![Gurudev Sri Sri Ravi Shankar leading a session](https://www.artofliving.org/in-en/app/uploads/bis-images/98488/2024/12/Gurudev-Sri-Sri-Ravi-Shankar-720x480-f23_35.jpg)
ಆನ್‌ಲೈನ್ ಮೆಡಿಟೇಶನ್ ಅಂಡ್ ಬ್ರೆತ್ ವರ್ಕ್‌ಶಾಪ್
ಪ್ರಪಂಚದಾದ್ಯಂತ 4.5 ಕೋಟಿ ಜನರು ತಮ್ಮದಾಗಿಸಿಕೊಂಡು ಅಭ್ಯಾಸ ಮಾಡುತ್ತಿರುವ ಅತ್ಯಂತ ಪರಿಣಾಮಕಾರಿಯಾದ ಉಸಿರಾಟದ ತಂತ್ರ - ಸುದರ್ಶನ ಕ್ರಿಯೆಯನ್ನು ಕಲಿಯಿರಿ.
ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ • ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳನ್ನು ಸುಧಾರಿಸುತ್ತದೆ • ಸಂತೋಷಮಯ ಸಾರ್ಥಕ ಜೀವನವನ್ನು ನಡೆಸಬಹುದು
*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.
ನೋಂದಾಯಿಸಿ![Gurudev Sri Sri Ravi Shankar](https://www.artofliving.org/in-en/app/uploads/bis-images/36035/2023/11/Gurudev-Sri-Sri-Ravi-Shankar-720x480-f40_29.jpg)
ಆನ್‌ಲೈನ್ ಮೆಡಿಟೇಶನ್ ಅಂಡ್ ಬ್ರೆತ್ ವರ್ಕ್‌ಶಾಪ್
ಪ್ರಪಂಚದಾದ್ಯಂತ 4.5 ಕೋಟಿ ಜನರು ತಮ್ಮದಾಗಿಸಿಕೊಂಡು ಅಭ್ಯಾಸ ಮಾಡುತ್ತಿರುವ ಅತ್ಯಂತ ಪರಿಣಾಮಕಾರಿಯಾದ ಉಸಿರಾಟದ ತಂತ್ರ - ಸುದರ್ಶನ ಕ್ರಿಯೆಯನ್ನು ಕಲಿಯಿರಿ.
ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ • ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳನ್ನು ಸುಧಾರಿಸುತ್ತದೆ • ಸಂತೋಷಮಯ ಸಾರ್ಥಕ ಜೀವನವನ್ನು ನಡೆಸಬಹುದು
*ಶಿಬಿರದಿಂದ ನಿಮಗೆ ಪ್ರಯೋಜನವಾಗುವುದರ ಜೊತೆಗೆ ನೀವು ನೀಡುವ ದೇಣಿಗೆಯನ್ನು ಆರ್ಟ್ ಆಫ್ ಲಿವಿಂಗ್ ನ ಅನೇಕ ಸಮಾಜಸೇವಾ ಕಾರ್ಯಗಳಿಗೂ ವಿನಿಯೋಗಿಸಲಾಗುತ್ತದೆ./small>
ನೋಂದಾಯಿಸಿಪ್ರಯೋಜನಗಳು
ನಿಮ್ಮ ಉಸಿರಿನ ರಹಸ್ಯಗಳನ್ನು ತಿಳಿಯಿರಿ ಮತ್ತು ಆಳವಾದ ಧ್ಯಾನದ ಅನುಭವ ಪಡೆಯಿರಿ.
![icon](https://www.artofliving.org/in-en/app/uploads/2023/06/Group-18084.png)
ಒತ್ತಡವನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ
ನಿಮ್ಮದೇ ಉಸಿರಿನ ಶಕ್ತಿಯ ಮೂಲಕ
ಧ್ಯಾನ ಮತ್ತು ಪ್ರಾಣಾಯಾಮ ಶಿಬಿರದಲ್ಲಿ ನೀವು ವಿವಿಧ ಬಗೆಯ ಪ್ರಾಣಾಯಾಮದ ತಂತ್ರಗಳ ತರಬೇತಿಯನ್ನು ಪರಿಣತರಿಂದ ಪಡೆಯುತ್ತೀರಿ. ಇದರಿಂದ ನಿಮ್ಮ ಒತ್ತಡವು ಕಡಿಮೆಯಾಗುತ್ತದೆ. ಖಿನ್ನತೆ ಹಾಗೂ ಆತಂಕ ನಿವಾರಣೆಯಾಗುತ್ತದೆ. ಮತ್ತು ನಿಮ್ಮ ಮನಸ್ಸು ತಿಳಿಯಾಗಿ ಸಕಾರಾತ್ಮಕವಾಗುತ್ತದೆ.
![icon](https://www.artofliving.org/in-en/app/uploads/2023/06/Group-3804.png)
ಮನಸ್ಸಿನ ಮೇಲಿನ ಹಿಡಿತದ
ಮೂಲಕ ಮಾನಸಿಕ ದೃಢತೆ
ಮನಸ್ಸಿನ ಸ್ವಭಾವವನ್ನು ತಿಳಿಯುವುದರಿಂದ ಜೀವನದ ಬಗ್ಗೆ ವಿಶಾಲವಾದ ದೃಷ್ಟಿಕೋನವನ್ನು ಹೊಂದುತ್ತೀರಿ. ಇದರಿಂದ ನೀವು ನಿರಾಶೆ, ಅಸಹನೆ, ಚಿಂತೆ ಮತ್ತು ಇನ್ನಿತರ ವಿಷಯಗಳಿಂದ ಬಾಧಿತರಾಗುವುದಿಲ್ಲ.
![icon](https://www.artofliving.org/in-en/app/uploads/2023/06/Group.png)
ಧ್ಯಾನ ಸುಲಭಸಾಧ್ಯ
ಸುದರ್ಶನ ಕ್ರಿಯೆಯಿಂದ
ಧ್ಯಾನಕ್ಕೆ ತೊಡಗಿದಾಗ ಮನಸ್ಸಿನ ಚಂಚಲತೆಯಿಂದ ಹತಾಶರಾಗಿದ್ದೀರಾ? ಸುದರ್ಶನ ಕ್ರಿಯೆಯು ಧ್ಯಾನ ಮತ್ತು ಪ್ರಾಣಾಯಾಮ ಶಿಬಿರದ ಪ್ರಮುಖ ಪ್ರಕ್ರಿಯೆ. ಸರಳವಾದ ಆದರೆ ಅತ್ಯಂತ ಶಕ್ತಿಶಾಲಿಯಾದ ಉಸಿರಾಟದ ಈ ತಂತ್ರವು ನಿಮ್ಮನ್ನು ಆಳವಾದ ಧ್ಯಾನದ ಸ್ಥಿತಿಗೆ ಸುಲಭವಾಗಿ ಸೆಳೆಯುತ್ತದೆ.
![icon](https://www.artofliving.org/in-en/app/uploads/2023/06/Group-3805.png)
ಆಳವಾದ ವಿಶ್ರಾಂತಿ ಪಡೆಯಿರಿ
ನಿರ್ದೇಶಿತ ಯೋಗ ಮತ್ತು ಧ್ಯಾನದ ಮೂಲಕ
ಯಾವುದೇ ಪ್ರಯತ್ನವಿಲ್ಲದೆ ಧ್ಯಾನ ಮಾಡುವ ಕ್ರಮವನ್ನು ಕಲಿಯಿರಿ. ಉತ್ತಮ ಆರೋಗ್ಯ, ಗಮನ ಮತ್ತು ವಿಶ್ರಾಂತಿಗೆ ಪೂರಕವಾದ ಸರಳ ಯೋಗಾಸನಗಳನ್ನು ಕಲಿತು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ. ಈ ವಿಶಿಷ್ಟವಾದ ಮಾರ್ಗದರ್ಶಿತ ಧ್ಯಾನಗಳು ನಿಮಗೆ ನಿಮ್ಮ ಅಂತರಂಗದ ಸೊಬಗನ್ನು ಕಾಣಿಸುತ್ತವೆ.
ಜೀವನ ಪರಿವರ್ತನೆಯ ಅನುಭವ
ಸುದರ್ಶನ ಕ್ರಿಯೆಯ ಬಗ್ಗೆ ವಿಜ್ಞಾನವು ಏನು ಹೇಳುತ್ತದೆ?
ಸುದರ್ಶನಕ್ರಿಯೆಯನ್ನು ಕುರಿತು ಈವರೆಗೂ 100ಕ್ಕಿಂತಲೂ ಹೆಚ್ಚು ಸ್ವತಂತ್ರ ಸಂಶೋಧನೆಗಳನ್ನು ಮಾಡಲಾಗಿದ್ದು, ಇವುಗಳನ್ನು ಜಗತ್ತಿನ ಎಲ್ಲಾ ಪ್ರಸಿದ್ಧವಾದ ಜರ್ನಲ್ ಗಳಲ್ಲಿ ಪ್ರಕಟವಾಗಿವೆ.
▴ 33%
6 ವಾರಗಳಲ್ಲಿ ಹೆಚ್ಚುತ್ತದೆ
ರೋಗನಿರೋಧಕ ಶಕ್ತಿ
▴ 57%
6 ವಾರಗಳಲ್ಲಿ ಕಡಿಮೆಯಾಗುತ್ತದೆ
ಒತ್ತಡ ಸೃಷ್ಟಿಸುವ ಹಾರ್ಮೋನುಗಳು
▴ 21%
1 ವಾರದಲ್ಲಿ ಹೆಚ್ಚುತ್ತದೆ
ಜೀವನದಲ್ಲಿ ತೃಪ್ತಿ
ಸುದರ್ಶನ ಕ್ರಿಯೆಯು ನಮ್ಮ ಶರೀರದಲ್ಲಿ, ಸಾಮರಸ್ಯದೊಂದಿಗೆ ಸೌಹಾರ್ದತೆಯನ್ನು ತರುವಲ್ಲಿ ಸಹಕಾರಿಯಾಗಿದೆ.
![Dainik Bhaskar](https://www.artofliving.org/in-en/app/uploads/bis-images/101937/2023/06/Dainik-Bhaskar-2-150x50.png)
ಇಡೀ ಭೂ ಗ್ರಹದಲ್ಲಿಯೇ ,ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ಆಧ್ಯಾತ್ಮಿಕವಾಗಿ ಅತ್ಯಂತ ವೇಗವಾಗಿ ಪ್ರಗತಿಯನ್ನು ಸಾಧಿಸುತ್ತಿದೆ.
![yoga journal](https://www.artofliving.org/in-en/app/uploads/bis-images/101943/2023/06/yoga-journal-150x50.png)
ಜೀವನವನ್ನೇ ಪರಿವರ್ತಿಸುತ್ತದೆ
![CNN](https://www.artofliving.org/in-en/app/uploads/bis-images/101940/2023/06/cnn-1-150x50.png)
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿನಾನು ಸೇರಬೇಕೆಂದಿದ್ದೇನೆ ಆದರೆ…
ಈ ಅಭ್ಯಾಸದಿಂದ ನನ್ನ ಆರೋಗ್ಯವು ಸುಧಾರಿಸುತ್ತದೆಯೇ?
ನಾಲ್ಕು ದಿವಸಗಳ ಆನ್ ಲೈನ್ ಕಾರ್ಯಾಗಾರವು ನಿಜವಾಗಿಯೂ ನನ್ನ ಜೀವನವನ್ನು ಬದಲಿಸಬಲ್ಲುದೆ?
ಈ ತಂತ್ರಗಳಿಂದ ಯಾವ ಅಡ್ಡ ಪರಿಣಾಮಗಳೇನಾದರೂ ಇವೆಯೆ?
ಎಂದಿಗೂ ಮಾಸದ ಮುಗುಳ್ನಗೆ ಅಥವಾ ಅಂತರಂಗದ ಪ್ರಸನ್ನತೆ ಮಾತ್ರ ಇದರ ಅಡ್ಡ ಪರಿಣಾಮ! ಸುದರ್ಶನ ಕ್ರಿಯೆಯನ್ನು ಜಾಗತಿಕವಾಗಿ, ಪ್ರತಿನಿತ್ಯ ಕೋಟ್ಯಂತರ ಜನರು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಅದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಂಡ ಅನೇಕ ನಿದರ್ಶನಗಳಿವೆ.
ನಮ್ಮ ತಂತ್ರಗಳನ್ನು ಅತ್ಯಂತ ಸುರಕ್ಷಿತವಾಗಿ ಅಭ್ಯಾಸ ಮಾಡಬಹುದು. ನಿಮಗೆ ಆಸ್ತಮಾ, ರಕ್ತದ ಏರೊತ್ತಡ, ಹೃದಯದ ಸಮಸ್ಯೆಗಳು ಮತ್ತು ಬೆನ್ನು ನೋವಿನ ಸಮಸ್ಯೆಗಳಿದ್ದಲ್ಲಿ, ಕಾರ್ಯಾಗಾರದಲ್ಲಿ ನಿಮಗೆ ಪ್ರತ್ಯೇಕವಾದ ಮಾರ್ಗದರ್ಶನವನ್ನು ನೀಡಲಾಗುತ್ತದೆ.
ನನಗೆ ಒತ್ತಡವಿಲ್ಲ, ಆದರೂ ಈ ಕಾರ್ಯಗಾರಕ್ಕೆ ನಾನೇಕೆ ಸೇರಿಕೊಳ್ಳಬೇಕು?
ನಿಮಗೆ ಒತ್ತಡವಿಲ್ಲದಿದ್ದರೆ ಅದು ಬಹಳ ಸಂತಸದ ಸುದ್ದಿ! ನೀವು ಉತ್ತಮವಾದ ಜೀವನವನ್ನೇ ನಡೆಸುತ್ತಿರುವಿರಿ. ಆದರೆ ಹಣವೆಲ್ಲಾ ಖರ್ಚಾದ ನಂತರ ಹಣವನ್ನು ಕೂಡಿಡಬೇಕೆಂದು ನಿರ್ಧರಿಸುವಿರಾ? ಅಥವಾ ಅನಾರೋಗ್ಯದಿಂದ ಪೀಡಿತರಾದ ನಂತರವೇ ವ್ಯಾಯಾಮ ಮಾಡಬೇಕೆಂದು ನಿರ್ಧರಿಸುತ್ತೀರಾ? ಇಲ್ಲ, ಅಲ್ಲವೆ? ಅದೇ ರೀತಿ, ಭವಿಷ್ಯದಲ್ಲಿ ನಿಮಗೆ ಬೇಕಾಗುವ ಮನಸ್ಸಿನ ಹಿಡಿತ, ಸಹಿಷ್ಣುತೆ ಮುಂತಾದ ಆಂತರಿಕ ಶಕ್ತಿಗಳನ್ನು ಈಗಿಂದಲೇ ಬೆಳೆಸಿಕೊಳ್ಳಬಹುದಲ್ಲವೆ? ಅದೇನೇ ಇರಲಿ, ನಿಮ್ಮ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನೀವು ಸ್ವತಂತ್ರರು. ಮುಂದೊಮ್ಮೆ ನೀವು ಒತ್ತಡಗಳಿಂದ ಪೀಡಿತರಾದಾಗ ಅವುಗಳಿಂದ ಪಾರಾಗಲು ಈ ಕಾರ್ಯಾಗಾರದಲ್ಲಿ ಭಾಗಿಯಾಗಬಹುದು.
ನೀವು 3000 ಸಾವಿರ ರೂಪಾಯಿ ಶುಲ್ಕವನ್ನು ಏಕೆ ತೆಗೆದುಕೊಳ್ಳುತ್ತೀರಿ?
ಈ ಶಿಬಿರದ ಮೂಲಕ ನೀವು ಜೀವನಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಲಿಯುವುದರ ಜೊತೆಗೆ ಭಾರತದಲ್ಲಿ ಸಂಸ್ಥೆಯು ನಡೆಸುತ್ತಿರುವ ಅನೇಕ ಸೇವಾಯೋಜನೆಗಳಿಗೂ ಸಹಾಯ ಮಾಡಿದಂತಾಗುತ್ತದೆ. ಉದಾಹರಣೆಗೆ, ಬುಡಕಟ್ಟು ಜನಾಂಗದ 70,000 ಮಕ್ಕಳಿಗೆ ಉಚಿತ ಶಿಕ್ಷಣ, 43 ನದಿಗಳ ಪುನಶ್ಚೇತನ, 2,04,802 ಗ್ರಾಮೀಣ ಯುವಕರಿಗೆ ಜೀವನೋಪಾಯದ ಮಾರ್ಗವನ್ನು ಕಲ್ಪಿಸುವ ಕೌಶಲ್ಯಗಳ ಮೂಲಕ ಯುವ ಸಬಲೀಕರಣ, ಸೌರ ದೀಪಗಳ ಮೂಲಕ 720 ಗ್ರಾಮಗಳಿಗೆ ಬೆಳಕು, ಮುಂತಾದ ಅನೇಕ ಯೋಜನೆಗಳಿಗೆ ನಿಮ್ಮ ದೇಣಿಗೆಯು ಸದ್ವಿನಿಯೋಗವಾಗುತ್ತದೆ. ಹೀಗಾಗಿ, ಈ ಶಿಬಿರದ ಪ್ರಯೋಜನವನ್ನು ಪಡೆದವರು ಈ ಶುಲ್ಕ ಬಹಳ ಕಡಿಮೆ ಎನ್ನುತ್ತಾರೆ. ಸಂಸ್ಥೆಯ ಮಹತ್ಕಾರ್ಯಗಳ ಜೊತೆಗೆ ಕೈಜೋಡಿಸಲು ಇಚ್ಛಿಸುವವರು ಹೆಚ್ಚಿನ ದೇಣಿಗೆಯನ್ನೂ ನೀಡಬಹುದು.