ಗ್ರಾಮೀಣಾಭಿವೃದ್ಧಿ

ಜೀವನ ಕಲಾಕೇಂದ್ರದ ಗ್ರಾಮೀಣ ಆಭಿವೃದ್ದಿಯ ಕಾರ್ಯಕ್ರಮಗಳನ್ನು ಮುಖ್ಯವಾಗಿ ಯುವಾಚಾರ್ಯರು ನಡೆಸುತ್ತಿದ್ದಾರೆ. ಯುವಾಚಾರ್ಯರು, ಸ್ಥಳೀಯ ಗ್ರಾಮೀಣ ಸಮುದಾಯದ ಯುವಕರಾಗಿದ್ದು, ಯುವಾಚಾರ್ಯರ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ಕಾರ್ಯನಿರತರಾಗಿರುವವರು. ಈ ಕಾರ್ಯಕ್ರಮವು ಅವರಿಗೆ ವಿವಿಧ ಕಾರ್ಯಕೌಶಲ್ಯಗಳನ್ನು (ನಿಪುಣತೆ) ಮತ್ತು ಪ್ತೇರಣೆಯನ್ನು ಪ್ರಚೋದಿಸಿ, ತಮ್ಮ ಗ್ರಾಮದ ಮತ್ತು ಸ್ಥಳೀಯರ ಅಗತ್ಯಗಳನ್ನು ಆಧರಿಸಿ ಸೇವಾಯೋಜನೆಗಳನ್ನು ನಿಯೋಜಿಸಿ, ಮಾರ್ಗದರ್ಶನ ಮಾಡುವಂಥಹ ಕಾರ್ಯಕ್ಷಮತೆಯನ್ನು ನೀಡುತ್ತದೆ. ಕೇವಲ ದೃಢವಾದ, ಆಧ್ಯಾತ್ಮಿಕ ಅಡಿಪಾಯ ಮಾತ್ರವಲ್ಲದೆ, ಸದೃಢವಾದ (ಅಲುಗಿಸಲಾಗದ) ಸ್ವಾಭಿಮಾನ ಮುತ್ತು ಆತ್ಮವಿಶ್ವಾನವನ್ನು ನೀಡುತ್ತದೆ.
ಈ ರೀತಿಯ ಆಂತರಿಕ ಅಂತಃಸತ್ವ, ಕಾರ್ಯಕೌಶಲ್ಯತೆ ಹಾಗೂ ನಾಯಕತ್ವದ ತರಬೇತಿಯ ಸಂಯೋಗದಿಂದ ಈ ಕಾರ್ಯಕ್ರಮವು ದೀರ್ಫಕಾಲದವರೆಗೂ ಪರಿಣಾಮಕಾರಿಯಾದ ಆಸರೆಯಾಗುತ್ತದೆ.
5 ಹೆಚ್ ಕಾರ್ಯಕ್ರಮವು ಪ್ರತಿಯೊಂದು ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ವಸತಿನಿರ್ಮಾಣ, ಆರೋಗ್ಯ ಸಂರಕ್ಷಣೆ, ಮಾನವೀಯಮೌಲ್ಯಗಳು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವುದನ್ನು ಧ್ಯೇಯವಾಗಿರಿಸಿಕೊಂಡಿದೆ. 1997 ರಲ್ಲಿ ಇದು ಸ್ಥಾಪಿತವಾದ. ಈ ಕಾರ್ಯಕ್ರಮವು ಬಡತನ, ದ್ವೇಷ, ದುಃಖ ಮತ್ತು ರೋಗರುಜಿನಗಳನ್ನು ನಿರ್ಮೂಲನಗೊಳಿಸಿ, ಶಾಂತಿ, ಸಾಮರಸ್ಯಗಳನ್ನು ವಿಶ್ವದಾದ್ಯಂತ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಸಾಧಿಸುವ ಧ್ಯೇಯವನ್ನು ಹೊಂದಿದೆ. ವ್ಯಕ್ತಿಗತವಾಗಿ ಹಾಗೂ ತೀರಾ ಸಾಮಾನ್ಯವಾದ ಜನಸಮುದಾಯಗಳನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಮೂಲಕ, ಈ ಕಾರ್ಯಕ್ರಮವು ದೀರ್ಘಕಾಲದ ಪರಿಣಾಮ ಮತ್ತು ಸ್ಥಿರತೆಯನ್ನು ಖಚಿತಗೊಳಿಸುತ್ತದೆ.

5 ಹೆಚ್ ಸಾಧನೆಗಳು

  • 1,10,000 ಗ್ರಾಮೀಣ ಯುವಕರಿಗೆ ಯುವಾಚಾರ್ಯ ತರಬೇತಿ ಕಾರ್ಯಕ್ರಮವನ್ನು ನೀಡಲಾಗಿದೆ.
  • ,95,000 ಉಚಿತ ಒತ್ತಡ ಪರಿಹಾರ ಕಾರ್ಯಾಗಾರಗಳ ಆಯೋಜನೆಯಿಂದ, 56,88,000ಕ್ಕಿಂತ ಹೆಚ್ಚುಜನರಿಗೆ ಇದರ ಲಾಭ ದೊರಕಿದೆ.
  • 49,500 ನೈರ್ಮಲ್ಯ ಶಿಬಿರಗಳನ್ನು ಆಯೋಜಿಸಿ ಮತ್ತು 25,950 ವೈದ್ಯಕೀಯ ಶಿಬಿರಗಳನ್ನು ನಿರ್ದೇಶಿಸಿ, 25,82,500 ರಷ್ಟು ಜನರಿಗೆ ಇದರ ಲಾಭ ದೊರೆಯುವಂತೆ ಮಾಡಿದೆ.
  • 10 ಲಕ್ಷಕ್ಕೂ ಅಧಿಕವಾಗಿ ವೃಕ್ಷಗಳನ್ನು ನೆಡಲಾಗಿದೆ
  • 1895 ಮನೆಗಳು, 5418 ಶೌಚಾಲಯಗಳು, 1152 ರಂಧ್ರ ಬಾವಿಗಳು ಮತ್ತು 904 ಜೈವಿಕ ಅನಿಲಯಂತ್ರಗಳನ್ನು ನಿರ್ಮಿಸಲಾಗಿದೆ.
  • 55 ಮಾದರಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸಿ, 115,000 ಜನರಿಗೆ ಇದರ ಉಪಯೋಗದೊರಕಿದೆ.
  •  9000 ಜನರಿಗೆ ಸಾವಯವ ಕೃಷಿಯಲ್ಲಿ ತರಬೇತಿ ನೀಡಲಾಗಿದೆ.40,212 ಹಳ್ಳಿಗಳನ್ನು ತಲುಪಿ ಸ್ವಂದಿಸಿವೆ

ಗ್ರಾಮೀಣ ವಿದ್ಶುತ್ತೀಕರಣ : ಲೈಟ್ ಎ ಹೋಮ್ (ಮನೆಗೊಂದು ದೀಪಹಚ್ಚಿ)

ಲೈಟ್ ಎ ಹೋಮ್ ಯೋಜನೆಯು ಅಕ್ಟೋಬರ್ 2012 ರಲ್ಲಿ ಪ್ರಾರಂಭವಾಯಿತು. ಈ ಉಪಕ್ರಮವು ವಿದ್ಶುತ್ ಸಂಪರ್ಕವೇ ಇಲ್ಲದಿರುವ 74 ದಶಲಕ್ಷ ಗ್ರಾಮೀಣ ಕುಟುಂಬದ 390 ದಶಲಕ್ಷ ಜನರಿಗೆ ಕಡಿಮೆದರದಲ್ಲಿ ವಿದ್ಶುತ್ತನ್ನು ಸರಬರಾಜು ಮಾಡುವ ಉದ್ದೇಶವನ್ನು ಹೊಂದಿದೆ ಇದರಲ್ಲಿ ಬಹುತೇಕ ಜನರು ಆರೋಗ್ಶ ಹಾಗೂ ಪರಿಸರಕ್ಕೆ ಅಪಾಯಕಾರಿಯಾದ ಸೀಮೆಣ್ಣೆ ಮತ್ತು ಇತರ ಇಂಧನಗಳನ್ನು ತಮ್ಮ ಬೆಳಕಿನ ಅಗತ್ಯಗಳಿಗೆ ಅವಲಂಬಿಸಿದ್ದಾರೆ.
ಇಲ್ಲಿಯವರೆಗೂ ಲೈಟ್ ಎ ಹೋಮ್ ಯೋಜನೆಯು 9000 ಜನರ ಜೀವನವನ್ನು ಸೌರದೀಪ ವ್ಯವಸ್ಥೆಯಿಂದ ಬೆಳಗಿದೆ. ಬಿಹಾರ್, ಉತ್ತರ ಪ್ರದೇಶ ಅಸ್ಸಾಮ್ ಮತ್ತು ಜಾರ್ಖಂಡ್ ಪ್ರದೇಶಗಳ 1,000 ಮನೆಗಳಿಗೆ ಈ ವ್ಯವಸ್ಥೆ ತಲುಪಿದೆ, 2015 ನೇ ಇಸವಿಯ ವೇಳೆಗೆ ವಿದ್ಯುಚ್ಧಿಕ್ತಿ ಕಾಣದ 1,00,000 ಮನೆಗಳನ್ನು ಬೆಳಗಿಸುವ ಧ್ಶೇಯದಿಂದ ಕಾರ್ಯನಿರತವಾಗಿದೆ.

ಸಾವಯವ ಕೃಷಿ

2007 ನೇ ಇಸವಿಯಿಂದ, ಜೀವನ ಕಲಾ ಕೇಂದ್ರವು ಸಾವಯವ ಕೃಷಿಯ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದಾರೆ. ಕಳೆದ ಹಲವು ವರುಷಗಳಿಂದ, ಸುಮಾರು 32,000 ರೈತರು ಈ ಕಾರ್ಯಾಗಾರವು ಸಾವಯವ ಕೃಷಿಯ ಬಳಕೆಯ ಸಾಧನಗಳು, ತಂತ್ರಗಳು, ರೈತರಿಗೆ ರಾಸಾಯನಿಕ ಕೃಷಿಯಿಂದ ಆಗುವ ಹಾನಿಯ ಬಗ್ಗೆ ತಿಳುವಳಿಕೆ, ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ಹೊಲಗದ್ದೆಗಳ ಉತ್ಪನ್ನಗಳ ಇಳುವರಿ ಕಡಿಮೆಯಾಗುತ್ತಾ ಬರುತ್ತದೆಯಂಬ ಪರಿಜ್ಞಾನವನ್ನು ಒಳಗೊಂಡಿದೆ.

ಪರಿವರ್ತನೆಯ ಕ್ರಾಂತಿಯಲ್ಲಿ ಭಾಗವಹಿಸಿರಿ

  • ಸಾಮಾಜಿಕ ಜವಾಬ್ದಾರಿಯುನ್ನು ಹೊರಲು ನೀವು ಸ್ಪೂರ್ತಿಯಿಂದ ಪ್ರೇರಿತರಾಗಿರುವಿರಾ ?
  • ಪರಿವರ್ತನೆಯ ಈ ನಿಟ್ಟಿನಲ್ಲಿ ನೀವೂ ಪಾಲ್ಗೊಂಡು, ಬದಲಾವಣಿಯನ್ನು ಕಾಣಬಯಸುವಿರಾ 
  • • ಇದಕ್ಕೆ ಕಾರ್ಯಬದ್ಧರಾಗಿದ್ದು ನಾಯಕರ ತಂಡವೊಂದನ್ನು ಕಟ್ಟಲು (ನಿರ್ಮಾಣಮಾಡಲು) ಸಿದ್ಧರಾಗಿದ್ದೀರಾ?

• ಹಾಗಿದ್ದರೆ ಈ ಪರಿವಾರವನ್ನು ಸೇರಿರಿ...  - ವೈ.ಎಲ್.ಟಿ.ಪಿ ಯ ಸಂಯೋಜಕನ್ನು ಸಂಪರ್ಕಿಸಿ

ನೈರೋಬಿಯ ಮಕ್ಕಳಿಗಾಗಿ ಕೈ ಎತ್ತೋಣ  (ಕೈಗಳನ್ನು ಚಾಚಿರಿ)

ಚಿಕ್ಕಮಕ್ಕಳಿಗಾಗಿ ಕೈ ಎತ್ತಿ’– ಈ ಕಾರ್ಯಕ್ರಮವು ಮನಸ್ಸು ಮತ್ತು ಭಾವನೆಗಳನ್ನು ನಿರ್ವಹಿಸಲು ಕಾರ್ಯತಂತ್ರಗಳನ್ನು ಒದಗಿಸಿ, ಬಡತನವನ್ನು ನಿವಾರಿಸಿ, ಸ್ವಸ್ಥ, ಆರೋಗ್ಯಕರವಾದ ಮತ್ತು ಜೀವನಕ್ಕೆ ಆಧಾರವಾದ ಪರಿಸರವನ್ನು ನಿರ್ಮಾಣಮಾಡಿ, ಕೀನ್ಯಾದ ಮಕ್ಕಳನ್ನು ಶಕ್ತಿಯುತರನ್ನಾಗಿ (ಕಿರುಕಂದಗಳನ್ನು ಸಶಕ್ತರಾಗುವಂತೆ) ಮಾಡುತ್ತದೆ. ಜೀವನ ಕಲಾ ಕೇಂದ್ರ, ಐ.ಎ.ಹೆಚ್,ವಿ. ಮತ್ತು  ‘ಕಿರುಕಂದಗಳಿಗೆ ಕೈ ಮುಂದಾಗಿಸಿ  ಯೋಜನೆಗಳು’ ನೈರೋಬಿಯದಲ್ಲಿ ಮಕ್ಕಳ ಮನೆ ಹಾಗೂ ಶಾಂತಿಗಳಲ್ಲಿ ಕಾರ್ಯನಿರತರಾಗಿ ತಮ್ಮನ್ನು ತೊಡಗಿಸಿಕೊಂಡಿವೆ.

ಇನ್ನೂ ಓದಿ... ( ಮುಂದೆ ಓದಿ)