
    • ವಿಷಯ: ಅಂತಃಸ್ಪುರಣೆಯ ಸಾಮರ್ಥ್ಯದ ಬಗ್ಗೆ ಪರಿಚಯ
  • ಆನ್ಲೈನ್ ಕಾರ್ಯಕ್ರಮ ಸೋಮವಾರದಿಂದ ಶನಿವಾರ:
    • ದಿನವೂ 15 ನಿಮಿಷಗಳು
    • ವಿಧಾನ : ಜೂಮ್ ಆನ್ಲೈನ್,
    • ನುರಿತ ಶಿಕ್ಷಕರಿಂದ ಮಾರ್ಗದರ್ಶನ /ಪರಿಶೀಲನೆ
  • ಕಲಿಕೆಯ ವಿಷಯ:
    • ಸುಪ್ತವಾಗಿರುವ ಅಂತಃಸ್ಪುರಣೆಯ ಸಾಮರ್ಥ್ಯದ ಬೆಳವಣಿಗೆ
    • ವಿಶೇಷವಾಗಿ ಆಯೋಜಿಸಿರುವ ಪ್ರಕ್ರಿಯೆಗಳ ಅಭ್ಯಾಸ
    • ಆಸಕ್ತಿದಾಯಕ ಆಟಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ತೊಡಗಿಸುವುದು
  • ಪೋಷಕರ ಪಾತ್ರ :
    • ಮೊದಲ ವಾರದ ಕಡೆಯ 2 ಘಂಟೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರಿ
    • ಮಕ್ಕಳ ಕಲಿಕೆಯ ಬಗ್ಗೆ ಒಳನೋಟವನ್ನು ಬೆಳೆಸಿಕೊಳ್ಳಿರಿ
    • ಮಕ್ಕಳ ಅಂತಃಸ್ಪುರಣೆಯನ್ನು ಯಾವ ರೀತಿ ಆಳವಾಗಿಸಬೇಕೆಂದು ಚಿಂತಿಸಿ

ವಾರ 2

  • ವೈಯಕ್ತಿಕ ಹಾಜರಿ (ಭಾನುವಾರ):
    • ಕಾಲಾವಧಿ : 2 ಘಂಟೆಗಳು
    • ವಿಷಯ : ಪುನರ್ವಿಮರ್ಶೆ, ಪುನರಾವಲೋಕನ ಹಾಗೂ ಆಳವಾದ ಕಲಿಕೆ
  • ಪೋಷಕರ ಪಾತ್ರ:
    • ಕಾರ್ಯಕ್ರಮದ ಕಡೆಯ 1 ಘಂಟೆಯಲ್ಲಿ ಭಾಗವಹಿಸಿರಿ
    • ಮಗುವಿನ ಅಂತಃಸ್ಪುರಣೆಯ ಈ ಪಯಣದಲ್ಲಿನ ಮುಂದಿನ ಹಂತಗಳ ಬಗ್ಗೆ ಅರ್ಥ ಮಾಡಿಕೊಂಡು ಅರಿವು ಮೂಡಿಸಿಕೊಳ್ಳಿ

ಅಂತಃಪ್ರಜ್ಞೆ (ಇನ್ಟ್ಯೂಷನ್) ಎಂದರೆ ಸರಿಯಾದ ಕ್ಷಣದಲ್ಲಿ ಸರಿಯಾದ ಆಲೋಚನೆಯನ್ನು ಹೊಂದಿರುವುದು.

- ಗುರುದೇವ ಶ್ರೀ ಶ್ರೀ ರವಿಶಂಕರ್

ಇನ್ಟ್ಯೂಷನ್ ಪ್ರೋಸಸ್ ಮಕ್ಕಳಿಗಾಗಿ (8+-13 ವರ್ಷದ ವಯೋಮಾನ)

ಇನ್ಟ್ಯೂಷನ್ ಪ್ರೋಸಸ್ ಹದಿಹರಿಯದವರಿಗಾಗಿ (13+-18 ವರ್ಷದ ವಯೋಮಾನ)

ಕಾಲಾವಧಿ : 17 ದಿನಗಳು

ವೇಳಾಪಟ್ಟಿಯ ಅವಲೋಕನ

ದಿನ(ಗಳು) ಸ್ವರೂಪ ಕಾಲಾವಧಿ
ವಾರ 1: ಶುಕ್ರವಾರದಿಂದ ಭಾನುವಾರ ವೈಯಕ್ತಿಕ ಹಾಜರಿ ದಿನಕ್ಕೆ 2 ಘಂಟೆಗಳು
ವಾರ 1: ಸೋಮವಾರದಿಂದ ಗುರುವಾರ ಆನ್ಲೈನ್ (ಜೂಮ್ ಆಪ್) ದಿನಕ್ಕೆ 15 ನಿಮಿಷಗಳು (ಮಕ್ಕಳಿಗಾಗಿ), ದಿನಕ್ಕೆ 30 ನಿಮಿಷಗಳು (ಹದಿಹರಿಯದವರಿಗಾಗಿ)
ವಾರ 2: ಶುಕ್ರವಾರದಿಂದ ಭಾನುವಾರ ವೈಯಕ್ತಿಕ ಹಾಜರಾತಿ ದಿನಕ್ಕೆ 2 ಘಂಟೆಗಳು
ವಾರ 2: ಸೋಮವಾರದಿಂದ ಶನಿವಾರ ಆನ್ಲೈನ್ ಜೂಮ್ ಆಪ್ ದಿನಕ್ಕೆ 30 ನಿಮಿಷಗಳು
ವಾರ 3: ಭಾನುವಾರ ವೈಯಕ್ತಿಕ ಹಾಜರಾತಿ ದಿನಕ್ಕೆ 2 ಘಂಟೆಗಳು

ಕಾರ್ಯಕ್ರಮದ ವಿವರಣೆ

ವಾರ 1

  • ವೈಯಕ್ತಿಕ ಹಾಜರಾತಿ ಶುಕ್ರವಾರದಿಂದ ಭಾನುವಾರ:
    • ದಿನಕ್ಕೆ 2 ಘಂಟೆಗಳು
    • ವಿಷಯ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅಭ್ಯಾಸಗಳು
  • ಆನ್ಲೈನ್ ಕಾರ್ಯಕ್ರಮ ಸೋಮವಾರದಿಂದ ಗುರುವಾರ:
    • (ಸ್ಥಳ : ಆನ್ಲೈನ್ ಜೂಮ್)
    • ನುರಿತ ಶಿಕ್ಷಕರಿಂದ ಮಾರ್ಗದರ್ಶನ
  • ಕಲಿಕೆಯ ವಿಷಯಕಲಿಕೆಯ ವಿಷಯ:
    • ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕಾಗಿ, ವಯಸ್ಸಿಗೆ ಸೂಕ್ತವಾದ ಪ್ರಕ್ರಿಯೆಗಳ ಕಲಿಕೆ
    • ಯೋಗ ಮತ್ತು ಉಸಿರಾಟದ ಪ್ರಕ್ರಿಯೆಗಳು/ ಅಭ್ಯಾಸಗಳು
    • ಒತ್ತಡ ಪರಿಹಾರ ಮತ್ತು ಭಾವನೆಗಳ ನಿರ್ವಹಣೆ
    • ಅಂತಃಪ್ರಜ್ಞೆಯ ಬೆಳವಣಿಗೆಯ ತಯಾರಿ
  • ಕಲಿಕೆಯ ವಿಧಾನಗಳು:
    • ಆಟಗಳು
    • ಗುಂಪಿನಲ್ಲಿ ನಡೆಸುವ ಚರ್ಚೆ

ವಾರ 2

  • ವೈಯಕ್ತಿಕ ಹಾಜರಾತಿಯಲ್ಲಿ ನಡೆಯುವ ಕಾರ್ಯಕ್ರಮ (ಶುಕ್ರವಾರದಿಂದ ಭಾನುವಾರ):
    • ಕಾಲಾವಧಿ : ಪ್ರತಿದಿನ 2 ಘಂಟೆಗಳು
    • ವಿಷಯ : ಅಂತಃಸ್ಪುರಣೆಯ ಸಾಮರ್ಥ್ಯದ ಬೆಳವಣಿಗೆ
  • ಆನ್ಲೈನ್ ಕಾರ್ಯಕ್ರಮ (ಸೋಮವಾರದಿಂದ ಶನಿವಾರ):
    • ಕಾಲಾವಧಿ : ಮಕ್ಕಳು ಹಾಗೂ ಹದಿಹರಿಯದವರಿಬ್ಬರಿಗೂ ದಿನವೂ 30 ನಿಮಿಷಗಳು.
    • ವೇದಿಕೆ : ಜೂಮ್ ಆನ್ಲೈನ್
    • ಉತ್ತಮ ಶಿಕ್ಷಕರಿಂದ ಮಾರ್ಗದರ್ಶನ ಮತ್ತು ಪರಿಶೀಲನೆ
  • ಕಲಿಕೆಯ ವಿಷಯಗಳು:
    • ಅಂತರ್ಗತವಾಗಿರುವ, ಅಂತಃಸ್ಪುರಣೆಯ ಸಾಮರ್ಥ್ಯದ ಬೆಳವಣಿಗೆ
    • ವಿಶೇಷವಾಗಿ ರಚಿತವಾಗಿರುವ ಪ್ರಕ್ರಿಯೆಗಳ ಅಭ್ಯಾಸ
    • ಉಸಿರಾಟದ ಬಗ್ಗೆ ತಿಳುವಳಿಕೆ ಮತ್ತು ಮಾರ್ಗದರ್ಶಿತ ಧ್ಯಾನ
  • ಕಲಿಕೆಯ ವಿಧಾನಗಳು:
    • ಆಸಕ್ತಿದಾಯಕ ಆಟೋಟಗಳು
    • ವಿಶೇಷವಾದ ಚಟುವಟಿಕೆಗಳು
  • ಪೋಷಕರ ಪಾತ್ರ :
    • 2ನೇ ವಾರದ ಕಾರ್ಯಕ್ರಮದ ಕಡೆಯ 2 ಘಂಟೆಗಳು ಭಾಗವಹಿಸಿರಿ
    • ಮಕ್ಕಳ ಕಲಿಕೆಯ ಬಗೆಗೆ ಒಳನೋಟವನ್ನು ಬೆಳೆಸಿಕೊಳ್ಳಿರಿ.
    • ಮಕ್ಕಳ ಅಂತಃಸ್ಫೂರ್ತಿಯನ್ನು ಹೇಗೆ ಆಳವಾಗಿಸಬಹುದು ಎಂಬ ಬಗ್ಗೆ ಕಲಿಯಿರಿ

ವಾರ 3

  • ವೈಯಕ್ತಿಕ ಹಾಜರಿಯ ಕಾರ್ಯಕ್ರಮ (ಭಾನುವಾರ)):
    • ಕಾಲಾವಧಿ : 2 ಘಂಟೆಗಳು
    • ವಿಷಯ : ಪರಿಶೀಲನೆ, ಆಳವಾದ ಅಧ್ಯಯನ ಮತ್ತು ಮುಂದಿನ ಅಭ್ಯಾಸಕ್ಕೆ ಬೇಕಾಗುವ ಮಾರ್ಗದರ್ಶನ
  • ಕಲಿಕೆಯ ವಿಷಯಗಳು:
    • ಪುನರ್ವಿಮರ್ಶೆ ಮತ್ತು ಕಲಿತಿರುವ ಪ್ರಕ್ರಿಯೆಗಳ ಅಳವಡಿಕೆ
    • ಮುಂದಿನ ದಾರಿಯನ್ನು ಗ್ರಹಿಸುವ ವಿಧಾನ
  • ಪೋಷಕರ ಪಾತ್ರ:
    • ಕಾರ್ಯಕ್ರಮದ ಕಡೆಯ 20 ನಿಮಿಷಗಳಲ್ಲಿ ಪಾಲ್ಗೊಳ್ಳಿರಿ
    • ಮಗುವಿನ ಅಂತಃಸ್ಪುರಣೆಯ ಪಯಣದ ಮುಂದಿನ ಹೆಜ್ಜೆಯ ಬಗ್ಗೆ ಅರ್ಥ ಮಾಡಿಕೊಳ್ಳಿರಿ.

ಅಂತಃಸ್ಪುರಣೆಯ ಪ್ರಕ್ರಿಯೆಗಳ ಮೇಲೆ ನಡೆಸಿರುವ ಸಂಶೋಧನೆಗಳು

icon

22%

ಹದಿಹರಿಯದವರ ಮಾನಸಿಕ ನಿಖರತೆಯಲ್ಲಿ ಹೆಚ್ಚಳ

icon

29%

ಮಾನಸಿಕ ಆರೋಗ್ಯದಲ್ಲಿ ಹೆಚ್ಚಳ

icon

69%

ಮಾನಸಿಕ ಸಂಬಂಧಿತ ಸಮಸ್ಯೆಗಳಲ್ಲಿ ಇಳಿಕೆ

icon

67%

ಅತಿಯಾದ ಚಟುವಟಿಕೆಯ ಸಮಸ್ಯೆಯಲ್ಲಿ ಇಳಿಕೆ

icon

50%

ಮೇಲ್ವರ್ಗದವರೊಂದಿಗೆ ಹೊಂದಿಕೊಳ್ಳಲು ಉಂಟಾಗುವ ಸಮಸ್ಯೆಗಳಲ್ಲಿ ಇಳಿಕೆ

icon

78%

ನಡುವಳಿಕೆಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಇಳಿಕೆ

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ನನ್ನ ಮಗುವನ್ನು ಈ ಕಾರ್ಯಕ್ರಮಕ್ಕೆ ನೊಂದಾಯಿಸಲು ಇಚ್ಛಿಸುತ್ತೇನೆ. ಆದರೆ...

ಅಂತಃಸ್ಪುರಣೆ ಎಂದರೇನು ?

ಬರಿಯ ತರ್ಕವನ್ನೇ ಆಧರಿಸಿ, ಕಾರಣಗಳನ್ನು ನೀಡುತ್ತಾ ವಿಷಯಗಳನ್ನು ಅರ್ಥೈಸುವ ವಿಧಾನಕ್ಕಿಂತ ಭಿನ್ನವಾಗಿರುವ ಇದು ಅರ್ಥಮಾಡಿಕೊಳ್ಳುವ, ಅರಿಯುವ, ತಿಳಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಕಲಿಕೆಯಾಗಿದೆ. ಈ ಅಂತಃಸ್ಪುರಣೆಯ ಸ್ವಭಾವವು, ಸಹಜವಾಗಿ ನಮ್ಮೆಲ್ಲರಲ್ಲಿದೆ. ಆದರೆ ಮನಸ್ಸಿನ ಈ ಗುಣವನ್ನು ಪೋಷಿಸಿ ಬೆಳೆಸುವಲ್ಲಿ ಅತೀ ಕಡಿಮೆ ಗಮನವನ್ನು ನಾವು, ನೀವು ಹರಿಸುತ್ತಿದ್ದೇವೆ.

ಅಂತಃಸ್ಪುರಣೆಯನ್ನು ಬೆಳೆಸಿಕೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳೇನು?

ಹೆಚ್ಚಾದ ಅಂತಃಸ್ಪುರಣಾ ಸಾಮರ್ಥ್ಯದಿಂದ ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ನಾವು ಯಶಸ್ಸನ್ನು ಸಾಧಿಸಬಹುದು. .

  • ಹೆಚ್ಚಾದ ಕಲಿಕೆಯ ಸಾಮರ್ಥ್ಯ
  • ಉತ್ತಮವಾದ ತೀರ್ಮಾನಗಳನ್ನು ಕೈಗೊಳ್ಳುವುದು
  • ಅತ್ತ್ಯುತ್ತಮ ಸೃಜನಶೀಲತೆ ಹಾಗೂ ಪ್ರಯೋಗಾತ್ಮಕ ಗುಣಗಳ ಹೆಚ್ಚಳ
  • ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬೇಕಾಗಿರುವ ಕುಶಲತಾ ಸಾಮರ್ಥ್ಯ
  • ದೂರದೃಷ್ಟಿ
  • ಹೆಚ್ಚಾದ ಆತ್ಮವಿಶ್ವಾಸ
  • ಉತ್ತಮವಾದ ಪರಸ್ಪರ ಸಂವಹನ.
  • ಗೊತ್ತಿಲ್ಲದಿರುವ ವಿಷಯದ ಬಗ್ಗೆ ಇರುವ ಭಯದ ನಿವಾರಣೆ

ಈ ಕಾರ್ಯಕ್ರಮವನ್ನು ಕೇವಲ ಮಕ್ಕಳು ಹಾಗೂ ಹದಿಹರಿಯದವರಿಗಾಗಿಯೇ ಏಕೆ ಆಯೋಜಿಸಲಾಗಿದೆ ?

ನಾವೆಲ್ಲರೂ ಸಹಜವಾಗಿಯೇ ಪಂಚೇದ್ರಿಯಗಳನ್ನು ಮೀರಿದ ಈ ಅಂತಃಸ್ಪುರಣೆಯಿಂದ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಈ ಸಾಮರ್ಥ್ಯವು ಮಕ್ಕಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಏಕೆಂದರೆ ಅವರ ಮನಸ್ಸು ಹೊಸತಾಗಿ, ಹಗುರಾಗಿ ಪ್ರಲೋಭನೆಗಳಿಲ್ಲದೆ ಪ್ರಕೃತಿಗೆ ಹತ್ತಿರವಾಗಿರುತ್ತದೆ.

ಈ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ಅಥವಾ ವೈಯಕ್ತಿಕ ಹಾಜರಿಯ ಮೂಲಕ ಆಯೋಜಿಸಲಾಗುತ್ತದೆಯೇ?

ಮಕ್ಕಳಿಗಾಗಿ ಹಾಗೂ ಹದಿಹರಿಯದವರಿಗಾಗಿ ನಡೆಸುವ ಈ ಅಂತಃಸ್ಪುರಣೆಯ ಕಾರ್ಯಕ್ರಮವು ವೈಯಕ್ತಿಕ ಹಾಜರಿಯ ಮೂಲಕ ಹಾಗೂ ಆನ್ಲೈನ್ ಮೂಲಕ ಈ ಎರಡೂ ವಿಧಾನಗಳಿಂದ ಆಯೋಜಿತವಾಗಿದೆ.
ಕಿರಿಯರಿಗಾಗಿ ಆಯೋಜಿತವಾಗಿರುವ ಅಂತಃಸ್ಪುರಣೆಯ ಈ ಕಾರ್ಯಕ್ರಮವು ದಿನವೊಂದಕ್ಕೆ 2 ಘಂಟೆಗಳಂತೆ ನಡೆಸುವ 4 ದಿನಗಳ ವೈಯಕ್ತಿಕ ಹಾಜರಿಯ ಕಾರ್ಯಕ್ರಮವಾಗಿದೆ. ಇದರಲ್ಲಿ 7 ದಿನಗಳ ಆನ್ಲೈನ್ ಕಾರ್ಯಕ್ರಮವೂ ಸೇರಿದೆ (ಸೋಮವಾರದಿಂದ ಶನಿವಾರದವರೆಗೆ) ನುರಿತ ಶಿಕ್ಷಕರ ಮಾರ್ಗದರ್ಶನದಲ್ಲಿ ಇದು ನಡೆಯುತ್ತದೆ.

ಮಕ್ಕಳ ಅಂತಃಸ್ಪುರಣೆಯನ್ನು ಪ್ರಚೋದಿಸಲು ನೀವು ಯಾವ ಪ್ರಕ್ರಿಯೆಗಳನ್ನು ಅವರಿಗೆ ಕಲಿಸುತ್ತೀರಿ?

ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯೋಗಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಕಲಿಸಲಾಗುತ್ತದೆ. ಇದರಿಂದ ಅವರ ಮನಸ್ಸು ವಿಶ್ರಮಿಸಿ ಅಂತಃಸ್ಪುರಣೆಗೆ ತನ್ನಂತೆಯೇ ಹೊಂದಿಕೊಳ್ಳುತ್ತದೆ.
ವಯೋಮಿತಿಗೆ ಅನುಗುಣವಾಗಿ ಉಸಿರಾಟದ ಪ್ರಕ್ರಿಯೆಗಳನ್ನು ಹೇಳಿಕೊಡಲಾಗುತ್ತದೆ. ಮಾರ್ಗದರ್ಶಿತ ಧ್ಯಾನದ ಜೊತೆಗೆ ವಿಶ್ರಾಮಕ್ಕಾಗಿ ಕೆಲವು ಪ್ರಕ್ರಿಯೆಗಳನ್ನು ಕಲಿಸಲಾಗುತ್ತದೆ.
ವಿನೋದ ಹಾಗೂ ಕಲಿಕೆಯನ್ನು ಒಳಗೊಂಡ ಆಟಗಳ ಜೊತೆಗೆ ಅಂತಃಸ್ಫೂರ್ತಿಯನ್ನು ಉತ್ತಮಗೊಳಿಸುವ ಚಟುವಟಿಕೆಗಳೂ ಸೇರಿವೆ.
ಮನೆಯಲ್ಲಿ ಅಭ್ಯಾಸ ಮಾಡಲು ಕೆಲವು ಸೂಚನೆಗಳನ್ನೂ ಸಹ ನೀಡಲಾಗುತ್ತದೆ.

ಮಗುವಿನ ಅಂತಃಸ್ಪುರಣೆಯ ಸಾಮರ್ಥ್ಯವು ಬೆಳೆಯಲು ಎಷ್ಟು ಸಮಯ ಬೇಕಾಗುತ್ತದೆ?

ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಕಣ್ಣಾರೆ ಕಾಣಬಹುದು. ಈ ಕಾರ್ಯಕ್ರಮದಲ್ಲಿನ ಕಲಿಕೆಗಳನ್ನು ಅಭ್ಯಸಿಸಿದ ಮಕ್ಕಳು ಮತ್ತು ಅವರ ಪೋಷಕರು ವಿವರಿಸಿರುವ ಅವರ ಅನುಭವವನ್ನು ಒಳಗೊಂಡ ಹಲವು ದೃಶ್ಯಾವಳಿಗಳು ಲಭ್ಯವಿವೆ. ಇವೆಲ್ಲವನ್ನೂ ನೀವು ಕಾಣಬಹುದು.

ಪ್ರತಿಯೊಂದು ಮಗುವೂ ವಿಶೇಷದ್ದಾಗಿದೆ. ಈ ಅಂತಃಸ್ಪುರಣೆಯ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಳ್ಳಲು ಮಕ್ಕಳು ಅವರದೇ ಸಮಯವನ್ನು ತೆಗೆದುಕೊಳ್ಳುತ್ತಾರೆ. ಈ ಸಾಮರ್ಥ್ಯದ ಪ್ರಗತಿಯು ಮಗುವಿನ ದಿನನಿತ್ಯದ ಅಭ್ಯಾಸ ಹಾಗೂ ಪ್ರಯತ್ನ ಇವುಗಳ ಮೇಲೆ ಅವಲಂಬಿತವಾಗಿದೆ.

ಈ ಕಾರ್ಯಕ್ರಮದಲ್ಲಿ, ಮಗುವು 15 ರಿಂದ 25 ನಿಮಿಷಗಳನ್ನು ಮನೆಯಲ್ಲಿನ ದಿನನಿತ್ಯದ ಅಭ್ಯಾಸಕ್ಕಾಗಿ ಮೀಸಲಿಡಬೇಕು. ನಿಯಮಿತ ಅಭ್ಯಾಸದ ಫಲಿತವಾಗಿ ಮಕ್ಕಳು ಹಾಗೂ ಅವರ ಪೋಷಕರು ತಮ್ಮ ಅಂತಃಸ್ಪುರಣೆಯ ಸಾಮರ್ಥ್ಯವು ಸುಧಾರಿಸಿ ವೃದ್ಧಿಯಾಗುವುದನ್ನು ಸ್ವತಃ ಕಾಣುತ್ತಾರೆ. ಮಕ್ಕಳಲ್ಲಿ ಉಂಟಾಗುವ ಬದಲಾವಣೆಯ ಈ ಅನುಭವಕ್ಕೆ ಅವರು ಮಾಡುವ ಅಭ್ಯಾಸವೇ ಬುನಾದಿಯಾಗಿದೆ.

ಈ ಕಾರ್ಯಕ್ರಮವು ಎಷ್ಟು ಸಮಯ ಹಿಡಿಯುತ್ತದೆ ಮತ್ತು ಯಾವ ವಯೋಮಿತಿಯವರಿಗಾಗಿ ಇದೆ?

ಕಿರಿಯರಿಗಾಗಿ ಆಯೋಜಿತವಾಗಿರುವ ಅಂತಃಸ್ಪುರಣೆಯ ಕಾರ್ಯಕ್ರಮ (5-7 ವರ್ಷ ವಯೋಮಾನದವರಿಗಾಗಿ) 10 ದಿನಗಳ ಕಾರ್ಯಕ್ರಮ: ಪ್ರತಿದಿನ 2 ಘಂಟೆಗಳಂತೆ 4 ದಿನಗಳ ವೈಯಕ್ತಿಕ ಹಾಜರಿಯ ಕಾರ್ಯಕ್ರಮ. ಪ್ರತಿದಿನ 15 ನಿಮಿಷನ್ನೊಳಗೊಂಡ 6 ದಿನಗಳ ಕಾರ್ಯಕ್ರಮ. ಮಕ್ಕಳಿಗಾಗಿ ಅಂತಃಸ್ಪುರಣೆಯ ಕಾರ್ಯಕ್ರಮ (8-13 ವರ್ಷದ ವಯೋಮಾನದವರಿಗಾಗಿ) 17 ದಿನಗಳ ಕಾರ್ಯಕ್ರಮ - ದಿನವೂ 2 ಘಂಟೆಗಳಂತೆ 7 ದಿನಗಳ ವೈಯಕ್ತಿಕ ಹಾಜರಿ, ದಿನವೂ 15 ನಿಮಿಷಗಳನ್ನೊಳಗೊಂಡ 10 ದಿನಗಳು. ಹದಿಹರಿಯದವರಿಗಾಗಿ ಅಂತಃಸ್ಪುರಣೆಯ ಕಾರ್ಯಕ್ರಮ (14 -18 ವಯೋಮಾನದವರಿಗಾಗಿ) 17 ದಿನಗಳ ಕಾರ್ಯಕ್ರಮ - ಪ್ರತಿದಿನವೂ 2 ಘಂಟೆಗಳಂತೆ 7 ದಿನಗಳ ವೈಯಕ್ತಿಕ ಹಾಜರಿ, ಪ್ರತಿದಿನವೂ 30 ನಿಮಿಷಗನ್ನೊಳಗೊಂಡ 10 ದಿನಗಳ ಆನ್ಲೈನ್ ಕಾರ್ಯಕ್ರಮ.