ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕಳೆದ ಐದು ದಶಕಗಳಿಂದ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣವು ಹೆಚ್ಚಾಗುತ್ತಿದೆ. ಯುವ ಪೀಳಿಗೆಯಲ್ಲಿಯೇ ಈ ಸಮಸ್ಯೆಯು  ಅಧಿಕವಾಗಿದೆ. ಹಿಂದಿನ ತಲೆಮಾರಿನವರು ಹೆಚ್ಚಾಗಿ   ಸ್ಥಿತಪ್ರಜ್ಞರಂತೆ ತಮ್ಮ ಬಾಳನ್ನು ಸಾಗಿಸುತ್ತಿದ್ದರು. ಈಗಿನ ದಿನಗಳಲ್ಲಿ ಜೀವನವು ಹೆಚ್ಚು ಆರಾಮದಾಯಕವಾಗಿದೆ. ನಿಮ್ಮ ಆಸೆಗಳು ಕೂಡ ಬಲುಬೇಗನೆ ಈಡೇರುತ್ತಿವೆ, ಆದ್ದರಿಂದಲೇ ನೀವು ಹೆಚ್ಚು ಖಿನ್ನತೆಗೆ ಒಳಗಾಗುತ್ತಿರುವಿರಿ. ಯಾವುದೇ ರೀತಿಯಲ್ಲಿ ನೀವು ಹೆಚ್ಚು ಶ್ರಮಪಡಬೇಕಾಗಿಲ್ಲ. ಸುಲಭವಾಗಿ ನಿಮಗೆ ಬೇಕಾದುದೆಲ್ಲವೂ ದೊರೆಯುತ್ತದೆ.  ಹಾಗಾಗಿ ನಿಮ್ಮ ಮನಸ್ಸು ಯಾವಾಗಲೂ ಅಲೆದಾಡುತ್ತಲೇ ಇರುತ್ತದೆ.

ನಿಮ್ಮ ಮನಸ್ಸಿಗೆ ಏನಾದರೂ ಒಂದು ಚಟುವಟಿಕೆಯು  ಬೇಕು. ಆದುದರಿಂದ ಏನನ್ನಾದರೂ ಮಾಡಬೇಕೆಂದು ಅದು ಚಡಪಡಿಸುತ್ತಲೇ ಇರುತ್ತದೆ. ನೀವು ಯಾವುದಾದರೂ ದೈಹಿಕ ಚಟುವಟಿಕೆಯನ್ನು ಮಾಡುತ್ತಿರುವಾಗ, ಓಡುತ್ತಿರುವಾಗ ಅಥವಾ  ಯಾವುದೋ ಒಂದು ಉತ್ತಮವಾದ ವ್ಯಾಯಾಮವನ್ನು ಮಾಡುತ್ತಿರುವ ಕ್ಷಣದಲ್ಲಿ,  ನಿಮ್ಮ ಮನಸ್ಸು ಕೆಲಸ ಮಾಡದೆ, ಸ್ಥಗಿತವಾಗಿರುತ್ತದೆ.. ಆದರೆ ನೀವು  ಸಾಮಾಜಿಕ ಮಾಧ್ಯಮವನ್ನು ನೋಡುತ್ತಾ, ಸುಮ್ಮನೆ ಕುಳಿತುಕೊಂಡಿದ್ದರೆ, ಆಗ ನಿಮ್ಮ ಮನಸ್ಸು ಚಡಪಡಿಸುತ್ತಿದ್ದು, ನಾಗಾಲೋಟದಲ್ಲಿ ಓಡುತ್ತಿರುತ್ತದೆ. ಮತ್ತು ಕ್ರಮೇಣ ಇದು ಖಿನ್ನತೆಗೆ ಕಾರಣವಾಗಲೂಬಹುದು.

ಖಿನ್ನತೆಯು ಎಲ್ಲಿಂದ ಬರುತ್ತದೆ?

  • ಕುಂಠಿತವಾದ ಪ್ರಾಣಶಕ್ತಿ: ನಿಮ್ಮಲ್ಲಿ ಪ್ರಾಣಶಕ್ತಿಯು ಕಡಿಮೆಯಾದಾಗ ಖಿನ್ನತೆಯುಂಟಾಗುತ್ತದೆ.  ಪ್ರಾಣ ಶಕ್ತಿಯು ಸಮರ್ಪಕವಾಗಿದ್ದು, ಸರಿಯಾದ ಪ್ರಮಾಣದಲ್ಲಿರುವಾಗ ನೀವು ಆರಾಮವಾಗಿರುತ್ತೀರಿ. ಪ್ರಾರಂಭದಲ್ಲಿ ಪ್ರಾಣಶಕ್ತಿಯು ಕಡಿಮೆಯಾಗುತ್ತಾ ಹೋದಂತೆ, ನಿಮ್ಮ ಮನಸ್ಸಿನಲ್ಲಿ ನಿರಾಸಕ್ತಿಯು ಮೂಡುವುದು. ಕ್ರಮೇಣ ಇದು ಅಧಿಕವಾಗುತ್ತಾ ಹೋದಂತೆ, ನೀವು ಖಿನ್ನತೆಗೆ ಒಳಗಾಗುತ್ತೀರಿ.  ಮತ್ತಷ್ಟು ಕುಂಠಿತವಾದಾಗ, ನೀವು ನಿಮ್ಮ ಇಚ್ಚಾಶಕ್ತಿಯನ್ನೇ ಕಳೆದುಕೊಳ್ಳುತ್ತೀರಿ.
  • ನನ್ನ ಬಗ್ಗೆ ಏನು? ಸುಮ್ಮನೆ ಕುಳಿತುಕೊಂಡು ನನ್ನ ಬಗ್ಗೆ ಏನು…? ನನ್ನ ಬಗ್ಗೆ ಏನು…? ನನ್ನ ಬಗ್ಗೆ ಏನು…? ಎಂದು ಆಲೋಚಿಸಿದರೆ…. ಇದುವೇ ಖಿನ್ನತೆಗೆ ಒಳಗಾಗುವ  ಒಂದು ಸುಲಭದ ಮಾರ್ಗವಾಗಿದೆ. ನೀವು ಸುಮ್ಮನೆ ಕುಳಿತುಕೊಂಡು ನಿಮ್ಮ ಬಗ್ಗೆ ಮಾತ್ರ ಯೋಚಿಸುತ್ತೀರಿ. ನನ್ನ ಬಗ್ಗೆ ಏನು..? ನನಗೆ ಏನಾಗುತ್ತದೆ…? ನನಗೆ ಏನಾಗುತ್ತದೆ….? ನಿಮಗೆ ಏನಾಗುತ್ತದೆ? ಮುಂದೆ ಒಂದು ದಿನ ನೀವು ನೆಲದಡಿಯಲ್ಲಿ ಸಮತಲವಾಗಿ ಮಲಗುತ್ತೀರಿ. ಅಷ್ಟೇ!
  • ಮೆಚ್ಚುಗೆಯ ಕೊರತೆ: ಬೇಸರಿಕೆಯಿಂದಾಗಿ ನೀವು ಹತಾಶೆ ಮತ್ತು ಖಿನ್ನತೆಗೊಳಗಾಗಿದ್ದರೆ,ಬೇಸರಿಕೆಯು ಒಂದು ಶಾಪವೇ ಸರಿ! ಜೀವನದಲ್ಲಿ, ನೀವು ಯಾವುದನ್ನೂ ಆರಾಧಿಸದಿದ್ದರೆ ಅಥವಾ ಮೆಚ್ಚದಿದ್ದರೆ, ಆಗ ನೀವು ಸಂಪೂರ್ಣವಾಗಿ ನಕಾರಾತ್ಮಕತೆಯಿಂದ ತುಂಬುತ್ತೀರಿ; ಪೂಜಿಸಲು ಅಥವಾ ಆರಾಧಿಸಲು ಏನೂ ಇಲ್ಲದ ವ್ಯಕ್ತಿಯು ಖಿನ್ನತೆಗೆ ಒಳಗಾಗುವುದು ಖಚಿತ.
  • ಎಲ್ಲವೂ ಸ್ಥಿರವಾಗಿದೆ ಎನ್ನುವ ತಿಳುವಳಿಕೆ: “ಜೀವನವು ಯಾವಾಗಲೂ ಹೀಗೆಯೇ ಇರುವುದು; ಅದು ಯಾವತ್ತೂ ಬದಲಾಗುವುದೇ ಇಲ್ಲ” ಎಂಬ ತಿಳುವಳಿಕೆಯು ಖಿನ್ನತೆಗೆ ಎಡೆ ಮಾಡಿಕೊಡುತ್ತದೆ. ಜೀವನದಲ್ಲಿ ಎಲ್ಲವೂ ಸತ್ತು ಹೋಗಿದೆ; ನಿಷ್ಕ್ರಿಯವಾಗಿದೆ, ಇನ್ನೇನೂ ಉಳಿದಿಲ್ಲ, ಹೋಗಲು ಯಾವ ಜಾಗವೂ ಇಲ್ಲ ಎಂದು ನೀವು ಭಾವಿಸಿದರೆ, ಆಗ ನೀವು ಖಿನ್ನತೆಗೆ ಒಳಗಾಗುತ್ತೀರಿ.

ಖಿನ್ನತೆಯನ್ನು ಮತ್ತು ಆತಂಕವನ್ನು ನಿವಾರಿಸುವುದು ಹೇಗೆ?

  • ಶೌರ್ಯವನ್ನು ಜಾಗೃತಗೊಳಿಸಿ: ಮೊದಲನೆಯದಾಗಿ, ನಿಮ್ಮೊಳಗಿನ ವೀರ್ಯ ಶಕ್ತಿಯನ್ನು ಜಾಗೃತಗೊಳಿಸಿ. ನಿಮ್ಮದೇ ಬದುಕನ್ನು ನೀವು ಹಿಂತಿರುಗಿ ನೋಡಿದಾಗ , ಈ ಹಿಂದೆ ಕೂಡಾ ಇದೇ ರೀತಿಯ  ಎಷ್ಟೋ ಸಮಸ್ಯೆಗಳನ್ನು  ಎದುರಿಸಿ, ಅವುಗಳನ್ನು ನೀವು ಜಯಿಸಿದ್ದೀರಿ ಎನ್ನುವುದರ ಅರಿವು ನಿಮಗಾಗುತ್ತದೆ. ಹಾಗೆಯೇ , ಇದನ್ನು ಕೂಡಾ ನೀವು ಜಯಿಸಬಲ್ಲಿರಿ , ಎನ್ನುವ ಆತ್ಮವಿಶ್ವಾಸವು ನಿಮ್ಮಲ್ಲಿ ಮೂಡಿ ಬರುತ್ತದೆ.
  • ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸಿ: ದೊಡ್ಡ ದೊಡ್ಡ ಸಮಸ್ಯೆಗಳನ್ನು ನೋಡಿ. ಇಡೀ ಜಗತ್ತನ್ನು ವೀಕ್ಷಿಸಿ ನೋಡಿ – ಅಲ್ಲಿ ಅತ್ಯಂತ ಅಗಾಧವಾಗಿರುವ ಮತ್ತು ಅತಿ ದೊಡ್ಡ ಸಮಸ್ಯೆಗಳಿವೆ. ಅವುಗಳಿಗೆ ಹೋಲಿಸಿದಾಗ ನಿಮ್ಮ ಸಮಸ್ಯೆಗಳು ಅತಿ ಚಿಕ್ಕದಾಗಿ ಕಾಣಿಸುತ್ತವೆ. ನಿಮ್ಮ ಸಮಸ್ಯೆಗಳು ಚಿಕ್ಕದಾಗಿ ಕಾಣಿಸಿಕೊಂಡ ಕ್ಷಣವೇ, ಅವುಗಳನ್ನು ಎದುರಿಸಲು ಅಥವಾ ಅವುಗಳನ್ನು ಪರಿಹರಿಸಲು ನೀವು ಶಕ್ತರಾಗುತ್ತೀರಿ ಮತ್ತು ಮರಳಿ ಆತ್ಮವಿಶ್ವಾಸವನ್ನು ಪಡೆಯುತ್ತೀರಿ.
    ಸಂತೋಷಕ್ಕೊಂದು ‘ರೇಖೆ’! ಒಮ್ಮೆ, ಒಬ್ಬ ಬುದ್ಧಿವಂತ ವ್ಯಕ್ತಿಯು ಒಂದು ಹಲಗೆಯ ಮೇಲೆ ಒಂದು ಗೆರೆಯನ್ನು ಎಳೆದನು ಮತ್ತು ಅದನ್ನು ಮುಟ್ಟದೆ ಅಥವಾ ಅಳಿಸದೆಯೇ ರೇಖೆಯನ್ನು ಚಿಕ್ಕದಾಗಿ ಮಾಡಲು ತನ್ನ ವಿದ್ಯಾರ್ಥಿಗಳಿಗೆ ಹೇಳಿದನು. “ನೀವು ಅದನ್ನು ಹೇಗೆ ಮಾಡುತ್ತೀರಿ? ನೀವು ಅದನ್ನು ಮುಟ್ಟದೆ ರೇಖೆಯನ್ನು ಚಿಕ್ಕದು ಮಾಡಬೇಕು”, ಎಂದು ಅವನು ಹೇಳಿದನು.ಅವರಲ್ಲಿ ಒಬ್ಬ ಜಾಣ ವಿದ್ಯಾರ್ಥಿಯು ಎದ್ದು ಬಂದು,  ಆ ರೇಖೆಯ ಕೆಳಗೆ , ಅದಕ್ಕಿಂತ ಹೆಚ್ಚು ಉದ್ದವಾದ ಇನ್ನೊಂದು ರೇಖೆಯನ್ನು ಎಳೆದನು. ಆಗ, ಮೊದಲಿನ ಗೆರೆಯು ತನ್ನಿಂತಾನೇ  ಚಿಕ್ಕದಾಗಿ ಕಾಣಿಸಿತು. ಇಲ್ಲಿ, ನಾವು ಕಲಿಯಬೇಕಾಗಿರುವ ಪಾಠವೆಂದರೆ, ನಿಮಗೆ ನಿಮ್ಮ ಕಷ್ಟಗಳು ತುಂಬಾ ದೊಡ್ಡದಾಗಿ ಕಂಡುಬಂದರೆ, ಆ ಕ್ಷಣವೇ ನೀವು ಕಣ್ಣುಗಳನ್ನೆತ್ತಿ ಸುತ್ತಲೂ ಮೇಲೆ ನೋಡಿ. ಯಾಕೆಂದರೆ ನೀವು ನಿಮ್ಮ ಮೇಲೆ ಮಾತ್ರ ಗಮನಹರಿಸುತ್ತಿದ್ದೀರಿ. ನೀವು ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಕಷ್ಟದಲ್ಲಿರುವ ಇತರರನ್ನು ನೋಡಿದಾಗ, ನಿಮ್ಮ ತೊಂದರೆಗಳು, ನೀವು ಮೊದಲು ಚಿಂತಿಸಿದಷ್ಟು ಕೆಟ್ಟದಾಗಿಲ್ಲ ಎಂದು ನೀವು ಇದ್ದಕ್ಕಿದ್ದಂತೆ ಭಾವಿಸಲು ಪ್ರಾರಂಭಿಸುತ್ತೀರಿ. ನಿಮಗೆ ಏನಾದರೂ ದೊಡ್ಡ ಸಮಸ್ಯೆ ಇದೆ ಎಂದು ಅನಿಸಿದರೆ, ಇನ್ನೂ ಹೆಚ್ಚಿನ ಸಮಸ್ಯೆಯನ್ನು ಹೊಂದಿರುವ ಜನರನ್ನು ನೋಡಿ. ಇದ್ದಕ್ಕಿದ್ದಂತೆ, “ನನ್ನ ಸಮಸ್ಯೆ ತುಂಬಾ ಚಿಕ್ಕದಾಗಿದೆ ಮತ್ತು ನಾನು ಅದನ್ನು ನಿಭಾಯಿಸಬಲ್ಲೆ” ಎಂಬ ವಿಶ್ವಾಸವನ್ನು ನೀವು ಪಡೆಯುತ್ತೀರಿ.
  • ಸೇವೆ ಮಾಡಲು ಬದ್ಧರಾಗಿರಿ: ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ. ನೀವು ಇತರರಿಗೆ ಪ್ರಯೋಜನಕಾರಿಯಾಗಿರುವ  ಯಾವುದಾದರೊಂದು  ಕೆಲಸದಲ್ಲಿ ನಿಮ್ಮ ಶಕ್ತಿಯನ್ನು ಕೇಂದ್ರೀಕರಿಸಿ,ನಿಮ್ಮ ಬದುಕಿನ ಉದ್ದೇಶವನ್ನು ಕಂಡುಕೊಳ್ಳಿ. ಸಂತೋಷದ ಹಿಂದೆ ಓಡುವ ಬದಲು ಇತರರ ಜೀವನದಲ್ಲಿ ಸಂತೋಷವನ್ನು ತರುವುದು ಅತ್ಯಂತ ಅರ್ಥಪೂರ್ಣ ಹಾಗೂ ಮಹತ್ವಪೂರ್ಣವಾದ ಕೆಲಸವಾಗಿದೆ. ಯಾರಿಗೆ ನಿಮ್ಮ ಸಹಾಯವು ಅತ್ಯಂತ ಅವಶ್ಯವಾಗಿದೆಯೋ ಅವರಿಗೆ ಸೇವೆಯನ್ನು ಮಾಡಿ. ಇತರರೊಂದಿಗೆ ಹಂಚಿಕೊಳ್ಳಲು ಮತ್ತು ಸೇವೆ ಸಲ್ಲಿಸಲು ನಿಮ್ಮನ್ನು ನೀವು ತೊಡಗಿಸಿಕೊಂಡಾಗ, ನಿಮ್ಮ ಸಮಸ್ಯೆಯು ಚಿಕ್ಕದಾಗಿ ಕಾಣಿಸುತ್ತದೆ. ನೀವು ಯಾವಾಗಲೂ ನಿಮ್ಮ ಬಗ್ಗೆಯೇ ಯೋಚಿಸುತ್ತಿದ್ದರೆ, ನಿಮ್ಮ ಸಮಸ್ಯೆಗೆ ಪರಿಹಾರವೇ ಇಲ್ಲದಂತೆ ಕಾಣುತ್ತದೆ. ಆದರೆ ನೀವು ವಿಶಾಲ ಮನೋಭಾವದೊಂದಿಗೆ,ಈ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು  ದೃಷ್ಟಿಸಿ ನೋಡಿದಾಗ, ನಿಮ್ಮ ಸಮಸ್ಯೆಯಲ್ಲಿ ನೀವು ಮಾತ್ರ ಒಬ್ಬಂಟಿಯಾಗಿಲ್ಲ , ಎನ್ನುವುದು ನಿಮಗೆ ಸ್ಪಷ್ಟವಾಗಿ ವೇದ್ಯವಾಗುತ್ತದೆ.
  • ನಿಮ್ಮ ಮನಸ್ಸನ್ನು ಬಲಪಡಿಸಿಕೊಳ್: ನಿಮ್ಮೊಳಗೆ, ನಿಮ್ಮ ಆತ್ಮನಲ್ಲಿ ಅಗಾಧವಾಗಿ ತುಂಬಿರುವ ನಿಮ್ಮ ಆಂತರಿಕ ಶಕ್ತಿಯ ಮೇಲೆ ವಿಶ್ವಾಸವನ್ನು ಇಡಿ. ನೀವು ಏನನ್ನು ಬಿತ್ತುತ್ತೀರೋ ಅದರ ಫಲವನ್ನೇ ಪಡೆಯುತ್ತೀರಿ. ನೀವು ನಿಮ್ಮ ಪ್ರಜ್ಞೆಯಲ್ಲಿ ಹೆಚ್ಚು ಹೆಚ್ಚು ಸಕಾರಾತ್ಮಕ ಬೀಜಗಳನ್ನು ಬಿತ್ತುವುದರಿಂದ ನಿಮ್ಮ ಮನಸ್ಸು ನಕಾರಾತ್ಮಕತೆಗಿಂತ ಹೆಚ್ಚು ಸಕಾರಾತ್ಮಕತೆಯನ್ನು ಆಕರ್ಷಿಸಲು ಪ್ರಾರಂಭಿಸುತ್ತದೆ.
  • ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ: ನೀವು ಯಾರಿಗಾದರೂ ಔಷಧಿ ನೀಡುತ್ತಲೇ ಇದ್ದರೆ, ಇದು ಸ್ವಲ್ಪ ಸಮಯದವರೆಗೆ ಕೆಲಸ ಮಾಡಬಹುದು. ತದನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆದುದರಿಂದ ಔಷಧವೇ ಎಲ್ಲದಕ್ಕೂ ಪರಿಹಾರವಲ್ಲ. ಹಾಗಾದರೆ ನೀವು ಇನ್ನೇನು ಮಾಡಬಹುದು? ನೀವು ನಿಮ್ಮ ಪ್ರಾಣಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.ವ್ಯಾಯಾಮ, ಸರಿಯಾದ ಆಹಾರ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ, ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ನಿಮ್ಮಲ್ಲಿ ಪ್ರಾಣ ಶಕ್ತಿಯು ಹೆಚ್ಚಾಗುತ್ತದೆ . ಧ್ಯಾನವು ನಿಮ್ಮಲ್ಲಿ ಚುರುಕುತನ,  ತೀಕ್ಷ್ಣತೆ ಮತ್ತು ಸಂತೋಷಗಳನ್ನು   ಮೂಡಿಸಿ,ನಿಮ್ಮ ಪ್ರಜ್ಞೆಯನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವುದು ಹಾಗೂ ನಿಮ್ಮ ಅಂತ :ಪ್ರಜ್ಞೆಯನ್ನು ಜಾಗೃತಗೊಳಿಸುವುದು.ಇದು ನಿಮ್ಮನ್ನು ಈ ವರ್ತಮಾನ ಕ್ಷಣದಲ್ಲಿ  ಜೀವಕಳೆಯಿಂದ ತುಂಬುವಂತೆ ಮಾಡಿ , ಭೂತಕಾಲದ ಎಲ್ಲಾ ಕ್ಷೋಭೆಗಳಿಂದ ನಿಮ್ಮನ್ನು ಮುಕ್ತರನ್ನಾಗಿ ಮಾಡುತ್ತದೆ. ನಿಮ್ಮಲ್ಲಿ ಪ್ರಾಣಶಕ್ತಿಯು ಹೆಚ್ಚಾದಾಗ, ನೀವು ಲವಲವಿಕೆಯೊಂದಿಗೆ ಉತ್ಸಾಹದಿಂದ ಮತ್ತು ಸಂತೋಷದಿಂದ ಇರುತ್ತೀರಿ. ಈ ಆನಂದವು  ಪರಿಪೂರ್ಣವಾಗಿ  ದೊರೆತಾಗ ನೀವು ಪರಮಾನಂದದ ಸಮಾಧಿಸ್ಥಿತಿಯ ಅನುಭವವನ್ನು ಧ್ಯಾನದಲ್ಲಿ ಪಡೆದುಕೊಳ್ಳುತ್ತೀರಿ.  ಆದುದರಿಂದಲೇ ನಮ್ಮ ಆಂತರ್ಯದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ.
  • ಸಹಜವಾಗಿರಿ!!: ನಿಮ್ಮೊಳಗೆ ಆಳವಾಗಿ ಹೋಗಲು ನೀವು ಕೆಲವು ನಿಮಿಷಗಳನ್ನು ಮೀಸಲಿಟ್ಟಾಗ ಸ್ವಯಂಪ್ರೇರಣೆಯಿಂದಾಗಿ ಸಹಜತೆಯು ತನ್ನಂತಾನೇ ಮೂಡಿಬರುತ್ತದೆ. ಎಲ್ಲವೂ ಸರಿಯಾಗಿರುವಾಗ ಮತ್ತು ನಿಮಗೆ ಬೇಕಾದ ಹಾಗೆ ಎಲ್ಲವೂ ನಡೆಯುತ್ತಿರುವಾಗ, ನೀವು ನಗುನಗುತ್ತಾ ಇರುವುದರಲ್ಲಿ ಯಾವುದೇ ವಿಶೇಷವಿಲ್ಲ. ಆದರೆ ನೀವು ನಿಮ್ಮೊಳಗಿನ ಶೌರ್ಯವನ್ನು ಜಾಗೃತಗೊಳಿಸಿ, ‘ಏನೇ ಆಗಲಿ, ಏನೇ ಬರಲಿ, ನಾನು ನಗು ನಗುತ್ತಾ ಇರುತ್ತೇನೆ’ ಎಂದು ಹೇಳಿದರೆ, ಆಗ ನಿಮ್ಮೊಳಗಿನಿಂದ ಹೊರಹೊಮ್ಮುವ ಪ್ರಚಂಡ ಶಕ್ತಿಯನ್ನು ನೀವು ಗುರುತಿಸಬಹುದು. ಹೀಗಾದಾಗ, ಸಮಸ್ಯೆಗಳು ಏನೂ ಅಲ್ಲ; ಅವುಗಳು ತಮ್ಮಷ್ಟಕ್ಕೆ ಬಂದು, ಬಂದ ಹಾಗೆಯೇ ಮಾಯವಾಗುತ್ತವೆ ಅಷ್ಟೇ!
  • ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ನೀವು ಯಾರಿಗಾದರೂ ಔಷಧಿ ನೀಡುತ್ತಲೇ ಇದ್ದರೆ, ಇದು ಸ್ವಲ್ಪ ಸಮಯದವರೆಗೆ ಕೆಲಸ ಮಾಡಬಹುದು. ತದನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆದುದರಿಂದ ಔಷಧವೇ ಎಲ್ಲದಕ್ಕೂ ಪರಿಹಾರವಲ್ಲ. ಹಾಗಾದರೆ ನೀವು ಇನ್ನೇನು ಮಾಡಬಹುದು? ನೀವು ನಿಮ್ಮ ಪ್ರಾಣಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.ವ್ಯಾಯಾಮ, ಸರಿಯಾದ ಆಹಾರ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ, ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ನಿಮ್ಮಲ್ಲಿ ಪ್ರಾಣ ಶಕ್ತಿಯು ಹೆಚ್ಚಾಗುತ್ತದೆ . ಧ್ಯಾನವು ನಿಮ್ಮಲ್ಲಿ ಚುರುಕುತನ,  ತೀಕ್ಷ್ಣತೆ ಮತ್ತು ಸಂತೋಷಗಳನ್ನು   ಮೂಡಿಸಿ,ನಿಮ್ಮ ಪ್ರಜ್ಞೆಯನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವುದು ಹಾಗೂ ನಿಮ್ಮ ಅಂತ :ಪ್ರಜ್ಞೆಯನ್ನು ಜಾಗೃತಗೊಳಿಸುವುದು.ಇದು ನಿಮ್ಮನ್ನು ಈ ವರ್ತಮಾನ ಕ್ಷಣದಲ್ಲಿ  ಜೀವಕಳೆಯಿಂದ ತುಂಬುವಂತೆ ಮಾಡಿ , ಭೂತಕಾಲದ ಎಲ್ಲಾ ಕ್ಷೋಭೆಗಳಿಂದ ನಿಮ್ಮನ್ನು ಮುಕ್ತರನ್ನಾಗಿ ಮಾಡುತ್ತದೆ. ನಿಮ್ಮಲ್ಲಿ ಪ್ರಾಣಶಕ್ತಿಯು ಹೆಚ್ಚಾದಾಗ, ನೀವು ಲವಲವಿಕೆಯೊಂದಿಗೆ ಉತ್ಸಾಹದಿಂದ ಮತ್ತು ಸಂತೋಷದಿಂದ ಇರುತ್ತೀರಿ. ಈ ಆನಂದವು  ಪರಿಪೂರ್ಣವಾಗಿ  ದೊರೆತಾಗ ನೀವು ಪರಮಾನಂದದ ಸಮಾಧಿಸ್ಥಿತಿಯ ಅನುಭವವನ್ನು ಧ್ಯಾನದಲ್ಲಿ ಪಡೆದುಕೊಳ್ಳುತ್ತೀರಿ.  ಆದುದರಿಂದಲೇ ನಮ್ಮ ಆಂತರ್ಯದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ.
  • ಉಸಿರಾಟದ ಶಕ್ತಿಯನ್ನು ಅನ್ವೇಷಿಸಿ: ನಮ್ಮ ಉಸಿರು ನಮ್ಮ ಭಾವನೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ಪ್ರತಿಯೊಂದು ಭಾವನೆಯೊಂದಿಗೆ ನಡೆಯುವ ನಮ್ಮ ಉಸಿರಿನಲ್ಲಿ ಒಂದು ನಿರ್ದಿಷ್ಟವಾದ ಲಯವಿರುತ್ತದೆ. ಹಾಗಾಗಿ ನಿಮ್ಮ ಭಾವನೆಗಳನ್ನು ನೇರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಾಗದ ಕಾರಣ,  ಉಸಿರಾಟದ ಸಹಾಯದಿಂದ, ನೀವು ಅದನ್ನು ಮಾಡಬಹುದಾಗಿದೆ. ನೀವು  ನಾಟಕದ ಒಬ್ಬ ಪಾತ್ರಧಾರಿಯಾಗಿದ್ದು, ರಂಗಮಂಟಪದಲ್ಲಿ, ನಿಮ್ಮ ಕೋಪವನ್ನು ಪ್ರದರ್ಶಿಸಬೇಕಾದಾಗ,ನಿರ್ದೇಶಕರು ನಿಮ್ಮನ್ನು ವೇಗವಾಗಿ ಉಸಿರಾಡುವಂತೆ ಹೇಳುತ್ತಾರೆ, ಎನ್ನುವುದು ನಿಮಗೆ ತಿಳಿದಿರಬಹುದು. ಪ್ರಶಾಂತವಾದ ದೃಶ್ಯವನ್ನು ತೋರಿಸಬೇಕಾಗಿ ಬಂದಾಗ, ನಿರ್ದೇಶಕರು ನಿಮಗೆ ಮೃದುವಾಗಿ, ನಿಧಾನವಾದ ಗತಿಯಲ್ಲಿ ಉಸಿರಾಡಲು ಹೇಳುತ್ತಾರೆ. ನಮ್ಮ ಉಸಿರಾಟದ ಲಯವನ್ನು ನಾವು ಅರ್ಥಮಾಡಿಕೊಂಡರೆ, ನಮ್ಮ ಮನಸ್ಸಿನ ಮೇಲೆ ನಾವು ಹತೋಟಿಯನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆಗ ನಾವು ಕೋಪ, ಅಸೂಯೆ ಮತ್ತು ದುರಾಸೆಯಂತಹ ಯಾವುದೇ ರೀತಿಯ ನಕಾರಾತ್ಮಕ ಭಾವನೆಗಳನ್ನು  ಗೆಲ್ಲಬಹುದಷ್ಟೇ ಅಲ್ಲದೆ, ಹೃತ್ಪೂರ್ವಕವಾಗಿ  ಇನ್ನೂ ಹೆಚ್ಚು ನಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ, ಸುದರ್ಶನ ಕ್ರಿಯೆಯಂತಹ ಉಸಿರಾಟದ ಪ್ರಕ್ರಿಯೆಗಳು ನಮಗೆ ನಿಜವಾಗಿಯೂ ಅತ್ಯಂತ ಸಹಕಾರಿಯಾಗಿವೆ.  ಸುದರ್ಶನ ಕ್ರಿಯೆಯ ನಿಯಮಿತ ಅಭ್ಯಾಸದಿಂದ ಒತ್ತಡ, ಆತಂಕ, ಖಿನ್ನತೆ , ಮುಂತಾದ ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ ಎಂಬುದಾಗಿ ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.
  • ಉನ್ನತವಾದ ಶಕ್ತಿಯಲ್ಲಿ ನಂಬಿಕೆಯನ್ನಿಡಿ: ಎಷ್ಟೋ ಸಲ ನಾವು, ಕೋಪ ಅಥವಾ ಹತಾಶೆಯ ಪರಿಣಾಮವಾಗಿ,   “ನನ್ನಿಂದ ಇನ್ನು  ಏನು ಮಾಡಲಿಕ್ಕೂ ಸಾಧ್ಯವಿಲ್ಲ. ನಾನು ಎಲ್ಲವನ್ನೂ ಬಿಟ್ಟು ಬಿಡುತ್ತೇನೆ.” ಎಂದು ಹೇಳುತ್ತೇವೆ. ಒಂದು ವೇಳೆ ನೀವು ಇದನ್ನೇ, ಹತಾಶೆ ಅಥವಾ ಕೋಪವಿಲ್ಲದೆ, “ನಾನು ಈ ಸಮಸ್ಯೆಯನ್ನು ಬಿಟ್ಟುಬಿಡುತ್ತೇನೆ . ನನ್ನಿಂದ ಇದನ್ನು ನಿಭಾಯಿಸಲು ಸಾಧ್ಯವಿಲ್ಲ; ದೇವರೇ ಬಂದು ನನಗೆ ಸಹಾಯ ಮಾಡಬೇಕು.” ಎಂದು ಹೇಳಿದರೆ, ಖಂಡಿತವಾಗಿಯೂ ನಿಮಗೆ ಯಾವಾಗಲೂ ಸಹಾಯ ಹಸ್ತವು ದೊರೆಯುವುದು , ಎನ್ನುವ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಈ ಇಡೀ ವಿಶ್ವದಲ್ಲಿ ಎಲ್ಲೆಡೆಯೂ ವ್ಯಾಪಿಸಿರುವ ಉನ್ನತವಾದ ಚೈತನ್ಯಶಕ್ತಿಯು ನಿಮಗೆ ಸಹಾಯ ಮಾಡಿಯೇ ಮಾಡುವುದು ಎನ್ನುವ ನಂಬಿಕೆ ನಿಮ್ಮ ಹೃದಯದಲ್ಲಿ ಆಳವಾಗಿರಲಿ. ನಿಮಗೆ ಸಹಾಯವು ಸಿಕ್ಕಿಯೇ ಸಿಕ್ಕುವುದು ಎಂಬ ದೃಢವಾದ ನಂಬಿಕೆಯು ನಿಮ್ಮಲ್ಲಿದ್ದರೆ ,ವಿಶ್ವದಲ್ಲಿ ಎಲ್ಲೆಡೆಯೂ ವ್ಯಾಪಿಸಿರುವ  ಈ ಶಕ್ತಿಯು ನಿಮಗೆ ಖಂಡಿತವಾಗಿಯೂ ಸಹಾಯ ಮಾಡಿಯೇ ಮಾಡುತ್ತದೆ.

ಸಾರಾಂಶ

ಖಿನ್ನತೆಯಿಂದ ಹೊರಬಂದು ಆಂತರಿಕ ಶಾಂತಿಯನ್ನು ಕಂಡುಕೊಳ್ಳಬೇಕಾದರೆ, ನಮ್ಮ ಸಂಪೂರ್ಣ ದೃಷ್ಟಿಕೋನದಲ್ಲಿ ಮತ್ತು ನಾವು ತೆಗೆದುಕೊಳ್ಳುವ ಪೂರ್ವಭಾವಿ ಕ್ರಮಗಳಲ್ಲಿ ಕೆಲವು ಬದಲಾವಣೆಗಳನ್ನು ತರುವುದು ಅತ್ಯಗತ್ಯ. ನಾವು ನಮ್ಮ ದೃಷ್ಟಿಯನ್ನು ವಿಸ್ತಾರ ಮಾಡಿಕೊಳ್ಳಬೇಕು; ನಮ್ಮ ಸಮಸ್ಯೆಗಳು ತಾತ್ಕಾಲಿಕವೆಂದು ಒಪ್ಪಿಕೊಳ್ಳಬೇಕು. ಆದ್ಯತೆಯೊಂದಿಗೆ  ಜನಸೇವೆಯನ್ನು ಮಾಡುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಮತ್ತು ನಾವು ಹೆಚ್ಚು ಹೆಚ್ಚು ಶಕ್ತಿ ಮತ್ತು ಸಂತೋಷಗಳನ್ನು ಅನುಭವಿಸಬೇಕು. ಇದನ್ನೆಲ್ಲಾ ಸಾಧಿಸಬೇಕಾದರೆ, ನಾವು ಪ್ರಾಣಾಯಾಮದ ಮೂಲಕ ಉಸಿರಿನ ಶಕ್ತಿಯನ್ನು ಮತ್ತು ಧ್ಯಾನದ ಶಕ್ತಿಯನ್ನು ಬಳಸಿಕೊಳ್ಳಬೇಕು. ಆಗ ಮಾತ್ರ ನಾವು ಸ್ಥಿತಪ್ರಜ್ಞರಾಗಿ  ಬದುಕಿನಲ್ಲಿ ನಮ್ಮಸಂತೋಷವನ್ನು ಕಾಪಾಡಿಕೊಳ್ಳಬಹುದು. ದೃಢ ವಿಶ್ವಾಸದೊಂದಿಗೆ ಸಹಜತೆಯಿಂದ ಬಾಳಲು ನಮಗೆ ಸಾಧ್ಯವಾದರೆ, ಅದುವೇ ನಮ್ಮನ್ನು ಈ ಪಥದಲ್ಲಿ ಮುಂದಕ್ಕೆ ಕರೆದೊಯ್ಯುವುದು ಹಾಗೂ ಸಂತಸದ ಮತ್ತು ಸಂತೃಪ್ತಿಯ ಬಾಳು ನಮ್ಮದಾಗುವುದು.

ಆರ್ಟ್ ಆಫ್ ಲಿವಿಂಗ್ ನ ಹ್ಯಾಪಿನೆಸ್ ಪ್ರೋಗ್ರಾಂ ನಲ್ಲಿ  ಭಾಗವಹಿಸುವುದರ ಮೂಲಕ ಖಿನ್ನತೆಯನ್ನು ಜಯಿಸುವ ಮಾರ್ಗವನ್ನು ಕಂಡುಕೊಳ್ಳಿ ಮತ್ತು ನಿಮ್ಮ ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಿ.

ಈ  ವಿಷಯಗಳನ್ನು ನಿರೂಪಣೆ ಮಾಡಿದ ಉದ್ದೇಶವು , ಯಾವುದೇ ವಿಧದ ವೃತ್ತಿಪರ ವೈದ್ಯಕೀಯ ಸಲಹೆಗಳಿಗೆ, ರೋಗನಿರ್ಣಯಕ್ಕೆ ಅಥವಾ ಚಿಕಿತ್ಸೆಗೆ ಪರ್ಯಾಯ ಮಾರ್ಗವನ್ನು ಸೂಚಿಸುವುದಕ್ಕಲ್ಲ.  ವೈದ್ಯಕೀಯ ವಿಷಯಗಳಿಗೆ ಸಂಬಂಧಪಟ್ಟ ಯಾವುದೇ ವಿಧದ ಪ್ರಶ್ನೆಗಳು ನಿಮ್ಮಲ್ಲಿದ್ದರೆ, ನಿಮ್ಮ ವೈದ್ಯರ ಅಥವಾ ಇತರ ಅರ್ಹ ಆರೋಗ್ಯ ವೃತ್ತಿಪರರ ಸಲಹೆಯನ್ನು ನೀವು ಯಾವಾಗಲೂ ಪಡೆದುಕೊಳ್ಳಬಹುದು.

    Wait!

    Don’t miss this Once-In-A-lifetime opportunity to join the Global Happiness Program with Gurudev!

    Have questions? Let us call you back

     
    *
    *
    *
    *
    *