A young woman meditating on a bench in the woods

ಅಡ್ವಾನ್ಸ್ಡ್ ಮೆಡಿಟೇಶನ್ ಪ್ರೋಗ್ರಾಮ್ (AMP)

ಉತ್ತಮ ಕ್ರಿಯಾಶೀಲತೆಯು ಆಳವಾದ ವಿಶ್ರಾಂತಿಯಿಂದ ದೊರೆಯುತ್ತದೆ

ಗಹನವಾದ ಮೌನ • ಆಳವಾದ ಧ್ಯಾನ • ಶಕ್ತಿ- ಸಾಮರ್ಥ್ಯದ ವರ್ಧನ

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನೋಂದಾಯಿಸಿ

ಈ ಕಾರ್ಯಕ್ರಮದಿಂದ ನನಗೆ ಆಗುವ ಪ್ರಯೋಜನಗಳೇನು?

icon

ಆಳವಾದ ಧ್ಯಾನದ ಅನುಭವ

ಗುರುದೇವ ಶ್ರೀ ಶ್ರೀ ರವಿಶಂಕರರಿಂದ ನಿರ್ದೇಶಿತವಾದ ವಿಶೇಷವಾದ ಧ್ಯಾನದ ಪ್ರಕ್ರಿಯೆಗಳೇ ಈ ಕಾರ್ಯಕ್ರಮದ ಕೇಂದ್ರ ಭಾಗವಾಗಿದ್ದು, ಇದರಿಂದ ನೀವು ಆಳವಾದ ವಿಶ್ರಾಂತಿ ಪಡೆಯುವಿರಿ.

icon

ಆಳವಾದ ಮೌನ

ಈ ಕಾರ್ಯಕ್ರಮದಲ್ಲಿನ ಮೌನದ ಅಭ್ಯಾಸದಿಂದ, ಸಾಮಾನ್ಯವಾಗಿ ಚಟುವಟಿಕೆಯಲ್ಲೇ ನಿರತವಾಗಿರುವ ಮನಸ್ಸನ್ನು ಮೀರಿ, ನೀವು ಅತಿಶಯವಾದ ಪ್ರಶಾಂತ ಮನೋಭಾವವನ್ನು ಅನುಭವಿಸುವಿರಿ.

icon

ಭಾವನಾತ್ಮಕ ಒತ್ತಡಗಳಿಂದ ಮುಕ್ತಿ

ನಿಮ್ಮಲ್ಲಿ ಆಳವಾಗಿ ಬೇರೂರಿರುವ ಒತ್ತಡಗಳಿಂದ, ನಿಮ್ಮನ್ನು ಧ್ಯಾನವು ಮುಕ್ತರನ್ನಾಗಿಸುತ್ತದೆ ಮತ್ತು ನಿಮ್ಮ ಆಂತರ್ಯದಲ್ಲಿನ ಆತ್ಮದೊಂದಿಗೆ ಸಂಪರ್ಕ ಕಲ್ಪಿಸುತ್ತದೆ.

icon

ರೋಗನಿರೋಧಕ ಶಕ್ತಿಯ ವರ್ಧನೆ

ಧ್ಯಾನವು, ಚೈತನ್ಯವನ್ನು ನೀಡುವುದರೊಂದಿಗೆ, ಇಡೀ ನರಮಂಡಲವನ್ನು ಶಾಂತಗೊಳಿಸುತ್ತದೆ. ದೇಹದಲ್ಲಿ ಶಕ್ತಿಯ ಸಂಚಾರವನ್ನು ಸುಗಮವಾಗಿಸುತ್ತದೆ. ಇದರಿಂದ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ.

icon

ಸೃಜನಶೀಲತೆಯ ಅನಾವರಣ

ಮೌನವು ಸೃಜನಶೀಲತೆಯ ತಾಯಿ. ಈ ಕಾರ್ಯಕ್ರಮದಿಂದ ನೀವು ಆಳವಾದ ವಿಶ್ರಾಂತಿಯನ್ನು ಹೊಂದುವಿರಿ. ಮನಸ್ಸಿನಲ್ಲಾಗುವ ದುಗುಡಗಳೆಲ್ಲವೂ ಶಮನವಾಗುತ್ತದೆ. ಇದರಿಂದ ನಿಮ್ಮಲ್ಲಿ ಸುಪ್ತವಾಗಿರುವ ಕುಶಲತೆಗಳು, ಪ್ರತಿಭೆಗಳು ಹೊರಹೊಮ್ಮುತ್ತವೆ.

icon

ಶಕ್ತಿಯ ಮಟ್ಟದಲ್ಲಿ ಹೆಚ್ಚಳ

ಈ ಕಾರ್ಯಕ್ರಮದಲ್ಲಿನ ಪ್ರಕ್ರಿಯೆಗಳಿಂದ ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ಪ್ರಾಣಶಕ್ತಿಯು ಹೆಚ್ಚುತ್ತದೆ. ಪ್ರಾಣಶಕ್ತಿಯು ಹೆಚ್ಚಿದ್ದಾಗ ನಿಮ್ಮ ಮನಸ್ಸು ಸಕಾರಾತ್ಮಕವಾಗುವುದರೊಂದಿಗೆ, ಪ್ರಶಾಂತವಾಗುತ್ತದೆ.

ಉನ್ನತ ಧ್ಯಾನದ ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಬೇಕು?

ನೀವು ಈಗಾಗಲೇ, ಸುದರ್ಶನ ಕ್ರಿಯೆಯನ್ನು ಮಾಡಿ, ಪ್ರಶಾಂತತೆಯ ಅನುಭವವನ್ನು ಪಡೆದಿರುತ್ತೀರಿ. ಈ ಪ್ರಶಾಂತವಾದ ಅನುಭವವನ್ನು ಸಂರಕ್ಷಿಸುವುದು ಹೇಗೆ? ಆ ಆಳವಾದ ಸ್ಥಿತಿಯಲ್ಲಿ ನೆಲೆಗೊಳ್ಳುವುದು ಹೇಗೆ?

ನಿಮ್ಮ ಧ್ಯಾನ ಮತ್ತು ಸಾಧನೆಗೆ ಮುಂದಿನ ಮೆಟ್ಟಿಲೇ ಈ ಉನ್ನತ ಧ್ಯಾನ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ನೀವು ಮೌನದ ಅಭ್ಯಾಸವನ್ನು ಮಾಡುವಿರಿ. ಇದರಿಂದ ನಿಮಗೆ ಆಳವಾದ ವಿಶ್ರಾಂತಿ ಸಿಗುತ್ತದೆ. ಏನನ್ನೂ ಮಾಡದೆ, ಕೆಲ ದಿನಗಳು ಸುಮ್ಮನಿರುವುದು ಎಲ್ಲರಿಗೂ ಸುಲಭಸಾಧ್ಯವಲ್ಲ. ಹಾಗಾಗಿಯೇ ಈ ಕಾರ್ಯಕ್ರಮದಲ್ಲಿ ಮೌನದಿಂದ ಕೂಡಿದ ಆಳವಾದ ಧ್ಯಾನದ ಪ್ರಕ್ರಿಯೆಗಳು ನಿಮಗೆ ಪ್ರಶಾಂತತೆಯನ್ನು ಒದಗಿಸುತ್ತವೆ. ನಿಮ್ಮ ನಿಜವಾದ ಸಾಮರ್ಥ್ಯವು ಅನಾವರಣಗೊಳ್ಳುತ್ತದೆ. ನಿಮ್ಮ ಆತ್ಮಾನುಭವಕೆ ಇದು ಹೆಬ್ಬಾಗಿಲು. ಹೀಗೆ ಪಡೆದ ಆತ್ಮಬಲದಿಂದ ನೀವು ಈ ಜಗತ್ತಿನಲ್ಲಿ ನಿರ್ಭೀತಿಯಿಂದ ಜೀವನವನ್ನು ನಡೆಸುವಿರಿ!

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಏನಾದರೂ ಇರಬೇಕೇ?

  • ನೀವು 18 ವರ್ಷಗಳಿಗಿಂತಲೂ ಮೇಲ್ಪಟ್ಟವರಾಗಿರಬೇಕು.
  • ನೀವು (ಆನ್ ಲೈನ್) ಧ್ಯಾನ ಮತ್ತು ಉಸಿರಾಟದ ಕಾರ್ಯಾಗಾರ/ಆನಂದದ ಅನುಭೂತಿಯ ಕಾರ್ಯಾಗಾರ / ಯೆಸ್+ ಇದನ್ನು ಮಾಡಿರಬೇಕು.
  • ಈ ಕಾರ್ಯಕ್ರಮದ ಅವಧಿಗೆ, ನೀವು ನಿಮ್ಮ ಸಮಯವನ್ನು ಮೀಸಲಿಡಬೇಕು.

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ಈ ಕಾರ್ಯಕ್ರಮವನ್ನು ಮಾಡಬೇಕೆಂದಿದ್ದೇನೆ, ಆದರೆ…

ನಾನು ಹ್ಯಾಪಿನೆಸ್(ಆನಂದದ ಅನುಭೂತಿಯ) ಕಾರ್ಯಕ್ರಮವನ್ನು ಮಾಡಿದ್ದೇನೆ ಮತ್ತು ಅದರಿಂದ ಸಂತೋಷವಾಗಿದ್ದೇನೆ. ಧ್ಯಾನ ಮಾಡಿ ನಾನು ಯೋಗಿಯಾಗಲು ಪ್ರಯತ್ನಿಸುತ್ತಿಲ್ಲ ಹಾಗಾಗಿ ನನಗೆ ಉನ್ನತ ಧ್ಯಾನದ ಕಾರ್ಯಕ್ರಮದಲ್ಲಿ ಆಸಕ್ತಿ ಇಲ್ಲ.

ನಿಮ್ಮ ಕಾರಿಗೆ ಪ್ರತಿ ಆರು ತಿಂಗಳು - ವರ್ಷಕ್ಕೊಮ್ಮೆ ಸರ್ವೀಸಿಂಗ್ ಮಾಡಿಸಿದಂತೆಯೇ ನಿಮ್ಮ ದೇಹ ಮತ್ತು ಮನಸ್ಸಿಗೂ ಸ್ವಲ್ಪ ಕಾಳಜಿ ಮತ್ತು ಪುನಶ್ಚೇತವು ಆಗಿಂದಾಗ ಅವಶ್ಯಕವಾಗುತ್ತದೆ. ಉನ್ನತ ಧ್ಯಾನದ ಕಾರ್ಯಕ್ರಮದಿಂದ, ನೀವು ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ ಅಥವಾ ಆನ್ ಲೈನ್ ಧ್ಯಾನ ಮತ್ತು ಉಸಿರಾಟದ ಕಾರ್ಯಾಗಾರವನ್ನು ಮಾಡಿದಾಗ ಪಡೆದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿ, ಸಂರಕ್ಷಿಸಿಕೊಳ್ಳಬಹುದು. ನಿಮ್ಮ ಧ್ಯಾನವು ಆಳವಾದಲ್ಲಿ ನೀವು, ಆಳವಾದ ವಿಶ್ರಾಂತಿಯನ್ನು ಪಡೆಯುತ್ತೀರಿ. ನೀವು ಯೋಗಿಯಾಗುವುದಿಲ್ಲ! ಅನೇಕ ಜನರು ಈ ಕಾರ್ಯಕ್ರಮವನ್ನು ಅನೇಕ ಸಲ ಮಾಡಿದ್ದಾರೆ ಮತ್ತು ಆಳವಾದ ವಿಶ್ರಾಂತಿಯನ್ನು ಪಡೆದಿದ್ದಾರೆ. ಪ್ರತಿ ಸಲ ಈ ಕಾರ್ಯಕ್ರಮವನ್ನು ಮಾಡಿದಾಗಲೆಲ್ಲಾ ಇದರಿಂದ ಅನೇಕರು ನಿರಾಳತೆಯನ್ನು ಪಡೆದಿದ್ದಾರೆ.

ನನಗಿನ್ನೂ ಕೇವಲ 20 ವರ್ಷ ವಯಸ್ಸು. ಈಗಲೇ ಈ ಧ್ಯಾನ ಮಾಡಲು ನನಗಿನ್ನೂ ಕಡಿಮೆ ವಯಸ್ಸು ಎಂದು ನನಗೆ ಅನಿಸುತ್ತದೆ. ಈ ಹಂತದಲ್ಲಿ ಧ್ಯಾನ ಮಾಡ ಬೇಕೆನ್ನುವಷ್ಟು, ಒತ್ತಡವೇ ನನಗಿಲ್ಲ.

ಈಗ ನೀವು ಒತ್ತಡದಲ್ಲಿ ಇಲ್ಲದೇ ಇರುವುದು ಒಳ್ಳೆಯ ವಿಷಯ. ಆದರೆ ಕಾಲಕಳೆದಂತೆ, ವಯಸ್ಸು ಹೆಚ್ಚಾದಂತೆ ಜೀವನದಲ್ಲಿ ನಿಮ್ಮ ಕೆಲಸ ಮತ್ತು ಜವಾಬ್ದಾರಿಗಳೂ ಸಹ ಹೆಚ್ಚುತ್ತಲೇ ಹೋಗುತ್ತವೆ. ಆ ಸಮಯದಲ್ಲಿ ಒತ್ತಡಕ್ಕೆ ಒಳಗಾಗುವವರೆಗೂ ಕಾದು, ನಂತರ ಅದನ್ನು ನಿಭಾಯಿಸಲು ಯತ್ನಿಸುವ ಬದಲಿಗೆ ಈಗಿಂದಲೇ ನಿಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಒಳ್ಳೆಯದಲ್ಲವೆ? ವರ್ಷದ ಕೊನೆಯಲ್ಲಿ ಬರುವ ಪರೀಕ್ಷೆಯನ್ನು ಬರೆಯಲು, ವರ್ಷದ ಕೊನೆಯವರೆಗೆ ಕಾದು ನಂತರ ಓದಲು ನೀವು ಪ್ರಾರಂಭಿಸುವುದಿಲ್ಲವಲ್ಲ? ನಿಮ್ಮ ಕೂಡಿಟ್ಟ ಹಣವೆಲ್ಲವೂ ಖರ್ಚಾಗಿ ಹೋದ ನಂತರ ಮಾತ್ರವೇ ನೀವು ಹಣವನ್ನು ಗಳಿಸಲು ಆರಂಭಿಸುವುದಿಲ್ಲ ಅಲ್ಲವೆ? ಅದಕ್ಕೂ ಮೊದಲೇ ಸಿದ್ಧತೆಯನ್ನು ಮಾಡಿಕೊಳ್ಳುತ್ತೀರಿ. ಆದ್ದರಿಂದ, ನಿಮ್ಮಲ್ಲಿ ಒತ್ತಡ ಉಂಟಾಗುವ ಮೊದಲೇ ಕೆಲವು ಪ್ರಕ್ರಿಯೆಗಳ ಮೂಲಕ ನಿಮ್ಮ ಆಂತರ್ಯದ ಬಲವನ್ನು, ಸ್ಥಿರತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡಬಾರದೇಕೆ?

ನನಗೆ 65 ವರ್ಷ ವಯಸ್ಸು. ಈ ಕಾರ್ಯಕ್ರಮವನ್ನು ಮಾಡಲು ನನಗೆ ಬಹಳ ವಯಸ್ಸಾಗಿಲ್ಲವೆ? ಇದನ್ನು ಮಾಡಲು ನನಗೆ ಅಸಾಧ್ಯವೆನಿಸುತ್ತದೆ.

ಈ ಕಾರ್ಯಕ್ರಮದಲ್ಲಿ ನಿಮಗೆ ಉಸಿರಾಟದ ಪ್ರಕ್ರಿಯೆಗಳನ್ನು ಹೇಳಿಕೊಡಲಾಗುತ್ತದೆ. ಇದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚುತ್ತದೆ. ಮೌನದಿಂದ ಅಂತರ್ಮುಖಿಯಾಗಿ ಆಳವಾದ ವಿಶ್ರಾಂತಿಯನ್ನು ಪಡೆಯುತ್ತೀರಿ. ಪ್ರಕ್ರಿಯೆಗಳು ಸರಳವಾದವು. ಇದರಿಂದ ಹೆಚ್ಚು ಬಲಿಷ್ಠರಾಗುತ್ತೀರಿ ಮತ್ತು ಹೆಚ್ಚು ಸ್ಥಿರರಾಗುತ್ತೀರಿ. ಆದ್ದರಿಂದ, ಈ ಕಾರ್ಯಕ್ರಮವನ್ನು ಮಾಡಲು ಹೆಚ್ಚು ವಯಸ್ಸಾಗಿದೆ ಎಂದು ಭಾವಿಸಿಕೊಳ್ಳಬೇಕಿಲ್ಲ.

ಈ ಕಾರ್ಯಕ್ರಮದಲ್ಲಿ ಮೌನದ ಅಭ್ಯಾಸವಿದೆ. ಈ ಶಿಬಿರದ ನಡುವೆ ನಾನು, ಕುಟುಂಬದವರನ್ನು ದೂರವಾಣಿ, ಸಂದೇಶ ಅಥವಾ ಈಮೇಲ್ ಮೂಲಕ ಸಂಪರ್ಕಿಸಬಹುದೇ?

ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದುಕೊಳ್ಳಲು, ನೀವು ಯಾವುದೇ ರೀತಿಯಿಂದ ಸಂಪರ್ಕ ಮಾಡದಿರುವುದು ಒಳ್ಳೆಯದು. ನಿಮ್ಮ ಸಮಯವು ನಿಮಗಾಗಿಯೇ ಮೀಸಲಾಗಿರಲಿ. ಇದು ನೀವು ಅಂದುಕೊಂಡಷ್ಟು ಕಷ್ಟದ ಸಂಗತಿಯಲ್ಲ. ಇದು ಸುಲಭ ಸಾಧ್ಯ!

ಈ ಧ್ಯಾನವು ವಿಪಶನದ ಧ್ಯಾನದಂತೆಯೆ?

ಇಲ್ಲ, ಉನ್ನತ ಧ್ಯಾನದ ಕಾರ್ಯಕ್ರಮವು (AMP) ವಿಪಶನ ಧ್ಯಾನದಂತಲ್ಲ. AMP ಧ್ಯಾನದ ಅನುಭವವು ಅತ್ಯಂತ ಗಹನವಾದ ಅನುಭವ. ಈ ಕಾರ್ಯಕ್ರಮದಿಂದ ದೊರಕುವ ಆಳವಾದ ಒಳನೋಟವು, ಜೀವನವನ್ನೇ ಪರಿವರ್ತಿಸಬಲ್ಲದು. ಆಲ್ ಇಂಡಿಯ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮತ್ತು ಇನ್ನಿತರ ಪ್ರಖ್ಯಾತ ಸಂಸ್ಥೆಗಳಲ್ಲಿ ಮಾಡಲಾದ ಸಂಶೋಧನೆಗಳಲ್ಲಿ, ಇಲ್ಲಿ ನಾವು ಅನುಸರಿಸುವ ಪ್ರಕ್ರಿಯೆಗಳಿಂದ ಮನೋ ಜಾಗೃತಿ, ಉತ್ತಮವಾದ ರೋಗನಿರೋಧಕ ಸ್ಥಿತಿ ಮತ್ತು ಉತ್ತಮ ಜೀವನದ ಗುಣಮಟ್ಟ ಉಂಟಾಗುತ್ತದೆಂದು ಸಾಬೀತಾಗಿದೆ.

ಈ ಕಾರ್ಯಕ್ರಮಕ್ಕಾಗಿ ನಾನು ಒಂದು ದಿನದಲ್ಲಿ ಎಷ್ಟು ಗಂಟೆಗಳನ್ನು ಮೀಸಲಿಡಬೇಕಾಗುತ್ತದೆ?

ಮೂರು ಪೂರ್ಣ ದಿನಗಳು ಈ ಕಾರ್ಯಕ್ರಮವು ಇರಲಿದೆ. ಬೆಳಿಗ್ಗೆ 6 ಅಥವಾ 7 ಗಂಟೆಗೆ ಈ ಕಾರ್ಯಕ್ರಮವು ಆರಂಭವಾಗುತ್ತದೆ ಮತ್ತು ರಾತ್ರಿ 8 ಅಥವಾ 9 ಗಂಟೆಗೆ ಮುಗಿಯುತ್ತದೆ. ಆದ್ದರಿಂದ ಈ ಮೂರು ದಿನಗಳ ಮಟ್ಟಿಗೆ ನಿಮ್ಮ ಪ್ರತಿನಿತ್ಯದ ಚಟುವಟಿಕೆಗಳಿಗೆ ವಿರಾಮವನ್ನು ನೀಡಿ, ನಿಮಗೆಂದೇ ಈ ಸಮಯವನ್ನು ಮುಡಿಪಾಗಿಡಿ.

ಕಾರ್ಯಕ್ರಮದ ನಡುವೆ ವಿರಾಮಗಳು ಸಿಗುತ್ತವೆಯೇ?

ನಿಮ್ಮ ದಿನನಿತ್ಯದ ದಿನಚರಿಯಿಂದ ನಿಮಗೆ ವಿರಾಮ ಸಿಗಲೆಂದೇ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ! ಕಾರ್ಯಕ್ರಮದ ನಡುವೆ ಊಟ ಮತ್ತು ಇತರ ಅವಶ್ಯಕತೆಗಳಿಗಾಗಿ ಸಣ್ಣ ವಿರಾಮಗಳನ್ನು ಕೊಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ನನಗೆ ಯಾವುದಾದರೂ ಮಂತ್ರದ ಉಪದೇಶ ಮಾಡಲಾಗುವುದೇ?

ಈ ಕಾರ್ಯಕ್ರಮದಲ್ಲಿ ಗುರುದೇವರ ಮಾರ್ಗದರ್ಶಿತ ಧ್ಯಾನಗಳು ಇರುತ್ತವೆ, ಯಾವುದೇ ವೈಯಕ್ತಿಕ ಮಂತ್ರದ ಉಪದೇಶ ಇರುವುದಿಲ್ಲ ಆದರೆ ನೀವು ಮಂತ್ರ ಧ್ಯಾನವನ್ನು ಮಾಡಬೇಕೆಂದು ಬಯಸಿದ್ದಲ್ಲಿ, ನಮ್ಮ 'ಸಹಜ ಸಮಾಧಿ ಧ್ಯಾನ ಯೋಗ'ದ ಕಾರ್ಯಕ್ರಮವನ್ನು ನೀವು ಮಾಡಬಹುದು.

ಯಾವ ವೈದ್ಯಕೀಯ ಸಮಸ್ಯೆಗಳು ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು?

ಹ್ಯಾಪಿನೆಸ್ ಕಾರ್ಯಕ್ರಮವನ್ನು/ ಆನ್ ಲೈನ್ ಧ್ಯಾನ, ಉಸಿರಾಟದ ಕಾರ್ಯಾಗಾರವನ್ನು ಮಾಡಲು ನಿಮಗೆ ಸಾಧ್ಯವಾಗಿದೆ ಎಂದಾದರೆ, ಉನ್ನತ ಧ್ಯಾನ ಕಾರ್ಯಕ್ರಮವನ್ನು ಮಾಡಲು ನಿಮಗೆ ಯಾವ ತೊಂದರೆ ಇರುವುದಿಲ್ಲ. ನಿಮಗಿರಬಹುದಾದ ವೈದ್ಯಕೀಯ ಸಮಸ್ಯೆಗಳನ್ನು ನಿಮ್ಮ ಶಿಕ್ಷಕರಿಗೆ ತಿಳಿಸಿ.

ಈ ಕಾರ್ಯಕ್ರಮವನ್ನು ಮಾಡಲು ನಾನು ಸಸ್ಯಾಹಾರಿಯಾಗಿರಬೇಕೆ?

ಹಾಗೆನಿಲ್ಲ. ಈ ಕಾರ್ಯಕ್ರಮವನ್ನು ಮಾಡಲು ನಿಮ್ಮ ಆಹಾರದ ಕ್ರಮ ಮುಖ್ಯವಲ್ಲ, ಆದರೆ ಕಾರ್ಯಕ್ರಮಕ್ಕೆ ಪೂರಕವಾಗಲು ನೀವು ಲಘುವಾದ ಸಸ್ಯಾಹಾರದ ಸೇವನೆ ಮಾಡುವುದು ಒಳಿತು. ಇದರಿಂದ ನಿಮಗೆ ಆಳವಾದ ಧ್ಯಾನವು ಸಾಧ್ಯವಾಗುತ್ತದೆ.

ಸುದರ್ಶನ ಚಕ್ರ ಕ್ರಿಯೆ ಎಂಬ ಒಂದು ಹೊಸ ಪ್ರಕ್ರಿಯೆಯ ಬಗ್ಗೆ ಕೇಳಿದ್ದೇನೆ. ಅದು ಈ ಕಾರ್ಯಕ್ರಮದ ಒಂದು ಭಾಗವೆ?

ಸುದರ್ಶನ ಚಕ್ರ ಕ್ರಿಯೆಯು ಅತ್ಯಂತ ಪರಿಣಾಮಕಾರಿ ಪ್ರಕ್ರಿಯೆಯಾಗಿದೆ. ಒಮ್ಮೆ, ಉನ್ನತ ಧ್ಯಾನ ಕಾರ್ಯಕ್ರಮವನ್ನು ಮಾಡಿದ ನಂತರ ಇದನ್ನು ನೀವು ಉಚಿತವಾಗಿ ಕಲಿಯಬಹುದಾಗಿದೆ. ನಿಮ್ಮ ಉನ್ನತ ಧ್ಯಾನ ಕಾರ್ಯಕ್ರಮವು ಪೂರ್ಣಗೊಂಡ ನಂತರ ಇದನ್ನು ನಿಮ್ಮ ಶಿಕ್ಷಕರಿಂದ ಕಲಿತು ನಿತ್ಯ ಅಭ್ಯಸಿಸಬಹುದಾಗಿದೆ.