ಗ್ರಾಮೀಣಾಭಿವೃದ್ಧಿ
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ- ಸೌರ ಶಕ್ತಿಯ ಬೆಳಕು, ಶೌಚಾಲಯದ ಸೌಲಭ್ಯಗಳು, ಬಲವಾದ ಸ್ಥಳೀಯ ಆಡಳಿತ - ಮುಂತಾದುವುಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿಕೊಡಲು ಸಹಕರಿಸಿ.

ಸವಾಲು
ನೈರ್ಮಲ್ಯ ಸೌಲಭ್ಯಗಳ ಕೊರತೆ, ಅಸಮರ್ಪಕ ವಿದ್ಯುತ್, ಕಳಪೆ ಶಿಕ್ಷಣ ಮೂಲಸೌಕರ್ಯ

ತಂತ್ರ
ಮೂಲಸೌಕರ್ಯ ಅಭಿವೃದ್ಧಿ, ಸಮುದಾಯ ಕಟ್ಟಡ, ಸ್ಥಳೀಯ ಯುವಕರನ್ನು ಸಬಲೀಕರಣಗೊಳಿಸುವುದು

ವ್ಯಾಪ್ತಿ
ಮಹಾರಾಷ್ಟ್ರದಾದ್ಯಂತ ನಿರ್ಮಿಸಲಾದ ವಾಟರ್ ರೀಚಾರ್ಜ್ ಪಿಟ್‌ಗಳು, ಲೈಟ್ ಎ ಹೋಮ್ ಯೋಜನೆ
ಅವಲೋಕನ
ಗ್ರಾಮೀಣ ಭಾರತವು ನಮ್ಮನ್ನು ಕೈಬೀಸಿ ಕರೆಯುತ್ತಿದೆ! ನೈರ್ಮಲ್ಯ, ಶುದ್ಧ ಕುಡಿಯುವ ನೀರು, ವಿದ್ಯುತ್, ಆರ್ಥಿಕ ಅಭಿವೃದ್ಧಿ ಮುಂತಾದ ಮೂಲಭೂತ ವಿಷಯಗಳಿಗೆ ಮಾತ್ರವಲ್ಲದೆ ,ದೀರ್ಘಕಾಲೀನ ಬದಲಾವಣೆಗಳಿಗೂ ನಾವು ಗಮನವನ್ನು ಕೊಡಬೇಕಾಗಿದೆ. ಸರಳವಾಗಿ ಹೇಳಬೇಕೆಂದರೆ, ಯಾರು ಕೂಡಾ ಬಳಸಲಿಕ್ಕೆ ಯೋಗ್ಯವಲ್ಲದ ಶೌಚಾಲಯಗಳನ್ನು ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಗ್ರಾಮದಲ್ಲಿ ಎಲ್ಲಿಯೂ ಸೌರ ಶಕ್ತಿಯ ದೀಪವನ್ನು ಅಳವಡಿಸುವ ವ್ಯವಸ್ಥೆಯನ್ನೇ ಮಾಡದಿರುವಾಗ, ಸೋಲಾರ್ ಸೆಂಟರ್ ನಡೆಸುವುದರಲ್ಲಿ ಅರ್ಥವಿಲ್ಲ. ಸಮುದಾಯದ ನಡುವೆ ಇರುವ ಸಮಸ್ಯೆಗಳ ಪರಿಹಾರವಾಗದೆ, ‘ಮಾದರಿ ಗ್ರಾಮದ ನಿರ್ಮಾಣ’ ಎನ್ನುವ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ.
ಉತ್ತಮ ಜೀವನಶೈಲಿ ಮತ್ತು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಹಳ್ಳಿಗರ ಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿರುವಾಗ, ಗ್ರಾಮೀಣ ಭಾರತದಲ್ಲಿ ರೈತರ ಹಾಗು ಕಾರ್ಮಿಕರ ಕೊರತೆಯನ್ನು ನಿವಾರಿಸಿ ಸಮತೋಲನವನ್ನು ಕಾಪಾಡುವುದು ಅತೀ ಅವಶ್ಯಕವಾಗಿದೆ. ಸುಸ್ಥಿರವಾದ ಬದಲಾವಣೆಯನ್ನು ತರುವಲ್ಲಿ, ಸಮುದಾಯದ ಭಾಗವಹಿಸುವಿಕೆಯು ಕೂಡ ಒಂದು ಪ್ರಮುಖ ಅಂಶವೆಂದು ನಾವು ಬಲವಾಗಿ ನಂಬುತ್ತೇವೆ. ಹೀಗಾಗಿ, ಶೌಚಾಲಯಗಳನ್ನು ನಿರ್ಮಿಸುವಾಗಲೇ, ನಾವು ಅದನ್ನು ಬಳಸುವಂತೆ ಜನಸಾಮಾನ್ಯರನ್ನು ಜಾಗೃತಗೊಳಿಸುತ್ತೇವೆ. ನಾವು ಸೌರ ಕೇಂದ್ರಗಳನ್ನು ನಿರ್ಮಿಸುವಾಗಲೇ, ಸೌರ ಬೆಳಕಿನ ವ್ಯವಸ್ಥೆಯನ್ನು ಅಳವಡಿಸಲು ಮತ್ತು ಸೇವೆ ಮಾಡಲು ಹಳ್ಳಿಯ ಯುವಕರಿಗೆ ತರಬೇತಿ ನೀಡುತ್ತೇವೆ. ಮಾದರಿ ಗ್ರಾಮಗಳ ಬಗ್ಗೆ ಮಾತನಾಡುವಾಗ, ನಾವು ಒಂದು ಹಳ್ಳಿಯ ಸಮಸ್ಯೆಗಳನ್ನು ಅಳೆಯುತ್ತೇವೆ ಮತ್ತು ಅವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ, ಸ್ಥಳೀಯ ಜನರನ್ನು ಗುರುತಿಸಿಕೊಂಡು, ಅವರೆಲ್ಲರೂ ಈ ಬದಲಾವಣೆಯಲ್ಲಿ ಬೆಳಕು ತೋರಿಸುವ ಮಾರ್ಗದರ್ಶಿಗಳಾಗಬೇಕು ಎಂಬುದಾಗಿ ಅವರನ್ನು ನಾವು ಪ್ರೇರೇಪಿಸುತ್ತೇವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ನಮಗೆ ಮೂಲಸೌಕರ್ಯಗಳ ಅಭಿವೃದ್ಧಿಯಷ್ಟೇ ಜನರ ಅಭಿವೃದ್ಧಿಯು ಕೂಡಾ ಮುಖ್ಯವಾಗಿದೆ. ಈ ಮೂಲ ಮಾದರಿಯೊಂದಿಗೆ, ನಾವು ಈ ಕೆಳಕಂಡ ಕೆಲಸಗಳನ್ನು ಮಾಡುತ್ತಿದ್ದೇವೆ:
- ದೂರದ ಹಳ್ಳಿಗಳಿಗೆ ಸೌರ ಶಕ್ತಿಯ ಬೆಳಕನ್ನು ಒದಗಿಸಿಕೊಡುತ್ತಿದ್ದೇವೆ.
- ಕೌಶಲ್ಯ ಅಭಿವೃದ್ಧಿ ತರಬೇತಿಯೊಂದಿಗೆ ಗ್ರಾಮೀಣ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದ್ದೇವೆ.
- ಶೌಚಾಲಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಸಮುದಾಯಗಳು ಅವುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ.
- ಶುದ್ಧವಾದ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ.
- ಸ್ಥಳೀಯ ಆಡಳಿತವನ್ನು ಬಲಪಡಿಸುತ್ತಿದ್ದೇವೆ.
- ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದೇವೆ.
ಗ್ರಾಮೀಣಾಭಿವೃದ್ಧಿ
ಗ್ರಾಮಗಳನ್ನು ಪರಿವರ್ತಿಸಿ
ಸೌರ ಬೆಳಕು, ನೈರ್ಮಲ್ಯ ಸೌಲಭ್ಯಗಳು, ಬಲವಾದ ಸ್ಥಳೀಯ ಆಡಳಿತ ಮತ್ತು ಗ್ರಾಮೀಣ ಭಾರತದಲ್ಲಿ ಹೆಚ್ಚಿನದನ್ನು ತನ್ನಿ
ದಾನ ಮಾಡಿಬೀಕನ್ ಎಂಬ ಊರಿನ ಗ್ರಾಮ ಪಂಚಾಯತ್ ನಲ್ಲಿ ಆರ್ಟ್ ಆಫ್ ಲಿವಿಂಗ್ ನ ಟ್ರೈನಿಂಗ್ ದೊರೆತ ಬಳಿಕ, ನಮ್ಮ ಊರಿನಲ್ಲಿ ಮದ್ಯಪಾನ, ಗುಟ್ಕಾ ಮುಂತಾದ ದುರ್ವ್ಯಸನಗಳಿಗೆ ಬಲಿಯಾದ ಕಲ್ಲಿನ ಕೆಲಸವನ್ನು ಮಾಡುತ್ತಿರುವ ಜನರಿಗೆ ನಾವು ಸಹಾಯ ಮಾಡಬಹುದು ಎಂದು ನಮಗೆ ತಿಳಿಯಿತು.…

ಸರಿತಾ ದೇವಿ
ವಾರ್ಡ್ ಮೆಂಬರ್, ಎಸ್ ಹೆಚ್ ಜಿ ಮೆಂಬರ್, ಭಾಂದ್ರೋ, ಜಾರ್ಖಂಡ್
ಹಳ್ಳಿಯ ಜನರು ತಮ್ಮ ಜೀವನ ವಿಧಾನ, ಸಂಪ್ರದಾಯ ಮತ್ತು ಭಾಷೆಯ ಬಗ್ಗೆ ವಿಶ್ವಾಸವನ್ನು ಹೊಂದಲು ಪ್ರಾರಂಭಿಸಿದಾಗ ಭಾರತವು ನಿಜವಾಗಿಯೂ ಸಬಲವಾಗುತ್ತದೆ.
ಗುರುದೇವ ಶ್ರೀ ಶ್ರೀ ರವಿಶಂಕರ್
ಕಾರ್ಯತಂತ್ರ
ನಮ್ಮ ಗ್ರಾಮಾಭಿವೃದ್ಧಿ ಯೋಜನೆಗಳು 3-ಹಂತಗಳಲ್ಲಿ, ಯೋಜನೆಗಳನ್ನು ಹಾಕಿ, ಕಾರ್ಯವನ್ನು ನಿರ್ವಹಿಸುತ್ತಿವೆ ಹಾಗೂ ಇವುಗಳನ್ನು ಎಲ್ಲಾ ಕಡೆಗಳಲ್ಲಿಯೂ ಏಕಕಾಲದಲ್ಲಿ ಕಾರ್ಯಗತಗೊಳಿಸಲಾಗುತ್ತದೆ:
- ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು: ನಾವು ,ಅವರಿಗೆ ತಮ್ಮ ಬದುಕಿನಲ್ಲಿ ಸಾಮಾಜಿಕವಾಗಿ ಅವಶ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ, ಅಥವಾ ಅವರಲ್ಲಿ ಉತ್ತಮ ಆಡಳಿತವನ್ನು ನಡೆಸುವುದಕ್ಕೆ ಪೂರಕವಾಗಿರುವಂತಹ ಜ್ಞಾನದ ಚೌಕಟ್ಟನ್ನು ಒದಗಿಸುತ್ತೇವೆ. ಜ್ಞಾನದ ಮೂಲಸೌಕರ್ಯಗಳನ್ನು ನೀಡುವ ಮೂಲಕ, ನಾವು ಸ್ಥಳೀಯರ ಅಗತ್ಯತೆಗಳನ್ನು ಪೂರೈಸುತ್ತೇವೆ ಹಾಗೂ ಇವೆಲ್ಲವೂ ಸಮರ್ಪಕವಾದ ರೀತಿಯಲ್ಲಿ ಯಲ್ಲಿ ಬಳಕೆಯಾಗುತ್ತಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
- ಸ್ಥಳೀಯ ಯುವಕರನ್ನು ಪರಿಹಾರ-ಕೇಂದ್ರಿತವಾಗಿರುವ ಕಾರ್ಯಕ್ರಮಗಳಿಗಾಗಿ ಸಬಲಗೊಳಿಸುತ್ತೇವೆ: ಈ ಸ್ಥಳೀಯ ಯುವಕರಿಗೆ ಕರ್ಮ ಯೋಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮ(YLTP)ಗಳನ್ನು ನಡೆಸುವ ಮೂಲಕ, ಅವರು ವಿವಿಧ ಅಂಶಗಳಲ್ಲಿ ಅಭಿವೃದ್ಧಿಯನ್ನು ಸಾಧಿಸುವಂತೆ, ಅವರಿಗೆ ತರಬೇತಿಯನ್ನು ನೀಡಲಾಗುವುದು. ಇದರಿಂದಾಗಿ ಅವರು ತಮ್ಮ ಸಮುದಾಯಗಳಲ್ಲಿ ಸುಸ್ಥಿರವಾಗಿರುವ ಸೇವಾ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಮುನ್ನಡೆಸಲು ಅವರಿಗೆ ಬೇಕಾದ ಕೌಶಲ್ಯಗಳು, ಪ್ರೇರಣೆ ಮತ್ತು ಸಾಮರ್ಥ್ಯಗಳು ದೊರೆಯುತ್ತವೆ. ವಿವಿಧ ರೀತಿಯ ಯೋಜನೆಗಳನ್ನು ನಡೆಸಲೆಂದು, ನಾವು ಈ ಯುವ ನಾಯಕರನ್ನು ತಾಂತ್ರಿಕ ಜ್ಞಾನ ಮತ್ತು ಹಣಕಾಸಿನೊಂದಿಗೆ ಸಜ್ಜುಗೊಳಿಸುತ್ತೇವೆ.
- ಸಮುದಾಯ ನಿರ್ಮಾಣದ ಕೆಲಸಗಳು: ನಾವು ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳ ಮೂಲಕ ಸಮುದಾಯಗಳನ್ನು ನಿರ್ಮಿಸುತ್ತೇವೆ. ಸಮುದಾಯ ನಿರ್ಮಾಣ ಕಾರ್ಯಗಳೊಂದಿಗೆ, ಇಡೀ ಸಮುದಾಯವು ಅವರ ಹಳ್ಳಿಯ ಅಭಿವೃದ್ಧಿಯಲ್ಲಿ ಭಾಗವಹಿಸುವುದನ್ನು ನಾವು ಖಚಿತಪಡಿಸುತ್ತೇವೆ ಹಾಗೂ ಇದು ನಮಗೆ ದೀರ್ಘಾವಧಿಯ ಯಶಸ್ಸನ್ನು ತಂದು ಕೊಡುತ್ತದೆ.
ಈ ಯೋಜನೆಗಳ ಪರಿಣಾಮಗಳು:

ಭಾರತದಲ್ಲಿ 70,000
ಹಳ್ಳಿಗಳನ್ನು ತಲುಪಿದ್ದೇವೆ.

90,200 ಸ್ವಚ್ಛತಾ ಶಿಬಿರಗಳನ್ನು
ನಡೆಸಲಾಗಿದೆ.

2.5 ಲಕ್ಷ ಯುವಕರು
ಗ್ರಾಮೀಣ ಭಾರತದ 402 ಜಿಲ್ಲೆಗಳಲ್ಲಿ ತರಬೇತಿ ಪಡೆದಿದ್ದಾರೆ.

22 ಲಕ್ಷ ರೈತರಿಗೆ
ನೈಸರ್ಗಿಕ ಕೃಷಿ ಪದ್ಧತಿಯ ತರಬೇತಿ ನೀಡಲಾಗಿದೆ.

3.1 ಲಕ್ಷ+ ಜನರು
14 ವರ್ಷಗಳಲ್ಲಿ ವಿವಿಧ ವೃತ್ತಿಪರ ಕೌಶಲ್ಯಗಳಲ್ಲಿ ತರಬೇತಿ ಪಡೆದಿದ್ದಾರೆ.

110 ಮಾದರಿ ಗ್ರಾಮ ಪಂಚಾಯಿತಿಗಳನ್ನು
ಅಭಿವೃದ್ಧಿಪಡಿಸಲಾಗುತ್ತಿದೆ.

1.11 ಲಕ್ಷ+ ಮಹಿಳೆಯರು ವೃತ್ತಿಪರ
ಕೌಶಲ್ಯಗಳಲ್ಲಿ ತರಬೇತಿ ಪಡೆದಿದ್ದಾರೆ.

3,819 ಮನೆಗಳು
62,000+ ಶೌಚಾಲಯಗಳು ಮತ್ತು 1000 ಜೈವಿಕ ಅನಿಲ ಘಟಕಗಳನ್ನು ನಿರ್ಮಿಸಲಾಗಿದೆ.

43,980
ಸ್ವಚ್ಛತಾ ಅಭಿಯಾನಗಳನ್ನು ನಮ್ಮ ಸ್ವಯಂಸೇವಕರು ನಡೆಸಿದ್ದಾರೆ.

45,000+ ಗ್ರಾಮೀಣ ಹದಿಹರೆಯದವರು
ಭಾರತದ 12 ರಾಜ್ಯಗಳ HIV/AIDS ಜಾಗೃತಿ (HARA) ಅಭಿಯಾನದ ಮೂಲಕ ಪ್ರಯೋಜನ ಪಡೆದಿದ್ದಾರೆ.

12,831 ಯುವಕರು
ಡಿ-ಅಡಿಕ್ಷನ್ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿದ್ದಾರೆ.

3,588 ಪಂಚಾಯತ್ ಸದಸ್ಯರು
ಉತ್ತಮ ಆಡಳಿತ ನಡೆಸಲು ತರಬೇತಿ ಪಡೆದಿದ್ದಾರೆ
Solar training boosts confidence of youth “The solar training gave us the foothold we needed in facing reallife challenges. It got us set up right from the basics in a…

Mayur Chauhari
Graduate of Solar Skill Training Center, Bengaluru
Yuvacharya drives villagers into action “I would go to the village and make them aware of the issues that need to be resolved, make them meditate and sing together. To…

Abhay Todkar
Yuvacharya, Dahiwadi Village, Satara