sri sri sanskar kendra

ಶ್ರೀ ಶ್ರೀ ಸಂಸ್ಕಾರ ಕೇಂದ್ರ

ಶ್ರೀ ಶ್ರೀ ಮೌಲ್ಯಗಳು ಮತ್ತು ಸಂಸ್ಕೃತಿ ಕೇಂದ್ರ (SSCVC)

“ಒಂದು ಸಸಿಯು ಸಂಪೂರ್ಣವಾಗಿ ಬೆಳೆಯಲು ನೀರೆರೆಯಬೇಕು. ಅಂತೆಯೇ ಪುಟ್ಟ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಪೋಷಿಸಲು ಸಂಸ್ಕಾರಗಳು ಬೇಕು.”

- ಗುರುದೇವ್ ಶ್ರೀ ಶ್ರೀ ರವಿ ಶಂಕರ್

ಶ್ರೀ ಶ್ರೀ ಸಂಸ್ಕಾರ ಕೇಂದ್ರದ ಕುರಿತು

ಸಹಾನುಭೂತಿ, ದಯೆ, ಉದಾರತೆ, ಕ್ಷಮೆ, ಗೌರವ, ಪ್ರಾಮಾಣಿಕತೆ, ಸಮಗ್ರತೆ, ತೃಪ್ತಿ ಮುಂತಾದ ಮೌಲ್ಯಗಳು ಪ್ರತಿಯೊಂದು ಸಮಾಜದಲ್ಲೂ ಹಾಸುಹೊಕ್ಕಾಗಿವೆ. ಚಿಕ್ಕಚಿಕ್ಕ ಕುಟುಂಬಗಳು, ಮಾಧ್ಯಮದ ಪ್ರಭಾವ, ಸಮಯದ ಅಭಾವ ಮತ್ತು ನಾಗಾಲೋಟದ ಜೀವನಗಳು ಮಕ್ಕಳನ್ನು ನಮ್ಮ ಭವ್ಯ ಪರಂಪರೆಯಿಂದ ದೂರಮಾಡಿ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತವೆ.

ಶ್ರೀ ಶ್ರೀ ಸಂಸ್ಕಾರ ಕೇಂದ್ರಗಳಲ್ಲಿ ಮಕ್ಕಳು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಅದರ ವಿವಿಧತೆಯನ್ನು ಅರ್ಥಮಾಡಿಕೊಂಡು ನಮ್ಮ ಸಂಸ್ಕೃತಿಯ ಆಧಾರಭೂತ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರಣೆ ದೊರೆಯುತ್ತದೆ.

ಕಥೆಗಳು, ಶ್ಲೋಕಗಳು, ಮಂತ್ರಪಠಣ, ಕ್ರೀಡೆಗಳು, ಯೋಗ ಮತ್ತು ಇತರ ಚಟುವಟಿಕೆಗಳು ಶ್ರೀ ಶ್ರೀ ಸಂಸ್ಕಾರ ಕೇಂದ್ರದ ಕಾರ್ಯಕ್ರಮಗಳ ಮುಖ್ಯಭಾಗವಾಗಿವೆ. ಪರಸ್ಪರ ಸಂವಾದದ ಮೂಲಕ ನಡೆಯುವ ಆಸಕ್ತಿದಾಯಕ ತರಗತಿಗಳು ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕೆ ಪೂರಕವಾಗಿರುತ್ತವೆ. ಇವು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಮಾಡುತ್ತವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀ ಶ್ರೀ ಸಂಸ್ಕಾರ ಕೇಂದ್ರಗಳನ್ನು ಶ್ರೀ ಶ್ರೀ ಸೆಂಟರ್ಸ್‌ ಫಾರ್‌ ವ್ಯಾಲ್ಯೂಸ್‌ ಅಂಡ್‌ ಕಲ್ಚರ್‌ (SSCVC) ಎಂದು ಕರೆಯಲಾಗುತ್ತದೆ.

YouTube Thumbnail

ಈ ಕಾರ್ಯಕ್ರಮದಿಂದ ಮಕ್ಕಳಿಗೆ ಏನು ಸಿಗುತ್ತದೆ?

icon

ಮಾನವೀಯ ಮೌಲ್ಯಗಳ ಅಳವಡಿಕೆ

ಬೇರೆಯವರ ಬಗ್ಗೆ ಕಾಳಜಿ, ಗೌರವ, ಜವಾಬ್ದಾರಿ, ಪ್ರಾಮಾಣಿಕತೆ, ಉದಾರತೆ ಮುಂತಾದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ನಿಮ್ಮ ಮಕ್ಕಳು ಬೆಳೆಯುವುದನ್ನು ನೀವೇ ನೋಡುವಿರಿ.

icon

ಮುಂದಿನ ಬದುಕಿಗೆ ಭದ್ರ ಬುನಾದಿ

ಮಕ್ಕಳು ಚಿಕ್ಕವರಾಗಿರುವಾಗಲೇ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡರೆ ಅವರು ತಮ್ಮ ಬದುಕಿನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಸಂತೋಷದಿಂದ ನಿರ್ವಹಿಸಲು ಸಮರ್ಥರಾಗುತ್ತಾರೆ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಿದ್ಧರಾಗುತ್ತಾರೆ.

icon

ಪರಂಪರೆಯ ಬಗ್ಗೆ ಗೌರವ ಬೆಳೆಯುತ್ತದೆ

ಮಕ್ಕಳು ವೈಜ್ಞಾನಿಕ ಮನೋಭಾವ ಹೊಂದುತ್ತಾರೆ. ತಮ್ಮ ಸನಾತನ ಪರಂಪರೆಯನ್ನು ಅರ್ಥಮಾಡಿಕೊಂಡು ಜೀವನದ ಬಗ್ಗೆ ವಿಶಾಲದೃಷ್ಟಿಕೋನವನ್ನು ಹೊಂದುತ್ತಾರೆ.

icon

ಸಂಭ್ರಮ ಮತ್ತು ಜ್ಞಾನ

ಕುಟುಂಬಗಳ ಒಗ್ಗಟ್ಟು ಬಲವಾಗುತ್ತದೆ. ಹಬ್ಬಹರಿದಿನಗಳನ್ನು ಜೊತೆಯಾಗಿ ಆಚರಿಸುವಾಗ ಮಕ್ಕಳ ಅರಿವಿನ ಮಟ್ಟ ಹೆಚ್ಚುತ್ತದೆ. ಜೊತೆಗೆ ಅವರು ಸಮಾಜ ಮತ್ತು ಪರಿಸರದ ಜೊತೆ ಹೆಚ್ಚಿನ ಪ್ರೇಮದಿಂದ ವರ್ತಿಸುತ್ತಾರೆ.

icon

ನೆನಪಿನ ಶಕ್ತಿ ಮತ್ತು ಏಕಾಗ್ರತೆ

ಎರಡು ವರ್ಷಗಳ ಕಾಲ ಸತತ ಮಂತ್ರಪಠಣವನ್ನು ಅಭ್ಯಾಸ ಮಾಡಿದವರು ನೆನಪಿನ ಶಕ್ತಿಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅವರ ತಪ್ಪುಗಳ ಪ್ರಮಾಣ ಕಡಿಮೆಯಾಗಿದೆ ಮತ್ತು ತಮ್ಮ ಪರೀಕ್ಷೆಗಳನ್ನು ಎದುರಿಸುವ ಕ್ಷಮತೆ ಹೆಚ್ಚುತ್ತದೆ ಎಂದು ಸಂಶೋಧನೆಗಳ ಮೂಲಕ ಪ್ರಮಾಣಿತವಾಗಿದೆ. ಸಂಶೋಧನೆಯ ವಿವರಗಳನ್ನು ಓದಲು ಕೆಳಗಿನ ಕೊಂಡಿಯನ್ನು ಬಳಸಿ.

icon

ಮಂತ್ರಪಠಣದ ಪ್ರಯೋಜನಗಳು

‘ಓಂ’ ಶಬ್ದದ ಉಚ್ಚಾರಣೆಯು ವೇಗಸ್ ನರವನ್ನು ಪ್ರಚೋದಿಸುತ್ತದೆ ಹಾಗೂ ಖಿನ್ನತೆ ಮತ್ತು ಅಪಸ್ಮಾರ(ಎಪಿಲೆಪ್ಸಿ)ವನ್ನು ಗುಣಪಡಿಸುತ್ತದೆ ಎಂದು ಸಂಶೋಧನೆಗಳು ಪ್ರಮಾಣಿಸಿವೆ.  ಸಂಶೋಧನೆಯ ವಿವರಗಳನ್ನು ಓದಲು ಕೆಳಗಿನ ಕೊಂಡಿಯನ್ನು ಬಳಸಿ.

ಪ್ರಾಥಮಿಕ ಕಾರ್ಯಕ್ರಮಗಳು

(6-10 ವರ್ಷಗಳು)

  • ಆನ್ ಲೈನ್ ಮಾಡ್ಯೂಲ್ ‌M1-ಎ
    • ಒಂದು ಗಂಟೆ ಅವಧಿಯ ಎಂಟು ತರಗತಿಗಳು
  • ಆನ್ ಲೈನ್ ಮಾಡ್ಯೂಲ್ M1-ಬಿ
    • ಒಂದು ಗಂಟೆ ಅವಧಿಯ ಎಂಟು ತರಗತಿಗಳು
  • ಪ್ರತ್ಯಕ್ಷ ತರಗತಿ ಮಾಡ್ಯೂಲ್ M1
    • ಎರಡು ಗಂಟೆ ಅವಧಿಯ 12 ತರಗತಿಗಳು

ರಾಮಾಯಣದ ಕಾರ್ಯಕ್ರಮಗಳು

(6-13 ವರ್ಷಗಳು)

  • ಆನ್ ಲೈನ್ ಭಾಗ ಎ
    • ಒಂದು ಗಂಟೆ ಅವಧಿಯ ಎಂಟು ತರಗತಿಗಳು
  • ಆನ್ ಲೈನ್ ಭಾಗ ಬಿ
    • ಒಂದು ಗಂಟೆ ಅವಧಿಯ ಎಂಟು ತರಗತಿಗಳು
  • ಪ್ರತ್ಯಕ್ಷ ತರಗತಿಗಳು
    • ಎರಡು ಗಂಟೆ ಅವಧಿಯ ಹತ್ತು ತರಗತಿಗಳು

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ಕಾರ್ಯಕ್ರಮದ ಬಗ್ಗೆ ಆಸಕ್ತಿಯಿದೆ, ಆದರೆ ನನಗೆ ಪ್ರಶ್ನೆಗಳಿವೆ…

ರಾಮಾಯಣದ ಕಾರ್ಯಕ್ರಮಗಳಿಗಿಂತಲೂ ಪ್ರಾಥಮಿಕ ಕಾರ್ಯಕ್ರಮವು ಹೇಗೆ ವಿಭಿನ್ನವಾಗಿದೆ?

ಶ್ರೀ ಶ್ರೀ ಸಂಸ್ಕಾರ ಕೇಂದ್ರದ ಎರಡೂ ಮಾಡ್ಯೂಲುಗಳು ಪ್ರತ್ಯೇಕವಾದ ಆದರೆ ಸಮಗ್ರವಾದ ತರಗತಿಗಳಾಗಿವೆ. ಎರಡೂ ಮಾಡ್ಯೂಲುಗಳು ಪರಸ್ಪರ ಸಂವಾದದ ಮೂಲಕ ಪ್ರೇಮಮಯ ಸಂಭ್ರಮದ ವಾತಾವರಣದಲ್ಲಿ ನಡೆಯುತ್ತವೆ. ರಾಮಾಯಣದ ತರಗತಿಗಳು ರಾಮಾಯಣವನ್ನು ಆಧರಿಸಿರುತ್ತವೆ. ನಿಮಗೆ ತಿಳಿದಿರುವಂತೆ ರಾಮಾಯಣವು ಮಕ್ಕಳಿಗೆ ಮೌಲ್ಯಗಳನ್ನು ಬೋಧಿಸುವ ಆಕರವಾಗಿದೆ. ವಿನೋದಮಯ ತರಗತಿಗಳಲ್ಲಿ ಪರಸ್ಪರ ಸಂವಾದದ ಮೂಲಕ ಮಕ್ಕಳು ಮಾನಸಿಕವಾಗಿ ಸಶಕ್ತರಾಗುತ್ತಾರೆ. ರಾಮಾಯಣದ ಬಗ್ಗೆ ಗೌರವಭಾವವನ್ನು ಬೆಳೆಸಿಕೊಳ್ಳುತ್ತಾರೆ. ಆನ್‌ಲೈನ್‌ ಮತ್ತು ಪ್ರತ್ಯಕ್ಷ (ರಾಮಾಯಣ ಭಾಗ ಎ ಮತ್ತು ರಾಮಾಯಣ ಭಾಗ ಬಿ) – ಎರಡೂ ಬಗೆಯ ಮಾಡ್ಯೂಲುಗಳನ್ನು ಒಳಗೊಂಡ ಕಾರ್ಯಕ್ರಮವಿದು. ವಯೋಮಿತಿ: 6 ರಿಂದ 13 ವರ್ಷಗಳು.years. ಪ್ರಾಥಮಿಕ ಕಾರ್ಯಕ್ರಮದ ಮಾಡ್ಯೂಲುಗಳು [M1(ಪ್ರತ್ಯಕ್ಷ) ಮತ್ತು M1ಎ ಹಾಗೂ M1ಬಿ (ಆನ್ ಲೈನ್) ಮಕ್ಕಳಿಗೆ ಮೌಲ್ಯಗಳನ್ನು, ಜ್ಞಾನವನ್ನು, ಪಡೆದುಕೊಳ್ಳಲು ಸಹಾಯ ಮಾಡುತ್ತವೆ, ತನ್ಮೂಲಕ ಅವರ ಜೀವನಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತದೆ. ಪ್ರತಿಯೊಂದು ತರಗತಿಯಲ್ಲಿಯೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪ್ರೇರಣಾದಾಯಕ ಕಥೆಗಳ, ಅರ್ಥವತ್ತಾದ ಶ್ಲೋಕಗಳ/ದೋಹೆಗಳ ಮೂಲಕ ಮಕ್ಕಳು ಕಲಿಯುತ್ತಾರೆ. ವಯೋಮಿತಿ: 6 ರಿಂದ 13 ವರ್ಷಗಳು

ಅಂತರ್ಜಾಲದಲ್ಲಿ ಮಕ್ಕಳಿಗಾಗಿ ಅನೇಕ ಅನ್ ಲೈನ್ ತರಗತಿಗಳಿವೆ. ಈ ಇನ್ನೊಂದರಿಂದ ಹೆಚ್ಚಿನ ಹೊರೆಯಾಗಬಹುದು. ದಯವಿಟ್ಟು ಮಾರ್ಗದರ್ಶನ ನೀಡಿ.

ಸಾಮಾನ್ಯ ಆನ್‌ಲೈನ್‌ ತರಗತಿಗಳ ಬೇಸರಿಕೆಯನ್ನು ನೀಗಿಸಲು ಇದೊಂದು ಒಳ್ಳೆಯ ಕಾರ್ಯಕ್ರಮ. ತಮ್ಮ ಮಕ್ಕಳು ಈ ತರಗತಿಗಳಲ್ಲಿ ಭಾಗವಹಿಸಲು ಉತ್ಸುಕತೆಯಿಂದ ಕಾಯುತ್ತಿರುತ್ತಾರೆ ಎಂದು ಅನೇಕ ಪೋಷಕರು ಹೇಳುತ್ತಿರುತ್ತಾರೆ.

ನನ್ನ ಮಗ/ಮಗಳು ಪ್ರಾಥಮಿಕ ಕಾರ್ಯಕ್ರಮದ ಎರಡೂ ಆನ್ ಲೈನ್ ಮಾಡ್ಯೂಲುಗಳನ್ನು ತೆಗೆದುಕೊಳ್ಳಬೇಕೆ?

ಎರಡೂ ಆನ್ ಲೈನ್ ಮಾಡ್ಯೂಲುಗಳು (M1ಎ ಹಾಗೂ M1ಬಿ) ಪರಸ್ಪರವಾಗಿ ಪೂರಕ ಕಲಿಕೆಯಾಗಿದ್ದು ಬೇರೆಬೇರೆ ಮೌಲ್ಯಗಳ ಆಧಾರದ ಮೇಲೆ ನಿರೂಪಿತವಾಗಿವೆ. ಎರಡೂ ಪ್ರತ್ಯೇಕವಾಗಿ ವಿಶಿಷ್ಟವಾದ ಮಾಡ್ಯೂಲುಗಳು. ಎರಡರಲ್ಲಿಯೂ ಪ್ರತ್ಯೇಕವಾದ ಶ್ಲೋಕಗಳು, ಮಂತ್ರಪಠಣ, ಚಟುವಟಿಕೆಗಳು ಮತ್ತು ವಿಶೇಷತೆಗಳು ಇರುತ್ತವೆ. ಹೀಗಾಗಿ, ಮೊದಲು ಇದೇ ಮಾಡ್ಯೂಲು ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಯಾವುದನ್ನು ಬೇಕಾದರೂ ಬೇಕಾದರೂ ಮೊದಲು ತೆಗೆದುಕೊಳ್ಳಬಹುದು.

ನಮ್ಮ ಮಗ/ಮಗಳು ಪ್ರಾಥಮಿಕ ಕಾರ್ಯಕ್ರಮದ ಯಾವ ಮಾಡ್ಯೂಲನ್ನು ಮೊದಲು ತೆಗೆದುಕೊಳ್ಳಬೇಕು

6ರಿಂದ 10 ವರ್ಷ ವಯೋಮಾನದ ಮಕ್ಕಳಿಗೆ ಎರಡೂ ಮಾಡ್ಯೂಲು(ಆನ್‌ಲೈನ್‌ ಮತ್ತು ಪ್ರತ್ಯಕ್ಷ)ಗಳಲ್ಲಿ ಮೂಲ ಪಠ್ಯ ಒಂದೇ ಆಗಿರುತ್ತದೆ. ಈ ತರಗತಿಗಳಲ್ಲಿ ಸ್ಛೂರ್ತಿದಾಯಕ ಕಥೆಗಳು, ಶ್ಲೋಕಗಳು, ಮಂತ್ರಗಳು, ದೋಹೆಗಳು, ಅಜ್ಜಿಹೇಳಿದ ಮನೆಮದ್ದುಗಳು, ನಮ್ಮ ಸಂಸ್ಕೃತಿಯ ಅಚ್ಚರಿಗಳು, ಮಂತ್ರೋಚ್ಚಾರಣೆ, ಯೋಗ, ಕ್ರೀಡೆ ಮತ್ತು ಇತರ ಚಟುವಟಿಕೆಗಳು ತುಂಬಿರುತ್ತವೆ. ಇವೆಲ್ಲವೂ ಪರಸ್ಪರ ಸಂವಾದ ಮತ್ತು ಪ್ರೇಮಮಯ ವಾತಾವರಣದಲ್ಲಿ ನಡೆಯುತ್ತವೆ. M1ಎ ಹಾಗೂ M1ಬಿ - ಎರಡೂ ಆನ್‌ಲೈನ್ ಮಾಡ್ಯೂಲುಗಳು ಪರಸ್ಪರ ಪೂರಕವಾಗಿದ್ದು ತಲಾ ಒಂದು ಗಂಟೆಯ ಎಂಟು ತರಗತಿಗಳನ್ನು ಹೊಂದಿರುತ್ತವೆ. ಪ್ರತ್ಯಕ್ಷ ಕಾರ್ಯಕ್ರಮದಲ್ಲಿ ಅದೇ ಚಟುವಟಿಕೆಗಳನ್ನು ಎರಡು ಗಂಟೆಗಳ ಅವಧಿಯ ಹನ್ನೆರಡು ತರಗತಿಗಳಲ್ಲಿ ನಡೆಸಲಾಗುತ್ತದೆ. ಪ್ರತ್ಯಕ್ಷ ಮತ್ತು ಆನ್‌ಲೈನ್‌ ಎರಡೂ ಮಾಡ್ಯೂಲುಗಳಿಗೆ ತಮ್ಮದೇ ಆದ ಮಹತ್ವವಿದೆ. ಪೋಷಕರು ಲಭ್ಯತೆ ಮತ್ತು ಮಕ್ಕಳ ಅನುಕೂಲತೆಗಳನ್ನು ಲಕ್ಷ್ಯದಲ್ಲಿಸಿಕೊಂಡು ಸೂಕ್ತವಾದ ಆಯ್ಕೆಯನ್ನು ಮಾಡಿಕೊಳ್ಳಬಹುದು.

ನಾವು ಮಕ್ಕಳಿಗೆ ಈಗಾಗಲೇ ಶ್ಲೋಕಗಳನ್ನು ಹೇಳಿಕೊಡುತ್ತಿದ್ದೇವೆ, ಕಥೆಗಳನ್ನು ಹೇಳುತ್ತಿದ್ದೇವೆ. ಈ ಕಾರ್ಯಕ್ರಮಗಳಿಂದ ಮಕ್ಕಳಿಗೆ ಹೇಗೆ ಲಾಭವಾಗುತ್ತದೆ?

ಶ್ರೀ ಶ್ರೀ ಸಂಸ್ಕಾರ ಕೇಂದ್ರದ ಮಾಡ್ಯೂಲುಗಳು ಸಾಕಷ್ಟು ಚಿಂತನೆಯ ನಂತರ ರೂಪಿತವಾದ ಕಾರ್ಯಕ್ರಮಗಳು. ಈ ತರಗತಿಗಳಲ್ಲಿ ಸ್ಛೂರ್ತಿದಾಯಕ ಕಥೆಗಳು, ಶ್ಲೋಕಗಳು, ಮಂತ್ರಪಠಣ, ದೋಹೆಗಳು, ಅಜ್ಜಿಹೇಳಿದ ಮನೆಮದ್ದುಗಳು, ನಮ್ಮ ಸಂಸ್ಕೃತಿಯ ಅಚ್ಚರಿಗಳು, ಯೋಗ, ಕ್ರೀಡೆ ಮತ್ತು ಇತರ ಚಟುವಟಿಕೆಗಳು ತುಂಬಿರುತ್ತವೆ. ಮಕ್ಕಳು ಸಾಂಘಿಕ ಸಂವಾದಗಳ ಮೂಲಕ ಪರಸ್ಪರರಿಂದ ಕಲಿಯುತ್ತಾರೆ. ಆತ್ಮೀಯತೆ, ಸಹಾನುಭೂತಿ, ಗೌರವ, ಇತರರ ಬಗ್ಗೆ ಕಾಳಜಿ ಮತ್ತು ಪ್ರಾಮಾಣಿಕತೆ ಮುಂತಾದ ಗುಣಗಳನ್ನು ರೂಢಿಸಿಕೊಳ್ಳುತ್ತಾರೆ.

ನನ್ನ ಮಗ/ಮಗಳು ರಾಮಾಯಣದ ಮೇಲಿನ ಎರಡೂ ಆನ್‌ಲೈನ್‌ ಮಾಡ್ಯೂಲುಗಳನ್ನು ಸೇರಿಕೊಳ್ಳಬೇಕೆ?

ಎರಡೂ ಆನ್‌ಲೈನ್ ಮಾಡ್ಯೂಲುಗಳು (ಭಾಗ ಎ ಮತ್ತು ಭಾಗ ಬಿ) ಸೇರಿ ಒಂದು ಸಂಪೂರ್ಣ ಪಠ್ಯಕ್ರಮವಾಗುತ್ತದೆ. ಭಾಗ ಎ ಯಲ್ಲಿ ರಾಮಚರಿತಮಾನಸದ ಮೊದಲ ಕೆಲವು ಕಾಂಡಗಳಿರುತ್ತವೆ. ಉಳಿದ ಕಾಂಡಗಳನ್ನು ಭಾಗ ಬಿ ಯಲ್ಲಿ ಸೇರಿಸಲಾಗಿದೆ. ಪ್ರತಿಯೊಂದು ಪರಸ್ಪರ ಸಂವಹನಶೀಲ ತರಗತಿಯೂ ರಾಮಕಥೆಯನ್ನು ಅರ್ಥಪೂರ್ಣವಾಗಿ ಕೇಳಿಸಿಕೊಳ್ಳುವುದು, ವಿಶೇಷವಾಗಿ ತಯಾರಿಸಿದ ವಿಡಿಯೋಗಳ ಮೂಲಕ ಚೌಪದಿಗಳನ್ನು ಮತ್ತು ದೋಹೆಗಳನ್ನು ಹಾಡುವುದು ಮತ್ತು ಅದರ ವಿಶೇಷ ಜ್ಞಾನವನ್ನು ಅರಿತುಕೊಳ್ಳುವುದು, ಯೋಗ, ಧ್ಯಾನ, ಕ್ರೀಡೆ ಮತ್ತು ಉತ್ಸವಾಚರಣೆ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಮಕ್ಕಳು ಅವುಗಳನ್ನು ನಿರ್ದಿಷ್ಟ ಅನುಕ್ರಮದಲ್ಲಿ ಕಲಿಯಬೇಕು. ಕಾರ್ಯಕ್ರಮದ ಮೊದಲ ಭಾಗ ಮುಗಿಯುತ್ತಿದ್ದಂತೆ ಎರಡನೇ ಭಾಗ ಪ್ರಾರಂಭವಾಗುತ್ತದೆ.

ನನ್ನ ಮಗುವಿಗೆ ರಾಮಾಯಣದ ಕಥೆ ಗೊತ್ತಿದೆ. ಶ್ರೀ ಶ್ರೀ ಸಂಸ್ಕಾರ ಕೇಂದ್ರದ ರಾಮಾಯಣ ಕಾರ್ಯಕ್ರಮವು ಹೆಚ್ಚಿನ ಮೌಲ್ಯವನ್ನು ಹೇಗೆ ನೀಡಬಲ್ಲದು?

ರಾಮನ ಕಥೆಯ ಜೊತೆಗೆ ರಾಮಾಯಣದ ಅನೇಕ ಪಾತ್ರಗಳು ಮತ್ತು ಘಟನೆಗಳು ಸಂಕೇತಿಸುವ ಮೌಲ್ಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರಿಂದ ಆ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅನುಸರಿಸಲು ಮಕ್ಕಳಿಗೆ ಪ್ರೇರಣೆ ದೊರೆಯುತ್ತದೆ. ಶ್ರೀ ರಾಮಚರಿತಮಾನಸದ ಚೌಪದಿಗಳು ಮತ್ತು ದೋಹೆಗಳ ಪಠಣ ಮತ್ತು ವಿಶೇಷ ವಿಡಿಯೋಗಳ ಮೂಲಕ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪ್ರಾಚೀನ ಗ್ರಂಥಗಳ ಮೇಲೆ ಆಸಕ್ತಿ ಮತ್ತು ಗೌರವ ಹೆಚ್ಚುತ್ತದೆ. ಧ್ಯಾನ, ಯೋಗಾಸನಗಳು, ಆಟೋಟಗಳು, ಮತ್ತು ಬೇರೆ ಬೇರೆ ಚಟುವಟಿಕೆಗಳಿಂದ ಕೂಡಿದ ತರಗತಿಗಳು ಈ ಕಾರ್ಯಕ್ರಮದಲ್ಲಿವೆ. ತಂಡವಾಗಿ ಅಭ್ಯಾಸ ಮಾಡುವುದು ತುಂಬ ಸುಲಭ ಮತ್ತು ಹಾಗೆ ಕಲಿತದ್ದು ಅಚ್ಚಳಿಯದೆ ಮನಸ್ಸಿನಲ್ಲಿ ಉಳಿಯುತ್ತದೆ.