Service - VBI Volunteers rejoicing during river rejuvenation project

ಡೈನಮಿಸಮ್ ಫಾರ್ ಸೆಲ್ಛ್ ಆಂಡ್ ನೇಷನ್ (DSN)

ವೈಯಕ್ತಿಕ ನಿರ್ಬಂಧಗಳಿಂದ ಮುಕ್ತಿ ಅನುಭವಿಸಿ ಮತ್ತು ಆಂತರಿಕ ಶಕ್ತಿ ಮತ್ತು ಸ್ಥಿರತೆಗೆ ಪ್ರಾಪ್ತಿಯನ್ನಾದರಿಸಿ.

ನಿಮ್ಮ ಅಡೆತಡೆಗಳನ್ನು ನಿವಾರಿಸಿಕೊಳ್ಳಿ • ನಿಮ್ಮ ಭಯಗಳನ್ನು ದೂರಮಾಡಿ • ನಿಮ್ಮ ಅಂತರಂಗದ ಶಕ್ತಿಯನ್ನು ಬಳಸಿರಿ

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನೋಂದಾಯಿಸಿ

ನಿಮ್ಮ ಮನಸ್ಸಿನ ಅನಂತ ಸಾಧ್ಯತೆಗಳನ್ನು ಅರಿವಿಗೆ ತಂದುಕೊಳ್ಳಿ

ನಿಮ್ಮ ಊಹೆಗೂ ಮೀರಿದಂತೆ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಿ

icon

ಭಯಗಳನ್ನು ಗೆಲ್ಲುವುದರ

ನಿಮ್ಮ ಭಯಗಳನ್ನು ಗೆಲ್ಲುವುದರ ಮೂಲಕ ದೊರೆಯುವ ಸ್ವಾತಂತ್ರ್ಯದ ಸುಖವನ್ನು ಅನುಭವಿಸಿ

icon

ವ್ಯತ್ಯಾಸ ಮಾಡಿ

ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ನೀವು ವಹಿಸಬಹುದಾದ ಪಾತ್ರವನ್ನು ಕಂಡುಕೊಳ್ಳಿ.

icon

ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಿ

ನಿಮ್ಮ ಬಗ್ಗೆ ಮತ್ತು ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗಿರುವ ಪೂರ್ವಕಲ್ಪನೆಗಳನ್ನು ಭಂಗಗೊಳಿಸಿ.

ಡಿಎಸ್ಎನ್ ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಬೇಕು?

ಜೀವನದ ಪರಿಪೂರ್ಣತೆಗೆ ಅಡ್ಡಿಮಾಡುವ ವೈಯಕ್ತಿಕವಾದ ಅಡೆತಡೆಗಳು, ಹಳೆಯ ಅಭ್ಯಾಸಗಳು ಮತ್ತು ಹಿಂಜರಿಕೆಗಳು ನಮ್ಮೆಲ್ಲರಲ್ಲೂ ಇವೆ. ಆದರೂ, ನಮಗಾಗಿ, ನಮ್ಮ ಕುಟುಂಬಕ್ಕಾಗಿ, ನಮ್ಮ ಸಮುದಾಯಕ್ಕಾಗಿ, ಇಡೀ ಜಗತ್ತಿಗಾಗಿ ಅತ್ಯುತ್ತಮವಾದುದನ್ನೇ ಮಾಡಬೇಕೆಂಬ ಬಲವಾದ ಹಂಬಲವೂ ನಮ್ಮೆಲ್ಲರಲ್ಲಿ ಇರುತ್ತದೆ.

ಡಿಎಸ್‌ಎನ್‌ ಒಂದು ಕಟ್ಟುನಿಟ್ಟಿನ ಪರಿವರ್ತನೆಯ ಕಾರ್ಯಕ್ರಮ. ಇದರ ಮೂಲಕ ಶಿಬಿರಾರ್ಥಿಗಳು ತಮ್ಮ ವೈಯಕ್ತಿಕ ಹಿಂಜರಿಕೆಗಳು ಮತ್ತು ಮಾನಸಿಕ ಅಡೆತಡೆಗಳನ್ನು ಮೀರುವುದರ ಮೂಲಕ ಅಂತರಂಗದ ಶಕ್ತಿ ಮತ್ತು ಸ್ಥಿರತೆಯನ್ನು ಸಾಧಿಸುತ್ತಾರೆ. ಜೊತೆಗೆ ಮನಸ್ಸಿನ ಎಲ್ಲೆಗಳನ್ನು ದಾಟಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತದೆ.

ಪ್ರಮುಖ ಅಂಶಗಳು

ಡಿಎಸ್‌ಎನ್‌ ಒಂದು ಕಟ್ಟುನಿಟ್ಟಿನ ಪರಿವರ್ತನೆಯ ಕಾರ್ಯಕ್ರಮ. ಇದರ ಮೂಲಕ ಶಿಬಿರಾರ್ಥಿಗಳು ವೈಯಕ್ತಿಕ ಹಿಂಜರಿಕೆಗಳು ಮತ್ತು ಮಾನಸಿಕ ಅಡೆತಡೆಗಳನ್ನು ಮೀರುವುದರ ಮೂಲಕ ಅಂತರಂಗದ ಶಕ್ತಿ ಮತ್ತು ಸ್ಥಿರತೆಯನ್ನು ಸಾಧಿಸುತ್ತಾರೆ.

icon

ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಣಿ ಪ್ರಕ್ರಿಯೆಗಳಲ್ಲಿ ಮತ್ತು ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಇಲ್ಲಿ ನಿರ್ಮಾಣವಾಗುವ ಸಂವೇದನಾಶೀಲ ಮತ್ತು ಸ್ನೇಹಮಯ ವಾತಾವರಣದಲ್ಲಿ ಶಿಬಿರಾರ್ಥಿಗಳು ತಮ್ಮ ಜೀವನದ ನೈಜ ಸನ್ನಿವೇಶಗಳನ್ನು ಮತ್ತು ಅವುಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮಲ್ಲಿರುವ ಭಯ ಮತ್ತು ಹಿಂಜರಿಕೆಗಳನ್ನು ಮೀರುವ ತಂತ್ರಗಳನ್ನು ಅಭ್ಯಾಸ ಮಾಡುತ್ತಾರೆ.

icon

“ಪದ್ಮಸಾಧನ” ಕ್ರಿಯೆಯು ನಿಮಗೆ ನಿಮ್ಮ ಅಂತರಂಗದ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. 45 ನಿಮಿಷಗಳ ಪದ್ಮಸಾಧನವು ಅನುಕ್ರಮವಾದ ಅನೇಕ ಯೋಗಾಸನಗಳ ಪದ್ಧತಿಯಾಗಿದ್ದು ಇದನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ, ದೇಹ ಸ್ವಸ್ಥವಾಗುತ್ತದೆ. ದಿವ್ಯವಾದ ಈ ಯೋಗಾಸನಗಳು ಮನಸ್ಸನ್ನು ಆಳವಾದ ಧ್ಯಾನಕ್ಕೆ ಅನುಗೊಳಿಸುತ್ತವೆ.

icon

ಶಿಬಿರಾರ್ಥಿಗಳು ಪ್ರಾಚೀನ ಜ್ಞಾನದ ಬೆಳಕಿನಲ್ಲಿ ಉತ್ತಮ ಬದುಕಿನ ರಹಸ್ಯಗಳನ್ನು ಅರಿತು ಹೊಸಬದುಕನ್ನು ಪ್ರಾರಂಭಿಸುತ್ತಾರೆ. ಶಿಬಿರದಲ್ಲಿ ಪ್ರದರ್ಶಿಸುವ ಚಿಕ್ಕಚಿಕ್ಕ ವಿಡಿಯೋಗಳು ಮತ್ತು ಗುಂಪುಚರ್ಚೆಗಳು ಶಿಬಿರಾರ್ಥಿಗಳ ಬದುಕಿನಲ್ಲಿ ಅರಿವಿನ ಹೊಸ ಆಯಾಮಗಳನ್ನು ತೆರೆಯುವ ಮೂಲಕ ಉತ್ತಮ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತವೆ.

icon

ನಿಮ್ಮ ಸಾಮರ್ಥ್ಯದ ಅರಿವನ್ನು ತಂದುಕೊಂಡು ಅದನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬಹುದೆಂಬುದನ್ನು ತಿಳಿಯಿರಿ. ಸಮಾಜದಲ್ಲಿ ಬದಲಾವಣೆ ತರುವ ಅಚಲವಾದ ವಿಶ್ವಾಸವನ್ನು ಹೊಂದಿ, ಆ ಬದಲಾವಣೆಯಲ್ಲಿ ನಿಮ್ಮ ಭಾಗವಹಿಸುವಿಕೆಯ ಮಹತ್ತ್ವವನ್ನು ಅರಿತುಕೊಳ್ಳಿ.

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ