ಶ್ರೀ ಶ್ರೀ ಕೌಶಲ್ಯ ತರಬೇತಿ ಕೇಂದ್ರ

ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಂಸ್ಥಾಪನೆಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ಗ್ರಾಮೀಣ ಅಭಿವೃದ್ಧಿ ಕಾರ್ಯಾಕ್ರಮ ಅಡಿಯಲ್ಲಿ ಸೂಮಾರು ಗ್ರಾಮೀಣ ಅಭಿವೃದ್ಧಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಆವುಗಳಲ್ಲಿ ಮುಖ್ಯವಾದವುಗಳೆಂದರೆ. ಕೌಶಲ್ಯ ತರಬೇತಿ. ಇಲ್ಲಿ ಎಲ್ಲ ರೀತಿಯ ತರಬೇತಿಗಳು ನೀಡಲಾಗುತ್ತದೆ. ಊದಿನ ಖಡ್ಡಿ ತಯಾರಿಸುವುದು, ಸೌರ್ಯ ಶಕ್ತಿ ಅಳಡಿಸುವುದು, ಹೊಲಿಗೆ ತರಬೇತಿ, ವೇಲ್ಡಿಂಗ್ ಮಾಡುವ ತರಬೇತಿ, ಬೇಸಿಕ್ ಕಂಪ್ಯೊಟರ್ ತರಬೇತಿ, ಬ್ಯುಟಿಶನ್, ಜೀವನ ಕೌಶಲ್ಯ ಹೀಗೆ ವಿವಿಧ ರೀತಿಯ ತರಬೇತಿಗಳು ಇಲ್ಲಿ ಕೊಡಲಾಗುತ್ತದೆ. ಬ್ಯುಟಿಶನ್ ತರಬೇತಿಯಲ್ಲಿ ಸಂಪೂರ್ಣವಾಗಿ ಆಯುರ್ವೇದಿಕ್ ಪದಾರ್ಥಗಳನ್ನು ಬಳಸಲಾಗುತ್ತದೆ.

ಭಾರತದಲ್ಲಿ ತರಹದ ಒಟ್ಟು 23 ತರಬೇತಿ ಕೇಂದ್ರಗಳಿವೆ. ಹಾಗಾಗಿ ಕೆಲವೇ ವರ್ಷಗಳಲ್ಲಿ ಸುಮಾರು 10000 ಯುವಕ ಯುವತಿಯರು ಇದರ ಲಾಭ ಪಡೆದಿದ್ದಾರೆ. ತರಬೇತಿ ಪಡೆದ ಯುವಕರು ತಮ್ಮದೆಯಾಧ ವ್ಯವಹಾರವನ್ನು ಆರಂಭ ಮಾಡಿ ಪ್ರತಿ ತಿಂಗಳಿಗೆ ಕನಿಷ್ಠ 8 ರಿಂದ 9ಸಾವಿರ ರೂಪಾಯಿವೆರೆಗೆ ದುಡಿಯುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸದೃಡರಾಗಲು ಸಹಾಯಕವಾಗಿದೆ.

ಸೂಮಾರು ಯುವಕ ಯುವತಿಯರು ಶಿಕ್ಷಣ ಪಡೆದರು ಯಾವುದೆ ಉದ್ಯೂಗ ಇಲ್ಲದೆ ನಿರುದ್ಯೂಗಿಯಾಗಿದ್ದಾರೆ. ಕೆಲಸ ಇಲ್ಲದೆ ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಬಳಲುತಿರುತ್ತಾರೆ. ಅಂತಹ ನಿರುದ್ಯೂಗಿಗಳಗೆ ತರಬೇತಿ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಸಂಸ್ಥಯ ಮುಖ್ಯ ಉದ್ಧೇಶವಾಗಿದೆ. ಮಹಿಳೆಯರಿಗಾಗಿ ಗುಡಿ ಕೈಗಾರಿಕೆ ತರಬೇತಿ ನೀಡಲಾಗುತ್ತದೆ. ಅಗರ ಬತ್ತಿ, ಅಡಿಕೆ ಎಲೆಗಳಿಂದ ತಟ್ಟೆ ತಯಾರ ಮಾಡುವ ತರಬೇತಿ ನೀಡಲಾಗುತ್ತದೆ.

ರೀತಿ ತರಬೇತಿ ನೀಡುವುದರಿಂದ ಯುವಕರಲ್ಲಿ ಸೃಜನಾತ್ಮಕತೆ ಬೆಳೆಯುತ್ತದೆ ಅಲ್ಲದೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗುತ್ತಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ.

ಭಾರತದ ಗ್ರಾಮೀಣ ಅಭಿವೃದ್ಧಿಯೇ ಭಾರತದ ಆಭಿವೃದ್ಧಿ. ಗ್ರಾಮೀಣ ಅಭೀವೃದ್ಧಿಯಾದರೆ ಭಾರತವು ದೃಡವಾದ ಭಾತರವಾಗುತ್ತದೆ. ಗ್ರಾಮೀಣ ಅಭೀವೃದ್ಧಿಯಲ್ಲಿ ನಾವೇಲ್ಲರು ಒಂದಾಗಿ ಮತ್ತು ಜವಾಬ್ದಾರೆಯುತವಾಗಿ ದುಡಿಯಬೇಕು. ನಮ್ಮ ಸುತ್ತ-ಮುತ್ತಲಿನ ಪರಿಸರದ ಬಗ್ಗೆ ಗಮನ ಹರಿಸಿ ಅದರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.

ನಾನು ಪಿಯುಸಿ ಓದಿದ್ದೆನೆ. ಪಿಯುಸಿ ಮೇಲೆ ಯಾವುದೆ ಕೆಲಸ ಪಡೆಯಲು ತುಂಬಾ ಕಷ್ಟದ. ಹಣದ ಸಮಸ್ಯೆಯಿಂದ ಬಳಲುತ್ತದೆ. ಕೆಲವು ತಿಂಗಳ ಹಿಂದೆ ಎಲೇಕ್ಟ್ರಿಶನ್ ತರಬೇತಿ ಪಡೆದೆ. ನಂತರ ನಾನು ಸ್ವಂತಃ ವ್ಯವಹಾರದಲ್ಲಿ ತೊಡಗಿ ಪ್ರತಿ ತಿಂಗಳಿಗೆ 8 ಸಾವಿರದಿಂದ 9ಸಾವಿರ ರೂಪಾಯಿ ವರೆಗೆ ದುಡಿಯುತಿದ್ದೆನೆ ಎಂದು ತರಬೇತಿ

ಪಡೆದ ಯುವಕ ಅಮರೇಶ ಕುಮಾರ ಷಾ ಹೇಳಿದರು.