ಉಚಿತ ಶಾಲೆಗಳು: ಭಾರತದಾದ್ಯಂತವೂ, ಅತ್ಯಂತ ಮೂಲೆಮೂಲೆಗಳಲ್ಲಿರುವ ಸ್ಥಳಗಳಿಗೂ ಹೋಗಿ, ಶಿಕ್ಷಣವನ್ನು ನೀಡುತ್ತಿದೆ

ದೂರದಲ್ಲಿರುವ ಬುಡಕಟ್ಟು ಪ್ರದೇಶಗಳು, ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ, ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಸಮಗ್ರವಾದ ವಿದ್ಯಾಭ್ಯಾಸವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ದಾನ ಮಾಡಿ

icon

ತಂತ್ರ

  • ಪೋಷಕರಿಗೆ ಮತ್ತು ಹಿರಿಯರಿಗೆ ಶಿಕ್ಷಣ ನೀಡುವುದು
  • ಶಿಕ್ಷಕರ ತರಬೇತಿ ಯೋಜನೆ
  • ಸಾಂಪ್ರದಾಯಿಕ ಬೋಧನೆಯೊಂದಿಗೆ ವಿವಿಧ ಕುಶಲತೆಗಳನ್ನು ಕಲಿಸುವುದು

icon

ಪರಿಣಾಮ

ತತ್ಪರಿಣಾಮವಾಗಿ ಭಾರತದಾದ್ಯಂತವೂ 1262ಕ್ಕಿಂತಲೂ ಹೆಚ್ಚಿನ ಶಾಲೆಗಳಲ್ಲಿ 1,00,000ಕ್ಕಿಂತಲೂ ಹೆಚ್ಚಿನ ಮಕ್ಕಳು, ಉಚಿತವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

icon

ಲಿಂಗಗಳ ಅನುಪಾತ

ರಾಷ್ಟ್ರೀಯ ಮಟ್ಟದ ಸರಾಸರಿಗಿಂತ ನಮ್ಮ ಶಾಲೆಗಳಲ್ಲಿ, ಎರಡು ಲಿಂಗಗಳ ನಡುವಿನ ಅನುಪಾತವು ಹೆಚ್ಚುವರಿ ಇದೆ,ಎನ್ನುವುದು ತಿಳಿದು ಬಂದಿದೆ.

ಅವಲೋಕನ

ನಮ್ಮ ದೃಷ್ಟಿಯು ಭಾರತದಲ್ಲಿನ ದುರ್ಬಲ ಸಮುದಾಯಗಳ ಮಕ್ಕಳಿಗೆ, ಒತ್ತಡ-ಮುಕ್ತ ವಾತಾವರಣದಲ್ಲಿ, ಮೌಲ್ಯಾಧಾರಿತವಾಗಿರುವ ಸಮಗ್ರ ಶಿಕ್ಷಣವನ್ನು ಒದಗಿಸಿ ಕೊಡುವುದಾಗಿದೆ. ಕಳೆದ ಮೂರು ದಶಕಗಳಿಂದ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವಲ್ಲಿ ಮತ್ತು ಜೀವನೋಪಾಯಕ್ಕೆ ಸಹಾಯಕಾರಿಯಾದ ಯೋಜನೆಗಳನ್ನು ಒದಗಿಸಿಕೊಡುವಲ್ಲಿ ಸಾಕಷ್ಟು ಕಾರ್ಯಗಳನ್ನು ಹಮ್ಮಿಕೊಂಡು,ಮಕ್ಕಳಿಗೆ ಸುರಕ್ಷಿತವಾದ ಭವಿಷ್ಯವನ್ನು ನಿರ್ಮಿಸಿ ಕೊಡುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಹಾಗೂ ಈ ನಿಟ್ಟಿನಲ್ಲಿ ಹಮ್ಮಿಕೊಂಡ ಕೆಲವು ಶೈಕ್ಷಣಿಕ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಪ್ರಸ್ತುತವಾಗಿ ಹೇಳುವುದಾದರೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ಭಾರತ ದೇಶದ, 22 ರಾಜ್ಯಗಳಲ್ಲಿ ಸುಮಾರು 1262 ಕ್ಕಿಂತಲೂ ಹೆಚ್ಚಿನ ಉಚಿತ ಶಾಲೆಗಳನ್ನು ನಡೆಸುವ ಮೂಲಕ, 1,00,000 ಕ್ಕಿಂತಲೂ ಹೆಚ್ಚಿನ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಈ ಕೆಳಗಿನ ಉಪಕ್ರಮಗಳು ನಮ್ಮ ಶಿಕ್ಷಣಪದ್ಧತಿಯಲ್ಲಿ ಸೇರಿಕೊಂಡಿವೆ:

  • ಗ್ರಾಮೀಣ ಪ್ರದೇಶಗಳಲ್ಲಿ, ನಗರಗಳ ಕೊಳೆಗೇರಿಗಳಲ್ಲಿ, ರಸ್ತೆ ಮತ್ತು ವಿದ್ಯುತ್ ಸಂಪರ್ಕಗಳು ಇಲ್ಲದಿರುವ ದೂರದ ಬುಡಕಟ್ಟು ಪ್ರದೇಶಗಳಲ್ಲಿ, ನಮ್ಮ ಸಂಸ್ಥೆಯು ಉಚಿತ ಶಾಲೆಗಳನ್ನು ನಡೆಸುತ್ತಿದೆ.
  • ಮೂಲಭೂತವಾದ ಸೌಕರ್ಯಗಳು ಇಲ್ಲದಿರುವಲ್ಲಿ ಮತ್ತು ಶಿಕ್ಷಕರ ಕೊರತೆ ಇರುವಲ್ಲಿ, ಮುಚ್ಚುವ ಹಂತಕ್ಕೆ ಬಂದ ಸರ್ಕಾರಿ ಶಾಲೆಗಳು ಸಕ್ರಿಯವಾಗಿ ಮುಂದುವರಿಯಬೇಕು ಎನ್ನುವ ಉದ್ದೇಶದಿಂದ ನಾವು ಅಂತಹ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ.
  • ನಗರಗಳಲ್ಲಿರುವ ಕೊಳೆಗೇರಿ ಪ್ರದೇಶಗಳಲ್ಲಿ, ಅಪರಾಧಗಳನ್ನು ಮಾಡಿ,ಶಿಕ್ಷೆಗೆ ಗುರಿಯಾಗುತ್ತಿರುವ ಮತ್ತು ದುರ್ವ್ಯಸನಗಳಿಗೆ ತುತ್ತಾಗುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಉಚಿತ ಶಾಲೆಗಳನ್ನು ನಿರ್ಮಾಣ ಮಾಡಿ,ಅವುಗಳನ್ನು ನಡೆಸುತ್ತಿರುವಾಗ, ಆರ್ಟ್ ಆಫ್ ಲಿವಿಂಗ್ ತಂಡಗಳು, ಸಾಕಷ್ಟು ಪ್ರಮಾಣದಲ್ಲಿ , ಅಸಂಖ್ಯಾತ ವಾಗಿರುವ , ವಿವಿಧ ರೀತಿಯ ಸವಾಲುಗಳನ್ನು ಎದುರಿಸಿವೆ .ಮತ್ತು ಅವುಗಳನ್ನು ಯೋಗ್ಯವಾದ ರೀತಿಯಲ್ಲಿ ಪರಿಹರಿಸಿವೆ. ಈ ಎಲ್ಲಾ ಸವಾಲುಗಳಿಗೆ ಹೋಲಿಸಿದರೆ, ಮಕ್ಕಳಿಗೆ ವಿದ್ಯಾಭ್ಯಾಸವನ್ನು ಒದಗಿಸುವುದು ಅತ್ಯಂತ ಸುಲಭವಾದ ಪ್ರಕ್ರಿಯೆ ಎನ್ನುವುದು ನಮ್ಮ ಅರಿವಿಗೆ ಬಂದಿದೆ. ಸುತ್ತಮುತ್ತಲೂ ಇರುವ ಬೇರೆ ಬೇರೆ ಸಮುದಾಯದ ಜನರು, ಮೂಲಭೂತವಾಗಿ ತಮಗೆ ಅವಶ್ಯವಾಗಿರುವ ಶೈಕ್ಷಣಿಕ ಮೌಲ್ಯಗಳನ್ನು ತಿಳಿದುಕೊಂಡು, ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಅವರೆಲ್ಲರೂ ತಮ್ಮ ಮನಃಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯನ್ನು ತಂದುಕೊಳ್ಳಬೇಕಾಗುತ್ತದೆ. ಅವರಿಗೆ ಇದನ್ನು ಮನದಟ್ಟು ಮಾಡಿ ,ಅವರಲ್ಲಿ ಪರಿವರ್ತನೆಯನ್ನು ತರುವುದು ನಮಗೆ ಅತ್ಯಂತ ದೊಡ್ಡ ಸವಾಲಾಗಿದೆ . ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರು ಜಾರಿಗೆ ತಂದಿರುವ ಮೌಲ್ಯಾಧಾರಿತ ಶಿಕ್ಷಣ ಪದ್ಧತಿಯು ಎಲ್ಲಾ ವಿಧಗಳಲ್ಲಿ ಜನರಿಗೆ ಸಹಕಾರಿಯಾಗಿದೆ.

ಉಚಿತ ಶಿಕ್ಷಣ

ಭವಿಷ್ಯವನ್ನು ಒಂದು ಕೊಡುಗೆಯಾಗಿ ನೀಡಿ

ಪ್ರತೀ ಮಗುವಿಗೆ ಶಿಕ್ಷಣವನ್ನು ಪಡೆಯುವ ಹಕ್ಕಿದೆ. ನೀವು ಅವರಿಗೆ ಬೆಂಬಲಿಸಿ ಸಹಾಯಕರಾಗಿ.

ದಾನ ಮಾಡಿ

ಸವಾಲುಗಳು

ಭಾರತದ ಜನಸಂಖ್ಯೆಯ ಸುಮಾರು 40% ಜನರು 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾರೆ. ‘ಶಿಕ್ಷಣವು ಪ್ರತೀ ಮಗುವಿನ ಮೂಲಭೂತ ಹಕ್ಕು’ ಎಂಬ ಘೋಷಣೆಯ ಮೂಲಕ, ಭಾರತ ದೇಶವು ಸ್ಥಾಪಿಸಿದ , 135 ದೇಶಗಳ ಒಕ್ಕೂಟದ ಪಂಗಡಕ್ಕೆ, ಏಪ್ರಿಲ್ 2010ರಲ್ಲಿ ನಮ್ಮ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕೂಡಾ ಸೇರಿಕೊಂಡಿತು. ‘ಶಿಕ್ಷಣವು ನಮ್ಮ ಜನ್ಮಸಿದ್ಧ ಹಕ್ಕು’ ಎನ್ನುವುದನ್ನು ಜಾರಿಗೊಳಿಸಿ, ಭಾರತದಲ್ಲಿ ಸುಮಾರು 500 ಮಿಲಿಯನ್ ಅನಕ್ಷರಸ್ಥ ಜನರಿಗೆ ಶಿಕ್ಷಣವನ್ನು ಒದಗಿಸುವುದು , ನಿಜಕ್ಕೂ ಒಂದು ದೊಡ್ಡ ಸವಾಲಾಗಿದ್ದು ,ಎದೆಗುಂದಿಸುವಂತಿದೆ. ದೇಶದಲ್ಲಿ ಅತ್ಯಂತ ಅಗತ್ಯವಿರುವ ಮಕ್ಕಳಿಗೆ ಮತ್ತು ಎಲ್ಲಾ ನವಯುವಕರಿಗೆ ಶಿಕ್ಷಣವನ್ನು ನೀಡಲೇಬೇಕು, ಎನ್ನುವ ಈ ಸವಾಲನ್ನು ಎದುರಿಸಿ ಪೂರ್ಣಗೊಳಿಸುವಲ್ಲಿ, ನಮ್ಮ ಸರ್ಕಾರ ಮತ್ತು ಇತರ ಸಂಸ್ಥೆಗಳೊಂದಿಗೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕೂಡ ಸೇರಿಕೊಂಡಿದೆ. ಈಗ ದೊರಕಿರುವ ಸಮೀಕ್ಷೆಯ ಪ್ರಕಾರ, ನಮ್ಮ ಭಾರತ ದೇಶದಲ್ಲಿ ಸುಮಾರು 96% ಮಕ್ಕಳು , ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದ್ದಾರೆ;72% ಮಕ್ಕಳು 5 ನೇ ತರಗತಿಯನ್ನು ಮುಗಿಸುತ್ತಿದ್ದಾರೆ; 57% ಮಕ್ಕಳು 8 ನೇ ತರಗತಿಯನ್ನು ಮುಗಿಸುತ್ತಿದ್ದಾರೆ ಮತ್ತು ಕೇವಲ 37% ದಷ್ಟು ಮಕ್ಕಳು ಮಾತ್ರ 10 ನೇ ತರಗತಿಗೆ ಹಾಜರಾಗುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ನಾವು ಎದುರಿಸುತ್ತಿರುವ ಕೆಲವು ಸವಾಲುಗಳಲ್ಲಿ ಈ ಕೆಳಗಿನವುಗಳು ಸೇರಿವೆ:

  • ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದಿಲ್ಲ.
  • ಮನೆಯ ಒತ್ತಡಗಳಿಂದಾಗಿ ನಿರಂತರವಾಗಿ ಹಾಜರಾಗುತ್ತಿದ್ದ ಮಕ್ಕಳು ಕೂಡ ತಮ್ಮ ವಿದ್ಯಾಭ್ಯಾಸವನ್ನು ಬಿಟ್ಟುಬಿಡುತ್ತಾರೆ.
  • ವೈಯಕ್ತಿಕ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ಕ್ರಮೇಣ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು ಕ್ಷೀಣವಾಗುತ್ತದೆ.
  • ತಮಗೆ ಈಗ ಇರುವುದಕ್ಕಿಂತ ಉತ್ತಮ ಅವಕಾಶಗಳು ದೊರೆತಾಗ, ಶಿಕ್ಷಕರು ತಾವೇ ಶಾಲೆಯನ್ನು ಬಿಟ್ಟುಬಿಡುತ್ತಾರೆ.

ಈ ಎಲ್ಲಾ ವಿಧದ ಸವಾಲುಗಳನ್ನು ಎದುರಿಸಿ ಅವುಗಳನ್ನು ಜಯಿಸಲು, ನಾವು ಸಾಕಷ್ಟು ನವೀನ ಮಾದರಿಯ ಪರಿಹಾರಗಳನ್ನು ಕಂಡುಕೊಂಡಿದ್ದೇವೆ. ನಮ್ಮ ಕಾರ್ಯವೈಖರಿಯು ಮಕ್ಕಳನ್ನು ಮಾತ್ರವಲ್ಲದೆ ಅವರ ಪೋಷಕರು, ಸಮುದಾಯದವರು ಮತ್ತು ಶಿಕ್ಷಕರು,-ಎಲ್ಲರನ್ನೂ ಒಲಿಸಿಕೊಂಡು, ಬೆಳೆಸಿಕೊಂಡು ಹೋಗುವ ಸಮಗ್ರದೃಷ್ಟಿಯ ಕುಶಲತೆಗಳಿಂದ ಕೂಡಿದೆ.

≈ 66%
* ಶಿಕ್ಷಣ ದರ 2016 ರಲ್ಲಿ

ಭಾರತದಲ್ಲಿ ಕಡಿಮೆ ಶಿಕ್ಷಣ ಪಡೆದವರು

5 ವರ್ಷಕ್ಕಿಂತ ಕಡಿಮೆ ಶಾಲಾವಧಿಯ ಶಿಕ್ಷಣ ಹೊಂದಿರುವ ಜನರು

≤ 37%
ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸುವವರ

X ತರಗತಿಯನ್ನು ಮುಗಿಸಿ

ಭಾರತದಲ್ಲಿ ಮಧ್ಯದಲ್ಲಿ ಶಾಲೆ ಬಿಟ್ಟುಬಿಡುವವರ ದರ ಹೆಚ್ಚಿರುವುದು

ಶಿಕ್ಷಣವು ನಾಗರಿಕತೆಯನ್ನು ಎತ್ತಿ ತೋರಿಸುವಲ್ಲಿ ಶ್ರೇಷ್ಠವಾದ ಸಮತಾವಾದಿಯಾಗಿದೆ. ಶಿಕ್ಷಣದಲ್ಲಿ ಅತ್ಯಂತ ದುರ್ಬಲರನ್ನು ಕೂಡಾ ಸಬಲೀಕರಣಗೊಳಿಸುವ ಶಕ್ತಿಯಿದೆ; ಇಡೀ ವಿಶ್ವಕ್ಕೆ ಶಾಂತಿಯನ್ನು ತಂದು ಕೊಡುವ ಮತ್ತು ಇಡೀ ಜಗತ್ತಿನಲ್ಲಿ ಬಡತನವನ್ನು ನಿವಾರಿಸುವ ಶಕ್ತಿಯು ಶಿಕ್ಷಣಕ್ಕಿದೆ; ಸಂತೋಷವನ್ನು ಅನ್ವಯಿಸಿಕೊಂಡು ನಮ್ಮ ಬದುಕನ್ನು ಬೆಳಗಿಸಬೇಕಾದರೆ, ಕೇವಲ ಶಿಕ್ಷಣವೊಂದೇ ಏಕೈಕ ಮಾರ್ಗವು!

~ ಗುರುದೇವ ಶ್ರೀ ಶ್ರೀ ರವಿಶಂಕರ್

ತಂತ್ರ

ನಮ್ಮ ಶಿಕ್ಷಣ ಯೋಜನೆಗಳಿಗಾಗಿ ನಾವು ಉತ್ತಮವಾಗಿ ವ್ಯಾಖ್ಯಾನಿಸಲಾದ ಕಾರ್ಯತಂತ್ರವನ್ನು ಹೊಂದಿದ್ದೇವೆ, ಅದನ್ನು ಸಮಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಪರಿಷ್ಕರಿಸಲಾಗಿದೆ. ಈ ತಂತ್ರವನ್ನು ಮೂರು ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ:

ಸೌಹಾರ್ದತೆಯೊಂದಿಗೆ ಸಮುದಾಯಗಳ ಜೊತೆಯಲ್ಲಿ ಕಲೆಯುವುದು: ಆರ್ಟ್ ಆಫ್ ಲಿವಿಂಗ್ ಪಂಗಡದವರು, ಸಮುದಾಯಗಳಲ್ಲಿ ಹೆಚ್ಚಿನ ಪ್ರಭಾವವನ್ನು ತರಬಲ್ಲ ವ್ಯಕ್ತಿಗಳನ್ನು ಪೂರ್ವಭಾವಿಯಾಗಿ ಸಂಪರ್ಕಿಸಿ, ವಿದ್ಯಾಭ್ಯಾಸದ ಮಹತ್ವವನ್ನು ಅವರಿಗೆ ಮನದಟ್ಟು ಮಾಡುತ್ತಾರೆ. ತನ್ಮೂಲಕ ಅವರ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಮುಂದುವರಿಯುವುದನ್ನು ಖಚಿತ ಮಾಡಿಕೊಳ್ಳುತ್ತಾರೆ .ಮಕ್ಕಳಿಗೆ ಕಲಿಸುವ ಮುಂಚೆಯೇ ನಾವು ಅವರ ಪೋಷಕರು ಮತ್ತು ಕುಟುಂಬದ ಇತರ ಸದಸ್ಯರಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸುತ್ತೇವೆ. ಶಾಲಾ ಶಿಕ್ಷಕರನ್ನು ಸಮುದಾಯದಿಂದಲೇ ಆಯ್ಕೆ ಮಾಡಲಾಗುತ್ತದೆ ಮತ್ತು ಸಮುದಾಯದೊಂದಿಗಿನ ಬಾಂಧವ್ಯವನ್ನು ದೃಢಪಡಿಸಿಕೊಳ್ಳಲು ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ. ಈ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳಿಂದಾಗಿ, ಶಾಲೆಯನ್ನು ಅರ್ಧದಲ್ಲಿ ಬಿಟ್ಟು ಹೋಗುವವರ ಸಂಖ್ಯೆಯು ಕಡಿಮೆಯಾಗುತ್ತಿದೆ.

ಉಚಿತ ಶಿಕ್ಷಣವನ್ನು ಒದಗಿಸುವುದು: ನಮ್ಮ ಶಾಲೆಗಳಲ್ಲಿ ಕಲಿಯುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ತೀವ್ರ ಬಡತನದ ಹಿನ್ನೆಲೆಯಿಂದ ಬಂದವರು ಮಾತ್ರವಲ್ಲದೆ ಅವರೆಲ್ಲರೂ ಮೊದಲ ತಲೆಮಾರಿನ ಅಕ್ಷರಸ್ಥರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ದುರ್ಬಲ ವರ್ಗದ ಮಕ್ಕಳಿಗೆ ಉಚಿತವಾಗಿ ಮೌಲ್ಯಾಧಾರಿತವಾದ ಶಿಕ್ಷಣವನ್ನು ನೀಡುತ್ತದೆ ಹಾಗೂ ಮಕ್ಕಳನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಶಾಲೆಯಿಂದ ದೂರವಿಡುವಂತಹ ಕೆಲವು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಪರಿಹರಿಸುತ್ತಿದೆ.

ಮೌಲ್ಯಾಧಾರಿತ ಶಿಕ್ಷಣ: ಆರ್ಟ್ ಆಫ್ ಲಿವಿಂಗ್ ಶಾಲೆಗಳು ಮಗುವನ್ನು ಸಮಗ್ರವಾಗಿ ಪೋಷಿಸುತ್ತವೆ. ಕ್ರಮಬದ್ಧವಾದ ಶಿಕ್ಷಣವನ್ನು ಜೀವನದ ಕೌಶಲ್ಯಗಳೊಂದಿಗೆ ಸಂಯೋಜಿಸುವುದು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿಕೊಂಡಿರುವ ಪ್ರಮುಖ ಅಂಶವಾಗಿದೆ. ಇದರಿಂದಾಗಿ ಮಗುವಿನಲ್ಲಿ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಧ್ಯಾನದ ಪ್ರಕ್ರಿಯೆಗಳು ಮತ್ತು ಮಾನವೀಯ ಮೌಲ್ಯಗಳ ಮೂಲಕ ಮಕ್ಕಳಲ್ಲಿ ಆಧ್ಯಾತ್ಮಿಕ ತಳಹದಿಯನ್ನು ಬಲಪಡಿಸುವುದು , ಕುಶಲತೆಯನ್ನು ಕಲಿಸುವ ಕಾರ್ಯವೈಖರಿ, ಮುಂತಾದವುಗಳ ಪರಿಣಾಮವಾಗಿ ಅವರ ವೈಯಕ್ತಿಕ ಜೀವನದಲ್ಲಿ ಕೌಟುಂಬಿಕ ಮೌಲ್ಯಗಳು ಬಲಗೊಳ್ಳುತ್ತಿವೆ ಹಾಗೂ ಅವರ ಪ್ರಗತಿಪರ ವರ್ತನೆಗಳಿಂದಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳು ಕಡಿಮೆಯಾಗುತ್ತಿವೆ.

icon

ಸಮುದಾಯದೊಂದಿಗೆ ತೊಡಗಿಸಿಕೊಳ್ಳುವುದು

ಸಮುದಾಯದಿಂದಲೇ ಶಿಕ್ಷಕರನ್ನು ಆಯ್ಕೆ ಮಾಡುವುದು ಮತ್ತು ತರಬೇತಿ ನೀಡುವುದು

icon

ಉಚಿತ ಶಿಕ್ಷಣ ನೀಡುವುದು

ಹೆಚ್ಚಿನ ಮಕ್ಕಳು ಮೊದಲ ತಲೆಮಾರಿನ ಕಲಿಯುವವರಾಗಿದ್ದಾರೆ

icon

ಮೌಲ್ಯಾಧಾರಿತ ವಿಧಾನ

ಆತ್ಮವಿಶ್ವಾಸ, ನಾಯಕತ್ವ, ಪರಸ್ಪರ ಕೌಶಲ್ಯಗಳು ಮತ್ತು ಆಧ್ಯಾತ್ಮಿಕ ಸಾಧನಗಳನ್ನು ಅಭಿವೃದ್ಧಿಪಡಿಸುವುದು

ಪರಿಣಾಮ

ಈ ವಲಯದಲ್ಲಿ ನಮ್ಮ ನಿರಂತರ ಪ್ರಯತ್ನಗಳ ಫಲವಾಗಿ, ಆರ್ಟ್ ಆಫ್ ಲಿವಿಂಗ್ ಇಂದು 1262+ ಉಚಿತ ಶಾಲೆಗಳನ್ನು ಭಾರತದಲ್ಲಿ 22 ರಾಜ್ಯಗಳಾದ್ಯಂತ ಬುಡಕಟ್ಟು ಪ್ರದೇಶಗಳು, ಗ್ರಾಮೀಣ ಪ್ರದೇಶಗಳು ಮತ್ತು ನಗರ ಕೊಳೆಗೇರಿಗಳಲ್ಲಿ ಸುಮಾರು 84,689+ ಮಕ್ಕಳಿಗೆ ಪೂರೈಸುತ್ತಿದೆ. ನಮ್ಮ ನಿರಂತರವಾಗಿ ನಾವು ಈ ವಲಯದಲ್ಲಿ ಮಾಡಿದ ಪ್ರಯತ್ನಗಳ ಫಲವಾಗಿ, ಇಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, 1262ಕ್ಕೂ ಹೆಚ್ಚಿನ ಉಚಿತ ಶಾಲೆಗಳನ್ನು ನಡೆಸುತ್ತಿದೆ. ಭಾರತದ 22 ರಾಜ್ಯಗಳಲ್ಲಿ ,ಬುಡಕಟ್ಟು ಪ್ರದೇಶಗಳು, ಗ್ರಾಮೀಣ ಪ್ರದೇಶಗಳು ಮತ್ತು ನಗರದ ಕೊಳೆಗೇರಿಗಳು ಮುಂತಾದೆಡೆಗಳಲ್ಲಿ ಸುಮಾರು 1,00,000ಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ನಮ್ಮ ಶಾಲೆಗಳಲ್ಲಿರುವ ಪ್ರಮುಖ ಅಂಶಗಳು:

  • ಹೆಚ್ಚಿನ ಮಕ್ಕಳು ಮೊದಲ ತಲೆಮಾರಿನ ಅಕ್ಷರಸ್ಥರು.
  • ಸರ್ಕಾರಿ ಶಾಲೆಗಳು ಇಲ್ಲದಿರುವ ಪ್ರದೇಶಗಳಲ್ಲಿ ನಮ್ಮ ಶಾಲೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.
  • ವಿದ್ಯಾರ್ಥಿಗಳಿಗೆ ಬಟ್ಟೆ, ಬೂಟುಗಳು, ಪುಸ್ತಕಗಳು ಮತ್ತು ಬರವಣಿಗೆಯ ಸಾಮಗ್ರಿಗಳನ್ನು ಒದಗಿಸುತ್ತಿದೆಯಷ್ಟೇ ಅಲ್ಲದೆ ಉಚಿತವಾಗಿ ಬಸ್ ಸೇವೆ ಮತ್ತು ದೈನಂದಿನ ಮಧ್ಯಾಹ್ನದ ಊಟವನ್ನು ಕೂಡ ಕೊಡುತ್ತಿದೆ.
  • ಆರೋಗ್ಯಕರವಾದ ಶರೀರ ಮತ್ತು ಮನಸ್ಸುಗಳ ಅಭಿವೃದ್ಧಿಗಾಗಿ, ನಾವು ಯೋಗಾಸನಗಳು ಮತ್ತು ಧ್ಯಾನಗಳನ್ನು ಅಳವಡಿಸಿಕೊಂಡಿದ್ದೇವೆ.ಕ್ರೀಡೆಗಳು, ನೃತ್ಯ, ಸಂಗೀತ, ಡ್ರಾಯಿಂಗ್ ಮತ್ತು ಚಿತ್ರಕಲೆಯಂತಹ ಸೃಜನಶೀಲ ಚಟುವಟಿಕೆಗಳನ್ನು ಕಲಿಸುತ್ತಿದ್ದೇವೆ.
  • ನಮ್ಮ ಶಾಲೆಗಳಲ್ಲಿ 48 ಹುಡುಗಿಯರಿಗೆ 52 ಹುಡುಗರ ನಿಷ್ಪತ್ತಿಯಂತೆ ಮಕ್ಕಳ ಸಂಖ್ಯೆ ಇರುವುದು , ಇದು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ.
  • ಇಲ್ಲಿಯವರೆಗೆ, ನಾವು ಸುಮಾರು 2000 ಶಿಕ್ಷಕರಿಗೆ ತರಬೇತಿಯನ್ನು ನೀಡಿದ್ದೇವೆ.

1,00,000+

ವಿದ್ಯಾರ್ಥಿಗಳಿಗೆ

ಉಚಿತ ಶಿಕ್ಷಣ ನೀಡಲಾಗುತ್ತಿದೆ

1,262

ಉಚಿತ ಶಾಲೆಗಳು

ಭಾರತದಲ್ಲಿ 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ

2,000+

ಶಿಕ್ಷಕರು

ಇಲ್ಲಿಯವರೆಗೆ ತರಬೇತಿ ನೀಡಲಾಗಿದೆ

48 : 52

ಇಲ್ಲಿಯವರೆಗೆ ತರಬೇತಿ ನೀಡಲಾಗಿದೆ

ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು

ಆರ್ಟ್ ಆಫ್ ಲಿವಿಂಗ್ ನ ವತಿಯಿಂದ ನಡೆಯುವ ಉಚಿತ ಶಾಲೆಗಳು

ಮಗುವಿಗೆ ನಗೆಯನ್ನು ಕೊಡುಗೆಯಾಗಿ ನೀಡಿ

ನಾವು ಪ್ರತಿ ವರ್ಷವೂ 100,000+ ಹಿಂದುಳಿದ ಮಕ್ಕಳಿಗೆ ಸಮಗ್ರವಾದ ಶಿಕ್ಷಣವನ್ನು ನೀಡುತ್ತಿದ್ದೇವೆ. ನಿಮ್ಮ ದೇಣಿಗೆಗಳ ಅಗತ್ಯವು ತುಂಬಾ ಇದೆ ಮತ್ತು ಅದರಲ್ಲಿ ಗರಿಷ್ಠ ಮೊತ್ತದ 95% ಕ್ಕಿಂತ ಹೆಚ್ಚಿನ ಹಣವನ್ನು, ನೇರವಾಗಿ ಈ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.

ದಾನ ಮಾಡಿ