ಕಾರ್ಯಕ್ರಮದಲ್ಲಿ ಏನನ್ನು ಹೇಳಿಕೊಡಲಾಗುತ್ತದೆ?

ಸಮಗ್ರವಾದ ಪರಿಹಾರೋಪಯಗಳು
ನಮ್ಮ ಸಮಗ್ರವಾದ ಶೈಕ್ಷಣಿಕ ಪಠ್ಯಕ್ರಮವು, ವಿದ್ಯಾರ್ಥಿಗಳ ಯಶಸ್ಸಿಗಾಗಿ ಅವಶ್ಯಕವಾದ ಆರೋಗ್ಯಕರವಾದ ದೇಹ, ಆರೋಗ್ಯಕರವಾದ ಮನಸ್ಸು ಮತ್ತು ಆರೋಗ್ಯಕರವಾದ ಜೀವನಶೈಲಿಯ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಆರೋಗ್ಯಕರವಾದ ದೇಹ
ಯೋಗಾಸನಗಳ ಸರಣಿಗಳು, ವ್ಯಾಯಾಮಗಳು ಮತ್ತು ದೈಹಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ದೇಹವನ್ನು ಬಲಿಷ್ಠಗೊಳಿಸುವ ಸಲಹಾ ವಿಧಾನಗಳು. ಪೌಷ್ಠಿಕ ಆಹಾರದ ಸೇವನೆಗೆ ಪ್ರೋತ್ಸಾಹ.

ಆರೋಗ್ಯಕರವಾದ ಮನಸ್ಸು
ಉಸಿರಾಟದ ಪ್ರಕ್ರಿಯೆಗಳು ಒತ್ತಡ, ಕೋಪ ಮತ್ತು ಖಿನ್ನತೆಯನ್ನು ಕುಗ್ಗಿಸಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವಿಶ್ರಾಂತಿದಾಯಕ ವ್ಯಾಯಾಮಗಳು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಮತ್ತು ಮಾನವೀಯ ಮೌಲ್ಯಗಳನ್ನು ಪುನಶ್ಚೇತಗೊಳಿಸುತ್ತದೆ.

ಆರೋಗ್ಯಕರವಾದ ಜೀವನಶೈಲಿ
ವ್ಯಾಯಾಮಗಳು, ಚರ್ಚೆಗಳು, ಸಾಮಾಜಿಕ - ಭಾವನಾತ್ಮಕ ಜೀವನದ ಕುಶಲತೆಗಳ ಕಲಿಕೆ. ಇದರಿಂದ ಭಾವನೆಗಳ ನಿಯಂತ್ರಣ, ಸಮಸ್ಯೆಗಳ ನಿವಾರಣೆ, ಉತ್ತಮ ನಿರ್ಧಾರಗಳನ್ನು ಮಾಡಲು ಮತ್ತು ಒತ್ತಡವನ್ನು ನಿಭಾಯಿಸುವಲ್ಲಿ ಸಹಕಾರಿಯಾಗಿದೆ.
ಜೀವನ ಪರಿವರ್ತಕವಾದಂತಹ ಉಸಿರಾಟದ ಪ್ರಕ್ರಿಯೆ
ಸುದರ್ಶನ ಕ್ರಿಯೆ™
ಈ ಕಾರ್ಯಕ್ರಮದ ಹೃದ್ಭಾಗವೆಂದರೆ ಶಕ್ತಿಶಾಲಿಯಾದ ಸುದರ್ಶನ ಕ್ರಿಯೆಯೆಂಬ ಉಸಿರಾಟದ ಪ್ರಕ್ರಿಯೆ. 50 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಲಾದ ವೈಜ್ಞಾನಿಕ ಸಂಶೋಧನೆಗಳು- ಒತ್ತಡವನ್ನು ನಿಭಾಯಿಸುವಲ್ಲಿ ಮತ್ತು ಒಳಿತನ್ನು ಹೆಚ್ಚಿಸುವಲ್ಲಿ, ಸುದರ್ಶನ ಕ್ರಿಯೆಯು ಪರಿಣಾಮಕಾರಿ ಎಂದು ಸಿದ್ಧಪಡಿಸಿವೆ. ಆರ್ಟ್ ಆಫ್ ಲಿವಿಂಗ್ ನ ಶಾಲಾ ಕಾರ್ಯಕ್ರಮಗಳು ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಪ್ರಯೋಜನಕಾರಿಯಾದ ಅಭ್ಯಾಸ ಮತ್ತು ಪ್ರಕ್ರಿಯೆಗಳನ್ನು ಹೊಂದಿವೆ.
ಮೂಲ ಮತ್ತು ಪ್ರಯೋಜನಗಳುಜೀವನಕ್ಕೆ ಪ್ರಯೋಜನಕಾರಿಯಾದ ಅನೇಕ ಪಾಠಗಳನ್ನು ನಾನು ಕಲಿತೆ. ಗುರುದೇವರಂತೆಯೇ ನಾನೂ ಕೂಡಾ ಎಲ್ಲರ ಮುಖಗಳ ಮೇಲೂ ಮುಗುಳ್ನಗೆಯನ್ನು ಮೂಡಿಸಿ ಅವರನ್ನು ಸಂತೋಷಪಡಿಸಲು ಬಯಸುತ್ತೇನೆ.

ಅಕ್ಷಯ್, 16
ವಿದ್ಯಾರ್ಥಿ
ಈಗ ನಾನು ಮೊದಲಿಗಿಂತ ಚೆನ್ನಾಗಿದ್ದೇನೆ. ನನ್ನಲ್ಲಿ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸವಿದೆ. ಸುದರ್ಶನಕ್ರಿಯೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತೇನೆ. ಇದರಿಂದ ನನ್ನ ಏಕಾಗ್ರತೆ ಹೆಚ್ಚಿದೆ, ನನ್ನ ಕಲಿಕೆಯ ಮಟ್ಟವೂ ಉತ್ತಮವಾಗಿದೆ.

ಶ್ರಿಯಾ, 15
ವಿದ್ಯಾರ್ಥಿನಿ
ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಮೊದಲು ನಾನು ನನ್ನ ಸಹಪಾಠಿಗಳೊಡನೆಯೂ ಮಾತನಾಡುತ್ತಿರಲಿಲ್ಲ. ಈಗ ನಾನು ನಮ್ಮ ಶಾಲಾಸಭೆಯಲ್ಲಿಯೂ ಧೈರ್ಯವಾಗಿ ಮಾತನಾಡಬಲ್ಲೆ!

ಮೀರಾ, 13
ವಿದ್ಯಾರ್ಥಿನಿ
ನನ್ನ ಸಾಮರ್ಥ್ಯ ಹೆಚ್ಚಾಗಿದೆ. ಸಂಗೀತದಲ್ಲಿ ನನ್ನ ಅಸಕ್ತಿ ಇನ್ನೂ ಹೆಚ್ಚಾಗಿದೆ. ಕ್ರೀಡೆಗಳಲ್ಲಿ ಮತ್ತು ಓದಿನಲ್ಲಿ ನನ್ನ ಸಾಧನೆ ಉತ್ತಮವಾಗಿದೆ. ಕಾರ್ಯಾಗಾರವು ಸಂಪೂರ್ಣವಾಗಿ ವಿನೋದಮಯವಾಗಿತ್ತು!

ಅಮೇಯ್, 10
ವಿದ್ಯಾರ್
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿಶಾಲೆಗಳಿಗಾಗಿ ಕಾರ್ಯಕ್ರಮಗಳು

ಉತ್ಕರ್ಷ ಯೋಗ
ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯವನ್ನು ಹೆಚ್ಚಿಸುತ್ತದೆ

ಮೇಧಾ ಯೋಗ ಲೆವೆಲ್ 1
ಒತ್ತಡವನ್ನು ಎದುರಿಸಲು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

