ಗುರುದೇವ್ ಶ್ರೀ ಶ್ರೀ ರವಿಶಂಕರ್

ಜಾಗತಿಕ ಮಾನವತಾವಾದಿ ಮತ್ತು ಆಧ್ಯಾತ್ಮಿಕ ನಾಯಕರು

ಅಧಿಕೃತ ವೆಬ್‌ಸೈಟ್

ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾನವತಾವಾದಿಯ ನಾಯಕರು, ಆಧ್ಯಾತ್ಮಿಕ ಗುರುಗಳು ಮತ್ತು ಶಾಂತಿದೂತರು. ಗುರುದೇವರ ದೃಷ್ಟಿಕೋನದಂತೆ ಒತ್ತಡ-ರಹಿತ ಮತ್ತು ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಪಂಚದಾದ್ಯಂತವೂ ಇರುವ ಮಿಲಿಯಾಂತರ ಜನರನ್ನು ಒಗ್ಗೂಡಿಸಿದೆ.

ಆರಂಭ

ದಕ್ಷಿಣ ಭಾರತದಲ್ಲಿ, 1956ರಲ್ಲಿ ಜನಿಸಿದ ಗುರುದೇವ್ ಶ್ರೀ ಶ್ರೀ ರವಿಶಂಕರರು ತಮ್ಮ ಹುಟ್ಟಿನಿಂದಲೇ ಅತ್ಯಂತ ಪ್ರತಿಭಾವಂತ ಶಿಶುವಾಗಿದ್ದರು. ಅವರು ತಮ್ಮ ನಾಲ್ಕನೆಯ ವಯಸ್ಸಿನಲ್ಲಿಯೇ , ಪ್ರಾಚೀನ ಸಂಸ್ಕೃತ ಗ್ರಂಥವಾದ ಭಗವದ್ಗೀತೆಯ ಅನೇಕ ಭಾಗಗಳನ್ನು ಪಠಿಸಬಲ್ಲವರಾಗಿದ್ದರು ಮತ್ತು ಆಗಾಗ ಆಳವಾದ ಧ್ಯಾನದಲ್ಲಿ ಮುಳುಗುತ್ತಿದ್ದರು. ಗುರುದೇವರ ಪ್ರಥಮ ಶಿಕ್ಷಕರಾದ ಸುಧಾಕರ್ ಚತುರ್ವೇದಿಯವರು ಮಹಾತ್ಮಾ ಗಾಂಧಿಯವರೊಡನೆ ದೀರ್ಘಕಾಲೀನ ಸಂಬಂಧವನ್ನು ಹೊಂದಿದ್ದರು. 1973 ರಲ್ಲಿ ತಾವು ಹದಿನೇಳನೆಯ ವರ್ಷದವರಾಗಿದ್ದಾಗ, ಗುರುದೇವರು ವೈದಿಕ ಸಾಹಿತ್ಯ ಮತ್ತು ಭೌತ ಶಾಸ್ತ್ರಗಳೆರಡರಲ್ಲೂ ಪದವಿಯನ್ನು ಪಡೆದು ಉತ್ತೀರ್ಣರಾದರು.

ಜೀವನವನ್ನು ಪರಿಪೂರ್ಣವಾಗಿ ಜೀವಿಸುವ ಒಂದು ತತ್ವವೇ ಆರ್ಟ್ ಆಫ್ ಲಿವಿಂಗ್ ಆಗಿದೆ. ಇದನ್ನು ಕೇವಲ ಒಂದು ಸಂಸ್ಥೆಯೆಂದು ಹೇಳುವ ಬದಲಿಗೆ ಒಂದು ಚಳುವಳಿಯೆಂದು ಕರೆಯಬಹುದಾಗಿದೆ. ಯಾಕೆಂದರೆ, ಇದರ ಮೂಲಭೂತ ತತ್ತ್ವವೇ -ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗೆ ಅಡಗಿರುವ ಆಂತರಿಕ ಶಾಂತಿಯನ್ನು ಕಂಡುಕೊಂಡು, ಸಮಾಜವನ್ನು ಸಮಗ್ರವಾಗಿ ಮುನ್ನಡೆಸಬೇಕು, ಎನ್ನುವುದಾಗಿದೆ. ಅಷ್ಟೇ ಅಲ್ಲದೆ, ವಿವಿಧ ಸಂಸ್ಕೃತಿಗಳ, ವಿವಿಧ ಪದ್ಧತಿಗಳ, ವಿವಿಧ ಧರ್ಮಗಳ ಮತ್ತು ವಿವಿಧ ರಾಷ್ಟ್ರಗಳ ಜನರನ್ನು ಒಗ್ಗೂಡಿಸಿ, ಎಲ್ಲರನ್ನೂ ಒಮ್ಮತದೊಂದಿಗೆ ಮುನ್ನಡೆಸುವುದು ಈ ಸಂಸ್ಥೆಯ ಧ್ಯೇಯವಾಗಿದೆ. ತನ್ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ನಮ್ಮೆಲ್ಲರ ಗುರಿಯು, ಒಂದೇ ಹಾಗೂ ಮಾನವ ಜನಾಂಗದ ಪ್ರಗತಿಗಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡ ಬೇಕಾಗಿದೆ ಎನ್ನುವುದನ್ನು ಎಂದು ಧೃಢೀಕರಿಸುವುದಾಗಿದೆ.

- ಗುರುದೇವ್ ಶ್ರೀ ಶ್ರೀ ರವಿಶಂಕರ್

ಆರ್ಟ್ ಆಫ್ ಲಿವಿಂಗ್ ಮತ್ತು ಇನ್ಟರ್ ನ್ಯಾಷನಲ್ ಅಸೊಸಿಯೇಷನ್ ಫಾರ್ ಹ್ಯೂಮನ್ ವಾಲ್ಯೂಸ್ ನ ಸ್ಥಾಪನೆ

ಗುರುದೇವರು ದಿ ಆರ್ಟ್ ಅಪ್ ಲಿವಿಂಗ್ ಸಂಸ್ಥೆಯನ್ನು ಒಂದು ಅಂತರ್ ರಾಷ್ಟೀಯ ಮಟ್ಟದಲ್ಲಿರುವ , ಲಾಭರಹಿತ , ಶೈಕ್ಷಣಿಕ ಮತ್ತು ಮಾನವೀಯ ಮೌಲ್ಯಗಳಿಂದ ಒಡಗೂಡಿದ ಸಂಸ್ಥೆಯನ್ನಾಗಿ ಸ್ಥಾಪನೆ ಮಾಡಿದರು. ಇದರ ಮೂಲಕ ಪ್ರಸಾರವಾಗುವ ಶೈಕ್ಷಣಿಕ ಮತ್ತು ಸ್ವಯಂ-ವಿಕಾಸಕ್ಕಾಗಿ ನಿಯೋಜಿಸಿದ ಕಾರ್ಯಕ್ರಮಗಳು, ಒತ್ತಡಗಳ ನಿವಾರಣೆಗಾಗಿ ಮತ್ತು ಸಂತೋಷವನ್ನು ವೃದ್ಧಿ ಪಡಿಸಲಿಕ್ಕಾಗಿ, ಶಕ್ತಿಯುತವಾದ ಪ್ರಕ್ರಿಯೆಗಳನ್ನು ಒಳಗೊಂಡಿವೆ. ಈ ಪ್ರಕ್ರಿಯೆಗಳ ಮೂಲಕ ಸಹಕಾರಿಯಾಗುವ ಸಾಧನಗಳು ಯಾವುದೇ ಜಾತಿ, ಮತ ಮತ್ತು ಪಂಗಡಗಳ ಭೇದವಿಲ್ಲದೆ ಸಕಲಮಾನವ ಕುಲದ ಅಭಿವೃದ್ಧಿಗಾಗಿ ಮೀಸಲಾಗಿವೆ. ಈ ಪ್ರಕ್ರಿಯೆಯ ನಿಯಮಿತ ಅಭ್ಯಾಸವು ಜಾಗತಿಕ ಮಟ್ಟದಲ್ಲಿ ಮತ್ತು ಸಮಾಜದ ಎಲ್ಲಾ ಹಂತಗಳಲ್ಲಿಯೂ ಪರಿಣಾಮಕಾರಿಯಾಗಿ ಫಲಪ್ರದಾಗುವುದು, ಎಂಬುದಾಗಿ ಸಾಬೀತಾಗಿದೆ . ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳನ್ನು ಪ್ರಸ್ತುತ 180 ದೇಶಗಳಲ್ಲಿ ನೀಡಲಾಗುತ್ತಿದೆ. 1997 ರಲ್ಲಿ, ಗುರುದೇವರು ಇಂಟರ್‌ನ್ಯಾಶನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ (IAHV) ಅನ್ನು ಆರ್ಟ್ ಆಫ್ ಲಿವಿಂಗ್‌ನ ಸಹೋದರ ಸಂಸ್ಥೆಯಾಗಿ ಸ್ಥಾಪಿಸಿದರು. IAHV ಕೂಡಾ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳನ್ನು ಸಂಯೋಜಿಸುತ್ತಿದೆ. ಇದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಮತ್ತು ಸಂಘರ್ಷಗಳನ್ನು ಪರಿಹರಿಸುವುದರಲ್ಲಿ ಮುಂದಾಳತ್ವವನ್ನು ವಹಿಸುವ ಮೂಲಕ ಅತ್ಯಂತ ಪರಿಣಾಮಕಾರಿಯಾದ ಮತ್ತು ಧನಾತ್ಮಕವಾದ ಪರಿವರ್ತನೆಗಳನ್ನು ತರುವುದರಲ್ಲಿ ಯಶಸ್ವಿಯಾಗಿದೆ.

ಸೇವೆಗೆ ಸ್ಫೂರ್ತಿ ಮತ್ತು ಜ್ಞಾನದ ಜಾಗತೀಕರಣ

Gurudev at an evening of wisdom, music and meditation in Washington DC

ಪ್ರಖ್ಯಾತ ಮಾನವತಾವಾದಿಯಾಗಿರುವ ಗುರುದೇವರು ನಿಯೋಜಿಸಿದ ಕಾರ್ಯಕ್ರಮಗಳು, ಇಡೀ ಜಗತ್ತಿನಲ್ಲಿ ವ್ಯಾಪಿಸಿವೆ. ಇವುಗಳು, ವಿಭಿನ್ನ ಹಿನ್ನಲೆಗಳಿಂದ ಬಂದಂತಹ ಜನರಿಗೆ, ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಸಂತ್ರಸ್ತರಿಗೆ, ಭಯೋತ್ಪಾದಕರ ದಾಳಿಗಳಿಗೆ ಬಲಿಪಶುವಾದ ವರಿಗೆ, ಯುದ್ಧಗಳಲ್ಲಿ ನೊಂದವರಿಗೆ, ಹಿಂದುಳಿದ ವರ್ಗಗಳ ಮಕ್ಕಳಿಗೆ, ಘರ್ಷಣೆಗಳಲ್ಲಿ ತೊಡಗಿರುವ ಸಮುದಾಯದವರಿಗೆ…ಹೀಗೆ ಪ್ರಪಂಚದಾದ್ಯಂತವೂ ನೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಸಹಾಯಕವಾಗಿ ನಿಂತಿವೆ. ಇವರು ನೀಡುತ್ತಿರುವ ಮಹತ್ವಪೂರ್ಣವಾದ ಜ್ಞಾನದ ಸಂದೇಶಗಳು ಸ್ವಯಂಸೇವಕರ ಮೂಲಕ, ಎಲ್ಲೆಡೆಯೂ ಹಬ್ಬಿರುವ ಜನರಿಗೆ ದೊರಕುತ್ತಿವೆ. ಇದರಿಂದಾಗಿ ಆಧ್ಯಾತ್ಮಿಕತೆಯ ಆಧಾರವಾದ ಸೇವೆಯ ಅಲೆಯನ್ನು ಎಬ್ಬಿಸಲು ಈ ಸಂದೇಶಗಳು ಶಕ್ತವಾಗಿವೆ . ಜಗತ್ತಿನಲ್ಲೆಲ್ಲಾ ಅವಶ್ಯವಾಗಿರುವ ಸ್ಥಳಗಳಲ್ಲಿ, ಎಲ್ಲಾ ರೀತಿಯ ಸೇವಾ ಯೋಜನೆಗಳನ್ನು, ಸ್ವಯಂಸೇವಕರು ಜಾರಿಗೆ ತಂದು, ನಡೆಸಿಕೊಂಡು ಬರುತ್ತಿದ್ದಾರೆ.

ಆಧ್ಯಾತ್ಮಿಕ ಗುರುಗಳಾಗಿರುವ ಗುರುದೇವರು, ಪರಂಪರೆಯಿಂದಲೂ ಬಂದಿರುವ ಯೋಗ ಮತ್ತು ಧ್ಯಾನಗಳ ಪದ್ಧತಿಗಳನ್ನು ಪುನರುತ್ಥಾನಗೊಳಿಸಿ, 21ನೆಯ ಶತಮಾನಕ್ಕೆ ಪ್ರಸಕ್ತವಾಗಿರುವಂತಹ ರೂಪದಲ್ಲಿ ಅವುಗಳನ್ನು ಸಮಸ್ತ ಜಗತ್ತಿಗೆ ಅರ್ಪಣೆ ಮಾಡಿದ್ದಾರೆ. ಪ್ರಾಚೀನ ಜ್ಞಾನವನ್ನು ಪುನರುತ್ಥಾನಗೊಳಿಸುವುದರೊಂದಿಗೆ, ವೈಯಕ್ತಿಕ ಹಾಗೂ ಸಾಮಾಜಿಕ ಪರಿವರ್ತನೆಗಾಗಿ ನವೀನ ಪ್ರಕ್ರಿಯೆಗಳನ್ನು ಕೂಡ ಸೃಷ್ಟಿಸಿ, ಅದರೊಂದಿಗೆ ಸೇರಿಸಿದ್ದಾರೆ. ಇವುಗಳ ಮೂಲಕ, ಅನೇಕ ಮಿಲಿಯ ಜನರಲ್ಲಿರುವ ಒತ್ತಡಗಳನ್ನು ನಿವಾರಣೆ ಮಾಡಿ, ಅವರೆಲ್ಲರೂ ತಮ್ಮ ಆಂತರಿಕ ಶಕ್ತಿಯ ಸಂಪತ್ತನ್ನು ಕಂಡುಕೊಳ್ಳುವಂತೆ ಹಾಗೂ ತಮ್ಮ ದಿನನಿತ್ಯದ ಜೀವನದಲ್ಲಿ ಆಂತರಿಕ ಮೌನ ದಲ್ಲಿರುವ ಶಾಂತಿಯ ಅನುಭವವನ್ನು ಪಡೆದುಕೊಳ್ಳುವಂತೆ ಮಾಡಿರುವ ಸಾಧನಗಳಲ್ಲಿ “ಸುದರ್ಶನ ಕ್ರಿಯೆ”ಯು ಅತ್ಯಂತ ಪ್ರಮುಖವಾದ ಪ್ರಕ್ರಿಯೆಯಾಗಿದೆ .

ಶಾಂತಿದೂತರು

Gurudev Sri Sri Ravi Shankar peace meditation

ಶಾಂತಿಯ ದೂತರಾಗಿ ಗುರುದೇವರು ಜಗತ್ತಿನಾದ್ಯಂತವೂ, ಘರ್ಷಣೆಗಳ ನಿವಾರಣೆಯಲ್ಲಿ ಅತಿಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಪೂಜ್ಯ ಗುರುದೇವರು, ಪ್ರಪಂಚದ ಎಲ್ಲಾ ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಸಭೆಗಳಲ್ಲಿ ತಮ್ಮ ಅಹಿಂಸಾ ದೃಷ್ಟಿಕೋನವನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತವೂ ಶಾಂತಿ ಸ್ಥಾಪನೆಯಷ್ಟೇ ಗುರುದೇವರ ಏಕೈಕ ಗುರಿಯಾಗಿದೆ . ಆದುದರಿಂದ , ಗುರುದೇವರು ನಿಷ್ಪಕ್ಷಪಾತಿಯಾಗಿ, ತಟಸ್ಥವಾಗಿರುವ ವ್ಯಕ್ತಿತ್ವದವರೆಂದು
ಪರಿಗಣಿಸಲ್ಪಟ್ಟಿದ್ದಾರೆ. ಘರ್ಷಣೆಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಜನರಿಗೆಲ್ಲಾ, ಗುರುದೇವರು ಆಶಾಕಿರಣವಾಗಿದ್ದಾರೆ. ಕೊಲಂಬಿಯಾ, ಇರಾಕ್, ದಿ ಐವರಿಕೋಸ್ಟ್, ಕಾಶ್ಮೀರ ಹಾಗೂ ಬಿಹಾರ್ ಗಳಲ್ಲಿ ವಿರುದ್ಧವಾಗಿ ಕಚ್ಚಾಡುತ್ತಿರುವ ಉಭಯ ಪಕ್ಷಗಳನ್ನು ಒಂದಾಗಿಸಿ ಸಂಧಾನವನ್ನು ಮಾಡಿದ ಕೀರ್ತಿಯು ಗುರುದೇವರಿಗೆ ಸಲ್ಲುತ್ತದೆ. ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಮತ್ತು ತಮ್ಮ ಭಾಷಣಗಳ ಮೂಲಕ, ಗುರುದೇವರು ನಿರಂತರವಾಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳನ್ನು ಉತ್ಥಾನಕ್ಕೆ ತರಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಒಂದೇ ಜಾಗತಿಕ ಕುಟುಂಬಕ್ಕೆ ಸೇರಿದವರು ಎನ್ನುವುದನ್ನು ಗುರುತಿಸಿಕೊಂಡು, ಬೇರೆ ಬೇರೆ ಧರ್ಮಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಹೊಡೆದೋಡಿಸಿ, ಸಾಮರಸ್ಯದ ಬದುಕನ್ನು ಪೋಷಿಸಿಕೊಳ್ಳಬೇಕು ಮತ್ತು ಬಹು ಸಾಂಸ್ಕೃತಿಕ ಶಿಕ್ಷಣಕ್ಕೆ ಒತ್ತು ನೀಡಿ ಮತಾಂಧತೆಯನ್ನು ಪರಿಹರಿಸಬೇಕು, ಎನ್ನುವುದು ಗುರುದೇವರ ದೃಢ ನಿಲುವಾಗಿದೆ. ಸುಸ್ಥಿರವಾದ ಶಾಂತಿಯನ್ನು ಸಾಧಿಸುವ ಯತ್ನಗಳಲ್ಲಿ ಇದು ಕೂಡ ಒಂದು ಅಂಶವಾಗಿದೆ.

ಗುರುದೇವರು ಜಗತ್ತಿನಾದ್ಯಂತವೂ ಅನೇಕ ಮಿಲಿಯ ಜನರ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮೂಲಕ , ಅವರ ಹೃದಯವನ್ನು ಸ್ಪರ್ಶಿಸಿದ್ದಾರೆ. ವಿವಿಧ ಪಂಥಗಳು, ರಾಷ್ಟ್ರೀಯತೆ ಮತ್ತು ಧಾರ್ಮಿಕ ಪಂಗಡಗಳಿಗೆ ಅತೀತವಾಗಿ, ಒತ್ತಡ-ಮುಕ್ತ ಮತ್ತು, ಹಿಂಸಾಮುಕ್ತವಾದ ವಸುಧೈವ ಕುಟುಂಬದ ಸಂದೇಶವನ್ನು ಪುನರುತ್ಥಾನಗೊಳಿಸಿದ್ದಾರೆ.

Gurudev Sri Sri Ravi Shankar

ಗುರುದೇವರನ್ನು ಭೇಟಿಯಾಗಿ

ಗುರುದೇವ ಶ್ರೀಶ್ರೀ ರವಿಶಂಕರ್ ರವರೊಂದಿಗೆ ಮುಂದಿನ ಕಾರ್ಯಕ್ರಮಗಳು

Smiling young people enjoying a program session

ಸುದರ್ಶನ ಕ್ರಿಯೆಯನ್ನು ಕಲಿಯಿರಿ

ಜಗತ್ತಿಗೆ ಗುರುದೇವರ ಅತ್ಯಂತ ವಿಭಿನ್ನ ಕೊಡುಗೆ

 

meditation during happiness program

ನಿರ್ದೇಶಿತ ಧ್ಯಾನಗಳು

ಎಲ್ಲರಿಗೂ ಲಭ್ಯವಿರುವ ಸರಳ ಮತ್ತು ಸುಲಭ ಧ್ಯಾನ!