two little girls playing on trees

ಉತ್ಕರ್ಷ ಯೋಗ

ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯವನ್ನು ಹೆಚ್ಚಿಸುತ್ತದೆ

ವಯೋಮಿತಿ: 8 ರಿಂದ 13 ವರ್ಷಗಳು

ಮೊದಲ ವಾರದಿಂದಲೇ ಬದಲಾವಣೆಗಳನ್ನು ಗಮನಿಸಿ

ನೋಂದಾಯಿಸಿ

ಮಕ್ಕಳಿಗೆ ಇದು ಹೇಗೆ ಉಪಯೋಗವಾಗುತ್ತದೆ?

icon

ರೋಗನಿರೋಧಕ ಶಕ್ತಿಯನ್ನು ಮತ್ತು ಹಸಿವನ್ನು ಹೆಚ್ಚಿಸುತ್ತದೆ

ಇಲ್ಲಿ ಕಲಿಸುವ ವ್ಯಾಯಾಮಗಳು ಮತ್ತು ಚಟುವಟಿಕೆಗಳು ಹಸಿವನ್ನು ಹೆಚ್ಚಿಸುತ್ತವೆ, ಶಕ್ತಿಯನ್ನು ವರ್ಧಿಸುತ್ತವೆ, ಸ್ವಾಸ್ಥ್ಯವನ್ನು ಉಂಟುಮಾಡುತ್ತವೆ.

icon

ಕೋಪವನ್ನು ದೂರಮಾಡುತ್ತದೆ

ಮಕ್ಕಳು ತಮ್ಮ ಕೋಪ, ಆಕ್ರಮಣಶೀಲತೆ ಮತ್ತು ಖಿನ್ನತೆಗಳಿಂದ ದೂರವಾಗಿ ತಮ್ಮ ಸಂಪೂರ್ಣ ಶಕ್ತಿಯನ್ನು ಸೃಜನಶೀಲತೆಗೆ ಬಳಸಿಕೊಳ್ಳಲು ಶಕ್ತರಾಗುತ್ತಾರೆ.

icon

ಲಕ್ಷ್ಯವಿರಿಸುವ ಅವಧಿ ಹೆಚ್ಚುತ್ತದೆ

ತೀವ್ರ ಸಂಶೋಧನೆಗಳಿಂದ ಪ್ರಮಾಣಿತವಾದ ತಂತ್ರಗಳ ಮೂಲಕ ಮಕ್ಕಳು ಶಾಂತವಾಗಿರುವುದನ್ನು ಮತ್ತು ಏಕಾಗ್ರತೆಯಿಂದಿರುವುದನ್ನು ಅಭ್ಯಾಸ ಮಾಡುತ್ತಾರೆ, ಅವರ ನೆನಪಿನ ಶಕ್ತಿ ವರ್ಧಿಸುತ್ತದೆ.

icon

ಸಂತೋಷವನ್ನು ಹೆಚ್ಚಿಸುತ್ತದೆ

ವಿನೋದಮಯವಾದ ಪರಸ್ಪರ ಸಂವಹನಗಳ ಮೂಲಕ ಮಕ್ಕಳು ತಮ್ಮ ಹಿಂಜರಿಕೆಗಳನ್ನು ತ್ಯಜಿಸಿ ತಮ್ಮ ನಿಜಸ್ವಭಾವದ ಆನಂದವನ್ನು ಅನುಭವಿಸುತ್ತಾರೆ.

ಉತ್ಕರ್ಷ ಯೋಗ ಎಂದರೇನು?

ಮಕ್ಕಳಲ್ಲಿ ಅಪಾರವಾದ ಶಕ್ತಿಯಿರುತ್ತದೆ. ಆದರೆ ಇದು ಆತಂಕ, ಕೋಪ, ಆಕ್ರಮಣಶಿಲತೆ ಮತ್ತು ಖಿನ್ನತೆಯ ರೂಪದಲ್ಲಿ ಪ್ರಕಟವಾಗುವ ಸಾಧ್ಯತೆಯಿರುತ್ತದೆ.

ಉತ್ಕರ್ಷ ಯೋಗ ಕಾರ್ಯಕ್ರಮದಲ್ಲಿ ಸರಳವಾದ ಉಸಿರಾಟದ ತಂತ್ರಗಳನ್ನು ಕಲಿಸಲಾಗುತ್ತದೆ, ಜ್ಞಾನದ ಮೂಲತತ್ತ್ವಗಳನ್ನು ಬೋಧಿಸಲಾಗುತ್ತದೆ. ಪ್ರಭಾವಶಾಲಿಯಾದ ಸುದರ್ಶನಕ್ರಿಯೆಯನ್ನು ಹೇಳಿಕೊಡಲಾಗುತ್ತದೆ. ಇವುಗಳಿಂದ ಮಕ್ಕಳಿಗೆ ತಮ್ಮ ಶಕ್ತಿಯನ್ನು ಘನವಾದ ಉದ್ದೇಶಗಳ ಕಡೆ ಕೇಂದ್ರೀಕರಿಸುವುದು ಸಾಧ್ಯವಾಗುತ್ತದೆ. ಪ್ರಶಾಂತವಾದ, ಸಂತೋಷಮಯ ಮನಸ್ಸಿನಿಂದ ಮಕ್ಕಳಿಗೆ ಹೆಚ್ಚು ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ, ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಮನಸ್ಸು ನಿಚ್ಚಳವಾಗುತ್ತದೆ. ಇದರಿಂದ ಮಕ್ಕಳಲ್ಲಿ ಸಾಂಘಿಕಚಟುವಟಿಕೆಗಳಲ್ಲಿ ಅಭಿರುಚಿ ಮತ್ತು ಸೃಜನಶೀಲವಾಗಿ ಸಮಸ್ಯೆಗಳನ್ನು ನಿವಾರಿಸುವ ಕೌಶಲ್ಯ ಬೆಳೆಯುತ್ತದೆ.

ಉತ್ತಮವಾದ ವಿನೋದಮಯ ವಾತಾವರಣದಲ್ಲಿ ಆತ್ಮೀಯ ಭಾವದಿಂದ ಹಾಗೂ ನಾವೆಲ್ಲ ಒಂದೇ ಎಂಬ ಭಾವದಿಂದ ಕಲಿಯುವುದು, ಜನರೊಡನೆ ಬೆರೆಯುವುದು ಮತ್ತು ಕೊನೆಗೆ ಸಕಾರಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳುವುದು ಈ ಕಾರ್ಯಾಗಾರದಿಂದ ಮಕ್ಕಳಿಗೆ ದೊರೆಯುವ ಪ್ರಯೋಜನ.

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ಈ ಶಿಬಿರದಲ್ಲಿ ಭಾಗವಹಿಸಬೇಕೆಂದಿದ್ದೇನೆ, ಆದರೆ…

ಕಾರ್ಯಕ್ರಮದ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡುತ್ತೀರಾ?

ಪ್ರಾಚೀನವಾದ ಯೋಗದ ತಂತ್ರಗಳು ಮತ್ತು ವ್ಯಾಯಾಮಗಳ ಆಧಾರದ ಮೇಲೆ ಉತ್ಕರ್ಷ ಯೋಗ ಕಾರ್ಯಾಗಾರವನ್ನು ಗುರುದೇವ ಶ್ರೀ ಶ್ರೀ ರವಿ ಶಂಕರರು ರೂಪಿಸಿದ್ದಾರೆ. ಧ್ಯಾನ, ಯೋಗ ಮತ್ತು ಉಸಿರಾಟದ ತಂತ್ರಗಳ ಜೊತೆಗೆ ಮಕ್ಕಳಿಗೆ ಭಯ ಮತ್ತು ಆತಂಕಗಳನ್ನು ಹಿಂದಿಕ್ಕಿ ತಮ್ಮ ಜೀವನವನ್ನು ಪರಿಪೂರ್ಣವಾಗಿ ಸಾಗಿಸುವ ಕೌಶಲ್ಯವನ್ನು ಕಲಿಸಲಾಗುತ್ತದೆ. ಮಕ್ಕಳಿಗೆ ಆಧ್ಯಾತ್ಮ ಮತ್ತು ಭಾರತೀಯ ಪರಂಪರೆಯ ಪರಿಚಯವನ್ನೂ ಮಾಡಿಕೊಡಲಾಗುತ್ತದೆ.

ಇದರಿಂದ ನನ್ನ ಆರೋಗ್ಯವು ಸುಧಾರಿಸುತ್ತದೆಯೆ?

ಹೌದು, ಖಂಡಿತವಾಗಿ! ಸುದರ್ಶನಕ್ರಿಯೆಯ ನಿತ್ಯಾಭ್ಯಾಸದಿಂದ ನಿದ್ರೆ ಉತ್ತಮವಾಗುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಒತ್ತಡ ಮತ್ತು ಖಿನ್ನತೆಗಳು ಕಡಿಮೆಯಾಗುತ್ತವೆ. ಈ ಬಗ್ಗೆ ತಿಳಿದುಕೊಳ್ಳಲು ನೀವು ಈ ಕಾರ್ಯಾಗಾರದಿಂದ ಲಾಭ ಪಡೆದವರ ಪ್ರಾಮಾಣಿಕ ಹೇಳಿಕೆಗಳನ್ನೇ ಓದಿ. ನಿಮಗೇನಾದರೂ ಆರೋಗ್ಯದ ಸಮಸ್ಯೆಗಳಿದ್ದರೆ ಅವನ್ನು ಮುಂಚಿತವಾಗಿಯೇ ನಿಮ್ಮ ಶಿಕ್ಷಕರಿಗೆ ತಿಳಿಸಿ. ಶಿಕ್ಷಕರು ಅವುಗಳನ್ನು ಗಣನೆಗೆ ತಂದುಕೊಂಡು ನಿಮಗೆ ಸೂಕ್ತವಾದ ರೀತಿಯಲ್ಲಿ ಕಾರ್ಯಕ್ರಮ ರೂಪಿಸುತ್ತಾರೆ.

ಇದಕ್ಕಾಗಿ ಶುಲ್ಕವನ್ನೇಕೆ ತೆಗೆದುಕೊಳ್ಳುತ್ತೀರಿ?

ಉಚಿತವಾಗಿ ದೊರೆಯುವ ಯಾವುದೇ ವಿಷಯಗಳಲ್ಲಿ ಶ್ರದ್ಧೆಯಿರುವುದಿಲ್ಲ, ಶುಲ್ಕವನ್ನು ಪಾವತಿಸಿದರೆ ನೀವು ಈ ಕಾರ್ಯಾಗಾರಕ್ಕಾಗಿ ಸಮಯವನ್ನು ಮೀಸಲಿಡುತ್ತೀರಿ ಎಂಬುದು ಒಂದು ಕಾರಣ. ಆದರೆ, ನಿಮಗೆ ಅತ್ಯಗತ್ಯವಾದ ಜೀವನಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ನೀವು ಪಾವತಿಸುವ ಶುಲ್ಕದ ಬಹುಪಾಲು ಭಾರತದಾದ್ಯಂತ ನಡೆಯುತ್ತಿರುವ ಅನೇಕ ಸೇವಾ ಯೋಜನೆಗಳಿಗೆ ಬಳಕೆಯಾಗುತ್ತದೆ ಎಂಬುದು ಎರಡನೇ, ಪ್ರಮುಖ ಕಾರಣ. ಉದಾಹರಣೆಗೆ: ಬುಡಕಟ್ಟು ಜನಾಂಗದ 70,000 ಮಕ್ಕಳಿಗೆ ಉಚಿತ ಶಿಕ್ಷಣ, ದೇಶಾದ್ಯಂತ 43 ನದಿಗಳ ಪುನಶ್ಚೇತನ, 2,04,802 ಗ್ರಾಮೀಣ ಯುವಕರಿಗೆ ಜೀವನಕೌಶಲ್ಯಗಳನ್ನು ಕಲಿಸುವ ಯುವಸಬಲೀಕರಣ, 720 ಗ್ರಾಮಗಳಿಗೆ ಸೌರ ದೀಪಗಳ ವ್ಯವಸ್ಥೆ, ಇತ್ಯಾದಿ.

ನನಗೆ ಒತ್ತಡವಿಲ್ಲ, ಆದರೂ ಈ ಕಾರ್ಯಗಾರಕ್ಕೆ ನಾನೇಕೆ ಸೇರಿಕೊಳ್ಳಬೇಕು?

ನಿಮಗೆ ಒತ್ತಡವಿಲ್ಲದಿದ್ದರೆ ಅದು ಬಹಳ ಸಂತಸದ ಸುದ್ದಿ! ನೀವು ಉತ್ತಮವಾದ ಜೀವನವನ್ನೇ ನಡೆಸುತ್ತಿರುವಿರಿ. ಆದರೆ ಹಣವೆಲ್ಲಾ ಖರ್ಚಾದ ನಂತರ ಹಣವನ್ನು ಕೂಡಿಡಬೇಕೆಂದು ನಿರ್ಧರಿಸುವಿರಾ? ಅಥವಾ ಅನಾರೋಗ್ಯದಿಂದ ಪೀಡಿತರಾದ ನಂತರವೇ ವ್ಯಾಯಾಮ ಮಾಡಬೇಕೆಂದು ನಿರ್ಧರಿಸುತ್ತೀರಾ? ಇಲ್ಲ, ಅಲ್ಲವೆ? ಅದೇ ರೀತಿ, ಭವಿಷ್ಯದಲ್ಲಿ ನಿಮಗೆ ಬೇಕಾಗುವ ಮನಸ್ಸಿನ ಹಿಡಿತ, ಸಹಿಷ್ಣುತೆ ಮುಂತಾದ ಆಂತರಿಕ ಶಕ್ತಿಗಳನ್ನು ಈಗಿಂದಲೇ ಬೆಳೆಸಿಕೊಳ್ಳಬಹುದಲ್ಲವೆ? ಅದೇನೇ ಇರಲಿ, ನಿಮ್ಮ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನೀವು ಸ್ವತಂತ್ರರು. ಮುಂದೊಮ್ಮೆ ನೀವು ಒತ್ತಡಗಳಿಂದ ಪೀಡಿತರಾದಾಗ ಅವುಗಳಿಂದ ಪಾರಾಗಲು ಈ ಕಾರ್ಯಾಗಾರದಲ್ಲಿ ಭಾಗಿಯಾಗಬಹುದು.