ಕಾರ್ಪೊರೆೇಟ್ ಜಗತ್ತಿನಲ್ಲಿ ಪರಿಸ್ಥಿತಿಗಳು ಕಠಿಣವಾಗುತ್ತಿದ್ದಂತೆ, ಅನೆೇಕರಿಗೆ ಅದರ ಚುಚ್ಚುವಿಕೆಯ ಅನುಭವವಾಗುತ್ತದೆ. ಒತ್ತಡವು ನಾವು ಯೋಚಿಸುವ, ನಡುವಳಿಕೆಗಳಲ್ಲಿ ಕೂಡ ತನ್ನ ಪರಿಣಾಮಗಳನ್ನು ಬೀರುತ್ತ, ಜೀವನದ ಎಲ್ಲ ಮಜಲುಗಳ ಮೇಲೂ ಪರಿಣಾಮ ಬೀರುತ್ತದೆ. ಒತ್ತಡವು ತನ್ನ ಕಬಂಧಬಾಹುವನ್ನು ವಿಸ್ತರಿಸುವ ಪರಿಸ್ಥಿತಿಗಳು ಯಾವುದೇ ವಿಪತ್ತಿಗಿಂತಲೂ ಕಡಿಮೆಯಿಲ್ಲದಿರುವಾಗ ಒತ್ತಡದ ಬದುಕಿನ ದುಬಾರಿ ಬೆಲೆ ತೆರದೆ ಹೇಗೆ ತಾನೇ ಯಶಸ್ವಿಯಾಗಬಲ್ಲಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೆೇಳುತ್ತಿರುವುದು ಇದನ್ನೇ. ನೈಜವಾಗಿ ಹೆೇಳುವುದಾದರೆ ಉತ್ತರ ಬಹಳ ಸುಲಭ ಮತ್ತು ಸರಳ.

ಇದು ಬೈಸಿಕಲ್ಲನ್ನು ಚಾಲಿಸಿದ ಹಾಗೆ

ಬೈಸಿಕಲ್ ಚಾಲನೆಯ ರಹಸ್ಯವೇನು? ಸಮತೋಲನ! ಮಧ್ಯದಲ್ಲೇ ಸಮತೋಲನವನ್ನು ಕಾಪಿಟ್ಟುಕೊಂಡು ಎಡಕ್ಕೋ ಬಲಕ್ಕೋ ವಾಲದಂತೆ, ಒಂದೊಮ್ಮೆ ವಾಲಿದರೆ ಮತ್ತೊಂದು ಕಡೆಗೆ ಸಮತೋಲನವನ್ನು ಕಾಯ್ದುಕೊಳ್ಳುವುದು. ಸಮತೋಲನ ತಪ್ಪಿದಾಗ ಕಿರಿಕಿರಿಯ ಅನುಭವವಾದೀತು, ಅದನ್ನು ಸೂಚನೆಯಂತೆ ತೆಗೆದುಕೊಳ್ಳಿ; ಸಂವೇದನೆಯ ಬಗ್ಗೆ ಸರಿತಪ್ಪುಗಳ ವಿಮರ್ಶೆಯಿಲ್ಲದೇ, ಸ್ವೀಕರಿಸಿ ಮತ್ತು ಕೇಂದ್ರಸ್ಥರಾಗಿರಿ. ಸಮತೋಲನವನ್ನು ಕಳೆದುಕೊಂಡಾಗಲೆಲ್ಲಾ ನಿಮ್ಮ ಅಂತರ್ಧ್ವನಿಯನ್ನು ಕೇಳಿ ಪುನಃ ಕೇಂದ್ರಿತರಾಗಿರಿ.

ಜೀವನದ ಎಲ್ಲ ಮಜಲುಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದೇ ಯಶಸ್ಸಿನ ಗುಟ್ಟು.

– ಗುರುದೇವ್ ಶ್ರೀ ಶ್ರೀ ರವಿಶಂಕರ್

ಪುನರುಜ್ಜೀವನದ ಕಡೆ ಗಮನಹರಿಸಿರಿ

ಮೊದಲಿಗೆ, ನಿಮ್ಮ ಸಮಯದಲ್ಲಿ ಪುನರುಜ್ಜೀವನ ಮತ್ತು ವೃತ್ತಿಗಳ ಮಧ್ಯೆ ಸಂತುಲನಗೊಳಿಸಿಕೊಳ್ಳಿರಿ. ನಿಮ್ಮ ಆಹಾರ, ವ್ಯಾಯಾಮಗಳೊಂದಿಗೆ ವಿಶ್ರಾಂತಿ ಮತ್ತು ಧ್ಯಾನಗಳಿಗೂ ಸಮಯವನ್ನು ಮೀಸಲಿಡಿ. ವೃತ್ತಿಕ್ಷೇತ್ರಗಳಲ್ಲಿ ಮಧ್ಯಾಹ್ನಕಾಲದಲ್ಲಿ ಧ್ಯಾನದ ನಂತರ ಭೋಜನ ವಿಹಿತವಾದುದು. ಜನರು ಒಟ್ಟಾಗಿ ಕುಳಿತು ಕೆಲಸಮಯ ಧ್ಯಾನ ಮಾಡಿ ಭೋಜನವನ್ನು ಹಂಚಿಕೊಂಡು ಊಟಮಾಡಿದಾಗ, ದಿನದ ದ್ವಿತೀಯಾರ್ಧದಲ್ಲಿ ಕೂಡ ಬೆಳಗ್ಗಿನಷ್ಟೇ ಲವಲವಿಕೆಯಿಂದ ಕಾರ್ಯನಿರ್ವಹಿಸುವಷ್ಟು ಉತ್ಸಾಹಿತರಾಗುವರು.

ಲಲಿತಕಲೆಗಳು ನಿಮಗೆ ಸೂಕ್ತವಾದವು

ಎರಡನೆಯದ್ದಾಗಿ, ಯಾವುದಾದರೂ ಕಲಾಪ್ರಕಾರಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಕರ್ಪೋರೇಟ್ ಜಗತ್ತಿನಲ್ಲಿ, ನಿಮ್ಮ ಎಡಮೆದುಳಿನ ಚಟುವಟಿಕೆಗಳಾದ ತಾರ್ಕಿಕ ಆಲೋಚನೆ, ಯೋಜನೆ ಮತ್ತು ವಿಶ್ಲೇಷಣೆ ಮೊದಲಾದವುಗಳಲ್ಲಿ ಮುಳುಗಿರುತ್ತೀರಿ. ಹಾಗಾಗಿ ಮೆದುಳಿನ ಸಮತೋಲನಕ್ಕಾಗಿ ಬಲಮೆದುಳನ್ನೂ ಕೂಡ ಸಕ್ರಿಯವಾಗಿಡುವುದು ಅಗತ್ಯ; ಚಿತ್ರಕಲೆ, ಸಂಗೀತ, ಸಾಹಿತ್ಯ ಮೊದಲಾದ ಸೃಜನಾತ್ಮಕ ಮತ್ತು ಮನೋತ್ತೇಜಕವಾದ ಚಟುವಟಿಕೆಗಳು ಬಲಮೆದುಳನ್ನು ಸಕ್ರಿಯಗೊಳಿಸುವವು. ಮೆದುಳಿನ ಎರಡೂ ಭಾಗಗಳು ಸಂತುಲಿತಗೊಂಡಾಗ ನೀವು ಹೆಚ್ಚಿನ ಸ್ಪಷ್ಟತೆ, ಸೃಜನಾತ್ಮಕತೆ, ದಕ್ಷತೆ, ಉತ್ಪಾದನಾಶೀಲತೆ ಮತ್ತು ವಿಶ್ರಾಮಗಳನ್ನು ಅನುಭವಿಸಬಲ್ಲಿರಿ.

ವೃತ್ತಿ ಮತ್ತು ವೈಯಕ್ತಿಕ ಜೀವನಗಳ ಸಂತುಲನ

ಮೂರನೆಯದಾಗಿ, ವೃತ್ತಿ ಮತ್ತು ವೈಯಕ್ತಿಕ ಜೀವನಗಳ ಸಂತುಲನ ಸಾಧಿಸಿಕೊಳ್ಳಿರಿ, ನಿಮ್ಮ ಅನ್ತರ್ಧ್ವನಿಯನ್ನು ಕೇಳಿಸಿಕೊಳ್ಳಿರಿ. ನಿಮ್ಮ ಕುಟುಂಬವನ್ನು ನಗಣ್ಯವಾಗಿಸಿದ್ದರೆ, ಅದು ನಿಮಗೇ ಚುಚ್ಚುವಿಕೆಯನ್ನುಂಟುಮಾಡುವುದು. ಹಾಗೆಯೇ, ನೀವು ಸ್ಸ್ಧ್ಯಾತ್ಮಿಕ ಅಭ್ಯಾಸಗಳನ್ನು ನಿರ್ಲಕ್ಷ್ಯ ಮಾಡಿದರೆ, ಅದೂ ಕೂಡ ಚುಚ್ಚುತ್ತದೆ. ಹಾಗಾಗಿ, ಯಾವುದೇ ಚುಚ್ಚುವಿಕೆಯ ಅನುಭವವಾದ ಕೂಡಲೆ, ಕೇಂದ್ರಿತರಾಗಿರಿ.

ಒತ್ತಡವನ್ನು ಕಿತ್ತೊಗೆಯಿರಿ

ನಾಲ್ಕನೆಯದ್ದು, ಕೆಲ ಸೇವಾಕಾರ್ಯಗಳನ್ನು ಕೈಗೊಳ್ಳಿರಿ, ನಿಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡಿ. ಇದು ಒತ್ತಡಕ್ಕೆ ಬಹುದೊಡ್ಡ ಮದ್ದು. ಸಮಾಜಕ್ಕೆ ನೀವು ಕೊಡುಗೆಯನ್ನು ನೀಡಲೇಬೇಕು. ಕಳಕಳಿಯ ಸೇವಾಕಾರ್ಯವು ನಿಮ್ಮಿಂದಾದ ಕೂಡಲೇ, ಅದು ನಿಮ್ಮೊಳಗೊಂದು ಅಸೀಮ ಆಂತರಿಕ ಪುನರುಜ್ಜೀವನದ ಭಾವನ್ನು ಕೊಡಮಾಡುವುದು.

ಅಪೂರ್ಣತ್ ಯನುು ಪರಿಪೂರ್ಣ ಮಸಡಿ

ಕಡೆಯದಾಗಿ, ಅಪರಿಪೂರ್ಣತೆಗೂ ಕೊಂಚ ಜಾಗ ಮಾಡಿಕೊಡಿ. ಅನ್ಯರ ಹಾಗೆಯೇ ನಿಮ್ಮಯ ಅಪರಿಪೂರ್ಣತೆಗಳನ್ನು ಸ್ವೀಕಾರ ಮಾಡಿ. ಇದು ನಿಮ್ಮ ತಾಳ್ಮೆಯನ್ನು ಹೆಚ್ಚಿಸುವುದು. ಇದು ಮನೆಯಲ್ಲೊಂದೆಡೆ ಕಸದ ಬುಟ್ಟಿಯನ್ನಿಟ್ಟಂತೆ, ಇಡೀ ಮನೆಯ ಸ್ವಚ್ಛತೆಗಾಗಿ ಕಸದ ಬುಟ್ಟಿ ಅಗತ್ಯವಾದುದು.

    Hold On!

    Don't leave without a smile

    Talk to our experts and learn more about Sudarshan Kriya

    Reverse lifestyle diseases | Reduce stress & anxiety | Raise the ‘prana’ (subtle life force) level to be happy | Boost immunity

    *
    *
    *
    *