yogal-kamlesh-ruchi-upscale

ಶ್ರೀ ಶ್ರೀ ಯೋಗ ಕ್ಲಾಸಸ್ (ಲೆವೆಲ್ 1)

ಯೋಗದ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಳ್ಳಿ

ಚೈತನ್ಯಶಾಲಿಗಳಾಗಿ • ನಿಮ್ಮ ಆರೋಗ್ಯ ಮತ್ತು ನಮ್ಯತೆಯನ್ನು ಸುಧಾರಿಸಿಕೊಳ್ಳಿ • ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ • ಮಾನಸಿಕ ಸ್ಥಿರತೆಯನ್ನು ಪಡೆಯಿರಿ

4-6 ದಿನಗಳಲ್ಲಿ 10 ಗಂಟೆಗಳು

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ಶ್ರೀ ಶ್ರೀ ಯೋಗವು ಹೇಗೆ ವಿಭಿನ್ನವಾಗಿದೆ

ಸುತ್ತಲ್ಲೂ ಹಲವಾರು ಬಗೆಯ ಯೋಗಗಳು ಆವರಿಸಿಕೊಂಡಿರುವ ಈ ಸಮಯದಲ್ಲಿ ಯಾವುದನ್ನು ಆಯ್ಕೆಮಾಡುವುದೆಂದು ಗೊಂದಲದಲ್ಲಿ ಇರುವಿರಾ?

ಶ್ರೀ ಶ್ರೀ ಯೋಗದಿಂದ ನಿಮ್ಮಲ್ಲಿ ಬಲ ಮತ್ತು ಆರೋಗ್ಯವು ಸುಧಾರಿಸುವುದಲ್ಲದೆ, ನಿಮ್ಮ ಸ್ವಾಸ್ಥ್ಯವು ಸಮಗ್ರವಾಗಿ ಉತ್ತಮಗೊಳುತ್ತದೆ.

ಜೀವನವನ್ನು ಸುಂದರಗೊಳಿಸಲು ನಿಮ್ಮಗೊಂದು ಅವಕಾಶವನ್ನು ನೀಡಿ.

ಸಾಮಾನ್ಯವಾಗಿ ಸ್ಪರ್ಧಾತ್ಮಕ ವಾತಾವರಣವನ್ನು ಹೊಂದಿರುವ ಯೋಗ ಕೇಂದ್ರಗಳಲ್ಲಿ ಆಳವಾದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದು ಕಷ್ಟಸಾಧ್ಯವೇ ಸರಿ. ಹಾಗಾಗಿ, ಯೋಗವನ್ನು ಕಲಿಯಲು ಶ್ರೀ ಶ್ರೀ ಯೋಗವು ನಿಮಗೆ ಮುಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ನೀವು ನಿಮದೇ ಗತಿಯಲ್ಲಿ ಅಭ್ಯಾಸವನ್ನು ಮಾಡಬಹುದಾಗಿದೆ ಹಾಗು ನಿಮ್ಮ ಅನುಭವವು ಉತ್ತಮವಾಗಿರುತ್ತದೆ.

ಯೋಗವೆಂದರೆ ಕೇವಲ ದೈಹಿಕ ವ್ಯಾಯಾಮಗಳಲ್ಲ;ಅದಕ್ಕಿಂತಲ್ಲೂ ಹೆಚ್ಚಿನದು

ಸಾಮಾನ್ಯವಾಗಿ ಜನರು ಯೋಗವನ್ನು ಕೇವಲ ದೈಹಿಕ ವ್ಯಾಯಾಮಗಳೊಡನೆ ಗುರುತಿಸಿಕೊಳ್ಳುತ್ತಾರೆ. ಆದರೆ ಯೋಗವು ಯೋಗಾಸನಕ್ಕಿಂತಲೂ ಹೆಚ್ಚಿನದಾಗಿದೆ. ಶ್ರೀ ಶ್ರೀ ಯೋಗದಲ್ಲಿ ನೀವು ಪರಿಪೂರ್ಣವಾದ ಯೋಗಾಭ್ಯಾಸಗಳನ್ನು ಕಲಿಯಬಹುದಾಗಿದೆ. ಸಾಂಪ್ರದಾಯಿಕ ಯೋಗಾಸನಗಳು, ಸರಳವಾದ ಉಸಿರಾಟದ ಪ್ರಕ್ರಿಯೆಗಳಾದ ಪ್ರಾಣಾಯಾಮಗಳನ್ನು, ಮಾರ್ಗದರ್ಶಿತ ಧ್ಯಾನವನ್ನು ಮತ್ತು ಯೋಗದ ಜ್ಞಾನವನ್ನೂ ಶ್ರೀ ಶ್ರೀ ಯೋಗದಲ್ಲಿ ಪಡೆಯಬಹುದು.

ಈ ಕಾರ್ಯಾಗಾರದಿಂದ ನನಗೇನು ಉಪಯೋಗ?

ಈ ಕಾರ್ಯಾಗಾರದಲ್ಲಿ ನಿಮ್ಮನ್ನು ಪುನಶ್ಚೇತನಗೊಳಿಸುವ ಯೋಗಾಭ್ಯಾಸಗಳನ್ನು ಒಳಗೊಂಡಿದ್ದು, ಇದರ ಮೂಲಕ ಸಮಗ್ರವಾಗಿ ನಿಮ್ಮ ದೇಹ, ಮನಸ್ಸು ಮತ್ತು ಆತ್ಮಕ್ಕೆ ಹೆಚ್ಚಿನ ಬಲ ನೀಡುತ್ತದೆ.

icon

ಸಾಮರ್ಥ್ಯ ಮತ್ತು ಸಮತೋಲನ: ಯೋಗ ಭಂಗಿಗಳು (ಆಸನಗಳು)

ಆಸನಗಳಿಂದ ನಮ್ಮ ಸ್ನಾಯುಗಳನ್ನು ಬಲಗೊಳಿಸಿ, ಸುಸ್ಥಿತಿಯಲ್ಲಿಡುವುದರೊಂದಿಗೆ, ಕೊಲೆಸ್ಟರಾಲ್ ಕಡಿಮೆ, ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

icon

ಆಳವಾದ ವಿಶ್ರಾಂತಿ : ಧ್ಯಾನ ಮತ್ತು ವಿಶ್ರಾಮ

ಯೋಗ ನಿದ್ರೆಯ ಅಭ್ಯಾಸ. ಇದು ಪ್ರಜ್ಞಾಪೂರ್ವಕವಾಗಿ ವಿಶ್ರಾಂತಿಯನ್ನು ಹೊಂದುವ ಒಂದು ಅದ್ಭುತವಾದ ಪ್ರಕ್ರಿಯೆಯಾಗಿದೆ. ಇದರಿಂದ ದೇಹವು ವಿಶ್ರಾಮ ಪಡೆದು, ಮನಸ್ಸು ಪ್ರಶಾಂತವಾಗಿ ಆಳವಾದ ಧ್ಯಾನಕ್ಕೆ ಸಹಾಯಕವಾಗಿದೆ.

icon

ಪ್ರಾಣಾಯಾಮದಿಂದ ಹೆಚ್ಚಿನ ಚೈತನ್ಯ

ಪ್ರಾಣಾಯಾಮದ ಅಭ್ಯಾಸದಿಂದ ನಿಮ್ಮ ಮನಸ್ಸು ಮತ್ತು ದೇಹವು ಚೈತನ್ಯಮಯವಾಗಿಸಿ. ಇಡೀ ದಿನ ಲವಲವಿಕೆಯಿಂದ ಇರುವಿರಿ.

icon

ಒಳನೋಟ : ಯೋಗದಲ್ಲಿರುವ ಜ್ಞಾನ

ಮನಸ್ಸು ಮತ್ತು ದೇಹದ ಬಗ್ಗೆ ಯೋಗವು ನೀಡುವ ಅದ್ಭುತವಾದ ಒಳನೋಟಗಳನ್ನು ಕಂಡುಕೊಂಡು, ಜೀವನವನ್ನು ಆರಾಮ ಮತ್ತು ತೃಪ್ತಿಕರವಾಗಿ ನಡೆಸುವುದನ್ನು ಕಲಿಯುವಿರಿ

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ