ಆಂತರಿಕ ಶಾಂತಿಯೊಂದಿಗೆ ವಿಶ್ವ ಶಾಂತಿ ಬರುತ್ತದೆ

ಮಾತುಕತೆಯ ಮೂಲಕ ಸಂಘರ್ಷಗಳನ್ನು ಪರಿಹರಿಸುವುದು ಮತ್ತು ವೈಯಕ್ತಿಕ ಮಟ್ಟದಲ್ಲಿ ಶಾಂತಿಯನ್ನು ಬೆಳೆಸುವುದು.

icon

ಸವಾಲು

  • ಉಗ್ರಗಾಮಿಗಳು, ಸರ್ಕಾರ ಮತ್ತು ಸ್ಥಳೀಯ ಸಮುದಾಯಗಳ ನಡುವೆ ಇರುವ ವಿಶ್ವಾಸದ ಕೊರತೆ.
  • ವ್ಯಕ್ತಿಗಳಲ್ಲಿ ಆಳವಾಗಿ ಬೇರೂರಿರುವ ಒತ್ತಡ.

icon

ತಂತ್ರ

ಸಂಭಾಷಣೆ ಮತ್ತು ವಿಶೇಷ ಆಘಾತ-ಪರಿಹಾರ ಮತ್ತು ಒತ್ತಡ-ನಿವಾರಣೆ ಕಾರ್ಯಾಕ್ರಮಗಳು

icon

ಪರಿಣಾಮ

  • 7400ಕ್ಕೂ ಹೆಚ್ಚು ಸಶಸ್ತ್ರ ದಂಗೆಕೋರರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಮರುಸೇರ್ಪಡೆಗೊಂಡರು.
  • 16,000ಕ್ಕೂ ಹೆಚ್ಚು ಯುದ್ಧ ಪೀಡಿತ ಮಕ್ಕಳಿಗೆ ಆಘಾತಗಳಿಂದ ಹೊರಬರುವ ಪರಿಹಾರ ಮಾರ್ಗಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು.
  • ಯುದ್ಧ ಪೀಡಿತ ಪ್ರದೇಶಗಳಲ್ಲಿ ಬದುಕಿ ಉಳಿದ 20,000ಕ್ಕೂ ಹೆಚ್ಚು ಜನರಿಗೆ ಪುನರ್ವಸತಿಗಾಗಿ ಉಪಕರಣಗಳನ್ನು ಒದಗಿಸಲಾಯಿತು.
  • ಹೋರಾಡುತ್ತಿರುವ ಬಣಗಳ ನಡುವೆ ಶಾಂತಿ ಸ್ಥಾಪನೆಗಾಗಿ ಮಾತುಕತೆಗಳನ್ನು ಪ್ರಾರಂಭಿಸಲಾಯಿತು.

ಅವಲೋಕನ

ವಿಶ್ವ ಶಾಂತಿಯನ್ನು ತರಬೇಕಾದರೆ, ಮೊದಲು, ವಿಭಿನ್ನ ಸಿದ್ಧಾಂತಗಳನ್ನೊಳಗೊಂಡ ಗುಂಪುಗಳ ನಡುವೆ ಇರುವ ಸಂಘರ್ಷಗಳನ್ನು ಪರಿಹರಿಸಬೇಕಾಗುತ್ತದೆ. ಇದು ಅಷ್ಟೇನೂ ಸುಲಭದ ಕೆಲಸವಲ್ಲ! ಅವರೆಲ್ಲರ ಹಿತಾಸಕ್ತಿಗಳಲ್ಲಿರುವ ಅಭಿಪ್ರಾಯ ಭೇದಗಳು, ಅಲ್ಲಿ ನಡೆದ ಹಿಂಸಾಚಾರದ ಸುದೀರ್ಘ ಇತಿಹಾಸ, ಅವರ ನಡುವೆ ಇರುವ ವಿಶ್ವಾಸದ ಕೊರತೆ, ಅಭಿಪ್ರಾಯ ಭೇದಗಳು ಮತ್ತು ವ್ಯಕ್ತಿಗಳಲ್ಲಿರುವ ಹೆಚ್ಚಿನ ಪ್ರಮಾಣದ ಒತ್ತಡ,ಇವೇ ಮುಂತಾದ ಅಡೆತಡೆಗಳನ್ನೆಲ್ಲ ಪರಿಹರಿಸಿದ ಬಳಿಕವೇ ನಾವು ನಮ್ಮ ಮುಂದಿನ ಹೆಜ್ಜೆಯನ್ನಿಡಬೇಕಾಗುತ್ತದೆ.

ವ್ಯಕ್ತಿಗಳ ಹೃದಯದಲ್ಲಿ ಆಂತರಿಕ ಶಾಂತಿಯನ್ನು ತರುವ ಮೂಲಕ, ಈ ಕ್ಲಿಷ್ಟಕರವಾದ ಸವಾಲುಗಳನ್ನು ಎದುರಿಸಿದ ನಂತರವೇ, ನಾವು ಅವುಗಳನ್ನು ದಾಟಿ ಹೋಗಬಹುದು. ಆದರೆ ಇದನ್ನು ಸಾಧಿಸಬೇಕಾದರೆ, ನಮ್ಮಲ್ಲಿ ಅಪರಿಮಿತವಾದ ತಾಳ್ಮೆ ಮತ್ತು ಪರಿಶ್ರಮಗಳು ಇರುವುದು ಅತ್ಯಗತ್ಯ, ಎಂಬುದಾಗಿ ಶ್ರೀ ಶ್ರೀ ರವಿಶಂಕರ್ ಗುರುದೇವರು ದೃಢವಾಗಿ ನಂಬುತ್ತಾರೆ. ಹಾಗೆಯೇ ವೈಯಕ್ತಿಕ ಮಟ್ಟದಲ್ಲಿ , ಈ ಸಂಘರ್ಷಗಳಿಗೆ ಕಾರಣರಾದ ಅಪರಾಧಿಗಳಲ್ಲಿ ಪರಿವರ್ತನೆಯನ್ನು ತರುವುದು ಕೂಡ ಅಷ್ಟೇ ಅವಶ್ಯವಾದುದು ಹಾಗೂ ಇವರಿಂದಾಗಿ ದೌರ್ಜನ್ಯಕ್ಕೊಳಗಾದ ಬಲಿಪಶುಗಳಿಗೆ ಸಾಂತ್ವನವನ್ನು ತಂದು ಕೊಟ್ಟು ಅವರಿಗೆ ರಕ್ಷಣೆಯನ್ನು ಕೊಡುವುದು ಕೂಡ ಅಷ್ಟೇ ಪ್ರಾಮುಖ್ಯವಾಗಿರುವುದು. ಅವರ ನಡುವಿನ ಸಂವಾದ ಮತ್ತು ಮಾತುಕತೆಗಳನ್ನು ಸುಗಮಗೊಳಿಸುವ ಮೂಲಕ, ನಾವು ಪರಸ್ಪರರಲ್ಲಿ ವಿಶ್ವಾಸವನ್ನು ಮೂಡಿಸಬಹುದು. ಹೀಗೆ ಏಕಕಾಲದಲ್ಲಿ ಈ ಎಲ್ಲಾ ವಿಧದ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ , ನಾವು ವಿಶ್ವ ಶಾಂತಿಯ ಕನಸನ್ನು ನನಸು ಮಾಡಬಹುದಾಗಿದೆ.

ಪೂಜ್ಯ ಗುರುದೇವರು ವೈಯಕ್ತಿಕವಾಗಿ ಹಾಗೂ ತಮ್ಮ ಕೆಲವು ಸ್ವಯಂಸೇವಕರ ಮೂಲಕ ,ಇಂತಹ ಎಷ್ಟೋ ಸಂಘರ್ಷಗಳನ್ನು ಪರಿಹರಿಸುವಲ್ಲಿ ಮಧ್ಯಸ್ಥಿಕೆಯನ್ನು ವಹಿಸಿ, ಶಾಂತಿಯನ್ನು ಸ್ಥಾಪನೆ ಮಾಡಿದ್ದಾರೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಹಲವಾರು ಮಧ್ಯಸ್ಥಿಕೆಗಾರರು, ಹಲವು ಶ್ರೇಣಿಯ ಸರ್ಕಾರದ ಅಧಿಕಾರಿಗಳು ಹಾಗೂ ಮಂತ್ರಿಗಳು ಭಾಗಿಯಾಗಿರುತ್ತಾರೆ. ಎಚ್ಚರಿಕೆಯಿಂದ ರಚಿಸಲಾದ ಒತ್ತಡ-ನಿವಾರಣೆಯ ಮತ್ತು ಆಘಾತ-ಪರಿಹಾರದ ಕಾರ್ಯಕ್ರಮಗಳ ಮೂಲಕ, ಆರ್ಟ್ ಆಫ್ ಲಿವಿಂಗ್ ಮತ್ತು ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ ಸಂಸ್ಥೆಗಳು, ದಟ್ಟ ಕಾಡುಗಳಲ್ಲಿನ ಒಳಭಾಗಗಳನ್ನು ಕೂಡ ಪ್ರವೇಶಿಸಿ, ಸಾವಿರಾರು ಜನರಿಗೆ ಆಂತರಿಕ ಮಟ್ಟದ ಶಾಂತಿಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿವೆ. ಇಂತಹ ಸಹಾಯ ಪಡೆದವರಲ್ಲಿ ಉಗ್ರಗಾಮಿಗಳು, ಸಶಸ್ತ್ರ ದಂಗೆಕೋರರು, ಯುದ್ಧ ಪರಿಣತರು, ನಿರಾಶ್ರಿತರ ಶಿಬಿರಗಳಲ್ಲಿ ಬದುಕುಳಿದವರು ಮತ್ತು ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಗುಂಪುಗಳು ಪ್ರಮುಖರಾಗಿದ್ದಾರೆ.

ನಮ್ಮ ಈ ರೀತಿಯ ಮಧ್ಯಸ್ಥಿಕೆಗಳು ಅವರಲ್ಲಿ ಸಕಾರಾತ್ಮಕ ಬೆಳವಣಿಗೆಗಳಿಗೂ ಕಾರಣವಾಗಿವೆ. ತತ್ಪರಿಣಾಮವಾಗಿ ಅಲ್ಲಿನ ಉಗ್ರಗಾಮಿಗಳು ಮತ್ತು ಸಶಸ್ತ್ರ ಬಂಡುಕೋರರು ತಾವಾಗಿ ಮುಂದೆ ಬಂದು ಅಲ್ಲಿನ ಸರಕಾರಕ್ಕೆ ಸಂಪೂರ್ಣ ಶರಣಾಗಿ, ದೀರ್ಘಕಾಲದ ಸಂಘರ್ಷಗಳನ್ನು ಕೊನೆಗೊಳಿಸಿದ್ದಾರೆ. ನಮ್ಮ ಮಧ್ಯಸ್ಥಿಕೆಗಳು ಯುದ್ಧದಿಂದ ಬದುಕುಳಿದವರಿಗೂ ಹೊಸ ಜೀವನವನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿವೆ.

“ನಾನು ಮಿಲಿಟರಿ ಮಾದರಿಯ ಸಂಘಟನೆಯಲ್ಲಿ ಜಿಲ್ಲಾ ಕಮಾಂಡರ್ ಆಗಿದ್ದೆ. ನಾನು ಯಾವಾಗಲೂ ನನ್ನೊಂದಿಗೆ ಬಂದೂಕು ತೆಗೆದುಕೊಂಡು ಹೋಗುತ್ತಿದ್ದೆ. ನನಗೆ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ, ಏಕೆಂದರೆ ನಾನು ಚಿಂತೆ ಮತ್ತು ಪಾಪಪ್ರಜ್ಞೆಯಲ್ಲಿಯೇ ಸದಾ ಕಾಲವೂ ಮುಳುಗಿರುತ್ತಿದ್ದೆ. ನಾನು ನಿದ್ರೆಗಾಗಿ ಮಾತ್ರೆಗಳನ್ನು ಆಶ್ರಯಿಸುತ್ತಿದ್ದೆ. "ಆರ್ಟ್ ಆಫ್ ಲಿವಿಂಗ್" ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ನಾನು ಏನು ತಪ್ಪು ಮಾಡುತ್ತಿದ್ದೇನೆ, ಎಂಬುದನ್ನು ನಾನು ಅರಿತುಕೊಂಡೆ ಮತ್ತು ನಾನು ಕೈಗೊಂಡಿರುವ ಹಿಂಸೆಯ ಹಾದಿಯನ್ನು ತ್ಯಜಿಸಿದೆ.

ನಮ್ಮ ತಂತ್ರ

ನಾವು ಈ ಕೆಳಗಿನ ಎಲ್ಲಾ ಅಂಶಗಳನ್ನು ಒಳಗೊಂಡಿರುವ ದೀರ್ಘಕಾಲೀನ ಕಾರ್ಯಕ್ರಮಗಳನ್ನು ವಿವಿಧ ಹಂತಗಳ ಮೂಲಕ ಕೈಗೊಳ್ಳುತ್ತೇವೆ:

icon

ಒಳಗಿನಿಂದ ಶಾಂತಿಯನ್ನು ತರುವುದು

ಆಘಾತ ಮತ್ತು ಒತ್ತಡ ಪರಿಹಾರ ಕಾರ್ಯಕ್ರಮಗಳ ಮೂಲಕ

icon

ಬಹು ಗುಂಪು ಸಂಭಾಷಣೆ

ಬಹು ಮಧ್ಯಸ್ಥಗಾರರು ಮತ್ತು ಬಣಗಳ ನಡುವೆ

icon

ಸ್ಥಳೀಯ ಸಮುದಾಯ ಕಟ್ಟಡ

ಗುಣಪಡಿಸುವ ಪ್ರಕ್ರಿಯೆಯಲ್ಲಿ ಪರಸ್ಪರ ಬೆಂಬಲಿಸಿ

icon

ಅಗತ್ಯಗಳನ್ನು ಪೂರೈಸುವುದು

ತುರ್ತು ಪರಿಸ್ಥಿತಿಯಲ್ಲಿ ಅಗತ್ಯಗಳನ್ನು ಆಧರಿಸಿ

icon

ವೇದಿಕೆಗಳನ್ನು ರಚಿಸುವುದು

ಸಮ್ಮೇಳನಗಳು, ದೊಡ್ಡ ಥಿಂಕ್-ಟ್ಯಾಂಕ್‌ಗಳು ಮತ್ತು ಬಾಹ್ಯ ಬೆಂಬಲ

ಶಾಂತಿಯು ಕೇವಲ ಸಂಘರ್ಷಣೆಯ ಅನುಪಸ್ಥಿತಿಯಲ್ಲ; ಇದು ನಮ್ಮೊಳಗಿನ ಸಕಾರಾತ್ಮಕ ವಿದ್ಯಮಾನವಾಗಿದೆ. ನಮ್ಮ ಮನಸ್ಸು ಶಾಂತವಾಗಿದ್ದಾಗ, ನಮ್ಮ ಬುದ್ಧಿಯು ತೀಕ್ಷ್ಣವಾಗುತ್ತದೆ, ನಮ್ಮ ಭಾವನೆಗಳು ಸಕಾರಾತ್ಮಕ ಮತ್ತು ಹಗುರವಾಗುತ್ತವೆ ಮತ್ತು ನಮ್ಮ ನಡವಳಿಕೆಯು ಹೆಚ್ಚು ರಚನಾತ್ಮಕವಾಗಿರುತ್ತದೆ. ಇವು ಆಂತರಿಕ ಶಾಂತಿಯ ಪರಿಣಾಮಗಳಾಗಿವೆ ಮತ್ತು ಆಂತರಿಕ ಶಾಂತಿಯು ವಿಶ್ವ ಶಾಂತಿಗೆ ಪ್ರಮುಖ ಕಾರಣವಾಗಿದೆ.

- ಗುರುದೇವ ಶ್ರೀ ಶ್ರೀ ರವಿಶಂಕರ್

ಪರಿಣಾಮ

ಕೈಗೊಂಡ ಸೇವಾ ಯೋಜನೆಗಳ ಮುಖ್ಯಾಂಶಗಳು 52 ವರ್ಷ ಹಳೆಯದಾದ ಕೊಲಂಬಿಯಾ- ಸಂಘರ್ಷವನ್ನು ಪರಿಹರಿಸುವಲ್ಲಿನ ಪಾತ್ರ, 2016

ಅಂತಾರಾಷ್ಟ್ರೀಯ ಸಮುದಾಯದಲ್ಲಿ ನಡೆಸಲ್ಪಟ್ಟ ಎಲ್ಲಾ ವಿಧದ ಮಧ್ಯಸ್ಥಿಕೆಗಳು ವಿಫಲಗೊಂಡು, ಎಲ್ಲರೂ ಅವುಗಳನ್ನು ವಿರೋಧಿಸುತ್ತಿರುವಾಗ, 2015ರಲ್ಲಿ ಕೊಲಂಬಿಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಲು FARC ನಾಯಕರನ್ನು ಪ್ರೇರೇಪಿಸುವಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಕೊಲಂಬಿಯಾದಲ್ಲಿ ಆರ್ಟ್ ಆಫ್ ಲಿವಿಂಗ್ನ ಬಲವಾದ ಉಪಸ್ಥಿತಿಯೊಂದಿಗೆ, ಗುರುದೇವ್ ಅವರಿಗೆ ಕೊಲಂಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಆರ್ಡೆನ್ ಡೆ ಲಾ ಡೆಮೋಕ್ರೇಸಿಯಾ ಸೈಮನ್ ಬೊಲಿವಾರ್”, ಇದನ್ನು ನೀಡಲಾಯಿತು. ಇನ್ನಷ್ಟು ಓದಿ

ಜಮ್ಮು ಮತ್ತು ಕಾಶ್ಮೀರಃ ಪೈಗಮ್-ಎ-ಮೊಹಬ್ಬತ್, 2017

ಉಗ್ರಗಾಮಿಗಳನ್ನು ಸುಧಾರಿಸುವಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ತರುವಲ್ಲಿ , ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕೆಲಸ ಮಾಡುತ್ತಿದೆ ಮತ್ತು ಇದರ ಪರಿಣಾಮವಾಗಿ, ಅನೇಕ ಉಗ್ರಗಾಮಿಗಳು, ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿರಿಸಿ ಸಂಪೂರ್ಣವಾಗಿ ಶರಣಾಗಿದ್ದಾರೆ. ಪೈಗಮ್-ಎ-ಮೊಹಬ್ಬತ್ರವರು ಹೇಳುತ್ತಾರೆ- “ಆರ್ಟ್ ಆಫ್ ಲಿವಿಂಗ್ ನವರು ಕೈಗೊಳ್ಳುತ್ತಿರುವ ಈ ಕಾರ್ಯಕ್ರಮವು ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಎಲ್ಲರನ್ನೂ ಸಮನ್ವಯಗೊಳಿಸುವಂತಹ ವಿಶೇಷವಾದ ಕಾರ್ಯಕ್ರಮವಾಗಿದೆ. ಇದು, ಹುತಾತ್ಮರಾದ ಭದ್ರತಾ ಸಿಬ್ಬಂದಿಗಳು, ಅಡ್ಡ ಗುಂಡಿನ ದಾಳಿಗೆ ಬಲಿಯಾದವರು ಮತ್ತು ಹುತಾತ್ಮರಾದ ಉಗ್ರಗಾಮಿಗಳ ಕುಟುಂಬಗಳನ್ನು ಒಟ್ಟುಗೂಡಿಸುವ ಅಸಾಧಾರಣವಾದ ಕೆಲಸಗಳನ್ನು ಕೈಗೊಂಡಿದೆ. ಇನ್ನಷ್ಟು ಓದಿ

ಯುದ್ಧದಿಂದಾಗಿ ಪೀಡಿತರಾಗಿದ್ದ 16,000ಕ್ಕೂ ಹೆಚ್ಚಿನ ಮಕ್ಕಳಿಗೆ ಉಂಟಾಗಿದ್ದ ಆಘಾತಗಳಿಂದ ಹೊರಬರಲು ಪರಿಹಾರ ಮಾರ್ಗವಾಗಿ ತರಬೇತಿಯನ್ನು ನೀಡಲಾಯಿತು, 2016-2019

ಜೋರ್ಡಾನ್ ಮತ್ತು ಲೆಬನಾನ್ನಲ್ಲಿ ಯುದ್ಧ ಪೀಡಿತರಾಗಿದ್ದ ಸಾವಿರಾರು ಮಕ್ಕಳು ನಮ್ಮ ಆಘಾತ-ಪರಿಹಾರ ತರಬೇತಿಯನ್ನು ಪಡೆದಿದ್ದಾರೆ. ಇದರಿಂದಾಗಿ ಅವರೆಲ್ಲರೂ ಭಾವನಾತ್ಮಕವಾಗಿ ಚೇತರಿಸಿಕೊಳ್ಳುವ ಪಥದಲ್ಲಿ ಮುನ್ನಡೆದಿದ್ದಾರೆ. ನಮ್ಮ- ಐ ಎ.ಹೆಚ್. ವಿ. ವಿಭಾಗವು, ಹೀಲಿಂಗ್, ರೆಸಿಲಿಯೆನ್ಸ್ ಮತ್ತು ಪ್ರಿವೆಂಟಿಂಗ್ ಎಕ್ಸ್ಟ್ರೀಮಿಜಂ ಮುಂತಾದ ಪ್ರಾಜೆಕ್ಟ್ ಗಳನ್ನು ಪ್ರಾರಂಭಿಸಿದೆ. ಇದರಿಂದಾಗಿ, ಲೆಬನಾನ್ ಮತ್ತು ಜೋರ್ಡಾನ್ನ ನಿರಾಶ್ರಿತರಿಗೆ ಮತ್ತು ಆತಿಥೇಯ ಸಮುದಾಯಗಳಿಗೆ , ತಾವು ಭಾವನಾತ್ಮಕವಾಗಿ ಗುಣಮುಖರಾಗಲು ಮತ್ತು ಹೆಚ್ಚುವರಿ ಪ್ರಮಾಣದಲ್ಲಿ ಜನರನ್ನು ಒಗ್ಗೂಡಿಸಿ, ಶಾಂತಿಯುತವಾದ ಸಮಾಜವನ್ನು ನಿರ್ಮಿಸಲು ಸಾಧ್ಯವಾಗಿದೆ. ಇನ್ನಷ್ಟು ಓದಿ

ಉಗ್ರಗಾಮಿ ಯುವಕರ ಪುನರ್ವಸತಿ

700 ಮಾಜಿ ಉಲ್ಫಾ(ಯು.ಎಲ್.ಎಫ್.ಎ.) ಉಗ್ರರಿಗೆ, ಒತ್ತಡ ಪರಿಹಾರ ತರಬೇತಿಗಳ ಮೂಲಕ, ಪುನರ್ವಸತಿಯನ್ನು ಕಲ್ಪಿಸಿ ಕೊಡಲಾಗಿದೆ. ಇದಲ್ಲದೆ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಉಗ್ರಗಾಮಿಗಳು, ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ, ತಮ್ಮ ಶಸ್ತ್ರಾಸ್ತ್ರಗಳನ್ನು ಬದಿಗಿರಿಸಿ ಸಂಪೂರ್ಣ ಶರಣಾಗಿದ್ದಾರೆ. ಇನ್ನಷ್ಟು ಓದಿ

ಇರಾಕ್ ಪುನರ್ನಿರ್ಮಾಣ, 2003

ಸೆಪ್ಟೆಂಬರ್ 2003ರಿಂದ, ನಮ್ಮ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು , ಯುದ್ಧದಿಂದಾಗಿ ಪೀಡಿತರಾಗಿದ್ದ 50,000ಕ್ಕೂ ಹೆಚ್ಚಿನ ಜನರನ್ನು ತಲುಪಿದೆ. ಜನರನ್ನು ರಕ್ಷಿಸಲು ಅಭಿಯಾನಗಳನ್ನು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಾವು ಇರಾಕಿ ಸಮುದಾಯದ ನಾಯಕರಿಗೆ ತರಬೇತಿ ನೀಡುವುದಷ್ಟೇ ಅಲ್ಲದೆ ಅವರನ್ನು ಪ್ರೇರೇಪಿಸಿದ್ದೇವೆ. ನಮ್ಮ ಮಹಿಳಾ ಸಬಲೀಕರಣ ಕಾರ್ಯಕ್ರಮವು ಮಹಿಳೆಯರ ಭಾವನಾತ್ಮಕ ಮತ್ತು ಮಾನಸಿಕ ಅಗತ್ಯತೆಗಳನ್ನು ಪೂರೈಸುತ್ತಿದೆ ಮತ್ತು ಅವರಿಗೆ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಕೌಶಲ್ಯಗಳನ್ನು ನೀಡುತ್ತಿದೆ. ನಮ್ಮ ಕಾರ್ಯಕ್ರಮಗಳಲ್ಲಿ ಯಾಜಿದಿಗಳು, ಶಿಯಾಗಳು ಮತ್ತು ಕ್ರಿಶ್ಚಿಯನ್ನರು ಕೂಡ ಸೇರಿದ್ದಾರೆ. ಇನ್ನಷ್ಟು ಓದಿ

ಈಶಾನ್ಯದಲ್ಲಿರುವ UPLA (ಯುನೈಟೆಡ್ ಪೀಪಲ್ಸ್ ಲಿಬರೇಶನ್ ಆರ್ಮಿಯ), ಉಗ್ರಗಾಮಿ ಸಂಘಟನೆಯು 2018ರಲ್ಲಿ, ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿತು.

ಒತ್ತಡ-ನಿವಾರಣೆ ಮಾಡುವ ವಿಧಾನಗಳ ಬಗ್ಗೆ ತರಬೇತಿಯನ್ನು ನೀಡುವುದಕ್ಕಾಗಿ ಆಯೋಜಿಸಿದ ಕಾರ್ಯಕ್ರಮಗಳ ಸಹಾಯದಿಂದ ಹಾಗೂ ಸರ್ಕಾರ ಮತ್ತು UPLA, ಇವುಗಳ ನಡುವಿನ ಸಂಭಾಷಣೆಯನ್ನು ಸುಗಮಗೊಳಿಸುವ ಮೂಲಕ, 150 ಜನ ಸದಸ್ಯರ ಗುಂಪು, 2018 ರಲ್ಲಿ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿತು. ಇನ್ನಷ್ಟು ಓದಿ

2003 ರಿಂದ ಜೋರ್ಡಾನ್, ಲೆಬನಾನ್ ಮತ್ತು ಸಿರಿಯಾ ದೇಶಗಳಲ್ಲಿ ಮಾಡುತ್ತಿರುವ ಮಾನವೀಯ ಪ್ರಯತ್ನಗಳು

2003ರಿಂದ ಈ ಮೇಲಿನ ಪ್ರದೇಶಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇರಾಕ್, ಸಿರಿಯಾ ಮತ್ತು ಲೆಬನಾನ್ ದೇಶಗಳ ನಿರಾಶ್ರಿತ ಯುವಕರಿಗೆ ತರಬೇತಿಗಳನ್ನು ನೀಡುತ್ತಿದೆ. ಅಪಾಯಕಾರಿಯಾಗಿರುವ ಯುವಕರಿಗೆ, ಭವಿಷ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸುವ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಲು ಉತ್ತೇಜನವನ್ನು ಕೊಟ್ಟು ,ಅವರಿಗೆ ಸಮಗ್ರ ಶಾಂತಿಯನ್ನು ನಿರ್ಮಾಣ ಮಾಡುವ ತರಬೇತಿಯನ್ನು ನೀಡಲಾಗುತ್ತಿದೆ. ಇನ್ನಷ್ಟು ಓದಿ

ಮಣಿಪುರದಲ್ಲಿ 68 ಉಗ್ರರ ಶರಣಾಗತಿ, 2017

ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ದಂಗೆಕೋರ ಗುಂಪುಗಳನ್ನು ತಲುಪಲು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡಿದ ಪ್ರಯತ್ನಗಳ ಫಲವಾಗಿ, 2017 ರಲ್ಲಿ ಅತ್ಯಂತ ಭಯಾನಕ ಕೃತ್ಯಗಳಲ್ಲಿ ತೊಡಗಿದ್ದ 68 ಕಾರ್ಯಕರ್ತರು ಶರಣಾದರು. ಇನ್ನಷ್ಟು ಓದಿ

ವೈವಿಧ್ಯತೆಯ ಸಾಮರ್ಥ್ಯ: ಈಶಾನ್ಯ ದಿಕ್ಕಿನಲ್ಲಿರುವ ಸ್ಥಳೀಯ ಜನರ ಸಮ್ಮೇಳನ, 2017

ಈ ಪ್ರದೇಶದಲ್ಲಿರುವ ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವುದಕ್ಕಾಗಿ, ನಮ್ಮ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ಈ ಹಿಂದೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡವರನ್ನೂ ಒಳಗೊಂಡಂತೆ, ಅಲ್ಲಿರುವ ಎಲ್ಲಾ ವಿಧದ ವೈವಿಧ್ಯಮಯ ಗುಂಪುಗಳನ್ನು ಒಟ್ಟು ಸೇರಿಸಿ, ಒಂದು ದೊಡ್ಡ ಸಮ್ಮೇಳನವನ್ನು ಆಯೋಜಿಸಿತು. ಇನ್ನಷ್ಟು ಓದಿ

ಶ್ರೀಲಂಕಾದಲ್ಲಿ ಜನಾಂಗೀಯ ಸಂಘರ್ಷದಿಂದಾದ ಆಘಾತಗಳ ಪರಿಹಾರ

ಮಾನಸಿಕ ಜಂಜಾಟಗಳಿಂದ ವಿಮುಖರಾಗಿ ಗುಣಮುಖರಾಗುವ ಚಿಕಿತ್ಸೆಗಳ ಮೂಲಕ ,ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರು ಸಾಮರಸ್ಯದೊಂದಿಗೆ ಮಾಡುತ್ತಿರುವ ಸೃಜನಶೀಲ ಶಾಂತಿ-ನಿರ್ಮಾಣದ ಉಪಕ್ರಮಗಳನ್ನು ನೋಡಿ, ಶ್ರೀಲಂಕಾದಲ್ಲಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥೆಯು ಸ್ಪೂರ್ತಿಯನ್ನು ಪಡೆದುಕೊಂಡಿತು . ಇದರ ಪ್ರಭಾವದಿಂದಾಗಿ ಈ ಸಂಸ್ಥೆಯು, ನೂರಾರು ಮಾಜಿ ಎಲ್ ಟಿ ಟಿ ಇ ಹೋರಾಟಗಾರರಿಗೆ, ತಮ್ಮ ವೈಯಕ್ತಿಕ ಜೀವನವನ್ನು ಬೆಂಬಲಿಸುವ ಹಾಗೂ ಸಾಕಷ್ಟು ಪರಿಣಾಮಕಾರಿಯಾದ ಪರಿವರ್ತನೆಯನ್ನು ತರುವಂತಹ ವಿವಿಧ ಕಾರ್ಯಕ್ರಮಗಳನ್ನು, ತಲುಪಿಸಿತು. ಗುರುದೇವ್ ಅವರು ನೀಡುತ್ತಿರುವ ಆಧ್ಯಾತ್ಮಿಕ ಜ್ಞಾನವನ್ನು ಸುಮಾರು 1800 ಕ್ಕೂ ಹೆಚ್ಚಿನ ಮಾಜಿ-ಎಲ್ ಟಿ ಟಿ ಇ ಹೋರಾಟಗಾರರಿಗೆ ತಲುಪಿಸಿ, ಅವರೆಲ್ಲರೂ ಉಸಿರಾಟದ ಪ್ರಕ್ರಿಯೆಯಾದ ಸುದರ್ಶನ ಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಲಾಯಿತು. ತತ್ ಪರಿಣಾಮವಾಗಿ ತಾವೆಲ್ಲರೂ ಈ ಸಮಾಜದ ಮುಖ್ಯವಾಹಿನಿಯೊಂದಿಗೆ ಒಂದಾಗಿ ಸೇರಿಕೊಂಡು, ತಮ್ಮ ಜೀವನವನ್ನು ಅರ್ಥಪೂರ್ಣವಾಗಿ ಮರುಸಂಯೋಜಿಸಿಕೊಂಡು ಬದುಕನ್ನು ಸಾಗಿಸಲು ಅವರಿಗೆ ಸಾಧ್ಯವಾಯಿತು. ಇನ್ನಷ್ಟು ಓದಿ

ಯುಎಸ್ಎ: ಪ್ರಾಜೆಕ್ಟ್ ವೆಲ್ಕಮ್ ಹೋಮ್ ಟ್ರೂಪ್ಸ್, 2006

ಯುದ್ಧ-ಪೀಡಿತ ಮಧ್ಯಪ್ರಾಚ್ಯದಿಂದ ಮನೆಗೆ ಮರಳುವ ಯುದ್ಧದ ಅನುಭವಿಗಳಿಗೆ ಪರಿಹಾರವನ್ನು ಒದಗಿಸಲು ಐ ಎ ಎಚ್ ವಿ. ಸಂಸ್ಥೆಯು 2006 ರಲ್ಲಿ ಪ್ರಾಜೆಕ್ಟ್ ವೆಲ್ಕಮ್ ಹೋಮ್ ಟ್ರೂಪ್ಸ್ (ಪಿಡಬ್ಲ್ಯೂಎಚ್ಟಿ) ನ್ನು ಪ್ರಾರಂಭಿಸಿತು. ಪಿ ಡಬ್ಲ್ಯೂ ಎಚ್ ವಿ. ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಈ ಕಾರ್ಯಕ್ರಮವು, ಮನಸ್ಸು ಮತ್ತು ದೇಹಗಳ ನಡುವೆ ಸೌಹಾರ್ದತೆಯನ್ನು ಉಂಟು ಮಾಡಿ ಸಾಮರಸ್ಯವನ್ನು ತರುತ್ತದೆ. ಇದು, ನಮ್ಮ ಜೀವನದಲ್ಲಿರುವ ಒತ್ತಡ, ಆತಂಕ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ , ಉಸಿರಾಟದ ಪ್ರಕ್ರಿಯೆಗಳ ಮೂಲಕ ಪ್ರತ್ಯಕ್ಷವಾಗಿ ಅನುಭವದ ರೂಪದಲ್ಲಿ ಸಾಕಷ್ಟು ಸಾಧನಗಳನ್ನು ನೀಡುತ್ತದೆ. ಸ್ಟ್ಯಾನ್ ಫೋರ್ಡ್ ನಲ್ಲಿ ನಡೆಸಿದ ಅಧ್ಯಯನಗಳಿಂದಾಗಿ ಪ್ರಕಟವಾದ ,ಜರ್ನಲ್ ಆಫ್ ಟ್ರಾಮಾಟಿಕ್ ಸ್ಟ್ರೆಸ್ ಎನ್ನುವ ಪತ್ರಿಕೆಯಲ್ಲಿ - “PWHT ಕಾರ್ಯಕ್ರಮದಲ್ಲಿ ಭಾಗಿಯಾದ , ಬಳಿಕ,ಯುದ್ಧದಲ್ಲಿ ಪರಿಣತರಾಗಿರುವವರು ಕೂಡಾ ತಮಗೆ ಉಂಟಾದ ಆಘಾತಕಾರೀ ಒತ್ತಡಗಳಿಂದಾಗಿ ಉಂಟಾದ ರೋಗಲಕ್ಷಣಗಳಲ್ಲಿ, 40-50% ರಷ್ಟು ಇಳಿತವನ್ನು ಅನುಭವಿಸಿದ್ದಾರೆ” ಎನ್ನುವುದನ್ನು ತಿಳಿಸಿದೆ. ಇನ್ನಷ್ಟು ಓದಿ

ಸಂವಾದಗಳ ಮೂಲಕ ಪರಿಹರಿಸುವುದು

ಪೂಜ್ಯ ಗುರುದೇವರು- ಅಸ್ಸಾಂನಲ್ಲಿ ನಡೆದ ಗಲಭೆಗಳು (2012), ಅಮರನಾಥ್ ನ ಭೂ- ವಿವಾದ (2008), ಗುಜ್ಜರ್ ನಲ್ಲಿ ನಡೆದ ಪ್ರತಿಭಟನೆಗಳು (2008) ಮತ್ತು 2001ರ ನಕ್ಸಲ್ ದಂಗೆಗಳು-ಇವೇ ಮುಂತಾದ ವಿವಿಧ ಸಂಘರ್ಷಗಳನ್ನು ಸಂವಾದಗಳ ಮೂಲಕ ಮತ್ತು ತಮ್ಮ ಮಾತುಕತೆಗಳ ಮೂಲಕ ಸುಗಮಗೊಳಿಸಿದ್ದಾರೆ.