Kyc kyt children teens

ನೋ ಯುವರ್ ಚೈಲ್ಡ್ ವರ್ಕ್ಷಾಪ್ (KYC)

ನಿಮ್ಮ ಅರ್ಥಮಾಡಿಕೊಳ್ಳಿ ಮಕ್ಕಳ ವರ್ತನೆ

ಮಾನಸಿಕ ಆರೋಗ್ಯ ಹಾಗೂ ಪಾಲನೆದ ಬಗ್ಗೆ ನಡೆದಿರುವ ಸಂಶೋಧನೆಯ ಬಗ್ಗೆ ತಿಳಿಯಿರಿ. ನೀವು ಉತ್ತಮ ಪಾಲಕರಾಗುವುದು ಹೇಗೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಕಂಡುಕೊಳ್ಳಿ…….

ನೋಂದಾಯಿಸಿ

ನಾನು ಏನು ಕಲಿಯುತ್ತೇನೆ?

icon

ಮಕ್ಕಳ ವರ್ತನೆ

ಬೇರೆಬೇರೆ ಸನ್ನಿವೇಶಗಳಲ್ಲಿ ನಿಮ್ಮ ಮಕ್ಕಳು ಹೇಗೆ ವರ್ತಿಸುತ್ತಾರೆ ಎಂದು ತಿಳಿದುಕೊಳ್ಳುತ್ತೀರಿ.

icon

ಪರಿಣಾಮಕಾರಿ ಸಂವಹನ

ಮಕ್ಕಳಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳಿಗಿಂತ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪ್ರಚೋದಿಸಿ!

icon

ವ್ಯಕ್ತಿತ್ವದ ಬೆಳವಣಿಗೆ

ಹದಿವರೆಯದ/ಮಕ್ಕಳ ಬೌದ್ಧಿಕತೆಯನ್ನು ಪ್ರಚೋದಿಸಿ ಅವರನ್ನು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದವರನ್ನಾಗಿ ಹಾಗೂ ಸಂವೇದನಾಶೀಲರನ್ನಾಗಿ ಬೆಳೆಸುವುದು ಹೇಗೆಂದು ಕಲಿಯಿರಿ.

icon

ಮೌಲ್ಯಾಧಾರಿತ ಪಾಲನೆ

ಎಲ್ಲಕಾಲಕ್ಕೂ ಸಲ್ಲುವ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿ.

ಪಾಲನೆಯ ಶಿಕ್ಷಣ ಏಕೆ ಮುಖ್ಯವಾಗುತ್ತದೆ?

ತಾಯಿ-ತಂದೆಯರಾಗುವುದು ಜೀವನದ ಅತೀ ದೊಡ್ಡ ಆನಂದಗಳಲ್ಲಿ ಒಂದು. ಪಾಲನೆಯು ನಾವು ವಹಿಸಿಕೊಳ್ಳಬಹುದಾದ ಅತೀ ದೊಡ್ಡ ಜವಾಬ್ದಾರಿಯೂ ಹೌದು. ಇಂದು ಪಾಲಕರಾಗಿರುವುದೆಂದರೆ ಆಹಾರ, ಬಟ್ಟೆ, ಆಸರೆ ಮತ್ತು ಶಿಕ್ಷಣವನ್ನು ನೀಡುವುದು ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನದು.

ಮಕ್ಕಳು ನಿಮ್ಮ ಮಾತುಗಳನ್ನು ಚಾಚೂತಪ್ಪದಂತೆ ಪಾಲಿಸುವ ಕೈಗೊಂಬೆಗಳಲ್ಲ. ಸಂಬಂಧಗಳು ಎಂದಿಗೂ ಅಷ್ಟು ಸರಳವಾಗಿರಲಿಲ್ಲ. ಇಂದಿನ ವೇಗದ, ತಂತ್ರಜ್ಞಾನವನ್ನು ಆಧರಿಸಿದ, ಚಿಕ್ಕ ಸ್ವಾವಲಂಬಿ ಕುಟುಂಬಗಳಲ್ಲಿ ಮಕ್ಕಳು ಹಿರಿಯರ ಅನುಭವ ಮತ್ತು ಮಾರ್ಗದರ್ಶನಗಳಿಂದ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳಿಗೆ ವ್ಯಕ್ತಿಗತ ಮಾರ್ಗದರ್ಶನದ ಅಗತ್ಯ ನಿಜವಾಗಿಯೂ ಇದೆ. ಈ ಹಿನ್ನೆಲೆಯಲ್ಲಿ ನಾವು “ನೋ ಯುವರ್‌ ಚೈಲ್ಡ್‌ ಅಂಡ್‌ ಟೀನ್ಸ್” ಕಾರ್ಯಾಗಾರವನ್ನು ರೂಪಿಸಿದ್ದೇವೆ.

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕೆಂದಿದ್ದೇನೆ, ಆದರೆ...

ನಮ್ಮ ಮಕ್ಕಳನ್ನು ಬೆಳೆಸಲೂ ಒಂದು ಕಾರ್ಯಾಗಾರದ ಅಗತ್ಯವಿದೆಯೆ? ತಂದೆತಾಯಿಯರು ತಾವಾಗಿಯೇ ತಲತಲಾಂತರದಿಂದ ಈ ಕರ್ತವ್ಯವನ್ನು ನಿರ್ವಹಿಸುತ್ತಿರಲಿಲ್ಲವೆ?

ಚಿಕ್ಕ ಕುಟುಂಬಗಳು ಆಧುನಿಕ ಕಾಲದ ವಿದ್ಯಮಾನ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಹಿರಿಯರಿರುತ್ತಿದ್ದರು. ಜೊತೆಗೆ ಕುಟುಂಬಜೀವನಕ್ಕೆ ಕೆಲವು ಕಟ್ಟುಪಾಡುಗಳಿದ್ದವು. ಅವುಗಳನ್ನು ಎಲ್ಲರೂ ಪಾಲಿಸುತ್ತಿದ್ದರು. ಇಂದಿನ ಜಾಗತಿಕ, ಮುಕ್ತ ವಾತಾವರಣದಲ್ಲಿ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಿರೂಪಿಸಲಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ನಿಲುವುಗಳನ್ನು ಹೊಂದಿರುತ್ತಾರೆ. ಈ ತಲೆಮಾರಿನ ಜನರ ಸವಾಲುಗಳೂ ವಿಶಿಷ್ಟವಾಗಿವೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರವು ನಿಮಗೆ ಸರಿಯಾದ ಮಾರ್ಗದರ್ಶನ ನೀಡುತ್ತದೆ.

ಮಕ್ಕಳನ್ನು ಬೆಳೆಸುವಾಗ ನಾನು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ಕೇವಲ ಎರಡು ಗಂಟೆಗಳ ಕಾರ್ಯಾಗಾರದಿಂದ ಸಹಾಯವಾಗುತ್ತದೆಯೆ?

ಮಕ್ಕಳ ಪೋಷಣೆ ಜೀವಮಾನದ ಪ್ರಕ್ರಿಯೆ. ಈ ಎರಡು ಗಂಟೆಗಳ ಕಾರ್ಯಾಗಾರದಲ್ಲಿ ನಾವು ಮಕ್ಕಳ ವರ್ತನೆಯ ಮೂಲ ಕಾರಣಗಳನ್ನು ವಿಶ್ಲೇಷಣೆ ಮಾಡಿ ಮಕ್ಕಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಬೆಳೆಯಲು ಹೇಗೆ ಸಹಾಯ ಮಾಡಬಹುದು ಎಂಬ ಅರಿವನ್ನು ತಂದೆತಾಯಿಯರಲ್ಲಿ ಮೂಡಿಸುತ್ತೇವೆ. ನಿಮ್ಮ ಮಕ್ಕಳು ತಮ್ಮ ಬಾಲ್ಯವನ್ನು ಕಳೆದು ಹದಿವರೆಯವನ್ನು ದಾಟಿ ವಯಸ್ಕರಾಗುವ ಕಾಲದಲ್ಲಿ ಅವರ ಜೊತೆಗಿನ ನಿಮ್ಮ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಈ ಮಾಹಿತಿಗಳು ಸಹಾಯ ಮಾಡುತ್ತವೆ.

ಯಾವ ರೀತಿಯ ಸಮಸ್ಯೆಗಳನ್ನು ನಿಭಾಯಿಸಲು ಈ ಕಾರ್ಯಕ್ರಮವು ನನಗೆ ಸಹಾಯ ಮಾಡುತ್ತದೆ?

ಆಹಾರದ ಆಯ್ಕೆ, ವರ್ತನೆ, ವೃತ್ತಿಯ ಆಯ್ಕೆ, ಸಮವಯಸ್ಕರ ಒತ್ತಡ, ಸಂವಹನದ ದೋಷ, ವಿಪರೀತ ಸ್ಕ್ರೀನ್‌ ಟೈಮ್ ಮುಂತಾದ ನೀವು ಎದುರಿಸುವ ಯಾವುದೇ ಸಾಮಾನ್ಯ ಸಮಸ್ಯೆಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಗುತ್ತದೆ. ಕಾರ್ಯಾಗಾರವು ಪರಸ್ಪರ ಸಂವಾದ ರೂಪದಲ್ಲಿದ್ದು ಮಕ್ಕಳ ಬಾಲ್ಯ ಮತ್ತು ಹದಿವರೆಯದ ವರ್ತನೆಗಳ ಹಿಂದಿನ ಕಾರಣಗಳನ್ನು ಅರಿಯಲು ನಿಮಗೆ ಸಹಾಯ ಮಾಡುತ್ತದೆ.

ಈ ಕಾರ್ಯಕ್ರಮಕ್ಕೆ ನನ್ನ ಮಕ್ಕಳನ್ನೂ ಕರೆತರಬಹುದೆ?

ಇಲ್ಲ, ಈ ಕಾರ್ಯಾಗಾರವು ಕೇವಲ ಪೋಷಕರಿಗಾಗಿ ಮಾತ್ರ.

ನಾನು ಕೆಲಸದಲ್ಲಿದ್ದೇನೆ. ನನಗೆ ಅನೇಕ ಜವಾಬ್ದಾರಿಗಳಿವೆ. ಈ ಕಾರ್ಯಾಗಾರದಲ್ಲಿ ನಾನು ಕಲಿತ ಮಾರ್ಗದರ್ಶಕ ಸೂತ್ರಗಳನ್ನು ಅನುಸರಿಸಲು ನಮಗೆ ಇತರರ ಬೆಂಬಲ ಬೇಕಾಗುತ್ತದೆಯೆ?

ಈ ಕಾರ್ಯಾಗಾರದಲ್ಲಿ ನೀವು ಪಡೆದುಕೊಂಡ ಒಳನೋಟಗಳೇ ನಿಮ್ಮ ಕೆಲಸದ ಒತ್ತಡ ಮತ್ತು ಮಕ್ಕಳ ಪಾಲನೆಗಳ ನಡುವೆ ಉತ್ತಮ ಸಮತೋಲನ ಸಾಧಿಸಲು ಸಹಾಯ ಮಾಡುತ್ತವೆ. ನಿಮ್ಮ ಮಕ್ಕಳ ವರ್ತನೆಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸಹಾನುಭೂತಿಯಿಂದ ನಿಭಾಯಿಸುವುದು ನಿಮಗೆ ಸಾಧ್ಯವಾಗುತ್ತದೆ.

ನನ್ನ ಮಗ/ಮಗಳು ಗಮನ-ಕೊರತೆ ಸಮಸ್ಯೆಯಿಂದ ಪೀಡಿತರಾಗಿದ್ದರೆ ಏನು ಮಾಡುವುದು? ಈ ಕಾರ್ಯಾಗಾರವು ನನಗೆ ಸಹಾಯ ಮಾಡುತ್ತದೆಯೆ?

ಇಂತಹ ಸನ್ನಿವೇಶಗಳಲ್ಲಿ ನೀವು ಆಪ್ತ ಸಲಹೆಗಾರರ ಸಲಹೆಯನ್ನು ಪಡೆಯಿರಿ ಎಂದು ನಾವು ಸೂಚಿಸುತ್ತೇವೆ. ಆದರೆ ಅನೇಕ ರೀತಿಯ ಬಾಲ್ಯದ ವರ್ತನೆಗಳ ವಿಶ್ಲೇಷಣೆಯ ಮೂಲಕ ನೀವು ನಿಮ್ಮ ಮಕ್ಕಳ ವರ್ತನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ. ಇದರಿಂದ ಪಾಲಕರ-ಮಕ್ಕಳ ನಡುವಣ ಸಂಬಂಧ ಗಟ್ಟಿಯಾಗುತ್ತದೆ.

ನನ್ನ ಮಗುವಿಗೆ ಆಪ್ತ ಸಲಹೆ ಬೇಕೆ, ಬೇಡವೆ ಎಂಬ ಗೊಂದಲದಲ್ಲಿದ್ದೇನೆ.

KYC/KYT ಕಾರ್ಯಾಗಾರಗಳು ನಿಮ್ಮ ಹದಿಹರೆಯದ/ಮಕ್ಕಳ ಅಸಮರ್ಪಕ ವರ್ತನೆಯ ಹಿಂದಿರುವ ಕೆಲವು ಕಾರಣಗಳನ್ನು ಗುರುತಿಸಲು ನಿಮಗೆ ಸಹಾಯಮಾಡುತ್ತವೆ. ಇದರಿಂದ ನಿಮ್ಮ ಸಂದೇಹಗಳಿಗೆ ಉತ್ತರ ಸಿಗಬಹುದು.

ಶಾಲೆಗಳ ಆನ್ ಲೈನ್ ಕಲಿಕೆಯು ನನ್ನ ಮಗುವನ್ನು ದಿಕ್ಕುಗೆಡಿಸಿದೆ. ಅವನಿಗೆ ಆನ್‌ಲೈನ್‌ ಆಟ ಮತ್ತು ಅಂತರ್ಜಾಲದ ಚಟ ಹತ್ತಿದೆ. ಈ ಕಾರ್ಯಾಗಾರವು ನನಗೆ ಮಾರ್ಗದರ್ಶನ ನೀಡುತ್ತದೆಯೆ?

ಹದಿವರೆಯದ ಮಕ್ಕಳ ವ್ಯಸನಗಳು ಭಾವನಾತ್ಮಕ ನೆಲೆಯಲ್ಲಿ ಹುಟ್ಟಿಕೊಳ್ಳುವ ದೊಡ್ಡ ಸಮಸ್ಯೆ. ಈ ಸಮಸ್ಯೆಯ ಸಾಮಾನ್ಯ ಕಾರಣಗಳನ್ನು ಅರಿತುಕೊಳ್ಳಲು ಈ ಕಾರ್ಯಾಗಾರವು ಸಹಾಯ ಮಾಡುತ್ತದೆ. ದೀರ್ಘಕಾಲದ ವ್ಯಸನಗಳ ಮುಕ್ತಿಗಾಗಿ ಮಕ್ಕಳು ಮತ್ತು ಹದಿವರೆಯದವರಿಗಾಗಿ ನಿರೂಪಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನಾವು ಅವರಿಗೆ ಸೂಚಿಸುತ್ತೇವೆ.

ನನಗೆ ವಿಶೇಷಚೇತನ ಮಗುವಿದೆ. ಈ ಕಾರ್ಯಾಗಾರವು ನನಗೆ ಸಹಾಯ ಮಾಡುತ್ತದೆಯೆ?

ವಿಶೇಷಚೇತನ ಮಕ್ಕಳನ್ನು ಬೆಳೆಸಲು ಪೋಷಕರಿಗೆ ಅಪಾರವಾದ ಸಹನೆ, ಸಹಾನುಭೂತಿ, ಸಕಾರಾತ್ಮಕತೆ ಮತ್ತು ಶಕ್ತಿಯ ಅವಶ್ಯಕತೆ ಇರುತ್ತದೆ. ನಿಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳಿಗೆ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಲು ಈ ಕಾರ್ಯಾಗಾರವು ನಿಮಗೆ ಸಹಾಯ ಮಾಡುತ್ತದೆ. ಪೋಷಕರು ಒತ್ತಡ ನಿವಾರಣ ತಂತ್ರಗಳನ್ನು ಕಲಿತು ಅಭ್ಯಾಸ ಮಾಡಲು ತೊಡಗಿದರೆ ಅವರೂ ಕೂಡ ತಮ್ಮ ದಿನಗಳನ್ನು ಉತ್ತಮವಾಗಿ ಕಳೆಯುವುದು ಸಾಧ್ಯವಾಗುತ್ತದೆ.

ಸಾಂಕ್ರಾಮಿಕ ಕಾಯಿಲೆಯ ನಂತರ ನನ್ನ ಮಕ್ಕಳ ದೈನಂದಿನ ಚಟುವಟಿಕೆಗಳಲ್ಲಿ ಮತ್ತು ವರ್ತನೆಯಲ್ಲಿ ಬದಲಾವಣೆ ಉಂಟಾಗಿದೆ. ಇಂತಹ ಪೂರ್ವನಿದರ್ಶನಗಳಿಲ್ಲದ ಸನ್ನಿವೇಶದಲ್ಲಿ ಮಕ್ಕಳಲ್ಲಿ ಉಂಟಾಗಿರುವ ನಕಾರಾತ್ಮಕ ಬದಲಾವಣೆಗಳನ್ನು ಹೇಗೆ ನಿಭಾಯಿಸುವುದೆಂದು ನನಗೆ ಗೊತ್ತಿಲ್ಲ. ಈ ಕಾರ್ಯಾಗಾರವು ನನಗೆ ಸಹಾಯ ಮಾಡಬಲ್ಲದೆ?

ಹೌದು! ಈ ಕಾರ್ಯಾಗಾರವು ನಿಮ್ಮ ಸಾಂಕ್ರಾಮಿಕ ಕಾಯಿಲೆಗಳ ನಂತರ ಉಂಟಾಗುವ ಹದಿಹರೆಯದ ಮಕ್ಕಳ ವರ್ತನೆಯ ಸಮಸ್ಯೆಗಳ ಮೂಲ ಕಾರಣವನ್ನು ಅರ್ಥಮಾಡಿಕೊಂಡು ಅವರ ದೈನಂದಿನ ಚಟುವಟಿಕೆಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ನೀವು ಕ್ರಮಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಇತರ ವಯೋಸಹಜ ಸಮಸ್ಯೆಗಳನ್ನೂ ಎದುರಿಸಲು ಸಹಾಯ ಮಾಡುತ್ತದೆ.