
ಮೇಧಾ ಯೋಗ ಲೆವೆಲ್ 1
ಒತ್ತಡವನ್ನು ಎದುರಿಸಲು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
13-18 ವಯೋಮಾನದ ಹದಿವಯಸ್ಕರಿಗೆ
ಮೊದಲನೆಯ ವಾರದಿಂದಲೇ ಫಲಿತಾಂಶಗಳನ್ನು ಕಾಣಬಹುದು.
ನೋಂದಾಯಿಸಿಹದಿವಯಸ್ಕರಿಗೆ ಇದರಿಂದ ಹೇಗೆ ಲಾಭವಾಗುತ್ತದೆ?

ಕೋಪವನ್ನು ಮತ್ತು ಆಕ್ರಮಣಶೀಲತೆಯನ್ನು ಸರಳವಾಗಿ ನಿಭಾಯಿಸಬಹುದು
ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡುವ ವಿಶೇಷವಾದ ತಂತ್ರಗಳ ಮೂಲಕ ಕೋಪ, ಆಕ್ರಮಣಶೀಲತೆ, ಖಿನ್ನತೆಗಳಿಂದ ಮುಕ್ತರಾಗಬಹುದು.

ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ
ಹೆಚ್ಚಿನ ಏಕಾಗ್ರತೆಯಿಂದ ಪ್ರಯತ್ನಗಳನ್ನು ಸಾಂದ್ರೀಕರಿಸಿ ನಿಮ್ಮ ಪ್ರಯತ್ನಗಳ ಫಲಿತಾಂಶವನ್ನು ಹೆಚ್ಚಿಸಿಕೊಳ್ಳಲು ಕಲಿಯಿರಿ.

ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ
ಸಮವಯಸ್ಕರ ಒತ್ತಡ, ಸ್ಪರ್ಧೆ, ಚಹರೆ, ಹಾರ್ಮೋನುಗಳು, ಸಂಬಂಧಗಳು ಮುಂತಾದ ಹದಿವಯಸ್ಕರ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಡೆಯುತ್ತಾರೆ.
ಮೇಧಾಯೋಗ ಎಂದರೇನು?
“ಹದಿಹರೆಯದಲ್ಲಿ ಸಂತೋಷವಾಗಿರುವ ಮಕ್ಕಳು ಮುಂದೆ ಆರೋಗ್ಯವಂತ ವಯಸ್ಕರಾಗಿ ಬೆಳೆಯುತ್ತಾರೆ” ಎಂಬುದು ಸಂಶೋಧನೆಯ ಮೂಲಕ ತಿಳಿದುಬಂದ ಅಂಶ. ಆದರೆ ಹದಿವಯಸ್ಕರಲ್ಲಿ ಸಂತೋಷ ವಿರಳವಾಗುತ್ತಿದೆ. ಬಾಲ್ಯದಿಂದ ಯೌವನಕ್ಕೆ ಕಾಲಿಡುವಾಗ ವಿದ್ಯಾಭ್ಯಾಸ, ಪ್ರವೇಶಪರೀಕ್ಷೆಗಳು, ಸಮವಯಸ್ಕರ ಒತ್ತಡ ಮತ್ತು ಸಂಬಂಧಗಳಲ್ಲಿ ಏರುಪೇರು ಮುಂತಾದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಮೇಧಾ ಯೋಗ, ಲೆವೆಲ್ 1, ಈ ಕಾರ್ಯಕ್ರಮವು ಹದಿವಯಸ್ಕರ ಒತ್ತಡಗಳನ್ನು ಕಡಿಮೆ ಮಾಡಿ ಅವರಲ್ಲಿ ಸಂತೋಷವನ್ನು ಹುಟ್ಟಿಸುವುದರ ಮೂಲಕ ಹೆಚ್ಚಿನ ಸಾಧನೆಗೆ ಅವರನ್ನು ಅಣಿಗೊಳಿಸುತ್ತದೆ. ವಿಶೇಷವಾದ ಉಸಿರಾಟದ ತಂತ್ರಗಳ ಮೂಲಕ ಅವರು ತಮ್ಮ ನಕಾರಾತ್ಮಕ ಭಾವನೆಗಳನ್ನು ತೊಡೆದುಕೊಂಡು ಒತ್ತಡವನ್ನು ನಿಭಾಯಿಸಲು ಕಲಿಯುತ್ತಾರೆ. ಅಧ್ಯಯನ, ಸಮವಯಸ್ಕರ ಒತ್ತಡ, ಸ್ವಾಭಿಮಾನ, ಮುಂತಾದ ವಿಷಯಗಳ ಮೇಲೆ ನಡೆಯುವ ಚರ್ಚೆಯು ಅವರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಯಶಸ್ವಿಯಾಗಲು ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತದೆ. ಜೊತೆಗೆ, ಸಾಂಘಿಕ ಕೆಲಸ ಮತ್ತು ಸಹಕಾರ ಮನೋಭಾವ ಮುಂತಾದ ಬದುಕಿನ ಕೌಶಲ್ಯಗಳನ್ನು ಸಂವಾದಾತ್ಮಕ ಪ್ರಕ್ರಿಯೆ ಮತ್ತು ಆಟಗಳ ಮೂಲಕ ಕಲಿಸಲಾಗುತ್ತದೆ.
ಸರಸವಾದ ಆಸಕ್ತಿ ಕೆರಳಿಸುವ ವಾತಾವರಣದಲ್ಲಿ ಬೆರೆಯುವುದು ಮತ್ತು ಕಲಿಯುವುದರ ಮೂಲಕ ಯಶಸ್ಸು ಮತ್ತು ಸಂತೋಷ ಜೊತೆಜೊತೆಯಾಗಿರುವುದು ಸಾಧ್ಯ ಎಂಬ ವಿಶ್ವಾಸ ಅವರಲ್ಲಿ ಮೊಳೆಯುತ್ತದೆ.
ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ಮೊದಲು ನಾನು ನನ್ನ ಸಹಪಾಠಿಗಳೊಡನೆಯೂ ಮಾತನಾಡುತ್ತಿರಲಿಲ್ಲ. ಈಗ ನಾನು ನಮ್ಮ ಶಾಲಾಸಭೆಯಲ್ಲಿಯೂ ಧೈರ್ಯವಾಗಿ ಮಾತನಾಡಬಲ್ಲೆ!

ಮೀರಾ, 13
ವಿದ್ಯಾರ್ಥಿನಿ
ಜೀವನಕ್ಕೆ ಪ್ರಯೋಜನಕಾರಿಯಾದ ಅನೇಕ ಪಾಠಗಳನ್ನು ನಾನು ಕಲಿತೆ. ಗುರುದೇವರಂತೆಯೇ ನಾನೂ ಕೂಡಾ ಎಲ್ಲರ ಮುಖಗಳ ಮೇಲೂ ಮುಗುಳ್ನಗೆಯನ್ನು ಮೂಡಿಸಿ ಅವರನ್ನು ಸಂತೋಷಪಡಿಸಲು ಬಯಸುತ್ತೇನೆ.

ಅಕ್ಷಯ್, 16
ವಿದ್ಯಾರ್ಥಿ
ಈಗ ನಾನು ಮೊದಲಿಗಿಂತ ಚೆನ್ನಾಗಿದ್ದೇನೆ. ನನ್ನಲ್ಲಿ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸವಿದೆ. ಸುದರ್ಶನಕ್ರಿಯೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡುತ್ತೇನೆ. ಇದರಿಂದ ನನ್ನ ಏಕಾಗ್ರತೆ ಹೆಚ್ಚಿದೆ, ನನ್ನ ಕಲಿಕೆಯ ಮಟ್ಟವೂ ಉತ್ತಮವಾಗಿದೆ.

ಶ್ರಿಯಾ, 15
ವಿದ್ಯಾರ್ಥಿನಿ
ಮೇಧಾ ಯೋಗದ ಮೇಲಿನ ಸಂಶೋಧನೆ

ನಿಖರತೆ
ಹದಿವಯಸ್ಕರ ಕೆಲಸದ ನಿಖರತೆಯು 22 % ರಷ್ಟು ಹೆಚ್ಚುತ್ತದೆ

ಮಾನಸಿಕ ಆರೋಗ್ಯ
ಮಾನಸಿಕ ಆರೋಗ್ಯದ ಅಂಕಗಳಲ್ಲಿ 29% ಹೆಚ್ಚಳ

ಭಾವನಾತ್ಮಕ ಸಮಸ್ಯೆಗಳು
ಸಂಶೋಧನೆಗೆ ಒಳಪಟ್ಟ ಜನರ ಭಾವನಾತ್ಮಕ ಸಮಸ್ಯೆಗಳು 69% ರಷ್ಟು ಕಡಿಮೆಯಾದವು.

ಅತಿ ಕಾರ್ಯಶೀಲತೆ
ಸಂಶೋಧನೆಗೆ ಒಳಪಟ್ಟ ಜನರಲ್ಲಿ 67% ರಷ್ಟು ಕಡಿಮೆಯಾಯಿತು.

ಸಮವಯಸ್ಕರ ಒತ್ತಡ
ಸಂಶೋಧನೆಗೆ ಒಳಪಟ್ಟ ಜನರಲ್ಲಿ ಈ ಸಮಸ್ಯೆಯು 50% ರಷ್ಟು ಕಡಿಮೆಯಾಯಿತು.

ವರ್ತನೆಯ ಸಮಸ್ಯೆಗಳು
ಸಂಶೋಧನೆಗೆ ಒಳಪಟ್ಟ ಜನರಲ್ಲಿ 78% ರಷ್ಟು ಕಡಿಮೆಯಾಗಿತ್ತು.
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿಮುಂಬರುವ ಕಾರ್ಯಕ್ರಮಗಳು
ನಾನು ಈ ಕಾರ್ಯಾಗಾರವನ್ನು ಸೇರಲಿಚ್ಛಿಸುತ್ತೇನೆ, ಆದರೆ...
ಈ ಕಾರ್ಯಕ್ರಮದ ಬಗ್ಗೆ ಮತ್ತಷ್ಟು ವಿವರ ನೀಡುತ್ತೀರಾ?
ಮೇಧಾಯೋಗವು ಪ್ರಾಚೀನವಾದ ಯೋಗ ಮತ್ತು ವ್ಯಾಯಾಮಗಳನ್ನು ಅನುಸರಿಸಿ ಗುರುದೇವರು ನಿರೂಪಿಸಿರುವ ತಂತ್ರಗಳನ್ನು ಆಧರಿಸಿದೆ. ಧ್ಯಾನ, ಯೋಗ ಮತ್ತು ಉಸಿರಾಟದ ತಂತ್ರಗಳ ಜೊತೆಗೆ ಸಂದೇಹ, ಭಯ, ಆತಂಕಗಳಿಂದ ಮುಕ್ತರಾಗಿ ಆತ್ಮವಿಶ್ವಾಸದಿಂದ ಬದುಕುವ ಕಲೆಯನ್ನು ಹದಿವಯಸ್ಕರಿಗೆ ಹೇಳಿಕೊಡಲಾಗುತ್ತದೆ. ಅವರು ಮುಕ್ತವೇದಿಕೆಯಲ್ಲಿ ಸಹಭಾಗಿಗಳೊಡನೆ ತಮ್ಮ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಾರೆ. ಹದಿವಯಸ್ಕರಿಗೆ ಮುಖ್ಯವಾದ ಆತ್ಮೀಯ ಭಾವನೆಯನ್ನು ಈ ಕಾರ್ಯಾಗಾರವು ಕಲಿಸುತ್ತದೆ. ಅವರಿಗೆ ಅಧ್ಯಾತ್ಮ ಮತ್ತು ಭಾರತೀಯ ಪರಂಪರೆಯ ಪರಿಚಯವನ್ನೂ ಮಾಡಿಕೊಡಲಾಗುತ್ತದೆ.
ನಾನು ಇದಕ್ಕೆ ನೊಂದಾಯಿಸಿಕೊಂಡರೆ ಮುಂದೇನು?
ಇದು ಮತ್ತೊಂದು ಆನ್ ಲೈನ್ ತರಗತಿಯೆ? ಹಾಗಿದ್ದರೆ ನನ್ನ ಮಗ/ಮಗಳು ಅದನ್ನು ಮಾಡಲು ಬಯಸುತ್ತಾರೋ ಇಲ್ಲವೋ..
ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ. ಆದರೆ, ನಿಮ್ಮ ಹದಿವಯಸ್ಕ ಮಕ್ಕಳು ಯಾವುದೇ ಮಾನಸಿಕ ತಾಕಲಾಟವಿಲ್ಲದ, ಪ್ರಶಾಂತ, ಸಂತೋಷಭರಿತ, ಸಫಲ ಜೀವನವನ್ನು ನಡೆಸಬೇಕೆಂದು ನೀವು ಬಯಸುತ್ತೀರಲ್ಲವೇ? ಈ ಕಾರ್ಯಕ್ರಮದ ಮೂಲಕ ನಿಮ್ಮ ಮಕ್ಕಳು ತಮ್ಮ ಜೀವನದ ಉತ್ಕರ್ಷದ ಮೇಲೆ ಪರಿಣಾಮ ಬೀರುವ ವಯೋಸಹಜವಾದ ಒತ್ತಡ ಮತ್ತು ಪ್ರಭಾವಗಳನ್ನು ಎದುರಿಸಲು ಸಮರ್ಥರಾಗುವುದನ್ನು ನೀವೇ ನೋಡುತ್ತೀರಿ.
ನನ್ನ ಮಗ/ಮಗಳು ಈ ಕಾರ್ಯಕ್ರಮದಲ್ಲಿ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದೆ?
ಖಂಡಿತವಾಗಿ! ಈ ಕಾರ್ಯಕ್ರಮವು ಸಂವಾದಾತ್ಮಕವಾಗಿರುವುದರಿಂದ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಬಹುದು ಮತ್ತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.