ಜೀವನ ಕಲಾ ಕೇಂದ್ರವು ನಡೆಸುವ ಕಾರ್ಯಕ್ರಮಗಳಲ್ಲಿ ಯಾರು "ಆನಂದದ ಅನುಭೂತಿಯ / ಭಾಗ -೧ ಶಿಬಿರ" ಅಥವಾ " ವೈ.ಇ.ಎಸ್. ಪ್ಲಸ್ " ಶಿವಿರದಲ್ಲಿ ಪಾಲ್ಗೊಂಡಿದಾರೆಯೋ ಅವರಿಗಾಗಿ.
ಜೀವನ ಕಲಾ ಕೇಂದ್ರಗಳು ಜಗತ್ತಿನಾದ್ಯಾಂತ ಇರುವ ಕೇಂದ್ರಗಳಲ್ಲಿ ಪ್ರತಿವಾರವೂ ಪುನರ್ ಮಿಲನದ ಸಭೆಗಳನ್ನು ನಡೆಸುತ್ತದೆ. ಈ ಶಿಬಿರಗಳಲ್ಲಿ ಭಾಗವಹಿಸಿದವರೆಲ್ಲರಿಗೂ ಇದು ತೆರೆದಿದೆ. ಈ ಸಭೆಗಳು ಜೀವನ ಕಲಾ ಶಿಬಿರದ ಅಧ್ಯಪಕರಿಂದ ನಡೆಸಲ್ಪಡುತ್ತದೆ. ಮತ್ತು ಈ ಕಾರ್ಯಕ್ರಮಗಳನ್ನು ಮಾಡಿದವರು ಉಚಿತವಾಗಿ ಇದರಲ್ಲಿ ಪ್ರತಿವಾರವೂ ಪಾಲ್ಗೊಳ್ಳ ಬಹುದು. ಸಮೂಹದಲ್ಲಿ ನಡೆಸುವ ಈ ಸಭೆಗಳನ್ನು 'ಸತ್ಸಂಗ" ಎಂದೂ ಕರೆಯುತ್ತಾರೆ.
ಈ ಸತ್ಸಂಗಗಳಲ್ಲಿ ಭಾಗವಹಿಸಿ, ನೀವು ದಿನವು ಮನೆಯಲ್ಲಿ ಮಾಡುವ ಉಸಿರಾಟದ ಪ್ರಕ್ರಿಯೆಗಳನ್ನು ಸಮೂಹದಲ್ಲಿ ಮಾಡುವುದರ ಮೂಲಕ ಮತ್ತೆ ಬಲ ಪಡಿಸಿಕೊಳ್ಳಬಹುದು. ನಿಮ್ಮ ಅನುಭವಗಳನ್ನು ನವೀಕರಿಸಿಕೊಂಡು ಅಲ್ಲಿ ಬರುವ ಇತರ ಸಹಭಾಗಿಗಳೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಸಂಪರ್ಕದಲ್ಲಿರಬಹುದು.
ನಿಮಗೆ ಹತ್ತಿರವಿರುವ ಜೀವನ ಕಲಾ ಕೇಂದ್ರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ