ಜೀವನದ ಮೂರು ಆಯಾಮಗಳು

ನಮ್ಮಲ್ಲಿ          ಪ್ರತಿಯೊಬ್ಬರೂ ಕೂಡ ಜೀವನದ  ಮೂರು ಆಯಾಮಗಳ ಅನುಭವಗಳನ್ನು ಪ್ರತಿನಿತ್ಯವೂ ಪಡೆದುಕೊಳ್ಳುತ್ತಿದ್ದೇವೆ, ಎನ್ನುವುದು ನಿಮಗೆ ತಿಳಿದಿರಲಿ. ಜಾಗೃತಾವಸ್ಥೆ(ಎಚ್ಚರದ‌ಸ್ಥಿತಿ) ,ಸ್ವಪ್ನಾವಸ್ಥೆ(ಕನಸುಕಾಣುವುದು), ಮತ್ತು ಸುಷುಪ್ತಿ(ಗಾಢ ನಿದ್ರೆ) ,ಇವುಗಳೇ ಆ ಮೂರು ಆಯಾಮಗಳು.ಆದರೆ ನಾವು ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ನಿರ್ಲಕ್ಷಿಸಿದ್ದೇವೆ. ನಾವು ನಮ್ಮ ಕನಸುಗಳ ಬಗ್ಗೆ ಯಾವುದೇ ಗಮನವನ್ನು ಹರಿಸಿಲ್ಲ;  ನಮ್ಮ ಗಾಢ ನಿದ್ರೆಯ ಬಗ್ಗೆ ತಿಳಿದುಕೊಂಡಿಲ್ಲ; ಅಥವಾ ಅದರ ಬಗ್ಗೆ ಯೋಚಿಸುವುದಿಲ್ಲ.  ಇವುಗಳ ಬಗ್ಗೆ ಸರಿಯಾದ ಜ್ಞಾನವನ್ನು ಪಡೆದುಕೊಂಡರೆ, ಆಗ ನಾವು ಪ್ರಜ್ಞೆಯ ನಾಲ್ಕನೇ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು . ಈ ನಾಲ್ಕನೆಯ ಸ್ಥಿತಿಯು ಇವುಗಳಲ್ಲಿ ಯಾವುದೂ ಅಲ್ಲ; ಆದರೆ ಇದು ಈ ಎಲ್ಲದರ ಹಿನ್ನೆಲೆಯಲ್ಲಿದೆ. ಇದನ್ನು ನಾವು ಧ್ಯಾನದಲ್ಲಿ  ಮಾತ್ರ ಅನುಭವಿಸಲು ಸಾಧ್ಯವಾಗುವುದು.

ಪ್ರತೀದಿನ ರಾತ್ರಿಯ ಹೊತ್ತು,  ನಾವು ಮಲಗುವಾಗ ಅಥವಾ ಮಧ್ಯಾಹ್ನ ಕಿರು ನಿದ್ದೆ ಮಾಡಿದಾಗ, ಏನಾಗುತ್ತದೆ ಎನ್ನುವುದು ನಮಗೆ ತಿಳಿದಿದೆಯೇ? ನಮ್ಮ ನಿದ್ರೆಯಲ್ಲಿ ಮೂರು ಹಂತಗಳಿವೆ. ಒಂದು ವೇಳೆ ಅದು ಗಾಢ ನಿದ್ರೆಯಾಗಿದ್ದರೆ, ನಾವು ಸುಮ್ಮನೆ ಆ ಸ್ಥಿತಿಗೆ ಹೊರಟುಹೋಗುತ್ತೇವೆ. ಉಳಿದ ಎರಡು ಹಂತಗಳು, ಲಘು ನಿದ್ರೆ  ಮತ್ತು  ರೆಮ್ ನಿದ್ರೆ (REM − ತ್ವರಿತವಾಗಿ ಕಣ್ಣಿನ ಚಲನೆಯಿರುವ ಸ್ಥಿತಿ).ಈ ರೆಮ್ ನಿದ್ರೆಯಲ್ಲಿರುವಾಗ ನಮಗೆ ಕನಸುಗಳು ಬೀಳುತ್ತವೆ.

ಎಚ್ಚರ ಮತ್ತು ನಿದ್ರೆಯ ಸ್ಥಿತಿಗಳು, ಸೂರ್ಯೋದಯ ಮತ್ತು ಕತ್ತಲೆಯಂತೆ; ಹಾಗೂ ಕನಸು ಇವುಗಳ ನಡುವಿನ ಸಂಧ್ಯಾಕಾಲದಂತೆ; ಧ್ಯಾನವು ವಿಮಾನದಲ್ಲಿ ಕುಳಿತುಕೊಂಡು ಬಾಹ್ಯಾಕಾಶಕ್ಕೆ ಹಾರಿಹೋದಂತೆ. ಅಲ್ಲಿ ಸೂರ್ಯಾಸ್ತವೂ ಇಲ್ಲ,ಸೂರ್ಯೋದಯವೂ ಇಲ್ಲ . ಅಲ್ಲಿ ಏನೂ ಇಲ್ಲ!

– ಗುರುದೇವ್ ಶ್ರೀ ಶ್ರೀ ರವಿಶಂಕರ್

ನಿಮಗೆ ಮೂರು ಶರೀರಗಳಿವೆ

ನಮಗೆ ಮೂರು ಶರೀರಗಳಿವೆ, ಎಂಬುದಾಗಿ ಪ್ರಾಚೀನ ಧರ್ಮಗ್ರಂಥಗಳು ಉಲ್ಲೇಖಿಸಿವೆ: ಭೌತಿಕ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ. ನಾವು ಎಲ್ಲಾ ವಿಧದ ಆಲೋಚನೆಗಳು ಮತ್ತು ಭಾವನೆಗಳಿಂದ ಕೂಡಿದ ಸೂಕ್ಷ್ಮ ಶರೀರವನ್ನು ಹೊಂದಿದ್ದೇವೆ.  ರೆಮ್ ಸ್ಥಿತಿಯಲ್ಲಿ ಮಲಗಿರುವಾಗ, ನಮ್ಮ ಸೂಕ್ಷ್ಮ  ಶರೀರವು  ಕನಸಿನ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಆದುದರಿಂದಲೇ ಕನಸಿನಲ್ಲಿ, ನೀವು ಬಣ್ಣಗಳನ್ನು ನೋಡಬಹುದು;ಸುಗಂಧ ದ್ರವ್ಯಗಳನ್ನು ಆಘ್ರಾಣಿಸಬಹುದು ಮತ್ತು ಸ್ಪರ್ಶದ  ಅನುಭವವನ್ನು ಕೂಡ ಪಡೆದುಕೊಳ್ಳಬಹುದು. ನೀವು ಬೆಚ್ಚಗಿನ ಅಪ್ಪುಗೆಯನ್ನು ಸಹ ಅನುಭವಿಸಬಹುದಾಗಿದೆ! ಕನಸು ಕಾಣುತ್ತಿರುವಾಗ ನೀವು ಪಂಚೇಂದ್ರಿಯಗಳಲ್ಲಿ ಯಾವುದನ್ನೂ ಬಳಸದೆಯೇ, ಈ ಎಲ್ಲಾ ಐದು ಇಂದ್ರಿಯಗಳ  ಅನುಭವಗಳನ್ನು ಪಡೆಯುತ್ತೀರಿ. ಕನಸಿನ ಸ್ಥಿತಿಯಲ್ಲಿರವಾಗ ನಮ್ಮ ಸೂಕ್ಷ್ಮ ದೇಹವೇ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ಕನಸಿನಲ್ಲಿ, ನಾವು  ನೈಜ ಪ್ರಪಂಚದ ಎಚ್ಚರದ ಸ್ಥಿತಿಯಲ್ಲಿ ದೊರೆಯುವ ಎಲ್ಲಾ ಅನುಭವಗಳನ್ನು ಅಥವಾ ನಾವು ನೈಜವೆಂದು ಪರಿಗಣಿಸಿದ ಪ್ರಪಂಚದ ಅನುಭವಗಳನ್ನು ಪಡೆದುಕೊಳ್ಳುತ್ತೇವೆ. ಯಾಕೆಂದರೆ ಇದು (ಎಚ್ಚರದ ಸ್ಥಿತಿ) ಸಹ ನಿಜವಾದ ಪ್ರಪಂಚವಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ!

ಗಾಢ ನಿದ್ರೆಯಲ್ಲಿ ಇರುವಾಗ,  ನಮ್ಮ ದೇಹದ ಮತ್ತೊಂದು ಹಂತದ ಅಥವಾ ಮೂರನೇ ಭಾಗವಾಗಿರುವ ,  ಕಾರಣ-ಶರೀರವು  ಕಾರ್ಯನಿರ್ವಹಿಸುವುದರಿಂದ, ನಾವು ಆಗ ಕಾರಣ-ಶರೀರದ ಮೂಲಕ ಅನುಭವವನ್ನು ಪಡೆಯುತ್ತೇವೆ. ಅಲ್ಲಿ ಇರುವುದೆಲ್ಲವೂ ಶಕ್ತಿ ಮಾತ್ರ!  ಆ ಸ್ಥಿತಿಯಲ್ಲಿ ಯಾವುದೇ ವಿಧದ ಸೀಮಾ ರೇಖೆಗಳು  ಇಲ್ಲದಿರುವ ಕಾರಣ ಸಂಪೂರ್ಣ ಶಕ್ತಿಯೇ ನೀವಾಗಿ ಬಿಡುತ್ತೀರಿ! ದೇಹದ ಪರಿವೆಯೇ ನಮಗಿರುವುದಿಲ್ಲ. ಆದುದರಿಂದಲೇ ಈ ಗಾಢ ನಿದ್ರೆಯಿಂದ ಎಚ್ಚರವಾದಾಗ, ನಮಗೆ ದೊರೆಯುವ ಅನುಭವವು ಅತ್ಯಂತ ಶಕ್ತಿಯುತವಾಗಿರುತ್ತದೆ!

ನೀವು ನಿದ್ರೆಯಲ್ಲಿ ನಿಮ್ಮ ಸೂಕ್ಷ್ಮ ಶರೀರದಲ್ಲಿ ಮಾತ್ರವೇ ಇದ್ದು , ರಾತ್ರಿಯಿಡೀ ಕನಸುಗಳನ್ನು ಕಂಡಿದ್ದರೆ, ಎಚ್ಚರವಾದ ಬಳಿಕ ನಿಮಗೆ ತುಂಬಾ ಆಯಾಸವಾಗುತ್ತದೆ. ಒಂದು ವೇಳೆ ನಿಮಗೆ ಗಾಢ ನಿದ್ರೆಯ ಅನುಭವವು ದೊರಕಿದೆಯೆಂದಾದರೆ, ಆ ಆಳವಾದ ಸ್ಥಿತಿಯಲ್ಲಿ ನೀವು ನಿಮ್ಮ ಕಾರಣ ಶರೀರದೊಂದಿಗೆ ಇರುತ್ತೀರಿ, ಹಾಗೂ ಕಾರಣ ಶರೀರವು ಎಲ್ಲಾ ರೀತಿಯ ಶಕ್ತಿಗಳ ಉಗಮ ಸ್ಥಾನವಾಗಿದೆ. ಇದು ಉತ್ಸಾಹ, ತಾಜಾತನ ಮತ್ತು ಜೀವ ಕಳೆಯನ್ನು ತಂದು ಕೊಡುವ ಮೂಲತಾಣವಾಗಿದೆ. ಆದ್ದರಿಂದಲೇ ಗಾಢ ನಿದ್ರೆಯ ನಂತರ , ಎಚ್ಚರವಾದಾಗ ನೀವು ತುಂಬಾ ಶಕ್ತಿ, ಉತ್ಸಾಹ ಮತ್ತು ಲವಲವಿಕೆಗಳೊಂದಿಗೆ ಉಲ್ಲಾಸದಿಂದ  ಇರುತ್ತೀರಿ. ನಾವು ಪ್ರತಿದಿನ ರಾತ್ರಿ ಮಲಗುತ್ತೇವೆ ಆದರೆ ನಾವು ಎಂದಿಗೂ ನಮ್ಮ ನಿದ್ರೆಯನ್ನು ಸಂಧಿಸಿಲ್ಲ; ಎಂದೂ  ನಾವು ನಮ್ಮ ಗಾಢ ನಿದ್ರೆಯೊಂದಿಗೆ ನಮ್ಮ ಕೈಗಳನ್ನು ಕುಲುಕಿಲ್ಲ.   ಅದನ್ನು ಮಾಡಲು ನಮಗೆ ಧ್ಯಾನವು ಸಹಾಯ ಮಾಡುತ್ತದೆ.

ಧ್ಯಾನವು ನಿದ್ರೆಗೆ ಸಮಾನವಾಗಿರುವುದೇ?

ಧ್ಯಾನವು ಗಾಢ ನಿದ್ರೆಗೆ ಹೋಲುತ್ತದೆ ಆದರೆ ಅದು ಗಾಢ ನಿದ್ರೆಯಲ್ಲ. ಒಂದು ವೇಳೆ ನೀವು ಹೆಚ್ಚು ಹೊತ್ತು ಮಲಗಿದರೆ, ನಿಮಗೆ ಹೆಚ್ಚು ದಣಿವಾಗುತ್ತದೆ. ಇದು ಸಾಮಾನ್ಯವಾಗಿ ನಶೆಯಲ್ಲಿದ್ದ ಜನರ ಅನುಭವಕ್ಕೆ ಹೋಲುತ್ತದೆ. ನಶೆಯಲ್ಲಿದ್ದವರು ತಮ್ಮ ಮತ್ತಿನಿಂದ ಹೊರಗೆ ಬಂದ ಬಳಿಕವೂ, ಅವರಲ್ಲಿ  ಇನ್ನೂ ನಶೆಯ ಪರಿಣಾಮವು ಉಳಿದಿರುತ್ತದೆ. ಅದನ್ನು ಹ್ಯಾಂಗೋವರ್ ಎನ್ನುತ್ತೇವೆ. ಇದೇ ರೀತಿಯಲ್ಲಿ, ನೀವು ಹೆಚ್ಚು ಹೊತ್ತು ನಿದ್ರಿಸಿದರೆ, ಎದ್ದ ಬಳಿಕವೂ ನಿಮ್ಮಲ್ಲಿ ದಣಿವು ಮತ್ತು ಸೋಮಾರಿತನಗಳು ಉಳಿದಿರುತ್ತವೆ ಮತ್ತು ನಿಮಗೆ ಯಾವುದೇ ಕೆಲಸವನ್ನು ಮಾಡಲು ಆಸಕ್ತಿ ಇರುವುದಿಲ್ಲ. ಮಾದಕ ದ್ರವ್ಯಗಳನ್ನು ಅಥವಾ ಮನೋರಂಜನೆಯನ್ನು ತಂದು ಕೊಡುವ ಔಷಧಿಗಳನ್ನು ಸೇವಿಸಿದ ನಂತರವೂ ಇದೇ ಪರಿಣಾಮವು ಉಂಟಾಗುತ್ತದೆ.ಅದರ ನಂತರ ಜನರಿಗೆ, ತಾವು ಛಿದ್ರ ಛಿದ್ರವಾಗಿ, ಸಂಪೂರ್ಣವಾಗಿ ಬರಿದಾದಂತೆ ಮತ್ತು ಕ್ಷೀಣಿಸಿದಂತೆ ಭಾಸವಾಗಿ ಶಕ್ತಿಯೇ ಇಲ್ಲದಂತಾಗುತ್ತದೆ.

ಆದರೆ ಧ್ಯಾನದಿಂದ ಹೀಗಾಗುವುದಿಲ್ಲ. ಧ್ಯಾನವು, ನಿಮ್ಮ ಶರೀರದ ಭಾಗವೇ ಆಗಿರುವ ಕಾರಣ-ಶರೀರದಲ್ಲಿರುವ ಶಕ್ತಿಯ ಮೂಲದೊಂದಿಗೆ ಒಂದಾಗಿ, ಅದರಿಂದ, ಶಕ್ತಿಯನ್ನು ಪಡೆದುಕೊಳ್ಳಲು  ನಿಮಗೆ ಸಹಾಯ ಮಾಡುತ್ತದೆ.  ಧ್ಯಾನದಿಂದ ಹೊರಗೆ ಬಂದಾಗಲೂ,     ನೀವು ನಿಮ್ಮ ಅತ್ಯಂತ ಉನ್ನತವಾದ ಸ್ತರಕ್ಕೆ ಹೋಗಿ ಬಂದ ಅನುಭವವು ನಿಮ್ಮಲ್ಲಿರುತ್ತದೆ. ಧ್ಯಾನವು,  ನಿಮಗೆ ಅಗಾಧವಾದ ಮತ್ತು ಆರೋಗ್ಯಕರವಾದ  ಶಕ್ತಿಯನ್ನು ನೀಡುವ ಕಾರಣ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಐದು ಪಟ್ಟುಗಳಷ್ಟು ಹೆಚ್ಚು ಮಾಡುತ್ತದೆ. ಧ್ಯಾನವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳುವ ವೈಜ್ಞಾನಿಕ ಪುರಾವೆಗಳು ಕೂಡಾ ಸಾಕಷ್ಟು ಇವೆ.

ವಿಶೇಷವಾಗಿ ಕೋವಿಡ್ ನ ಸಮಯದಲ್ಲಿ, ಪ್ರಪಂಚದಾದ್ಯಂತದ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ವೃತ್ತಿಪರರೆಲ್ಲರೂ ಧ್ಯಾನ ಮಾಡುತ್ತಿದ್ದರು. ಏಕೆಂದರೆ ಅದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿರುವುದನ್ನು  ಅವರು ತಮ್ಮ ಅನುಭವಗಳಿಂದಲೇ ಕಂಡುಕೊಂಡಿದ್ದರು. ಕೋವಿಡ್-19 ಸಮಯದಲ್ಲಿ, ಆರೋಗ್ಯ ಇಲಾಖೆಯಲ್ಲಿರುವ ವೃತ್ತಿಪರರ ಮೇಲೆ ಮತ್ತು ಇಡೀ  ವೈದ್ಯಕೀಯ ಸಮುದಾಯದ ಮೇಲೆ ಭಾರೀ ಒತ್ತಡವಿತ್ತು. ವಿಶೇಷವಾಗಿ ಮೊದಲ ಕೆಲವು ತಿಂಗಳುಗಳಲ್ಲಿ, ಲಸಿಕೆಯನ್ನು ಕಂಡುಹಿಡಿದು, ಅದು ಹೊರಬರುವ ತನಕ, ಏನು ಮಾಡಬೇಕೆಂದು ತಿಳಿಯದೆ ಅವರೆಲ್ಲರೂ ಅಸಹಾಯಕ ಸ್ಥಿತಿಯಲ್ಲಿದ್ದರು. ಅವರು ರೋಗಿಗಳಿಗೆ ಚಿಕಿತ್ಸೆ ನೀಡುವುದಾದರೂ ಹೇಗೆ? ಆ ಸಮಯದಲ್ಲಿ ಪೂಜ್ಯ ಗುರುದೇವರು,   ದಿನಕ್ಕೆ ಎರಡು ಬಾರಿಯಂತೆ, ಪ್ರಪಂಚದಾದ್ಯಂತ ಇರುವ ಎಲ್ಲಾ ಜನರಿಗೆ ಧ್ಯಾನವನ್ನು ಮಾಡಿಸಲು ಪ್ರಾರಂಭಿಸಿದರು. ಪ್ರತಿದಿನವೂ ಈ ಧ್ಯಾನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚಿನ ವೈದ್ಯರು ಮತ್ತು ದಾದಿಯರು ಪಾಲ್ಗೊಳ್ಳುತ್ತಿದ್ದರು. ಅವರ ಪ್ರತಿಕ್ರಿಯೆಯು  ಅತ್ಯುತ್ತಮವಾಗಿತ್ತು; ಅಂತಹ ಕಠಿಣ ಸಮಯದಲ್ಲಿ ಅವರೆಲ್ಲರೂ ತಮ್ಮ ಶಕ್ತಿಯ ಮಟ್ಟವನ್ನು ಉಳಿಸಿಕೊಂಡು , ಕಾರ್ಯಪ್ರವೃತ್ತರಾಗಲು ಧ್ಯಾನದಿಂದ ಅವರಿಗೆ ನಿಜಕ್ಕೂ ತುಂಬಾ ಸಹಾಯವಾಯಿತು, ಎಂದು ಅವರೆಲ್ಲಾ ಹೇಳಿದರು.

ಅಪ್ರಜ್ಞಾಪೂರ್ವಕವಾಗಿ ಮೌನದ ಜಗತ್ತಿಗೆ ಹೊರಟು ಹೋಗುವುದು ನಿದ್ರೆಯಾಗಿದೆ ಹಾಗೂ ನಾವು ಅರಿವಿನೊಂದಿಗೆ ಪ್ರಜ್ಞಾಪೂರ್ವಕವಾಗಿ ಮೌನವಾಗಿರಲು ಆಯ್ಕೆ ಮಾಡುವುದು ಧ್ಯಾನವಾಗಿದೆ. ಧ್ಯಾನವು ನಿಮಗೆ ಹೆಚ್ಚುವರಿ ಶಕ್ತಿಯನ್ನು ನೀಡುವುದಷ್ಟೇ ಅಲ್ಲದೆ ಅದು ನಿಮ್ಮ ಸೂಕ್ಷ್ಮವಾದ ಆಯಾಮಗಳಿಗೆ ಬಾಗಿಲುಗಳನ್ನು ತೆರೆದು , ನಿಮ್ಮ ಆಂತರ್ಯಕ್ಕೆ ಪಯಣಿಸಲು ಸಹಾಯ ಮಾಡುತ್ತದೆ.

– ಗುರುದೇವ್ ಶ್ರೀ ಶ್ರೀ ರವಿಶಂಕರ್

ವಿಮೋಚನೆಗೆ ಟಿಕೆಟ್(ಮೋಕ್ಷದ ದಾರಿ)

ಪಂಚೇಂದ್ರಿಯಗಳ ಮೂಲಕ ಕೆಲಸ ಮಾಡುತ್ತಿರುವಾಗ ನಮ್ಮ ಮನಸ್ಸು ಬಾಹ್ಯದಲ್ಲಿ ಸಿಲುಕುವ ಕಾರಣ, ಅದು ಸಕ್ರಿಯವಾಗಿದ್ದು , ಇನ್ನೂ ಲಯವಾಗದ ಸ್ಥಿತಿಯಲ್ಲಿರುತ್ತದೆ. ಇದೇ ಮನಸ್ಸು, ಬಾಹ್ಯದ ಎಲ್ಲಾ ಪಂಚೇಂದ್ರಿಯಗಳಿಂದ ಹಿಂದೆ ಸರಿದು ಒಳಮುಖವಾದಾಗ, ಏನಾಗುತ್ತದೆ? ನೀವು ಸಂಪೂರ್ಣವಾಗಿ ಲೈಯ್ಯಿಯ ಸ್ಥಿತಿಯಲ್ಲಿರುತ್ತೀರಿ. (ಲೈಯ್ಯಿ ಎಂದರೆ ಲಯ ಮತ್ತು ಕರಗಿಹೋಗುವುದು). ನಿದ್ರೆಯಲ್ಲಿ ಹೀಗೆಯೇ ಆಗುತ್ತದೆ. ನೀವು ನಿದ್ರೆಯಲ್ಲಿರುವಾಗ ಎಲ್ಲಿರುತ್ತೀರಿ? ನೀವು ಸಂಪೂರ್ಣವಾಗಿ ಕರಗಿ ಹೋಗುತ್ತೀರಿ!

‘ನಾನು… ನನ್ನ… ನನ್ನದು’ ಎಂಬ ಈ ಪ್ರಜ್ಞೆಯೇ ಬಂಧನಕ್ಕೆ ಕಾರಣವಾಗಿದೆ. ಈ ಪ್ರಜ್ಞೆಯು ಕರಗಿದಾಗ ಮುಕ್ತಿಯು ದೊರೆಯುತ್ತದೆ. ನೀವು ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಬಂಧನದಲ್ಲಿರಲು ಸಾಧ್ಯವಿಲ್ಲ. ಹಾಗಾಗಿ ಶರೀರಕ್ಕೆ ಆಯಾಸವಾದಾಗ ನೀವು ನಿದ್ರೆಗೆ ಶರಣು ಹೋಗುತ್ತೀರಿ. ನಿದ್ರೆಯಲ್ಲಿ,  ‘ನಾನು…ನನ್ನದು’ ಎನ್ನುವ ಅರ್ಥವನ್ನೆಲ್ಲ   ನೀವು ಕಳೆದುಕೊಳ್ಳುತ್ತೀರಿ. ನೀವು ಮಲಗಿರುವಾಗ ನೀವು ಏನು? ಮತ್ತು ನೀವು ಆಗ ಎಲ್ಲಿದ್ದಿರಿ? ಆ ಸ್ಥಿತಿಯಲ್ಲಿ ನೀವು ನಿಮ್ಮ ಹೆಸರು ಮತ್ತು ನಿಮ್ಮ ಗುರುತು-ಎರಡನ್ನೂ ಕಳೆದುಕೊಳ್ಳುತ್ತೀರಿ. ನಿಮ್ಮ ದೇಹವು ಹಾಸಿಗೆಯ ಮೇಲೆ ಮಲಗಿದೆ ಎನ್ನುವುದು ಕೂಡ ನಿಮಗೆ ತಿಳಿದಿರುವುದಿಲ್ಲ. ನೀವು ಪ್ರತಿಯೊಂದು ಗುರುತನ್ನೂ ಕಳೆದುಕೊಳ್ಳುತ್ತೀರಿ. ಇದು ಶ್ರೀ ಶ್ರೀ ರವಿಶಂಕರ್ ಅವರ ನಿದ್ರೆ ಮತ್ತು ಅದನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೂಡ ನೀವು ಹೇಳಲು ಸಾಧ್ಯವಿಲ್ಲ. ನಿದ್ರೆಯು  ನಿದ್ರೆ! ಅಷ್ಟೇ! ಅಲ್ಲಿ  ಶ್ರೀ ಶ್ರೀ ಇಲ್ಲ, ರವಿಶಂಕರ್ ಕೂಡ ಇಲ್ಲ. ಅಲ್ಲಿ ಯಾರೂ ಇಲ್ಲ – ಅಲ್ಲಿ ಯಾವುದೇ ಹೆಸರಿಲ್ಲ ಮತ್ತು ಯಾವುದೇ ರೂಪವೂ ಇಲ್ಲ. ಸುಮ್ಮನೆ ನಿದ್ರೆಯಿದೆ!

ಮತ್ತೊಂದೆಡೆ, ಧ್ಯಾನವೆಂದರೆ ಪ್ರಜ್ಞಾಪೂರ್ವಕವಾಗಿ ಜಾಗೃತರಾಗಿರುವುದು ಮತ್ತು ನನ್ನಲ್ಲಿರುವ ‘ನಾನು’ ಅನ್ನುವುದನ್ನು ಲಯ ಮಾಡುವುದು ಅಥವಾ ಕರಗಿಸುವುದು; ‘ನಾನು’ ಎನ್ನುವ ಅಸ್ತಿತ್ವವನ್ನು ಕಳೆದುಕೊಂಡರೆ, ಅದುವೇ ನಿಜವಾದ ಸ್ವಾತಂತ್ರ್ಯ; ಅದುವೇ ಮುಕ್ತಿ.

ಯಾರಾದರೂ ಒಂದು ದಿನ, ಚೆನ್ನಾಗಿ ದುಡಿದು  ಕಠಿಣ ಪರಿಶ್ರಮವನ್ನು ಮಾಡಿಯಾದ ಬಳಿಕ ಅತ್ಯಂತ ದಣಿವಿನೊಂದಿಗೆ ಮಲಗಿದರೆ, ಆಗ ಅವರಿಗೆ ಎಷ್ಟೇ  ಸೊಳ್ಳೆಗಳು ಕಚ್ಚುತ್ತಿದ್ದರೂ, ಸೊಳ್ಳೆಗಳ ಪರಿವೆಯೇ  ಇಲ್ಲದಂತೆ, ಅವರು ಚೆನ್ನಾಗಿ ನಿದ್ರಿಸುತ್ತಾರೆ. ನಿದ್ರೆಯ ಸ್ಥಿತಿಯನ್ನು ಆನಂದಿಸಬೇಕಾದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಈ ಜಗತ್ತಿನಲ್ಲಿ, ನಾವು ವಿರುದ್ಧವಾಗಿ ಕಂಡುಬರುವ ಮೌಲ್ಯಗಳನ್ನು ಮಾತ್ರ ಆನಂದಿಸಬಹುದಾಗಿದೆ. ಆದರೆ ಸಮಾಧಿಯ ಸಂತೋಷವು ಅತ್ಯಂತ ದೊಡ್ಡದು ಹಾಗೂ ಧ್ಯಾನವು ನಿಮ್ಮನ್ನು, ವಿರುದ್ಧ ಮೌಲ್ಯಗಳನ್ನು ಮೀರಿದಂತಹ ಸ್ಥಿತಿಗೆ ಕರೆದೊಯ್ಯುತ್ತದೆ.

ಯೋಗನಿದ್ರಾ (ಎನ್ ಎಸ್ ಡಿ ಆರ್ (NSDR Non-Sleep Deep Rest):ನಿದ್ರೆಯಿಲ್ಲದೆ ಪಡೆಯುವ ಆಳವಾದ ವಿಶ್ರಾಂತಿ)

ಪ್ರಕೃತಿಯು ನಿಮ್ಮನ್ನು ಅಪ್ರಜ್ಞಾಪೂರ್ವಕವಾಗಿ ಮೌನಕ್ಕೆ ಹೋಗುವಂತೆ ಪ್ರೇರೇಪಿಸುತ್ತದೆ ಮತ್ತು ಅದುವೇ ನಿದ್ರೆಯಾಗಿದೆ. ನಿದ್ರೆಯು ನಿಮಗೆ ಶಕ್ತಿಯನ್ನು ನೀಡುತ್ತದೆ. ಇಂದು, ಅತಿಯಾಗಿ ಕನಸು ಕಾಣುವುದು ಮತ್ತು ಲೆಕ್ಕವಿಲ್ಲದಷ್ಟು ಕೆಲಸಗಳನ್ನು ಮಾಡಲು ಬಯಸುವುದು, ನಿದ್ರಾಹೀನತೆಗೆ ಕಾರಣವಾಗಿದೆ. ಎರಡೇ ಎರಡು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡಾಗ ನೀವು ಮಗುವಿನಂತೆ ನಿದ್ರೆಗೆ ಜಾರುತ್ತೀರಿ: “ನನಗೆ ಏನೂ ಬೇಕಿಲ್ಲ; ನಾನು ಏನೂ ಮಾಡುವುದಿಲ್ಲ.”

ಪ್ರಜ್ಞಾಪೂರ್ವಕವಾಗಿ ಮಲಗುವುದು ಯೋಗನಿದ್ರೆ ಯಾಗಿದೆ. ನಿಮಗೆ ನಿದ್ರೆ ಮಾಡಲು ತೊಂದರೆ ಇದ್ದರೆ, ನೀವು ಯೋಗ ನಿದ್ರೆಯನ್ನು ಮಾಡಲು ಪ್ರಯತ್ನಿಸಬಹುದು. ನಿದ್ರೆಯ ಬಗ್ಗೆ ಆನ್ಲೈನ್ ಯೋಗ ಕೋರ್ಸ್ ಕೂಡ ಲಭ್ಯವಿದೆ. ನೀವು ಅದನ್ನು ಮಾಡಬಹುದು. ಆತಂಕ ಮತ್ತು ನಿದ್ರೆಯ ಅಸ್ವಸ್ಥತೆಯನ್ನು ತೊಡೆದುಹಾಕಲು,  ನೀವು ಆರ್ಟ್ ಆಫ್ ಲಿವಿಂಗ್ ಕಾರ್ಯಾಗಾರಕ್ಕೆ ಸೇರಿಕೊಳ್ಳಿ. ಎಷ್ಟೋ ಹೆಚ್ಚಿನ ವಿಷಯಗಳನ್ನು ನೀವು ಈ ಕಾರ್ಯಾಗಾರದಲ್ಲಿ ಕಲಿಯಬಹುದಾಗಿದೆ.

ಧ್ಯಾನದ ಸಮಯದಲ್ಲಿ ನಿದ್ರೆ

ಸಮಾಧಿ ಎಂದರೇನು?
ಸಮಾಧಿಯು ಒಂದು ಮಿಲಿಯನ್ ವರ್ಷಗಳ ವಿಶ್ರಾಂತಿಗೆ ಸಮಾನವಾಗಿದೆ. ನೀವು ಕೇವಲ ಒಂದು ಸೆಕೆಂಡಿನಷ್ಟು ಹೊತ್ತು ಧ್ಯಾನ ಮಾಡಿದರೂ ಸಾಕು; ಧ್ಯಾನ ಮಾಡುವ ಮೊದಲು ಮತ್ತು ಧ್ಯಾನದ ನಂತರ ಮಲಗಿದರೆ, ಪರವಾಗಿಲ್ಲ.

    Hold On!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity

    *
    *
    *
    *