ನೈಸರ್ಗಿಕ ಕೃಷಿ ತಂತ್ರಗಳೊಂದಿಗೆ ರೈತರ ಸಬಲೀಕರಣ

ಮಣ್ಣಿನ ಗುಣಮಟ್ಟವನ್ನು ಕಾಪಾಡುವುದು, ಜೀವವೈವಿಧ್ಯವನ್ನು ರಕ್ಷಿಸುವುದು ಮತ್ತು ಭಾರತದ ರೈತರನ್ನು ಉನ್ನತಿಗೊಳಿಸುವುದು.

icon

ಕಾರ್ಯತಂತ್ರ

ನೈಸರ್ಗಿಕ ಕೃಷಿ ತಂತ್ರಗಳಲ್ಲಿ ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು

icon

ಪರಿಣಾಮ

ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಉತ್ಪಾದನೆ

icon

ವ್ಯಾಪ್ತಿ

22 ಲಕ್ಷಕ್ಕೂ ಹೆಚ್ಚು ರೈತರಿಗೆ ನೈಸರ್ಗಿಕ ಕೃಷಿ ತಂತ್ರಗಳಲ್ಲಿ ತರಬೇತಿ ನೀಡಲಾಗಿದೆ.

ಅವಲೋಕನ

ಸಾಲ, ಬೆಳೆ ವೈಫಲ್ಯ ಮತ್ತು ಸಾಮಾಜಿಕ ಒತ್ತಡಗಳು ಭಾರತದ  ಅನ್ನದಾತರ ಬಹು ದೊಡ್ಡ ಸಮಸ್ಯೆಗಳು. ರೈತರು ದುಬಾರಿ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಬೀಜಗಳನ್ನು ಖರೀದಿಸಲು ಬ್ಯಾಂಕುಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ. ಮಳೆ ಕೈಕೊಟ್ಟರೆ ರೈತರು ಬೆಳೆ ಕಳೆದುಕೊಂಡು ಸಾಲ ತೀರಿಸಲು ದಾರಿ ಕಾಣದೆ ಪರದಾಡುತ್ತಾರೆ.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು  ಆರಂಭಿಸಿದ " ಶ್ರೀ ಶ್ರೀ ನ್ಯಾಚುರಲ್ ಫಾರ್ಮಿಂಗ್ ಪ್ರಾಜೆಕ್ಟ್ " ಯೋಜನೆಯು ಭಾರತದಾದ್ಯಂತ ನೈಸರ್ಗಿಕ ಕೃಷಿ ತಂತ್ರಗಳನ್ನು ಉತ್ತೇಜಿಸುತ್ತಿದೆ. ಇದು ರೈತರಿಗೆ ಕಡಿಮೆ ವೆಚ್ಚ, ಸುಧಾರಿತ ಉತ್ಪಾದಕತೆ ಮತ್ತು ಲಾಭದ ಭರವಸೆಯನ್ನು ನೀಡುತ್ತದೆ.

ಪ್ರಸ್ತುತ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಹೈಬ್ರಿಡ್ ಬೀಜಗಳ ಖರೀದಿಗೆ ರೈತರು ದೊಡ್ಡ ಮೊತ್ತದ ಸಾಲವನ್ನು ಮಾಡಬೇಕಾಗುತ್ತದೆ ಮಾತ್ರವಲ್ಲದೆ ಈ ರಸಾಯನಗಳು ನೀರನ್ನು ಕಲುಷಿತಗೊಳಿಸಿ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಖಾಲಿ ಮಾಡಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೈಸರ್ಗಿಕ ಕೃಷಿ ತಂತ್ರಗಳು ಸ್ವಾಭಾವಿಕವಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರವಾಗಿರುವುದರೊಂದಿಗೆ ಕಡಿಮೆ ಹೂಡಿಕೆಯಲ್ಲಿ ಮಾಡಬಹುದಾಗಿವೆ.

ಭಾರತದ ಆರ್ಥಿಕತೆಯು ಪ್ರಾಥಮಿಕವಾಗಿ ಕೃಷಿ ಪ್ರಧಾನವಾಗಿದ್ದ ಆರಂಭಿಕ ಕಾಲದಲ್ಲಿ ಈ ತಂತ್ರಗಳನ್ನು ಪ್ರಧಾನವಾಗಿ ಬಳಸಲಾಗುತ್ತಿತ್ತು. ಆದರೆ ಅರವತ್ತರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿಯು ರಸಗೊಬ್ಬರ ಮತ್ತು ಹೈಬ್ರಿಡ್ ಬೀಜಗಳ ಅತಿರೇಕದ ಬಳಕೆಯನ್ನು ಪ್ರೇರೇಪಿಸಿತು. ಇದು ಭಾರತೀಯ ರೈತರನ್ನು ಭಾರೀ ಸಾಲದ ಅಡಿಯಲ್ಲಿ ಹೂತುಹಾಕಿ ಪರಿಸರ ವ್ಯವಸ್ಥೆಯ ಮೇಲೆ ಋಣಾತ್ಮಕವಾದ ಪರಿಣಾಮವನ್ನು ಬೀರಿತು. ರೈತರಿಗೆ ಸಹಾಯ ಮಾಡುವ, ಮಣ್ಣಿನ ಗುಣಮಟ್ಟವನ್ನು ಕಾಪಾಡುವ ಮತ್ತು ಪರಿಸರ ವ್ಯವಸ್ಥೆಯನ್ನು ಉಳಿಸುವ ಮತ್ತೊಂದು ಕೃಷಿ ಕ್ರಾಂತಿಗೆ ಪ್ರಸ್ತುತ ಕಾಲವು ಕರೆ ನೀಡುತ್ತಿದೆ."

ಶ್ರೀ ಶ್ರೀ ನೈಸರ್ಗಿಕ ಕೃಷಿ ಯೋಜನೆಯು ಈ ಕ್ರಾಂತಿಯನ್ನು ಪ್ರಾರಂಭಿಸಿದೆ.

ಕಾರ್ಯತಂತ್ರ

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯುವಾಚಾರ್ಯರು, ಕೃಷಿ ತರಬೇತುದಾರರು ಮತ್ತು ಹಲವಾರು ಸರ್ಕಾರಿ ಅಧಿಕಾರಿಗಳ ಬಹುಮುಖಿ ಪ್ರಯತ್ನಗಳು ರಾಷ್ಟ್ರದಾದ್ಯಂತ ರೈತರಿಗೆ ಸಹಾಯ ಮಾಡುತ್ತಿವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಎಲ್ಲ ರಾಜ್ಯಗಳಲ್ಲಿ ನೈಸರ್ಗಿಕ ಕೃಷಿಯನ್ನು ಕುರಿತು ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ.

ತರಬೇತುದಾರರು ಸ್ಥಳೀಯ ಬೀಜಗಳು, ದೇಶೀಯ ಹಸುಗಳು, ನೈಸರ್ಗಿಕ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಸೈದ್ಧಾಂತಿಕ ಮಾಹಿತಿಯೊಂದಿಗೆ   ಪ್ರಾಯೋಗಿಕ ಪ್ರದರ್ಶನವನ್ನೂ  ಸಹ ನಡೆಸುತ್ತಾರೆ.

ಕೃಷಿ ತರಬೇತಿ ಕಾರ್ಯಕ್ರಮವು ರೈತರಿಗೆ ಈ ಕೆಳಗಿನ ತರಬೇತಿ ನೀಡುತ್ತದೆ:

  • ವಿವಿಧ ಸಾವಯವ ಗೊಬ್ಬರಗಳನ್ನು ತಯಾರಿಸುವ ವಿಧಾನಗಳು
  • ಗೊಬ್ಬರವನ್ನು ಹೊಲದಲ್ಲಿ ಸರಿಯಾಗಿ ಬಳಸುವ ವಿಧಾನ
  • ಹೊಲವನ್ನು ಕಾಪಾಡಿಕೊಳ್ಳಲು ಸಾವಯವ ಮಾರ್ಗಗಳು
  • ಸುಗ್ಗಿಯ ನಂತರದ ಉತ್ಪನ್ನವನ್ನು ನೈಸರ್ಗಿಕವಾಗಿ ನಿರ್ವಹಿಸುವ ವಿಧಾನಗಳು

ತರಬೇತಿ ಪೂರ್ಣವಾದ ನಂತರ, ಆರ್ಟ್ ಆಫ್ ಲಿವಿಂಗ್ ತಂಡವು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಸಹಾಯ ಮಾಡುತ್ತದೆ.

ಅಲ್ಲದೇ ರೈತರ ಸಮಸ್ಯೆಗಳಿಗೆ ಸಾಮೂಹಿಕ ಪ್ರಯತ್ನದ ಮೂಲಕ ಪರಿಹಾರವನ್ನು ನೀಡಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು "ಕಿಸ್ಸಾನ್ ಮಂಚ್ " ಎಂಬ ವೇದಿಕೆಯನ್ನು ಒದಗಿಸಿದೆ.

ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲೆಂದು  ನಾವು ಅವರಿಗೆ ನೇರ ಮಾರುಕಟ್ಟೆಯನ್ನೂ  ಸಹ ಒದಗಿಸುತ್ತೇವೆ. 

ಮೂರು ದಿನಗಳ ತರಬೇತಿ

ನೈಸರ್ಗಿಕ ಕೃಷಿಯ

ಮಾರ್ಗದರ್ಶನ

ಸ್ಥಳ ಮತ್ತು ಋತುವಿನ ಆಧಾರದ ಮೇಲೆ ವೈಯಕ್ತಿಕ ಮಾರ್ಗದರ್ಶನ.

ಕೈ ಹಿಡಿಯುವುದು

  • ಯುವಾಚಾರ್ಯರು ನೈಸರ್ಗಿಕ ಕೃಷಿಯನ್ನು ಉಳಿಸಿಕೊಳ್ಳಲು ರೈತರಿಗೆ ಅನುವು ಮಾಡಿಕೊಡುತ್ತಾರೆ.

ಕಿಸಾನ್ ಮಂಚ್

ರೈತರು ಭೇಟಿಯಾಗಿ ಸಮಸ್ಯೆಗಳು ಮತ್ತು ವಿಚಾರಗಳನ್ನು ಚರ್ಚಿಸುತ್ತಾರೆ

ನೇರ ಮಾರುಕಟ್ಟೆ

ಮಧ್ಯವರ್ತಿಗಳನ್ನು ತೊಡೆದುಹಾಕುವುದು ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ದರದಲ್ಲಿ ಮಾರಾಟ ಮಾಡುವುದನ್ನು ಖಾತ್ರಿಪಡಿಸುವುದು

ಕೃಷಿ ಮನುಷ್ಯನ ಅಸ್ತಿತ್ವದ ಬೆನ್ನೆಲುಬು. ಯಾವುದೇ ನಾಗರಿಕತೆಯ ಏಳಿಗೆಗೆ ಕೃಷಿಯು ಆರೋಗ್ಯಕರ ಮತ್ತು ಸುಸ್ಥಿರವಾಗಿರಬೇಕು. ನಮ್ಮ  ಪ್ರಾಥಮಿಕ ಉದ್ಯಮವಾಗಿರುವ ಕೃಷಿಯತ್ತ ನಾವು ಪುನಃ  ಗಮನ ಹರಿಸಬೇಕು.

- ಗುರುದೇವ ಶ್ರೀ ಶ್ರೀ ರವಿಶಂಕರ್

ಕ್ರಾಂತಿಯಲ್ಲಿ ಸೇರಿಕೊಳ್ಳಿ

ನಿಮ್ಮೆಲ್ಲರ ಬೆಂಬಲವಿದ್ದರೆ, ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿದೆ. ಪರಿಸರಕ್ಕೆ ಸ್ನೇಹದಾಯಕವಾಗಿರುವ ವಿಧಾನಗಳೊಂದಿಗೆ ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ಸಹಾಯ ಮಾಡಬಹುದು.

ದಾನ ಮಾಡಿ

ಪರಿಣಾಮ

ಶ್ರೀ ಶ್ರೀ ನೈಸರ್ಗಿಕ ಕೃಷಿಯು ಪ್ರಾಥಮಿಕವಾಗಿ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತರಬೇತಿ ನೀಡಿದೆ. ಅವರ ವೆಚ್ಚವು ಪ್ರತಿ ಎಕರೆಗೆ ರಾಸಾಯನಿಕ ಕೃಷಿಯ ವೆಚ್ಚದ 1/5 ರಷ್ಟು ಕಡಿಮೆಯಾಗಿದೆ ಮತ್ತು ಈ ಹಿಂದೆ ಅಗತ್ಯವಿದ್ದ ಐದನೇ ಒಂದು ಭಾಗಕ್ಕಿಂತ ಕಡಿಮೆ ನೀರು ಬೇಕಾಗುತ್ತದೆ.

ಕಡಿಮೆ ಖರ್ಚು ವೆಚ್ಚ

ಕಡಿಮೆ ನೀರಿನಿಂದ ಹೆಚ್ಚು ಭೂಮಿಯಲ್ಲಿ ಕೃಷಿ

ಪುನಶ್ಚೇತನಗೊಂಡ ಭೂಮಿ

ಹೆಚ್ಚಿದ ಇಳುವರಿ

ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆ

ರಸಗೊಬ್ಬರಗಳ ಮೇಲಿನ ಸಬ್ಸಿಡಿಯ ಉಳಿತಾಯ