ಒತ್ತಡ

ಒತ್ತಡ ರಹಿತ ಮನಸ್ಸು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು

ನಮ್ಮಲ್ಲಿ ಒತ್ತಡವುಂಟಾದರೆ, ಅದು ನಮ್ಮ ಬದುಕಿನ ಎಲ್ಲಾ ಅಂಶಗಳ ಮೇಲೆ-ಯೋಚನೆಗಳು, ಅನುಭವಗಳು ಮತ್ತು ವರ್ತನೆಗಳು, ಪ್ರತಿಯೊಂದರ ಮೇಲೆಯೂ, ತನ್ನ ಪ್ರಭಾವವನ್ನು ಬೀರಿ, ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಾಗಿ ನಾವು ಒತ್ತಡಕ್ಕೆ ನಮ್ಮನ್ನು ಆಳುವ ಅವಕಾಶವನ್ನು ಬಿಟ್ಟುಕೊಟ್ಟರೆ, ಅದರಿಂದ ಉಂಟಾಗುವ ದುಷ್ಪರಿಣಾಮಗಳು, ಅತ್ಯಂತ ಹಾನಿಕಾರಕ ಮತ್ತು ದುರಂತಗಳಿಗಿಂತ ಕಡಿಮೆ ಏನು ಅಲ್ಲ. ಆದರೂ ಜನರಿಗೆ ಅದನ್ನು ಬಿಟ್ಟು ಬಿಡುವುದು ತುಂಬಾ ಕಷ್ಟಕರವೆಂದು ಕಾಣುತ್ತದೆ. ನಿಮಗೆ ನಿಮ್ಮ ಬುದ್ಧಿಯ ಮಟ್ಟದಲ್ಲಿ ಇದು ಚೆನ್ನಾಗಿ ತಿಳಿದಿದೆ. “ಅಯ್ಯೋ, ನಾನು ಅಸಮಾಧಾನಗೊಳ್ಳಬಾರದು, ನಾನು ಸಿಟ್ಟಾಗಬಾರದು. ನಾನು ತಾಳ್ಮೆ ಕಳೆದುಕೊಳ್ಳಬಾರದು.” ಎಂದು ಎಷ್ಟೋ ಸಲ ನೀವು ಅಂದುಕೊಳ್ಳುತ್ತೀರಿ. ಆದರೆ ಪ್ರತ್ಯಕ್ಷವಾಗಿ ಇದನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ, ಹಾಗೂ ವಾಸ್ತವದಲ್ಲಿ ಈ ರೀತಿಯಾಗಿ ಬದುಕಲು ನಿಮಗೆ ಸಾಧ್ಯವಾಗುವುದಿಲ್ಲ್ಲ. ನಿಮಗೆ ಅಸಮಾಧಾನವಾದ ಕ್ಷಣದಲ್ಲಿ, ನಕಾರಾತ್ಮಕತೆಯು ಪ್ರವಾಹದಂತೆ ಬಂದು, ನಿಮ್ಮ ಬುದ್ಧಿಯನ್ನು ಮೀರಿ ಹೋಗುತ್ತದೆ ಹಾಗೂ ಆಗ ನೀವು ನಿಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತೀರಿ.

ನಿಮಗೆ ಮನೆಯಲ್ಲಾಗಲಿ ಅಥವಾ ಶಾಲೆಯಲ್ಲಾಗಲಿ, ಇಂತಹ ಸನ್ನಿವೇಶಗಳು ಎದುರಾದಾಗ, ಅವುಗಳನ್ನು ಹೇಗೆ ನಿಭಾಯಿಸಬೇಕೆಂದು ಹೇಳಿ ಕೊಟ್ಟಿಲ್ಲ. ಇಲ್ಲಿ ಸುದರ್ಶನ ಕ್ರಿಯೆಯು ನಿಮಗೆ ಅತ್ಯುತ್ತಮವಾದ ರೀತಿಯಲ್ಲಿ ಸಹಾಯಕ್ಕೆ ಬರುತ್ತದೆ. ನಿಮ್ಮಲ್ಲಿ ಉದ್ಭವಿಸುವ ಭಾವನೆಗಳ ಪ್ರವಾಹವನ್ನು ಜಯಿಸಲು, ಇದು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮೊಳಗೆಯೇ ಇರುವ ಒಂದು ದಿವ್ಯವಾದ ಸಾಧನವಾಗಿದೆ -ನಿಮ್ಮಲ್ಲಿ ರೂಪುಗೊಂಡ ಒಂದು ಗೋಡೆಯಂತೆ, ಇದು ನಿಮ್ಮಲ್ಲಿರುವ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಸುಲಭವಾಗಿ ಹೊಡೆದೋಡಿಸಲು ಸಹಕಾರಿಯಾಗುತ್ತದೆ.

ಒತ್ತಡದ ಬಗ್ಗೆ ಇರುವ ಗುಪ್ತ ಸತ್ಯಗಳು

ಸೈಕಲ್ ಮೇಲೆ ಕುಳಿತುಕೊಂಡು ಅದನ್ನು ಓಡಿಸುವ ರಹಸ್ಯವೇನು? ಸಮತೋಲನ! ಸಮತೋಲನವೆಂದರೆ ಮಧ್ಯದಲ್ಲಿ ಉಳಿಯುವ ಬಗೆ! ಅಂದರೆ, ಅದು ಬಲಗಡೆಗೋ ಅಥವಾ ಎಡಗಡೆಗೋ ಬೀಳದಂತೆ ನೋಡಿಕೊಳ್ಳುವುದು. ಅದು ಯಾವುದಾದರೂ ಒಂದು ಕಡೆಗೆ ವಾಲಿದಾಗ, ನೀವು ಅದನ್ನು ಸಮತೋಲನಕ್ಕೆ ತರಬೇಕಾಗಿದೆ . ಪ್ರತಿ ಬಾರಿ ಸಮತೋಲನವನ್ನು ಕಳೆದುಕೊಳ್ಳುವಾಗ, ತೊಂದರೆಗೊಳಗಾಗುವ ಅನುಭವವು ನಿಮಗೆ ದೊರೆಯುತ್ತದೆ. ಕೂಡಲೇ ಅದನ್ನು ಗಮನಿಸಿ; ಅದನ್ನು ನಿರ್ಲಕ್ಷಿಸಬೇಡಿ; ಅದನ್ನು ಅಂಗೀಕರಿಸಿ ಮತ್ತು ಮಧ್ಯಕ್ಕೆ ಬನ್ನಿ.

icon

ನಕಾರಾತ್ಮಕತೆಯ ಮೂಲ

ನಕಾರಾತ್ಮಕ ಆಲೋಚನೆಗಳು ಹೇಗೆ ಉದ್ಭವಿಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಕಾರಾತ್ಮಕ ಆಲೋಚನೆಗಳ ಮೂಲವನ್ನು ನೀವು ಗಮನಿಸಿದರೆ, ಅವುಗಳು ಉದ್ವೇಗ ಮತ್ತು ಒತ್ತಡದ ಕಾರಣದಿಂದ ಬರುತ್ತವೆ ,ಎನ್ನುವುದು ನಿಮಗೆ ತಿಳಿಯುತ್ತದೆ. ಸಂತೋಷದಿಂದ, ಶಾಂತವಾಗಿದ್ದ ವ್ಯಕ್ತಿಗೆ ನಕಾರಾತ್ಮಕ ಆಲೋಚನೆಗಳು ಬರಲು ಸಾಧ್ಯವಿಲ್ಲ. ದುಃಖಿತನಾಗಿದ್ದ ವ್ಯಕ್ತಿಗೆ ಇನ್ನೂ ಹೆಚ್ಚು ಹೆಚ್ಚು ನಕಾರಾತ್ಮಕ ಆಲೋಚನೆಗಳು ಬರುತ್ತವೆ.

icon

ಪ್ರೇರೇಪಿಸುತ್ತಿಲ್ಲ

ಜನರು ಹೆಚ್ಚು ಕೆಲಸ ಮಾಡಬೇಕಾದರೆ ಅಥವಾ ಸೃಜನಾತ್ಮಕವಾಗಿ ಏನನ್ನಾದರೂ ಸಾಧಿಸಬೇಕಾದರೆ, ಉದ್ವೇಗ ಅಥವಾ ಒತ್ತಡಗಳು ಖಂಡಿತವಾಗಿಯೂ ಪ್ರೇರಣೆಯನ್ನುಕೊಡುವುದಿಲ್ಲ. ಸಾಮಾನ್ಯವಾಗಿ, "ಆವಶ್ಯಕತೆಯು ಆವಿಷ್ಕಾರದ ತಾಯಿ" ಎಂದು ಜನರು ಹೇಳುತ್ತಾರೆ. ಆದರೆ ಕಳೆದ 40 ವರ್ಷಗಳಲ್ಲಿ, ಭಾರೀ ಉದ್ವೇಗ ಮತ್ತು ಒತ್ತಡದಲ್ಲಿದ್ದ, ಅಫ್ಘಾನಿಸ್ತಾನ, ಲೆಬನಾನ್ ಅಥವಾ ಬೈರುತ್‌ ದೇಶಗಳಿಂದ ಯಾವುದೇ ರೀತಿಯ ಪ್ರಮುಖ ಆವಿಷ್ಕಾರಗಳು ಹೊರಬಂದಿಲ್ಲ.

icon

ಚಿಕ್ಕ ಪುಟ್ಟ ವಸ್ತು(ವಿಷಯ)ಗಳಿಗೆ ಅಂಟಿಕೊಂಡಿರುವುದು

ಒತ್ತಡವೆಂದರೆ, ನಿಮ್ಮ ಮನಸ್ಸು ಈ ಜಗತ್ತಿನಲ್ಲಿರುವ ವಿಶಾಲತೆಯನ್ನು ಸ್ವೀಕರಿಸಲು ಸಿದ್ಧವಿರದಿರುವ ಸ್ಥಿತಿ. ಅದು ಚಿಕ್ಕ ಪುಟ್ಟ, ಅಷ್ಟೇನೂ ಪ್ರಾಮುಖ್ಯವಲ್ಲದ ವಿಷಯಗಳಿಗೆ ಅಂಟಿಕೊಂಡಿರುತ್ತದೆ. ಎಲ್ಲಾ ವಿಷಯಗಳು ಕೂಡ ಯಾವಾಗಲೂ ಬದಲಾಗುತ್ತಲೇ ಇರುತ್ತವೆ,; ಆದರೆ ನೀವು ಮಾತ್ರ ಅವುಗಳಿಗೆ ಅಂಟಿಕೊಂಡಿರುತ್ತೀರಿ ಮತ್ತು ಅದರಿಂದಾಗಿ ತೊಂದರೆಯನ್ನು ಅನುಭವಿಸುತ್ತೀರಿ.

ಸಂಬಂಧಪಟ್ಟ ಕಾರ್ಯಕ್ರಮಗಳು

ಧ್ಯಾನವು ನಿಮ್ಮನ್ನು ಅತ್ಯಂತ ಸಮರ್ಥರನ್ನಾಗಿ ಮತ್ತು ಶಕ್ತಿಯುತರನ್ನಾಗಿ ಮಾಡುತ್ತದೆ. ಅದು ನಿಮ್ಮನ್ನು ಒತ್ತಡ-ಮುಕ್ತರನ್ನಾಗಿ ಮತ್ತು ಸಂತೋಷಭರಿತರನ್ನಾಗಿ ಮಾಡುತ್ತದೆ.

ಒತ್ತಡವೆಂದರೆ, ತುಂಬಾ ಕಡಿಮೆ ಸಮಯದಲ್ಲಿ ,ಮಾಡಲು ಅತಿ ಹೆಚ್ಚು ಕೆಲಸವಿದ್ದು, ನಿಮ್ಮಲ್ಲಿ ಯಾವುದೇ ಶಕ್ತಿಯು ಇಲ್ಲದಿರುವ ಪರಿಸ್ಥಿತಿ. ಇದಕ್ಕೆ ಪರಿಹಾರ ಮಾರ್ಗವೆಂದರೆ, ನೀವು ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.ಆದರೆ ಇದು ಈ ದಿನಗಳಲ್ಲಿ ಸಂಭವಿಸುವುದಿಲ್ಲ. ಎರಡನೆಯದಾಗಿ ನೀವು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬೇಕು. ಆದರೆ ಇದು ಕೂಡ ಅಸಾಧ್ಯವಾದ ಮಾತು. ನೀವು ದಣಿದಿರುವಾಗ, ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚಿನ ಸಮಯವು ಬೇಕು ಎಂದು ಇಚ್ಛಿಸುತ್ತೀರಿ. ಆದ್ದರಿಂದ ಈಗ ನಿಮಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ, ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದಾಗಿದೆ.

- ಗುರುದೇವ ಶ್ರೀ ಶ್ರೀ ರವಿಶಂಕರ್

ಒತ್ತಡದಿಂದ ಹೇಗೆ ವಿಮುಖರಾಗುವುದು?

ನೀವು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚು ಮಾಡಿಕೊಂಡಂತೆ, ತನ್ನಂತಾನೇ ನಿಮ್ಮಲ್ಲಿರುವ ಒತ್ತಡವು ಕಡಿಮೆಯಾಗುತ್ತದೆ.

healthy food habits to maintain wellness

ಸರಿಯಾದ ಪ್ರಮಾಣದ ಆಹಾರ

ಅತಿಯೂ ಅಲ್ಲದಿರುವ ಮತ್ತು ಅತಿ ಕಡಿಮೆಯೂ ಅಲ್ಲದಿರುವ, ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡ ಸಮತೋಲನದ ಆಹಾರ..

Home Remedies for Sleep or Insomnia

ಸರಿಯಾದ ಪ್ರಮಾಣದ ನಿದ್ರೆ

6 - 8 ಗಂಟೆಗಳ ನಿದ್ರೆ, ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.

meditation during happiness program

ಉಸಿರಾಟದ ವ್ಯಾಯಾಮ

ಕೆಲವು ಆಳವಾದ ಉಸಿರಾಟದ ವ್ಯಾಯಾಮಗಳ, ನಿಯಮಿತ ಅಭ್ಯಾಸವು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

people meditating outdoors in a lawn

ಧ್ಯಾನ

ಕೆಲವು ನಿಮಿಷಗಳ ಧ್ಯಾನವು ಎಲ್ಲಾ ರೀತಿಯ ಒತ್ತಡಗಳನ್ನು ನಿವಾರಿಸುತ್ತದೆ. ಧ್ಯಾನವು ನಿಮ್ಮನ್ನು ಸಮರ್ಥರನ್ನಾಗಿ,ಶಕ್ತಿವಂತರನ್ನಾಗಿ ಮತ್ತು ಒತ್ತಡ-ಮುಕ್ತರನ್ನಾಗಿ ಮಾಡಿ, ನೀವು ಸಂತೋಷದಿಂದಿರುವ ಹಾಗೆ ನೋಡಿಕೊಳ್ಳುತ್ತದೆ.

ಒತ್ತಡವಿಲ್ಲದಿರುವ ಯಶಸ್ಸು

ಸೈಕಲ್ ಓಡಿಸುವ ರಹಸ್ಯವೇನು? ಸಮತೋಲನವನ್ನು ಇಟ್ಟುಕೊಳ್ಳುವುದು! ನಮ್ಮ ಕೇಂದ್ರದಲ್ಲಿ ಉಳಿಯುವುದು: ಬಲಕ್ಕೆ ಅಥವಾ ಎಡಕ್ಕೆ ಬೀಳದ ಹಾಗೆ ನೋಡಿಕೊಳ್ಳುವುದು. ಒಂದು ವೇಳೆ ತಪ್ಪಿ ಯಾವುದಾದರೂ ಒಂದು ಬದಿಯಲ್ಲಿ ಬಿದ್ದರೆ, ತಕ್ಷಣವೇ ನೀವು ಅದನ್ನು ಸಮತೋಲನಕ್ಕೆ ತರುತ್ತೀರಿ. ಸಮತೋಲನವು ತಪ್ಪಿದಾಗ, ನೀವು ತೊಂದರೆಯನ್ನು ಅನುಭವಿಸುತ್ತೀರಿ. ಇದು ನಿಮಗೆ ಅನುಭವಕ್ಕೆ ಬಂದಿದೆ.ಇದನ್ನು ನಿರ್ಲಕ್ಷಿಸಬೇಡಿ, ಇದನ್ನು ಗಮನಿಸಿ ಮತ್ತು ಅಂಗೀಕರಿಸಿ , ಹಾಗೂ ಮತ್ತೊಮ್ಮೆ ನಿಮ್ಮ ಕೇಂದ್ರಕ್ಕೆ ಬನ್ನಿ.

icon

ಸಮತೋಲನವನ್ನು ಸಾಧಿಸಿ

ದಿನನಿತ್ಯದ ಚಟುವಟಿಕೆಗಳನ್ನು ಮಾಡಲಿಕ್ಕಾಗಿ, ಮತ್ತು ಶರೀರ ಮನಸ್ಸುಗಳನ್ನು ಪುನಶ್ಚೇತನಗೊಳಿಸುವ ಸಾಧನೆಗಾಗಿ , ಎರಡರ ಮಧ್ಯೆ, ನಿಮ್ಮ ಸಮಯವನ್ನು ಸಮನ್ವಯಗೊಳಿಸಿ, ನಿಮ್ಮ ಜೀವನವನ್ನು ಸಮತೋಲನಕ್ಕೆ ತನ್ನಿ. ನಿಮ್ಮ ಆಹಾರ ಮತ್ತು ವ್ಯಾಯಾಮದ ಕಡೆಗೆ ಸಾಕಷ್ಟು ಗಮನಕೊಡಿ. ಅದೇ ರೀತಿಯಲ್ಲಿ ನಿಮ್ಮ ಧ್ಯಾನ ಮತ್ತು ವಿಶ್ರಾಂತಿಗಳಿಗಾಗಿಯೂ ಸ್ವಲ್ಪ ಸಮಯವನ್ನು ಮೀಸಲಿಡಿ.

icon

ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ

ಚಿತ್ರಕಲೆ, ಸಂಗೀತ, ಕವಿತೆ ರಚನೆ ಅಥವಾ ಇದೇ ರೀತಿಯ ಇನ್ನಾವುದಾದರೂ ಸೃಜನಶೀಲ ಕ್ರಿಯೆಗಳಲ್ಲಿ ಮತ್ತು ಮನೋರಂಜನಾ ಕಾರ್ಯಕ್ರಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಮ್ಮ ಬಲ-ಮಿದುಳನ್ನು ಸಕ್ರಿಯಗೊಳಿಸಿ.ಹಾಗೆಯೇ ನಿಮ್ಮ ಎಡ-ಮಿದುಳಿನ ಚಟುವಟಿಕೆಗಳಿಗೂ ಪ್ರಾಧಾನ್ಯತೆಯನ್ನು ಕೊಟ್ಟು ಎರಡನ್ನೂ ಸಮತೋಲನಕ್ಕೆ ತನ್ನಿ.

icon

ಸೇವಾ ಕಾರ್ಯಗಳನ್ನು ಮಾಡಿ

ನಿಮ್ಮ ಸುತ್ತಲೂ ಇರುವ ಜನರಿಗೆ ಪ್ರಯೋಜನವಾಗುವ ಹಾಗೆ ನಿಮ್ಮನ್ನು ಯಾವುದಾದರೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ . ನೀವು ಸ್ನೇಹ ಭಾವದಿಂದ ಇತರರಿಗೆ ಸಹಾಯ ಮಾಡುವುದರಿಂದ, ತಕ್ಷಣವೇ ಆಂತರ್ಯದಲ್ಲಿ ನಿಮ್ಮ ಚೈತನ್ಯವು ವಿಕಸನಗೊಂಡ ಅನುಭವವು ನಿಮಗೆ ದೊರೆಯುವುದು.

ನಿಜವಾದ ಯಶಸ್ಸಿನ ರಹಸ್ಯವೆಂದರೆ, ಯಾವುದಕ್ಕೂ ಅಂಟಿಕೊಳ್ಳದೆ ಅಥವಾ ಯಾವುದರಿಂದಲೂ ವಿಮುಖರಾಗದೆ ,ನಮ್ಮ ಬದುಕಿನಲ್ಲಿರುವ ಎಲ್ಲಾ ಅಂಶಗಳ ನಡುವೆ ಸಮತೋಲನವನ್ನು ತಂದುಕೊಳ್ಳುವುದಾಗಿದೆ.