
ಸಹಜ ಸಮಾಧಿಯ ಅಭ್ಯಾಸ ಬಹು ಸುಲಭ. ಅನಿವಾರ್ಯ ಪರಿಸ್ಥಿತಿಗಳು ಎದುರಾದಾಗಲೂ ನನ್ನ ಮನಸ್ಸನ್ನು ಗೊಂದಲಮುಕ್ತವಾಗಿಸಿದೆ.
ಶಗುನ್ ಪಂತ್, ರೇಡಿಯೋ ಜಾಕಿ, ದೆಹಲಿ, 27ಸಹಜ ಸಮಾಧಿ ಧ್ಯಾನ ಯೋಗ
ಹೆಚ್ಚಾದ ಆಂತರಿಕ ಶಾಂತಿ • ಉತ್ತಮ ಆರೋಗ್ಯ • ಸುಧಾರಿತ ಮಾನಸಿಕ ಸ್ಪಷ್ಟತೆ • ಸೂಕ್ಷ್ಮ ಜ್ಞಾನದ ಅನಾವರಣ
*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.
ನೋಂದಾಯಿಸಿಈ ಕಾರ್ಯಾಗಾರದಿಂದ ನಿಮಗೇನು ದೊರೆಯುವುದು?

ಉತ್ತಮ ಮಾನಸಿಕ ಶಾಂತಿ
ಸಹಜ ಸಮಾಧಿ ಧ್ಯಾನ ಯೋಗವು ಮಾನಸಿಕ ತರಂಗಗಳನ್ನು ಆಲ್ಫ಼ಾ-ತರಂಗಗಳ ಹಂತಕ್ಕೆ ಕೊಂಡೊಯ್ದು, ಇಡೀ ನರಮಂಡಲವನ್ನು ತಣಿಸುವುದಲ್ಲದೆಯೇ, ಶರೀರ ಮತ್ತು ಮನಸ್ಸಿಗೂ ಸಹ ಆಳವಾದ ವಿಶ್ರಾಂತಿ ಮತ್ತು ಉಪಶಮನವನ್ನು ಕೊಡಮಾಡುತ್ತದೆ.

ಉತ್ತಮ ಮಾನಸಿಕ ಸ್ಪಷ್ಟತೆ
ಧ್ಯಾನವು ನಿರಂತರವಾದ ಆಲೋಚನಾಲಹರಿಯನ್ನು ಶಾಂತಗೊಳಿಸಿ, ಮಾನಸಿಕ ಸ್ಪಷ್ಟತೆಯನ್ನು ಉತ್ತಮಗೊಳಿಸಿ ಜಾಗೃತಿಯನ್ನುಂಟುಮಾಡುವುದು. ಸಹಜ ಸಮಾಧಿ ಧ್ಯಾನದೊಂದಿಗೆ, ನೀವು ಉತ್ತಮವಾದ ಏಕಾಗ್ರತೆ, ಸ್ವಯಂ ಜಾಗೃತಿ ಮತ್ತು ಉತ್ತಮ ನಿರ್ಧಾರಣ ಕೌಶಲ್ಯವನ್ನು ಅನುಭವಿಸುವಿರಿ.

ಸುಧಾರಿತ ದೈಹಿಕ ಆರೋಗ್ಯ
ನಮ್ಮ ನರಮಂಡಲವು ಶಾರೀರಿಕ ಶಕ್ತಿಯ ಸ್ರೋತ. ವಿಶ್ರಾಂತ ಮತ್ತು ಪುನಶ್ಚೇತನಗೊಂಡ ನರವ್ಯೂಹವು ಹೃದಯದ ಸ್ನಾಯುಗಳ, ಜೀರ್ಣಾಂಗ ಮತ್ತು ಉಸಿರಾಟದ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುತ್ತದೆ.

ಅನಿರ್ಬಂಧಿತ ಅಂತಃಸ್ಫುರಣೆಯ ಕೌಶಲ್ಯ
ಸಹಜ ಸಮಾಧಿ ಧ್ಯಾನವು ಮಾನಸಿಕ ಚಡಪಡಿಕೆಯನ್ನು ಶೋಧಿಸಿ, ನಿಮ್ಮ ಒಳಗಿನ ಧ್ವನಿಯನ್ನು ವಿವೇಚನಾಶೀವನ್ನಾಗಿಸುವುದು ಹಾಗೆಯೇ, ನಿಮ್ಮ ಅಂತಃಸ್ಫುರಣೆಯನ್ನು ಸಕ್ರಿಯಗೊಳಿಸಿ, ನಿರ್ಧಾರಣಾ ಕೌಶಲವನ್ನು ಬಲಪಡಿಸುವುದು.
ಸಹಜ ಸಮಾಧಿ ಹೇಗೆ ಕೆಲಸ ಮಾಡುತ್ತದೆ?
ಧ್ಯಾನವು ವಿರಮಿಸುವ ಕಲೆ, ಏನೂ ಮಾಡದಿರಬಹುದಾದ ಕಲೆ; ಬಹಳಷ್ಟು ಜನರಿಗೆ ಏನನ್ನೂ ಮಾಡದಿರುವುದು ಸುಲಭವಲ್ಲದ್ದು. ಅನೇಕ ಧ್ಯಾನದ ಬಗೆಗಳಿದ್ದರೂ ಸಹ ಸಹಜ ಸಮಾಧಿ ಧ್ಯಾನದಲ್ಲಿ ನಾವು ಸೂಕ್ಷ್ಮವಾದ ಶಬ್ದ ತರಂಗಗಳನ್ನು (ಮಂತ್ರ) ಗಾಢವಾದ ವಿಶ್ರಾಮದ ಸ್ಥಿತಿಯನ್ನು ತಲುಪಲು ಬಳಸುತ್ತೇವೆ. ನಿಮಗೆ ನಿಮ್ಮದೇ ಆದ ವೈಯಕ್ತಿಕ ಮನ್ತ್ರವನ್ನು ಉಪದೇಶಿಸಿ, ಅದನ್ನುಪಯೋಗಿಸಿ ಹೇಗೆ ಧ್ಯಾನ ಮಾಡುವುದೆಂಬುದನ್ನು ಕಲಿಸಲಾಗುವುದು. ಮಂತ್ರವು ನಿಮ್ಮನ್ನು ಆಳವಾದ ಪ್ರಜ್ಞೆಯ ಸ್ತರಗಳಿಗೆ ಕೊಂಡೊಯ್ಯುವ ವಾಹನವಾಗುತ್ತದೆ. ನೀವು ನಿಮ್ಮೊಳಗೆ ಆಳವಾಗಿ ಒಳಹೊಗುತ್ತಿದ್ದಂತೆ ನಿಮ್ಮ ಆಂತರಿಕ ಆನಂದ, ಸ್ಪಷ್ಟತೆ, ಶಾಂತತೆ, ಅನ್ತಃಪ್ರಜ್ಞೆ ಮತ್ತು ಸೃಜನಾತ್ಮಕತೆಗಳ ಅನಾವರಣ ಮಾಡಿ, ಆತ್ಯಂತಿಕವಾಗಿ ನೀವಾರೆಂಬುವ ಬೋಧ ಉಂಟಾಗುವುದು.
ಶಿಬಿರದಲ್ಲಿ / ಕಾರ್ಯಾಗಾರದಲ್ಲಿ ಏನೇನಿದೆ?
- ವೈಯಕ್ತಿಕ ಮಂತ್ರದೊಂದಿಗೆ ಧ್ಯಾನ ಪ್ರಕ್ರಿಯೆ
- ಧ್ಯಾನದ ಪ್ರಮುಖ ತತ್ತ್ವಗಳು
- ಮಾನಸಿಕ ತುಮುಲದ ಮೂಲ ಕಾರಣಗಳ ಗುರುತಿಸುವಿಕೆ ಮತ್ತು ಪರಿಹಾರ
- ಮನಸ್ಸು ಮತ್ತು ಆಲೋಚನೆಗಳ ಮೇಲೆ ವಿವಿಧ ಆಹಾರ ಪ್ರಕಾರಗಳ ಪ್ರಭಾವ
ಈ ಕಾರ್ಯಕ್ರಮವು ನಿಸ್ಸಂದೇಹವಾಗಿ, ನನ್ನ ದೇಹ ಮತ್ತು ಮನಸ್ಸಿಗೆ ಪೂರ್ಣವಾಗಿ ವಿಶ್ರಾಂತಿಯನ್ನು ನೀಡಿ, ಪುನಶ್ಚೇತನಗೊಳಿಸಿದೆ.

ಸುಲಕ್ಷಣ
ಆಪ್ತಸಮಾಲೋಚಕರು
AMPಯ ನಂತರ ನನ್ನ ವರ್ತನೆಯಲ್ಲಿ ಮತ್ತು ಕಾರ್ಯದಲ್ಲಿ ಸಂಪೂರ್ಣ ಪರಿವರ್ತನೆಯನ್ನು ಕಂಡೆ. ನನ್ನ ಬುದ್ಧಿ ಮತ್ತು ಭಾವನೆಗಳ ನಡುವೆ ಸಮತೋಲನ ಉಂಟಾಗಿದೆ.

ಶ್ರೇಯೋಷಿ ಸುರ್
ಎಲೆಕ್ಟ್ರಿಕಲ್ ಪವರ್, ವಿನ್ಯಾಸಕರು, ನವದೆಹಲಿ
ಸಹಜ ಸಮಾಧಿಯಿಂದ ವಿಶುದ್ಧ ಮೌನದ ಸ್ಥಿತಿಯನ್ನು ನಾನನುಭವಿಸಿದೆ. ಸ್ವತಃ ಅನುಭವವಾಗುವ ವರೆಗೆ, ಮಂತ್ರವು ಇಷ್ಟು ಮಹತ್ತಾದ ಪ್ರಭಾವವನ್ನು ಹೊಂದಿದೆಯೆಂದು ತಿಳಿದಿರಲಿಲ್ಲ.

ಸೌಮ್ಯಾ ಕೋಠಾ, 29
ನೇಮಕಾತಿ ತಜ್ಞರು
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿನಾನು ಸೇರಬೇಕೆಂದಿದ್ದೇನೆ ಆದರೆ…
ನಾನು ಕಲಿಯಲಿಚ್ಛಿಸುವೆ. ಆದರೆ, ಸಹಜ ಸಮಾಧಿ ಧ್ಯಾನವನ್ನು ಕಲಿಯಲು ಮೊದಲೇ ಧ್ಯಾನದ ಅಭ್ಯಾಸಿಯಾಗಿರಬೇಕೇ?
ಖಂಡಿತವಾಗಿ ಇಲ್ಲ, ಈ ಹಿಂದೆಂದೂ ಧ್ಯಾನ ಮಾಡಿರದಿದ್ದರೂ ಕೂಡ ಈ ಧ್ಯಾನ ಪ್ರಕ್ರಿಯೆಯನ್ನು ಕಲಿತು ಅದರ ಉಪಯೋಗ ಪಡೆಯಬಹುದು.
ಸಹಜ ಸಮಾಧಿ ಯೋಗವು ನಿರ್ದೇಶಿತ ಧ್ಯಾನಗಳಿಗಿಂತ ಹೇಗೆ ವಿಭಿನ್ನ?
ನಿರ್ದೇಶಿತ ಧ್ಯಾನವು ನಿರ್ದೇಶನದ ಶಬ್ದಗಳೊಂದಿಗೆ, ಸಂಗೀತದೊಂದಿಗೆ ಧ್ಯಾನ ಮಾಡಲು ಸಹಾಯಕ. ಶಾಂತಿಯುತ ಪರಿಸರವನ್ನು ಕೊಡಮಾಡಿ ವಿಶ್ರಾಂತಿಯನ್ನು ಪಡೆಯಲು ಇದು ಸಹಕಾರಿ.
ಸಹಜ ಸಮಾಧಿ ಧ್ಯಾನವು ಇದಕ್ಕಿಂತ ಭಿನ್ನವಾಗಿ ಮಂತ್ರಾತ್ಮಕವಾದ ಒಂದು ಧ್ಯಾನಪ್ರಕ್ರಿಯೆ. ಮಂತ್ರವು ಬಲವತ್ತರವಾದುದು ಮತ್ತದರ ಸೂಕ್ಷ್ಮ ತರಂಗವು ನಿಮ್ಮನ್ನು ಆಳವಾದ ಪ್ರಜ್!ಜೆಯ ಸ್ತರಗಳಿಗೆ ಒಯ್ಯಬಲ್ಲುದು. ನಿರ್ದೇಶಿತ ಧ್ಯಾನಕ್ಕೆ ನಿರ್ದೇಶನಗಳ ಆಲಂಬನೆಯಿದೆ, ಆದರೆ ಸಹಜ ಸಮಾಧಿ ಯೋಗದಲ್ಲಿ ಒಮ್ಮೆ ಕಲಿತ ನಂತರ ನೀವು ಯಾವುದೇ ಆಲಂಬನೆಗಳಿಲ್ಲದೇ ಸ್ವತಃ ಅಭ್ಯಸಿಸಬಲ್ಲಿರಿ. ಅದಕ್ಕೆ ನಿಮ್ಮ ಸಮಯದ ಇಪ್ಪತ್ತು ನಿಮಿಷಗಳ ಕಾಲಾವಕಾಶ ಮತ್ತು ಆರಾಮವಾಗಿ ಕುಳಿತುಕೊಳ್ಳಬಲ್ಲ ಸ್ಥಳ ಬೇಕಷ್ಟೆ. ಸತತ ಅಭ್ಯಾಸದಿಂದ ನೀವುಗಳು ಹೆಚ್ಚಿನ ಶಾಂತಿ ಮತ್ತು ದೈಹಿಕ-ಮಾನಸಿಕ ಆರೋಗ್ಯವನ್ನು ಹೊಂದುವುದಲ್ಲದೆಯೇ, ಅಂತಃಸ್ಫುರಣೆಯ ಹಾಗೂ ಪ್ರಜ್ಞೆಯನ್ನು ಅನುಭವಿಸಬಲ್ಲಿರಿ.
ನಾನು ಪರಿಣಾಮಕಾರಿಯಾಗಿ ಧ್ಯಾನವನ್ನು ಮಾಡಲಾಗುತ್ತಿಲ್ಲ, ಧ್ಯಾನಕ್ಕೆ ಕುಳಿತಾಗಲೆಲ್ಲ ನಿದ್ರೆಗೆ ಜಾರಿಬಿಡುತ್ತೇನೆ.
ನೀವು ನಿದ್ರೆ ಮಾಡಿದಲ್ಲಿ ಯಾವುದೇ ಸಮಸ್ಯೆಯಿಲ್ಲ. ನಿಮ್ಮ ಶಾರೀರಿಕ ವ್ಯವಸ್ಥೆಗೆ ಮತ್ತಷ್ಟು ವಿಶ್ರಾಂತಿಯ ಅಗತ್ಯತೆಯನ್ನು ಅದು ತೋರ್ಪಡಿಸುತ್ತಿದೆಯಷ್ಟೇ. ಧ್ಯಾನದ ಅಭ್ಯಾಸವನ್ನು ಬಿಡದೆ ಮಾಡಿರಿ, ಮುಂದುವರೆದಂತೆಲ್ಲ ಸಹಜ ಸಮಾಧಿ ಧ್ಯಾನವು ನಿಮ್ಮ ಹಲವು ಗಂಟೆಗಳ ನಿದ್ರೆಯಷ್ಟೇ ಪರಿಣಾಮಕಾರಿಯೆಂದು ಅರಿತುಕೊಳ್ಳುವಿರಿ.
ಸಹಜ ಸಮಾಧಿ ಧ್ಯಾನಕ್ಕೆ ಪೂರ್ವಸಿದ್ಧತೆಗ್ಳೇನಾದರೂ ಉಂಟೇ?
ಆಹಾರಕ್ಕೂ ಮುನ್ನ, ಖಾಲಿ ಹೊಟ್ಟೆಯಲ್ಲಿ ಧ್ಯಾನದ ಅಭ್ಯಾಸಕ್ಕೆ ಸೂಕ್ತ. ಆಹಾರ ಸೇವನೆಯ ಮುನ್ನಅಥವಾ ಸೇವನೆಯ ತೊಂಭತ್ತು ನಿಮಿಷಗಳ ನಂತರದ ಸಮಯ ಸಹಜ ಸಮಾಧಿ ಧ್ಯಾನಾಭ್ಯಾಸಕ್ಕೆ ಸೂಕ್ತವಾದವುಗಳು. ಇದಲ್ಲದೆ, ಇಪ್ಪತ್ತು ನಿಮಿಷಗಳ ಸಮಯ ಮತ್ತು ಆರಾಮವಾಗಿ ಕುಳಿತುಕೊಳ್ಳಲು ಸೂಕ್ತ ಸ್ಥಳ ಇವುಗಳಷ್ಟೇ ಅಪೇಕ್ಷಿತ.