ಕೋಪ ಎಂದರೇನು ಮತ್ತು ಅದು ಎಷ್ಟೊಂದು ಹಾನಿಯನ್ನು ಉಂಟು ಮಾಡುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಕೋಪವು ಎಲ್ಲಾ ವಿಧದ ಸಂಬಂಧಗಳನ್ನು ಹಾಳುಮಾಡುತ್ತದೆ; ಮತ್ತು ಕೆಲವೊಮ್ಮೆ ನಾವು ನಮ್ಮಗೌರವವನ್ನೇ ಕಳೆದುಕೊಳ್ಳುವ ಹಾಗೆ ಮಾಡುತ್ತದೆ. ಇದು ಅತ್ಯಂತ ಅಪಾಯಕಾರಿ ಎನ್ನುವುದು ನಮಗೆಲ್ಲ ತಿಳಿದಿದೆ. ತೀವ್ರವಾದ ಕೋಪದಿಂದ ನಡುಗುವವರು, ‘ಕೋಪಿಸಿಕೊಳ್ಳಬೇಡಿ, ಇದು ನಿಮಗೆ ಒಳ್ಳೆಯದಲ್ಲ’ ಎನ್ನುವ ಪದಗಳನ್ನು ಎಲ್ಲರ ಕೈಯಲ್ಲೂ ಎಷ್ಟೋ ಮಿಲಿಯ ಬಾರಿ ಕೇಳಿಸಿಕೊಂಡಿರುತ್ತಾರೆ. ಆದರೆ ,’ಕೋಪಗೊಳ್ಳದೆ ಇರುವುದು ಹೇಗೆ’ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರುವುದು ಮಾತ್ರ ಕೆಲವೇ ಕೆಲವರಿಗೆ! ಸರಿ! ನಾವು ಇಂದು ಅದರ ಬಗ್ಗೆ ಮಾತನಾಡುತ್ತೇವೆ – ಕೋಪದ ನಿರ್ವಹಣೆಯ ಮಾರ್ಗಗಳು.
-
ಕೋಪವು ನಿಮ್ಮ ನಿಯಂತ್ರಣದಲ್ಲಿ ಇರುವವರೆಗೆ ,ಅದು ಕೆಟ್ಟದ್ದಲ್ಲ, ಮತ್ತು ನೀವು ಅದನ್ನು ಮಿತವಾಗಿ ಬಳಸಿದರೆ, ಅದು ಸರಿಯಾಗಿ ಕೆಲಸ ಮಾಡುತ್ತದೆ.
-
ನೀವು ಕೋಪಗೊಳ್ಳಬಹುದು, ಕೂಗಾಡಬಹುದು ಮತ್ತು ಅಸಮಾಧಾನಗೊಳ್ಳಬಹುದು;ಏನು ಬೇಕಾದರೂ ಮಾಡಬಹುದು.ಆದರೆ ನಿಮ್ಮ ಕೋಪವು, ನೀರಿನ ಮೇಲ್ಮೈಯಲ್ಲಿ ಒಂದು ರೇಖೆ ಎಳೆದರೆ ಇರುವಷ್ಟು ಹೊತ್ತು ಮಾತ್ರ ಇರಬೇಕು. ಆಗ ಮಾತ್ರ ಅದು ಆರೋಗ್ಯಕರವಾಗಿರುತ್ತದೆ.
-
ನಿಮ್ಮ ನಗುವನ್ನು ಅಗ್ಗವಾಗಿ ಮಾಡಿಕೊಳ್ಳಿ ಮತ್ತು ಕೋಪವನ್ನು ದುಬಾರಿಯನ್ನಾಗಿ ಮಾಡಿ!
-
ನಿಮ್ಮ ಮನಸ್ಸು, ಭಯದಿಂದ , ಆತ್ಮಗ್ಲಾನಿಯಿಂದ ಮತ್ತು ಕೋಪದಿಂದ ಮುಕ್ತವಾಗಿ ಹೆಚ್ಚು ಕೇಂದ್ರೀಕೃತವಾಗಿರುವಾಗ, ಅದಕ್ಕೆ ಯಾವುದೇ ರೀತಿಯ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯು ಬರುತ್ತದೆ.
-
ಯಾವುದೇ ಒಂದು ತಪ್ಪನ್ನು,’ಇದು ಒಂದು ತಪ್ಪು’ಎಂದು ಮಾತ್ರ ನೋಡಿ!”ನನ್ನ ತಪ್ಪು” ಅಥವಾ “ಅವನ ತಪ್ಪು” ಎಂದು ಪರಿಗಣಿಸಬೇಡಿ . ‘ನನ್ನದು’ ಎಂದರೆ ಆತ್ಮಗ್ಲಾನಿ; “ಅವನದು” ಎಂದುಕೊಂಡಾಗ ‘ಕೋಪ’ ವು ನಿಶ್ಚಿತ.
-
ನಿಮ್ಮ ಕೋಪಕ್ಕೆ ಕಾರಣ- ದುರಾಸೆ, ಅಸೂಯೆ, ಕೋಪ, ದ್ವೇಷ ಅಥವಾ ಹತಾಶೆಯಾಗಿರಬಹುದು. ಈ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಯೋಗದ ಮೂಲಕ ಗುಣಪಡಿಸಬಹುದಾಗಿದೆ.
-
ಪರಿಪೂರ್ಣತೆಯನ್ನು ಬಯಸುತ್ತಿರುವುದು ನಿಮ್ಮ ಕೋಪಕ್ಕೆ ಕಾರಣವಾಗಿದೆ. ಅಪರಿಪೂರ್ಣತೆಗೂ ಸ್ವಲ್ಪ ಅವಕಾಶವನ್ನು ಮಾಡಿಕೊಡಿ. ಕ್ರಿಯೆಗಳಲ್ಲಿ ಪರಿಪೂರ್ಣತೆಯು ಎಂದೂ ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
-
ಕೋಪವು ಅರ್ಥಹೀನವಾದುದು. ಏಕೆಂದರೆ ಅದು ಯಾವಾಗಲೂ ಈಗಾಗಲೇ ಕಳೆದುಹೋದ ವಿಷಯದ ಬಗ್ಗೆಯಾಗಿದೆ.
-
ಈಗಾಗಲೇ ಸಂಭವಿಸಿದ ವಿಷಯದ ಬಗ್ಗೆ ಕೋಪಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಮತ್ತೆ ಸಂಭವಿಸದಂತೆ ಪರಿಶೀಲಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡಬಹುದಾಗಿದೆ.