ವಿಪತ್ತು-ಪರಿಹಾರ

ವಿಪತ್ತುಗಳಿಗೆ ತ್ವರಿತವಾಗಿ ವಸ್ತು ಮತ್ತು ಆಘಾತ ಪರಿಹಾರದ ಪಡೆಯೊಂದಿಗೆ ಪ್ರತಿಕ್ರಿಯಿಸಲು ನಮ್ಮೊಂದಿಗೆ ಸ್ವಯಂಸೇವಕರಾಗಿ

ದಾನ ಮಾಡಿ

icon

ಕಾರ್ಯತಂತ್ರ

ವಸ್ತು-ನೆರವು, ಆಘಾತ-ಪರಿಹಾರ ಮತ್ತು ದೀರ್ಘಾವಧಿಯ ಪುನರ್ವಸತಿ

icon

ಪರಿಣಾಮ

ಎಲ್ಲಾ ಪ್ರಮುಖ ವಿಪತ್ತುಗಳಲ್ಲಿ ಸಹಾಯವನ್ನು ಒದಗಿಸಲಾಗಿದೆ

icon

ಇದುವರೆಗೆ

5.6 ಮಿಲಿಯನ್ ಜನರು ಪ್ರಯೋಜನ ಪಡೆದಿದ್ದಾರೆ

ಅವಲೋಕನ

ನೈಸರ್ಗಿಕ ವಿಪತ್ತಾಗಲೀ ಅಥವಾ ಮಾನವ ನಿರ್ಮಿತ ವಿಪತ್ತಾಗಲೀ ಮತ್ತು ಅದು ಯಾವುದೇ ನಿರ್ದಿಷ್ಟ ಭೌಗೋಳಿಕ ಸ್ಥಳದಲ್ಲಾಗಿರಲೀ, ಪ್ರತಿಯೊಂದು ವಿಪತ್ತು ಕೂಡ ವಿಶಿಷ್ಟವಾದ ಸವಾಲುಗಳನ್ನು ತಂದೊಡ್ಡುತ್ತದೆ. ಜಾಗತಿಕ ಮಟ್ಟದಲ್ಲಿನ ನಮ್ಮ ಸ್ವಯಂಸೇವಕರ ಜಾಲ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ನಮ್ಮ ಸಹಭಾಗಿ ಸಂಸ್ಥೆಯಾದ ದಿ ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ (IAHV),ಇದರ ಮೂಲಕ ಪ್ರಪಂಚದ ವಿವಿಧ ಭಾಗಗಳಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿದೆ. ತತ್ಪರಿಣಾಮವಾಗಿ, ಇಂದು ಈ ಎರಡು ಸಂಸ್ಥೆಗಳು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದವೂ ಇರುವ ಅನೇಕ ದೇಶಗಳಲ್ಲಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ- ವಿಪತ್ತು ಪುನರ್ವಸತಿ ಕಾರ್ಯಕ್ರಮಗಳ ಪ್ರಮುಖ ಪೂರೈಕೆದಾರರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿವೆ.

ನಾವು 2001 ರಿಂದ ಎಲ್ಲಾ ಪ್ರಮುಖ ವಿಪತ್ತುಗಳ ಸಂದರ್ಭಗಳಲ್ಲಿ, ಸಾಕಷ್ಟು ಪರಿಹಾರ ತಂಡಗಳನ್ನು ಕ್ರೋಢೀಕರಿಸಿದ್ದೇವೆ ಮತ್ತು ಕೇವಲ ಭಾರತದಲ್ಲೇ, ನಮ್ಮ ಪ್ರಯತ್ನಗಳ ಫಲವಾಗಿ 150,000 ಜೀವಗಳಿಗೆ ಪರಿಹಾರವನ್ನು ನೀಡಿದ್ದೇವೆ.

ಆಘಾತವು ಬಿಡುಗಡೆಯಾಗದ ಹೊರತು, ಆಹಾರ ಮತ್ತು ಔಷಧಗಳು ಕಾರ್ಯನಿರ್ವಹಿಸುವುದಿಲ್ಲ. ಜನರು ತಿನ್ನಲು ಅಥವಾ ಮಲಗಲು ಸಾಧ್ಯವಿಲ್ಲ ಏಕೆಂದರೆ ಅವರ ಮನಸ್ಸು ಅವರಿಗೆ ಸಂಭವಿಸಿದ ಭಯಾನಕ ದುರಂತದಿಂದ ತುಂಬಿದೆ. ಗುಣಾತ್ಮಕ ಸ್ಪರ್ಶ, ಬೆಂಬಲ ಮತ್ತು ಭವಿಷ್ಯದ ದೃಷ್ಟಿಕೋನದೊಂದಿಗೆ, ವಿಪತ್ತು ಸಂತ್ರಸ್ತರು ತಮ್ಮ ಜೀವನವನ್ನು ಪುನಃ ಪ್ರಾರಂಭಿಸಲು ಸಾಧ್ಯವಾಗುತ್ತದೆ.

ಗುರುದೇವ ಶ್ರೀ ಶ್ರೀ ರವಿಶಂಕರ್

ಕಾರ್ಯತಂತ್ರ

ಎಲ್ಲಿಯಾದರೂ ವಿಪತ್ತುಗಳು ಸಂಭವಿಸಿದಾಗ, ಆ ಕ್ಷಣದಿಂದಲೇ , ಅವರೆಲ್ಲರಿಗೆ ವಸ್ತುಗಳನ್ನು ನೀಡಿ ನೆರವು ಮಾಡುವುದರ ಮೂಲಕ ಮತ್ತು ಆರೈಕೆಯನ್ನು ಒದಗಿಸುವ ಮೂಲಕ ನಮ್ಮ ಕೆಲಸವು ಪ್ರಾರಂಭವಾಗುತ್ತದೆ. ಈ ತುರ್ತು ಸೇವೆಗಳು , ಅವರೆಲ್ಲರಿಗೆ ಆಹಾರ, ಬಟ್ಟೆ, ಔಷಧಿ ಮತ್ತು ಆಶ್ರಯ, ಮುಂತಾದವುಗಳನ್ನು ಒದಗಿಸುತ್ತವೆ. ವೈದ್ಯರು, ಸಲಹೆಗಾರರು ಮತ್ತು ಇತರ ದೈಹಿಕ ಮತ್ತು ಮಾನಸಿಕ ಆರೋಗ್ಯ ತಜ್ಞರು ಈ ತಕ್ಷಣದ ಪರಿಹಾರ ಮಾರ್ಗಗಳ ಮುಖ್ಯ ಭಾಗವಾಗಿರುತ್ತಾರೆ.

ವಿಪತ್ತು ಸಂತ್ರಸ್ತರಿಗೆ, ತೀವ್ರವಾದ ದೈಹಿಕ ಮತ್ತು ಭಾವನಾತ್ಮಕ ಆಘಾತವನ್ನು ಅನುಭವಿಸಿದವರಿಗೆ, ಕೇವಲ ಭೌತಿಕ ಸಹಾಯವು ಸಾಕಾಗುವುದಿಲ್ಲ. ಆಘಾತವನ್ನು ನಿವಾರಿಸುವುದು ಮತ್ತು ಜನರು ತಮ್ಮ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ಅವರಿಗೆ ಸಹಾಯ ಮಾಡುವುದು ಅತ್ಯಗತ್ಯವಾಗಿದೆ. ನಾವು ನಮ್ಮ ಆಘಾತ ಪರಿಹಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ, ಅವರು ತಮ್ಮ ಭಾವನೆಗಳನ್ನು ಮತ್ತು ಒತ್ತಡಗಳನ್ನು ವಿವಿಧ ಉಸಿರಾಟದ ತಂತ್ರಗಳ ಮೂಲಕ ಹೇಗೆ ಸರಿಪಡಿಸಿಕೊಳ್ಳಬೇಕು ಮತ್ತು ಕಳೆದುಹೋದ ಘಟನೆಗಳಿಂದ ಭವಿಷ್ಯದ ಸಾಧ್ಯತೆಗಳ ಕಡೆಗೆ ಅವರ ಗಮನವನ್ನು ಹೇಗೆ ಬದಲಾಯಿಸಬಹುದು, ಎನ್ನುವುದನ್ನು ಕಲಿಸಿ ಕೊಡುತ್ತೇವೆ.

ವಿಪತ್ತುಗಳಿಗೆ ಒಳಗಾದ ಸಂತ್ರಸ್ತರು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪೂರ್ಣವಾಗಿ ಪುನರ್ವಸತಿಯನ್ನು ಪಡೆದು ಕೊಂಡಾಗ ಮಾತ್ರ ಅವರಿಗೆ ನಿಜವಾದ ಪರಿಹಾರವು ದೊರಕಿದಂತಾಗುವುದು. ಸಮರ್ಥನೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಮುದಾಯಗಳನ್ನು ಬೆಂಬಲಿಸಲು, ನಮ್ಮ ಜಾಗತಿಕ ಸ್ವಯಂಸೇವಕರು ಹಳ್ಳಿಗಳಲ್ಲಿ ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಾರೆ, ಮನೆಗಳು, ನೈರ್ಮಲ್ಯದ ವ್ಯವಸ್ಥೆಗಳು, ರಸ್ತೆಗಳು, ಶಾಲೆಗಳು, ವೃತ್ತಿಪರ ತರಬೇತಿ ಕೇಂದ್ರಗಳು ಮತ್ತು ಇತರ ಅತ್ಯಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸಿ ಕೊಡುತ್ತಾರೆ.

ನಮ್ಮ ಕಾರ್ಯತಂತ್ರ

icon

ತ್ವರಿತ ಬೆಂಬಲವನ್ನು ಒದಗಿಸಿ

ವಸ್ತುಗಳ ನೆರವು ಮತ್ತು ತುರ್ತು ಸೇವೆಗಳು

icon

ಆಘಾತ ಪರಿಹಾರ ಕಾರ್ಯಾಗಾರಗಳು

ಭಾವನಾತ್ಮಕ ಬೆಂಬಲವನ್ನು ಒದಗಿಸುವುದು

icon

ದೀರ್ಘಕಾಲೀನ ಪುನರ್ವಸತಿ

ಮೂಲಭೂತ ಸೌಕರ್ಯಗಳನ್ನು ಪುನರ್ನಿರ್ಮಿಸುವ ಮೂಲಕ

ಪರಿಣಾಮ

ವಿಶ್ವಾದ್ಯಂತ ಸುನಾಮಿ ಪೀಡಿತ ಪ್ರದೇಶಗಳಲ್ಲಿ ವ್ಯಾಪಕವಾದ ಪರಿಹಾರ ಮತ್ತು ಪುನರ್ವಸತಿ ಕೆಲಸದಿಂದ ಹಿಡಿದು ಗುಜರಾತ್‌ನಲ್ಲಿ ಭೂಕಂಪದ ಪರಿಹಾರ ಕಾರ್ಯಾಚರಣೆಗಳವರೆಗೆ, ನಮ್ಮ ಸ್ವಯಂಸೇವಕರು ವಿಪತ್ತು ಸಂತ್ರಸ್ತರ ದೈಹಿಕ, ಭಾವನಾತ್ಮಕ ಮತ್ತು ಭೌತಿಕ ಅಗತ್ಯಗಳನ್ನು ಪರಿಹರಿಸಲು ಸಹಾನುಭೂತಿ, ಬದ್ಧತೆ ಮತ್ತು ಕಾಳಜಿಯೊಂದಿಗೆ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ಮಾಡಿದ ಕೆಲವು ಕೆಲಸಗಳ ಪಟ್ಟಿ:

ಭೂಕಂಪ

ಗುಜರಾತ್ ಭೂಕಂಪ -
ಭಾರತ (ಜನವರಿ 2001)

ಬಾಮ್ ಭೂಕಂಪ -
ಇರಾನ್ (ಡಿಸೆಂಬರ್ 2003)

ಕಾಶ್ಮೀರ-ಪಾಕಿಸ್ತಾನಭೂಕಂಪ
- ಭಾರತ (ಅಕ್ಟೋಬರ್ 2005)

ಗೂರ್ಖಾ ಭೂಕಂಪ -
ನೇಪಾಳ (ಏಪ್ರಿಲ್ 2015)

ಪ್ರವಾಹಗಳು

ಎಲ್ಬೆ ನದಿಯ ಪ್ರವಾಹ -
ಜರ್ಮನಿ (ಆಗಸ್ಟ್ 2002)

ಸೂರತ್ ಪ್ರವಾಹ -
ಭಾರತ (ಆಗಸ್ಟ್ 2006)

ದಕ್ಷಿಣ ಭಾರತ ಪ್ರವಾಹ
ಪರಿಹಾರ (2009)

ಮುಂಬೈ ಪ್ರವಾಹ -
ಭಾರತ (ಜನವರಿ 2001)

ಉತ್ತರಾಖಂಡ
ಪ್ರವಾಹ (2015)

ಸುಂಟರಗಾಳಿ / ಚಂಡಮಾರುತಗಳು

ಒರಿಸ್ಸಾ ಚಂಡಮಾರುತ -
ಭಾರತ (ಅಕ್ಟೋಬರ್ 1999)

ಒಡಿಶಾ ಚಂಡಮಾರುತ
ಫನಿ (2019)

ಕತ್ರಿನಾ ಚಂಡಮಾರುತ -
USA (ಆಗಸ್ಟ್ 2005)

ಸುನಾಮಿ

 

ಹಿಂದೂ ಮಹಾಸಾಗರದ
ಸುನಾಮಿ (2004)