ಹಿಂದೆಂದೂ ಅನುಭವಿಸದಿರುವ ಆನಂದದ ಅಲೆಗಳ ಅನುಭೂತಿಯನ್ನು ಪಡೆಯಿರಿ

ಜೀವನದಲ್ಲಿ ನಾವು ಮಾಡುವ ಎಲ್ಲ ಕ್ರಿಯೆಗಳು ನಮ್ಮ ಆನಂದಕ್ಕಾಗಿ ಅಲ್ಲವೇ? ಆದರೆ ದುರಾದೃಷ್ಟವಶಾತ್, ನಮಗೆ ಬೇಕಾದುದನ್ನು ಸುಲಭವಾಗಿ ಪಡೆಯಲು ಅಸಮರ್ಥರಾಗುತ್ತೇವೆ. ಆನಂದದ ಅನುಭೂತಿಯ ಕಾರ್ಯಕ್ರಮವು (ಹ್ಯಾಪಿನೆಸ್ ಪ್ರೊಗ್ರಾಮ್)  ಅಕ್ಷಯವಾದ ಸುಖದ ಮೂಲದೆಡೆಗೆ ನಿರಾಯಾಸವಾಗಿ ಬಾಂಧವ್ಯವನ್ನು ಬೆಸೆಯಬಹುದಾದ ಮಾರ್ಗಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ಈ ಮೂಲವು ನಿಮ್ಮಲ್ಲಿಯೇ ಅಡಗಿದೆ!!

ಆನಂದದ ಖಜಾನೆಯ ಕೀಲಿಕೈ ನಿಮ್ಮ ಮೂಗಿನ ತುದಿಯಲ್ಲೇ ಇದೆ.

ಉಸಿರಾಟದ ರಹಸ್ಯಗಳನ್ನು ತಿಳಿದುಕೊಳ್ಳಿ

ಅಲ್ಲಾಡಿಸಲಾಗದಂತಹ ಮುಗುಳ್ನಗೆಯನ್ನು ಹೇಗೆ ಪಡೆಯಬೇಕೆಂದು ಯಾವ ಜೀವನ ಕಲಾ ಕೇಂದ್ರದ ಶಿಕ್ಷಕರನ್ನಾದರೂ ಪ್ರಶ್ನಿಸಿರಿ. ಉತ್ತರವಾಗಿ ಅತಿ ಸರಳವಾದ ಮತ್ತು ನಿಗೂಢವಾದ ಜ್ಞಾನವನ್ನು ಪಡೆಯುವಿರಿ. ನಿಜವಾಗಿಯೂ ಇದು ಇಷ್ಟು ಸುಲಭವೇ? ಅರಿಯೋಣ ಬನ್ನಿ!

ನಮ್ಮ ಉಸಿರಾಟದ ಲಯವು ನಮ್ಮ ಭಾವನೆಗಳಿಗನುಗುಣವಾಗಿ ಬದಲಾಗುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ನೀವು ಕೋಪಗೊಂಡಾಗ ನಿಮ್ಮ ಉಸಿರಾಟವು ಯಾವ ಲಯದಲ್ಲಿ ಸಾಗುತ್ತದೆ? ಅದು ಚಿಕ್ಕ ಮತ್ತು ಪೊಳ್ಳಾದ ಉಸಿರಾಗಿರುತ್ತದೆ. ನೀವು ಸಮಾಧಾನವಾಗಿ ಮತ್ತು ಆನಂದವಾಗಿ ಇರುವಾಗ ಹೇಗಿರುತ್ತದೆ? ನೀವು ದೀರ್ಘವಾದ ಆಳವಾದ ಉಸಿರನ್ನು ತೆಗೆದುಕೊಳ್ಳುವಿರಿ. ಇದರಿಂದ ನಮ್ಮ ಭಾವನೆಗಳು ನಮ್ಮ ಉಸಿರಾಟದ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗಾದರೆ ಉಸಿರಾಟದಿಂದ ನಮ್ಮ ನಕಾರತ್ಮಕ ಭಾವನೆಗಳನ್ನು ಪರಿವರ್ತಿಸಬಹುದೆ? ನಿಸ್ಸಂಶಯವಾಗಿ..

ಸುದರ್ಶನ ಕ್ರಿಯೆಯ ಮೂಲಕ ಜೀವನದಲ್ಲಿ ಆನಂದದ ಸಹಜ ಲಯವನ್ನು ಮರುಸ್ಥಾಪಿಸಿಕೊಳ್ಳಿ

ಪ್ರಾಚೀನ ಜ್ಞಾನದ ಸಮಕಾಲೀನ ಅಳವಡಿಕೆ

ನಮ್ಮ ದೇಹದ ಬಹುತೇಕ ಕಲ್ಮಷಗಳು ಉಸಿರಿನ ಮೂಲಕ ಹೊರ ಹೋಗುತ್ತವೆ. ಮಾನಸಿಕ ಹಾಗೂ ದೈಹಿಕ ಒತ್ತಡಗಳನ್ನು ಈ ಮೂಲಕ ಗಣನೀಯ ಪ್ರಮಾಣದಲ್ಲಿ ದೇಹದಿಂದ ಹೊರ ಹಾಕಿದಾಗ ಜೀವನದ ಬಗ್ಗೆ ನಿಮಗೆ ಇರುವ  ದೃಷ್ಟಿಕೋನವೇ ಬದಲಾಗುತ್ತದೆ.

 

ಒಂದು ಅನನ್ಯವಾದ ಮತ್ತು ಗಹನವಾದ ಉಸಿರಾಟದ ಪ್ರಕ್ರಿಯೆಯು ಜೀವನ  ಕಲಾ ಸಂಸ್ಥೆಯ 'ಆನಂದದ ಅನುಭೂತಿ' ಶಿಬಿರದ ಕೇಂದ್ರ ಬಿಂದು. ಶರೀರ, ಮನಸ್ಸು ಮತ್ತು ಆತ್ಮಗಳನ್ನು ತಮ್ಮ  ಸಹಜವಾದ ಲಯಕ್ಕೆ ಮರುಸ್ಥಾಪಿಸುವ ಪ್ರಾಯೋಗಿಕ ಉಪಕರಣವಾದ ಸುದರ್ಶನ ಕ್ರಿಯೆಯು ಕೋಟ್ಯಾಂತರ ಜೀವನಗಳನ್ನು ಸಕಾರಾತ್ಮಕವಾಗಿ  ಪರಿವರ್ತಿಸಿದೆ.
ಇದರ ಆನನ್ಯತೆಯು ಕೇವಲ ಕಾರ್ಯಾಚರಣೆಯಲ್ಲಿ ಮಾತ್ರವಲ್ಲದೇ ಆವಿರ್ಭಾವದಲ್ಲಿಯೂ ಕೂಡ ಕಾಣಿಸುತ್ತದೆ. ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ್ ಅವರಿಗೆ ಹತ್ತು ದಿನಗಳ ಕಾಲದ ಗಾಢವಾದ ಮೌನದ ನಂತರ ಸುದರ್ಶನ ಕ್ರಿಯೆಯ ಸ್ಫುರಣೆಯಾಗಿದೆ.

ಆನಂದದ ಅನುಭೂತಿಯ ಕಾರ್ಯಗಾರದಲ್ಲಿ ಸುದರ್ಶನ ಕ್ರಿಯೆಯೊಂದಿಗೆ ಇತರ ಉಸಿರಾಟದ ಪ್ರಭಾವಶಾಲಿ ಪ್ರಕ್ರಿಯೆಗಳು,ಯೋಗ ಮತ್ತು ಧ್ಯಾನವನ್ನೂ ಸಹ ಕಲಿಸಿಕೊಡಲಾಗುವುದು. ನಿಮಗೆ ಹಿಂದೆಂದೂ ಆಗಿರದ ಆನಂದದ ಅನುಭೂತಿಯನ್ನು ಪಡೆಯಲು ಬೇಕಿರುವುದು ಇಷ್ಟೇ.

ಒಮ್ಮೆ ಇದರಲ್ಲಿ ಧುಮುಕುವ ಸಾಹಸವನ್ನು ಮಾಡಿ !

ಆನಂದದ ಅನುಭೂತಿಯ ಶಿಬಿರವನ್ನು ಅನುಭವಿಸಿ

ನೀರಿನಲ್ಲಿ ಇಳಿಯದ ಹೊರತು ಈಜುವ ಅನುಭವ ಹೇಗಿರುತ್ತದೆಂದು ತಿಳಿಯಬಹುದೇ? ನಮ್ಮ ಪ್ರಮಾಣೀಕೃತ ಶಿಕ್ಷಕರು ಪ್ರತಿಯೊಂದು ಹಂತದಲ್ಲೂ ನಿಮ್ಮ ಕೈಹಿಡಿದು ನಿಮಗೆ ಆನಂದದ ಅನುಭೂತಿಯನ್ನು ಪಡೆಯಲು ಸುಲಲಿತವಾದ ಮಾರ್ಗದರ್ಶನವನ್ನು ನೀಡುತ್ತಾರೆ.

ಯಾವ ವಯಸ್ಸಿನ, ಹಿನ್ನಲೆಯ, ದೈಹಿಕ ಸಿದ್ದತೆಯ ನಿರ್ಬಂಧವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದ ಸೂಕ್ಷ್ಮ ಅನುಭವವನ್ನು ಆಸ್ವಾದಿಸಬಹುದು. ಮೂಲತಃ ನೀವು ಒಬ್ಬ ಮಾನವರೆಂಬ ಅರ್ಹತೆಯೇ ಸಾಕು.

ಜೀವನದುದ್ದಕ್ಕೂ ಉಪಯುಕ್ತವಾಗುವ ಸರಳ ಮತ್ತು ಪ್ರಾಯೋಗಿಕ ಜ್ಞಾನ, ಶಾಂತಿ, ಸ್ವಾಸ್ಥ್ಯ ಮತ್ತು ಹತ್ತು ಹಲವು ಪ್ರಯೋಜನಗಳನ್ನು ಈ ಕಾರ್ಯಕ್ರಮದಿಂದ ಪಡೆಯುತ್ತೀರಿ

ಸಂತೋಷವಾದ ಮನಸ್ಸು ನಿಮ್ಮನ್ನು ಪ್ರಶಾಂತವಾಗಿಸುತ್ತದೆ, ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಜೀವನದ ಸಮಗ್ರ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಕೆಳಗಿರುವ ಆವರಣದಲ್ಲಿ ನಿಮ್ಮ ಮಾಹಿತಿಯನ್ನು ನೀಡಿ ಈ ಪರಮಾನಂದವು ನಿಮ್ಮ ಜೀವನವನ್ನು ಹೇಗೆ ನವೀಕರಿಸಬಲ್ಲದು ಎಂದು ತಿಳಿಯಿರಿ.