ಧ್ಯಾನವೆಂದರೆ, ಆಳವಾದ ವಿಶ್ರಾಂತಿ ಕೊಡುವ ವಿಧಾನ
ಧ್ಯಾನದಿಂದ ಸಿಗುವ ವಿಶ್ರಾಂತಿ, ಆಳವಾದ ನಿದ್ರೆಯಿಂದ ಸಿಗುವ ವಿಶ್ರಾಂತಿ ಮೀರಿದೆ. ಮನಸ್ಸು ತಳಮಳ ಮುಕ್ತವಾಗಿ, ಪ್ರಶಾಂತಿ ಹಾಗು ಸಮಾಧಾನವಾಗಿರುತ್ತದೆ, ಮನಸ್ಸಿನ ಈ ಸ್ಥಿತಿಯಲ್ಲಿ ಧ್ಯಾನವಾಗುತ್ತದೆ.
ಧ್ಯಾನದಿಂದ ಪ್ರಯೋಜನ ಹಲವಾರು. ಮನಸ್ಸಿನ ಶುಭ್ರತೆ ಹಾಗು ಸ್ವಾಸ್ಥ್ಯಕ್ಕಾಗಿ, ಇದು ಅತ್ಯಗತ್ಯ. ನಿತ್ಯ ನಿಯಮಿತವಾಗಿ ಧ್ಯಾನ ಮಾಡುವದರಿಂದ ಸ್ವಭಾವಿಕವಾಗಿ ಬರುವ ಲಾಭಗಳಲ್ಲಿ, ಇನ್ನೂ ಕೆಲವು ಉದಾಹರಣೆಗಳು: ಶಾಂತಿಯುತವಾದ ಮನಸ್ಸು, ಒಳ್ಳೆಯ ಕೇಂದ್ರಿಕರಿಸುವ ಶಕ್ತಿ, ಒಳ್ಳೆ ಗ್ರಹಿಕೆಯ ಶಕ್ತಿ, ಪರಿಣಾಮಕಾರಿಯಾದ ವ್ಯಕ್ತಪಡಿಸುವಿಕೆ, ಕೌಶಲ್ಯ ಹಾಗು ಪ್ರತಿಭೆಗಳ ವಿಕಸನ. ಅಲುಗಾಡದ ಅತ್ಮವಿಶ್ವಾಸ, ಹೆಚ್ಚಾದ ಗುಣಮುಖ ಶಕ್ತಿ, ಅಂತರಾಳದಲ್ಲಿನ ಶಕ್ತಿಕೇಂದ್ರದೊಡನೆ ಸಂಪರ್ಕ, ನಿರಾಳ ಸ್ವಭಾವ, ಪುನಃಶ್ಚೇತನ, ಹೆಚ್ಚಾದ ಅದೃಷ್ಟ..
ಇಂದಿನ ತೀವ್ರಗತಿಯ ಜಗತ್ತಿನಲ್ಲಿ ಒತ್ತಡಕ್ಕೊಳಗಾಗುವುದು ಸರ್ವೇಸಾಮಾನ್ಯ, ಇಂತಹ ಸಮಯದಲ್ಲಿ ಧ್ಯಾನ ಐಶರಾಮಕ್ಕೆ ಸೀಮಿತವಾಗಿಲ್ಲ. ನಾವು ಭೇಷರತ್ತಾಗಿ ಸಂತೋಷವಾಗಿರಲು ಮಾತು ಮನಸ್ಸಿನ ಪ್ರಶಾಂತತೆಯನ್ನು ಕಾಪಡಿಕೊಳ್ಳಲು, ನಾವು ಧ್ಯಾನದ ಮೊರೆ ಹೋಗಲೇಬೇಕಾಗಿದೆ
ಸಹಜ ಸಮಾಧಿ ಧ್ಯಾನ ಈ ಧ್ಯಾನ ಮಂತ್ರಮೂಲದ್ದು. ಇದರಲ್ಲಿ, ಶಬ್ದ ತರಂಗಗಳು, ಒಂದು ನಿರ್ಧಿಷ್ಟ ಮಾದರಿಯಲ್ಲಿ, ಗ್ರಹಿಸಿದಾಗ, ಆಳವಾದ ವಿಶ್ರಾಂತಿ ಮತ್ತೆ ಅದೇ ಸಮಯದಲ್ಲಿ ಮನಸ್ಸು ಪ್ರಜ್ಞಾಪೂರ್ವಕವಾಗಿರುತ್ತದ. ನಿರಾಯಾಸವಾಗಿ ಎಚ್ಚರವಾಗಿರುವ ಮನಸ್ಸನ್ನು, ಕೇಂದ್ರಿಕರಿಸುತ್ತದೆ. ಈ ಶಾಂತಚಿತ್ತವಾದ ಮನಸ್ಸು, ಒತ್ತಡ, ಕಲ್ಮಷಗಳಿಂದ ಮುಕ್ತವಾಗಿ ವರ್ತಮಾನದಲ್ಲಿ ಸ್ಥಾಪಿತಗೊಳ್ಳುತ್ತದೆ.
Power of Meditation
- Q -SME -