ಕೋಪ

ಕೋಪವು ,ಬೇರೆಯವರ ತಪ್ಪಿಗೆ ನಿಮಗೆ ನೀವು ಕೊಟ್ಟುಕೊಳ್ಳುವ ಶಿಕ್ಷೆಯಾಗಿದೆ

ಯಾರು ಕೂಡಾ ,ಎಂದಿಗೂ ಉದ್ರೇಕಗೊಳ್ಳಲು ಅಥವಾ ಕೋಪಗೊಳ್ಳಲು ಇಷ್ಟಪಡುವುದಿಲ್ಲ. ಇತರರ ತಪ್ಪುಗಳನ್ನು ನೋಡಿದಾಗ , ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಸಹಾನುಭೂತಿಯು ಇಲ್ಲದಿದ್ದರೆ, ಆಗ ನಮಗೆ ಅವರ ಮೇಲೆ ಕೋಪ ಬರುತ್ತದೆ ಮತ್ತು ಅವರ ಮೇಲೆ ಕೋಪಗೊಂಡದ್ದಕ್ಕಾಗಿ ,ಮತ್ತೆ ನಮಗೆ ನಮ್ಮ ಮೇಲೆ ಕೋಪ ಬರುತ್ತದೆ. ನಾವು ನಮ್ಮ ಬಗ್ಗೆ, ನಮ್ಮ ಮನಸ್ಸಿನ ಬಗ್ಗೆ, ನಮ್ಮ ಪ್ರಜ್ಞೆಯ ಬಗ್ಗೆ , ಮೂಲತ:

ನಮ್ಮ ಸ್ವಭಾವದಲ್ಲಿರುವ ಕೆಲವು ಗುಣಗಳು ಮತ್ತು ದೋಷಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ, ನಮಗೆ ಜ್ಞಾನವೇ ಆಧಾರವಾಗಿದೆ. ಸರಿಯಾಗಿ ಗಮನಿಸಿದರೆ ನಮ್ಮ ಉಸಿರೇ ನಮಗೆ ದೊಡ್ಡ ಪಾಠವನ್ನು ಕಲಿಸಿಕೊಡುತ್ತದೆ. ಆದರೆ ನಾವು ಅದಕ್ಕೆ ಗಮನವನ್ನು ಕೊಡದ ಕಾರಣ, ಕೋಪಕ್ಕೆ ಬಲಿಯಾಗುತ್ತೇವೆ.ನಾವು ಉಸಿರಾಡುತ್ತಿರುವುದನ್ನು ಸಂಪೂರ್ಣವಾಗಿ ಮರೆತಿದ್ದೇವೆ. ಉಸಿರಾಟದ ಪ್ರಕ್ರಿಯೆ ಮತ್ತು ಧ್ಯಾನ - ಇವುಗಳು ನಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿವೆ. ಈ ಬಗ್ಗೆ ಅರಿತುಕೊಳ್ಳುವುದರಿಂದ ನಾವು ನಮ್ಮ ಕೋಪವನ್ನು ದುಬಾರಿಯನ್ನಾಗಿಸಬಹುದು ಮತ್ತು ನಮ್ಮ ನಗುವನ್ನು ಮುಕ್ತವನ್ನಾಗಿ ಹಂಚಬಹುದು.

ಕೋಪದ ಬಗ್ಗೆ ಇರುವ ಆಶ್ಚರ್ಯಕರವಾದ ರಹಸ್ಯಗಳು

icon

ಸದಾಚಾರ(ನಾನು ಸರಿ ಎನ್ನುವ ಅನಿಸಿಕೆ)

ಕೋಪಕ್ಕೆ ಮೂಲ ಕಾರಣವೇ, ಸರಿ ತಪ್ಪುಗಳ ವ್ಯಾಖ್ಯಾನವಾಗಿದೆ ಅಥವಾ ನಾವು ನಂಬಿರುವ ನೀತಿಯಾಗಿದೆ. ನಾನೇ ಸರಿಯಾಗಿಲ್ಲ ಎಂದು ನಾನು ಭಾವಿಸಿದರೆ, ಆಗ ನಾನು ಎಂದಿಗೂ ಇತರರ ಮೇಲೆ ಕೋಪಗೊಳ್ಳಲು ಸಾಧ್ಯವಿಲ್ಲ. ಪರಸ್ಪರರ ಮೇಲೆ ಕೋಪಗೊಂಡಿರುವ ಇಬ್ಬರು ವ್ಯಕ್ತಿಗಳು ಕೂಡ, ತಾವು ಸರಿ; ಮತ್ತೊಬ್ಬರು ತಪ್ಪು,ಎಂದೇ ಭಾವಿಸುತ್ತಾರೆ. ನೀವು ಅವರೊಂದಿಗೆ ಪ್ರತ್ಯೇಕವಾಗಿ ಅಥವಾ ವೈಯಕ್ತಿಕವಾಗಿ ಮಾತನಾಡಿದಾಗ, ಅವರಿಬ್ಬರೂ ತಮ್ಮತಮ್ಮ ಮಾರ್ಗದಲ್ಲಿ ಸರಿಯಾಗಿರುವುದು ನಿಮಗೆ ಕಂಡು ಬರುತ್ತದೆ. ಆದುದರಿಂದ ಇಲ್ಲಿ ಸದಾಚಾರ ಅಥವಾ ‘ನಾನು ಸರಿ’, ಎನ್ನುವ ಅನಿಸಿಕೆಯು ಒಂದು ಮಾನಸಿಕ ಕಲ್ಪನೆ ಅಥವಾ ಗ್ರಹಿಕೆ ಮಾತ್ರವಾಗಿದೆ.

icon

ಆಳವಾದ ಆಸೆ

ಸಾಮಾನ್ಯವಾಗಿ ನಿಮ್ಮಲ್ಲಿ ಆಳವಾದ ಬಯಕೆಯಿದ್ದು ,ಅದು ಈಡೇರದಿರುವಾಗ, ನೀವು ನಿರಾಶೆಗೊಳ್ಳುತ್ತೀರಿ. ಈ ಹತಾಶೆಯು ನಿಮ್ಮಲ್ಲಿ ಕೋಪವನ್ನು ಉಂಟುಮಾಡುತ್ತದೆ. ಇದು ಎರಡನೆಯ ಕಾರಣವಾಗಿದೆ.

icon

ಆಯಾಸ

ನೀವು ದಣಿದಿದ್ದಾಗ, ನಿಮಗೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ದಣಿವು ಉಂಟಾಗುತ್ತದೆ. ನೀವು ನಿಮ್ಮಲ್ಲಿರುವ ಒತ್ತಡಗಳನ್ನು ನಿವಾರಿಸಿಕೊಳ್ಳದ ಕಾರಣ, ದಣಿದಿದ್ದಾಗ, ನಿಮ್ಮ ಈ ಒತ್ತಡವು ಕೋಪದ ರೂಪದಲ್ಲಿ ಹೊರಗೆ ಬರುತ್ತದೆ. ಇದು ನಿಮಗೆ ಕೋಪವನ್ನು ತರಿಸುವ ಮೂರನೆಯ ಕಾರಣವಾಗಿದೆ.

icon

ಪರಿಪೂರ್ಣತೆ

ನಾಲ್ಕನೇ ಕಾರಣವೆಂದರೆ ನೀವು ಪರಿಪೂರ್ಣತೆಯ ಬಯಕೆಯನ್ನು ಹೊಂದಿರುವುದು. ಇದರಿಂದಾಗಿ ಇತರರಲ್ಲಿರುವ ಅಪೂರ್ಣತೆಯ ಬಗ್ಗೆ ನೀವು ಕೋಪಗೊಳ್ಳುತ್ತೀರಿ. ಇತರರೆಲ್ಲರೂ ನಿಮ್ಮದೇ ಪರಿಪೂರ್ಣತೆಯ ಪರಿಕಲ್ಪನೆಗೆ ಹೊಂದಿಕೊಳ್ಳಬೇಕೆಂದು ನೀವು ಬಯಸುತ್ತೀರಿ. ಆದರೆ ಇದು ಅಸಾಧ್ಯವಾದುದು. ಆದುದರಿಂದ ಇತರರು ಪರಿಪೂರ್ಣವಾಗಿ ಇರಬೇಕು ಎಂದು ಅವರ ಬಗ್ಗೆ ನಿಮ್ಮಲ್ಲಿರುವ ನಿರೀಕ್ಷೆಯು ನಿಮ್ಮೊಳಗೆ ಕೋಪವನ್ನು ಪ್ರಚೋದಿಸುತ್ತದೆ.

ಕೋಪಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳು

ನೀವು ನಿಮ್ಮ ಕೋಪವನ್ನು ದುಬಾರಿಮಾಡಿಕೊಳ್ಳಿ ಮತ್ತು ನಿಮ್ಮ ನಗುವನ್ನು ಮುಕ್ತಗೊಳಿಸಿ!

ಕೋಪವು ನಿಮ್ಮ ನಿಜವಾದ ಸ್ವಭಾವವಲ್ಲ. ಅದು ವಿರೂಪಗೊಂಡ ನಿಮ್ಮ ಮನಸ್ಸಿನ ಪ್ರತೀಕವಾಗಿದೆ ಹಾಗೂ ಅದು ಎಂದಿಗೂ ನಿಮ್ಮ ಆತ್ಮವನ್ನು ಸಂಪೂರ್ಣವಾಗಿ ಬೆಳಗಲು ಬಿಡುವುದಿಲ್ಲ. ಇನ್ನು ಮುಂದೆ ಕೋಪಿಸಿಕೊಳ್ಳಬಾರದು ಎಂದು ನಿಮಗೆ ನೀವೇ ನೂರು ಬಾರಿ ನೆನಪಿಸಿಕೊಳ್ಳಬಹುದು, ಆದರೆ ಕೋಪದ ಭಾವನೆಯು ಎದ್ದು ಬಂದಾಗ, ಅದನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಕೋಪವು ಗುಡುಗು ಸಿಡಿಲುಗಳಂತೆ ಆರ್ಭಟಿಸುತ್ತಾ ತನ್ನಂತಾನೇ ಹೊರಗೆ ಬರುತ್ತದೆ.

- ಗುರುದೇವ್ ಶ್ರೀ ಶ್ರೀ ರವಿಶಂಕರ್

ಕೋಪವನ್ನು ತೊಡೆದುಹಾಕಬಲ್ಲ ಪರಿಣಾಮಕಾರಿ ಸಲಹೆಗಳು

exercises

ವ್ಯಾಯಾಮ

ಹೆಚ್ಚಾಗಿ ದೈಹಿಕ ಚಟುವಟಿಕೆಗಳನ್ನು ಮಾಡದಿರುವ ಜನರು ಬೇಗನೆ ಕೋಪಗೊಳ್ಳುತ್ತಾರೆ. ಇಂತಹವರ ದೇಹದಲ್ಲಿ ಹೆಚ್ಚಿನ ರಜಸ್ಸು ಇರುವ ಕಾರಣದಿಂದಾಗಿ ಅವರು ತಮ್ಮ ಬುದ್ಧಿಗೆ ಅಂಟಿಕೊಂಡಿರುತ್ತಾರೆ. ಪ್ರತಿದಿನವೂ ತುಂಬಾ ಹೊತ್ತು ನಡೆಯುವುದು, ಟ್ರೆಡ್ಮಿಲ್ನಲ್ಲಿ ಓಡುವುದು, ವ್ಯಾಯಾಮಗಳನ್ನು ಮಾಡುವುದು, ಯೋಗಾಸನಗಳನ್ನು ಮಾಡುವುದು, ಸೂರ್ಯ ನಮಸ್ಕಾರಗಳ ಅಭ್ಯಾಸ-ಮುಂತಾದವುಗಳು ಕೋಪವನ್ನು ಹತೋಟಿಗೆ ತರಲು ಸಹಕಾರಿಯಾಗಿವೆ. ಇವುಗಳನ್ನೆಲ್ಲ ಮಾಡಿದಾಗ ಸಾಕಷ್ಟು ಆಯಾಸವಾಗುವ ಕಾರಣ, ಕೋಪಗೊಳ್ಳುವ ಶಕ್ತಿಯೇ ನಿಮಗಿರುವುದಿಲ್ಲ.

Meditation_Mind and Breath- A Deep Connection

ಚೆನ್ನಾಗಿ ಉಸಿರಾಡಿ ಮತ್ತು ಧ್ಯಾನವನ್ನು ಮಾಡಿ

ಆಳವಾದ ಉಸಿರಾಟದ ಕ್ರಿಯೆಗಳನ್ನು ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ. ಪ್ರಾಣಾಯಾಮ ಮತ್ತು ಧ್ಯಾನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಕೋಪವನ್ನು ಜಯಿಸಲು ಅಗತ್ಯವಾದ ಶಕ್ತಿಯು ಒದಗುತ್ತದೆ.

Children and teens - Happy girl smiling with open arms looking at the sky

ನಿಮ್ಮ ದೃಷ್ಟಿಯನ್ನು ವಿಸ್ತರಿಸಿ

ಈ ಜಗತ್ತು ಎಂದಿಗೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ, ಆದ್ದರಿಂದ ನಿಮ್ಮ ದೃಷ್ಟಿಯನ್ನು ವಿಶಾಲಗೊಳಿಸಿ. ಅಪರಿಪೂರ್ಣತೆಗಳಿಗೂ ಸ್ವಲ್ಪ ಅವಕಾಶವನ್ನು ನೀಡಿ. ಕೇವಲ "ನಾನು ಸರಿ" ಎನ್ನುವ ಭಾವನೆಯನ್ನು ಹಿಡಿದಿಟ್ಟುಕೊಳ್ಳಬೇಡಿ. ಇತರರ ದೃಷ್ಟಿಕೋನಗಳಿಗೂ ಹೊಂದಿಕೊಳ್ಳುವ ಸ್ವಭಾವವನ್ನು ನಿಮ್ಮಲ್ಲಿ ನೀವು ಬೆಳೆಸಿಕೊಳ್ಳಿ. ಪ್ರತಿಯೊಬ್ಬರನ್ನೂ , ನಿಮಗೆ ಬೇಕಾದಂತೆ, ನಿಮ್ಮ ಬಯಕೆಗಳಿಗೆ ಅನುಗುಣವಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಿ. ಬದುಕಿನಲ್ಲಿ ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುವುದು ಕೂಡ ಸಹಜ. ಆದರೆ ಇವುಗಳು ಸಂಭವಿಸಿದಾಗ, ಇವುಗಳನ್ನು ಎದುರಿಸಿ ದಾಟಿ ಹೋಗಿ, ಮುಂದುವರಿಯಲು ನೀವು ಶಕ್ತಿಯನ್ನು ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ.

ಆದುದರಿಂದ ನೀವು ಜನರನ್ನು, ವಸ್ತುಗಳನ್ನು ಮತ್ತು ಸನ್ನಿವೇಶಗಳನ್ನು ಅವುಗಳು ಹೇಗಿವೆಯೋ ಹಾಗೆಯೇ ಸ್ವೀಕರಿಸಿ.

healthy food habits to maintain wellness

ನಿಮ್ಮ ಆಹಾರದ ಮೇಲೆ ನಿಗಾ ಇಡಿ

ನೀವು ಪಿತ್ತ ಪ್ರಕೃತಿಯ ವ್ಯಕ್ತಿಯಾಗಿದ್ದರೆ, ಬಲು ಬೇಗನೆ ಕೋಪಕ್ಕೆ ಒಳಗಾಗುತ್ತೀರಿ. ಪ್ರತಿನಿತ್ಯವೂ ಪ್ರಾರಂಭದ ಕಾಲು ದಿನದೊಳಗೆ ಆಹಾರವನ್ನು ತೆಗೆದುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಿ. ನೀವು ಸೂರ್ಯೋದಯವಾದ ಎರಡು ಗಂಟೆಗಳ ಒಳಗೆ ಏನನ್ನಾದರೂ ತಿನ್ನಬೇಕು. ಇಲ್ಲದಿದ್ದರೆ, ನಿಮ್ಮಲ್ಲಿರುವ ಪಿತ್ತವು ನಿಮ್ಮನ್ನು ನೆತ್ತಿಗೇರಿಸುತ್ತದೆ. ಪಿತ್ತ ಪ್ರವೃತ್ತಿಯವರಿಗೆ ಬೆಳಗಿನ ಉಪಾಹಾರವು ಅತ್ಯಂತ ಅವಶ್ಯಕವಾಗಿದೆ. ನೀವು ಟಬಾಸ್ಕೋ ಸಾಸ್ ಮತ್ತು ಬಿಸಿ ಮೆಣಸಿನ ಸಾಸ್ -, ಇವುಗಳಂತಹ ವಸ್ತುಗಳನ್ನು ಹೆಚ್ಚು ಸೇವಿಸಬೇಡಿ. ಹೆಚ್ಚು ಹೊತ್ತು ಉಪವಾಸ ಕೂಡ ಮಾಡಬೇಡಿ ಮತ್ತು ಸಮಯಕ್ಕೆ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳಿ. ಕೆಲವೊಮ್ಮೆ ನಿಮ್ಮ ಆಹಾರದ ವಿಧಾನವೇ ನಿಮ್ಮೊಳಗೆ ಹೆಚ್ಚು ಬೆಂಕಿಯನ್ನು ತುಂಬಬಹುದು. ಹೀಗೆ ಪಿತ್ತದಲ್ಲಿ ಅಸಮತೋಲನ ಉಂಟಾಯಿತೆಂದಾದರೆ, ಆಗ ನೀವು ನಿರಂತರವಾಗಿ ಕೆಂಪು ಎಲರ್ಟ್ ಅಂದರೆ ಅಪಾಯಕಾರಿಯಾದ ಎಚ್ಚರಿಕೆಯ ಸ್ಥಿತಿಯಲ್ಲಿಯೇ ಇರುತ್ತೀರಿ!

ನಿಮ್ಮ ಪಿತ್ತವು ಸಮತೋಲನದಲ್ಲಿರು ವಾಗ ಯಾವುದೇ ಪ್ರಮುಖ ಕಾರಣವಿಲ್ಲದೆ, ನೀವು ಹತೋಟಿಯನ್ನು ಕಳೆದುಕೊಂಡು ಕೋಪಿಸಿಕೊಳ್ಳುವುದಿಲ್ಲ.

ಬೇರೆಯವರು ಕೋಪಗೊಂಡಾಗ ಏನು ಮಾಡಬೇಕು?

ಇತರರು ಅಸಮಾಧಾನಗೊಂಡಾಗ ಅದೇ ಸಮಯದಲ್ಲಿ , ನೀವು ಕೂಡ ಅಸಮಾಧಾನಗೊಳ್ಳದಿರಿ. ಯಾರಾದರೂ ನಿಮ್ಮನ್ನು ಬೈಯುತ್ತಿದ್ದರೆ ಅಥವಾ ನಿಮ್ಮ ಮೇಲೆ ಕೂಗಾಡುತ್ತಿದ್ದರೆ , ಅವರನ್ನು ಹಾಗೆಯೇ ಬಿಟ್ಟುಬಿಡಿ. ಇದು ಅವರ ಸಮಯ, ಎಂದುಕೊಂಡು ಬೇಕಾದಂತೆ ವರ್ತಿಸಲು ಅವರಿಗೆ ಸ್ವಲ್ಪ ಸಮಯವನ್ನು ನೀಡಿ. ಆಗ ಮಾತ್ರ ಆ ಸನ್ನಿವೇಶದಲ್ಲಿ, ನೀವೊಬ್ಬ ಪ್ರೇಕ್ಷಕರಾಗಿರುತ್ತೀರಿ. ಆದುದರಿಂದ ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ,ಎಂದು ಭಾವಿಸಿಕೊಂಡು ಸುಮ್ಮನಿದ್ದು ಬಿಡಿ. ಮತ್ತೊಂದು ಬಾರಿ ನೀವು ಕೂಡ ನಿಮ್ಮ ಮನಸ್ಸಿನ ಸ್ವಾಸ್ಥ್ಯವನ್ನು ಕಳೆದುಕೊಂಡು ಕೂಗಾಡಬಹುದು ಹಾಗೂ ನಿಮ್ಮ ಕೋಪವನ್ನು ತೋರಿಸಬಹುದು. ಆದ್ದರಿಂದ, ಯಾವಾಗಲೂ ಪ್ರತಿಯೊಬ್ಬರೂ ನಟರೇ ಆಗಿಬಿಟ್ಟರೆ, ಆಗ ಅಲ್ಲಿ ಪ್ರೇಕ್ಷಕರಿಲ್ಲದೆ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಕೋಪಿಸಿಕೊಳ್ಳಲು, ತಿರುವುಗಳನ್ನು ತೆಗೆದುಕೊಳ್ಳಿ. ಹಾಸ್ಯದ ಮೂಲಕ ಸನ್ನಿವೇಶವನ್ನು ಹಗುರಗೊಳಿಸಿ.ಹಾಸ್ಯವು ಕೋಪಕ್ಕೆ ಅತ್ಯುತ್ತಮ ಮದ್ದು. ನೀವು ಕೇಂದ್ರೀಕೃತವಾಗಿದ್ದರೆ, ಆಗ ತನ್ನಂತಾನೇ ಹಾಸ್ಯವು ನಿಮ್ಮೊಳಗಿನಿಂದ ಉದ್ಭವಿಸಿ ಹೊರಗೆ ಬರುತ್ತದೆ.

ಇದಿಷ್ಟೇ ಅಲ್ಲದೆ, ಯಾವುದೇ ಕಾರಣವಿಲ್ಲದೆ ಯಾರಾದರೂ ತಮ್ಮ ಸ್ಥಿಮಿತವನ್ನು ಕಳೆದುಕೊಂಡು ಕೋಪಗೊಂಡರೆ, ಆ ಕ್ಷಣದಲ್ಲಿ ಅವರ ಪಿತ್ತವು ಸ್ವಲ್ಪ ಹೆಚ್ಚಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ ಮತ್ತು ಅವರನ್ನು ಶಾಂತಗೊಳಿಸಲು ಅವರಿಗೆ ಸಹಾಯ ಮಾಡಿ. ಅವರಿಗೆ ಸ್ವಲ್ಪ ಐಸ್ಕ್ರೀಮ್, ಹಾಲು ಕೊಡಿ, ಪಿತ್ತವನ್ನು ತಂಪಾಗಿಸಬೇಕಾದರೆ ಏನಾದರೂ ಆಹಾರವನ್ನು ಕೊಡುವುದು ಅಗತ್ಯ.

ನಾನು ಎಂದಿಗೂ ಕೋಪಗೊಳ್ಳಲೇಬಾರದೇ?

ಕೋಪವು ಕೆಟ್ಟದ್ದಲ್ಲ. ಇದು ಕೆಲವು ಕ್ಷಣಗಳ ಕಾಲಕ್ಕೆ ಬಂದು ಹೋದರೆ, ಅದು ಖಂಡಿತವಾಗಿಯೂ ಕೆಟ್ಟದ್ದಲ್ಲ. ಒಂದು ವೇಳೆ ನೀವು ನೀರಿನ ಮೇಲೆ ಒಂದು ರೇಖೆಯನ್ನು ಎಳೆದಾಗ,ಆ ರೇಖೆಯು ನೀರಿನಲ್ಲಿ ಉಳಿಯುವಷ್ಟು ಹೊತ್ತು ಮಾತ್ರ ನಿಮ್ಮ ಕೋಪವು ಕೂಡ ಉಳಿಯಬೇಕು. ಹಾಗೆಂದು ಅಪರೂಪಕ್ಕೆ ಒಮ್ಮೊಮ್ಮೆ, ನಿಮಗೆ ಕೋಪ ಬಂದರೆ, ಆಗ ನೀವೇ ನಿಮ್ಮನ್ನು ದೂಷಿಸಿಕೊಳ್ಳಲು ಪ್ರಾರಂಭಿಸಬೇಡಿ. ಯಾಕೆಂದರೆ ಆಧ್ಯಾತ್ಮಿಕ ಪಥದಲ್ಲಿ ಮುಂದುವರಿಯುತ್ತಿರುವಾಗ, ಸ್ವ-ನಿಂದೆಯು ಅತ್ಯಂತ ಹಾನಿಕಾರಕವಾದ ಪರಿಣಾಮವನ್ನು ಉಂಟುಮಾಡುತ್ತದೆ. ಅಗತ್ಯವಿದ್ದಾಗ ಕೋಪವನ್ನು ತೋರಿಸುವುದು ತಪ್ಪಲ್ಲ, ಆದರೆ ನಿಮ್ಮ ಕೋಪದ ಬಗ್ಗೆ ನಿಮಗೆ ಅರಿವಿಲ್ಲದಿದ್ದರೆ, ಆಗ ಅದು ನಿಮಗೆ ನೋವುಂಟು ಮಾಡುತ್ತದೆ. ಕೆಲವೊಮ್ಮೆ ಅವಶ್ಯಕತೆ ಇರುವಾಗ ನೀವು ಉದ್ದೇಶಪೂರ್ವಕವಾಗಿ ಕೋಪವನ್ನು ತೋರಿಸಬಹುದು. ಉದಾಹರಣೆಗೆ, ಒಬ್ಬ ತಾಯಿಯು ಕೆಲವೊಮ್ಮೆ ತನ್ನ ಮಕ್ಕಳ ಮೇಲೆ ಕೋಪಗೊಳ್ಳಬಹುದು ಮತ್ತು ಅವರು ತಮ್ಮನ್ನು ತಾವು ಅಪಾಯಕರ ಸನ್ನಿವೇಶಗಳಿಗೆ ಒಡ್ಡಿಕೊಂಡಾಗ, ಆಕೆಯು ಅವರ ಮೇಲೆ ಕಠಿಣವಾಗಿ ವರ್ತಿಸಲೂಬಹುದು.

ನಿಮಗೆ ನೀವು ಸಾಮಾನ್ಯ ಸ್ಥಿತಿಯಲ್ಲಿರುವಾಗ ಪರಿಹರಿಸಲಿಕ್ಕೆ ಸಾಧ್ಯವಿಲ್ಲದಿರುವ ಎಷ್ಟೋ ಸವಾಲುಗಳನ್ನು ಎದುರಿಸಲು ಕೆಲವೊಮ್ಮೆ ಕೋಪವು ಸಹಾಯ ಮಾಡುತ್ತದೆ. ಕೆಲವು ಸನ್ನಿವೇಶಗಳಲ್ಲಿ ಇದೇ ಕೋಪವು ನಿಮ್ಮ ಮನಸ್ಸಿನಲ್ಲಿ ಪ್ರೇರಣೆಯನ್ನು ಉಂಟು ಮಾಡಿ ಸಮಸ್ಯೆಯ ಪರಿಹಾರಕ್ಕೆ ನಿಮಗೆ ಸ್ಪೂರ್ತಿಯನ್ನು ತಂದುಕೊಡುವ ಸಾಧ್ಯತೆಯೂ ಇರುವುದು. ಆದರೆ ಇಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ವಿಧದ ಕಹಿಭಾವನೆ ಅಥವಾ ಹುಳುಕು ಇರಬಾರದು.ಒಂದು ವೇಳೆ ಈ ಕೋಪವು ನಿಮ್ಮೊಳಗೆ ಕಹಿಯನ್ನು ಉಂಟುಮಾಡಿದೆಯೆಂದಾದರೆ, ಆಗ ಅದು ನಿಮ್ಮನ್ನು ಒಳಗೆಯೇ ನುಂಗಿ ಬಿಡುತ್ತದೆ. ಕೋಪವು ನಿಮಗೆ ಹಿತಕರವಾದ ರೀತಿಯಲ್ಲಿ ಉಷ್ಣತೆಯನ್ನೂ ನೀಡಬಹುದು ಮತ್ತು ಇದೇ ಕೋಪವು ಬೆಂಕಿಯ ಹಾಗೆ ನಿಮ್ಮನ್ನು ಸುಡಲೂಬಹುದು. ಕೋಪಗೊಳ್ಳುವುದರಿಂದ ಉಂಟಾಗುವ ಪರಿಣಾಮಗಳನ್ನು ನೋಡಿ. ಕೋಪದಿಂದಿದ್ದಾಗ ನೀವು ತೆಗೆದುಕೊಂಡ ನಿರ್ಧಾರಗಳಿಂದ ಅಥವಾ ನೀವು ಆಡಿದ ಮಾತುಗಳಿಂದ ನಿಮಗೆ ಸಂತೋಷವಾಗಿದೆಯೇ? ಖಂಡಿತವಾಗಿಯೂ ಇಲ್ಲ, ಏಕೆಂದರೆ ಕೋಪಗೊಂಡಾಗ ನೀವು ನಿಮ್ಮ ಸಂಪೂರ್ಣ ಅರಿವನ್ನು ಕಳೆದುಕೊಳ್ಳುತ್ತೀರಿ. ಆದರೆ ನೀವು ಸಂಪೂರ್ಣ ಜಾಗೃತವಾಗಿದ್ದು ಕೋಪದಿಂದ ವರ್ತಿಸುತ್ತಿದ್ದರೆ, ಆಗ ಅದು ಸರಿಯಾಗಿದೆ.

ಯಾವುದೇ ಕಾರಣಕ್ಕೂ ಕೋಪವು ನಿಮಗೆ ಅಂಟಿಕೊಳ್ಳದಿರುವ ಜಾಗೃತಿಯ ಮಟ್ಟಕ್ಕೆ , ನಿಮ್ಮ ಮನಸ್ಸು ತಲುಪಬೇಕಾದರೆ, ನಿಮಗೆ ಸ್ವಲ್ಪ ಸಮಯವು ಬೇಕಾಗುತ್ತದೆ. ಅಲ್ಲಿಯ ತನಕ ವಿವಿಧ ಛಾಯೆಗಳಲ್ಲಿ ಮತ್ತು ವಿವಿಧ ತೀವ್ರತೆಗಳಲ್ಲಿ ಕೋಪವು ಬರುತ್ತಲೇ ಇರುತ್ತದೆ. ನೀವು ಆ ಸ್ಥಿತಿಯನ್ನು ತಲುಪುವ ವರೆಗೆ, ಪ್ರತಿನಿತ್ಯದ ನಿಮ್ಮ ಅಭ್ಯಾಸಗಳನ್ನು ಮುಂದುವರಿಸಿರಿ.ಸುದರ್ಶನ ಕ್ರಿಯೆ, ಪ್ರಾಣಾಯಾಮ ಮತ್ತು ಧ್ಯಾನಗಳು ಇದಕ್ಕೆ ಸಹಕಾರಿಯಾಗಿವೆ.