Yoga - advanced asanas

ಶ್ರೀ ಶ್ರೀ ಯೋಗ ಡೀಪ್ ಡೈವ್ (ಲೆವೆಲ್ 2)

ನಿಮ್ಮ ದೇಹಕ್ಕೆ ನವೋಲ್ಲಾಸವನ್ನು ನೀಡಿ

3-4 ದಿನಗಳು

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನೋಂದಾಯಿಸಿ

ಈ ಕಾರ್ಯಾಗಾರದಿಂದ ನನಗೇನು ಲಾಭ?

icon

ಸರಿಯಲ್ಲದ ಜೀವನಶೈಲಿಯಿಂದ ಉಂಟಾದ ಖಾಯಿಲೆಗಳ ನಿವಾರಣೆ

ಈ ಕಾರ್ಯಕ್ರಮವು, ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ ಹಾಗು ಮಲಬದ್ಧತೆಯಂತಹ ಇತರ ಉದರ ಸಂಬಂಧಿತ ರೋಗಗಳನ್ನು ನಿವಾರಿಸುತ್ತದೆ ಮತ್ತು ಸೈನುಸೈಟಿಸ್ ಮತ್ತು ಅಲರ್ಜಿಗಳ ನಿವಾರಣೆಯಲ್ಲಿ ಅತ್ಯಂತ ಪರಿಣಾಮಕಾರಿಯಗಿದೆ.

icon

ಏಕಾಗ್ರತೆಯನ್ನು ವೃದ್ಧಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ನೀಡುತ್ತದೆ

ಈ ಕಾರ್ಯಕ್ರಮವು, ಆಳವಾದ ಧ್ಯಾನಸ್ಥಿತಿಗೆ ತಲುಪಲು ದೇಹವನ್ನು ಅನುವು ಮಾಡುವುದರೊಂದಿಗೆ, ದೈಹಿಕ ಮತ್ತು ಮಾನಸಿಕ ಸ್ಥಿರತೆ ಹಾಗು ಬಲವನ್ನು ನೀಡುತ್ತದೆ.

icon

ಹೆಚ್ಚಿನ ಸಾಧನೆಗೆ ಅನುಕೂಲಕಾರಿ

ನಿಮ್ಮ ದೇಹವು ಹಗುರವಾಗುತ್ತದೆ, ಚೈತನ್ಯಶಕ್ತಿಯು ಹೆಚ್ಚುತ್ತದೆ. ಇದರಿಂದ ನೀವು ಇನ್ನೂ ಹೆಚ್ಚು ಸಾಧಿಸಬಲ್ಲಿರಿ.

icon

ಆರೋಗ್ಯಕರವಾದ ಜೀವನಶೈಲಿಯ ಪಾಲನೆ

ಈ ಕಾರ್ಯಕ್ರಮದಿಂದ ನೀವು ಆರೋಗ್ಯಕರವಾದ ಆಹಾರ ಮತ್ತು ಜೀವನ ಶೈಲಿಯ ಅಭ್ಯಾಸಗಳಿಗೆ ಒಗ್ಗಿಕೊಳ್ಳಲು ಪೂರಕವಾಗುತ್ತದೆ.

ಯೋಗಿಕ ಪ್ರಕ್ರಿಯೆಗಳಿಂದ, ನಿಮ್ಮ ಶರೀರವನ್ನು ಕಲ್ಮಶಗಳಿಂದ ಮುಕ್ತಗೊಳಿಸಿ

21ನೇ ಶತಮಾನದಲ್ಲಿ ನಾಗಾಲೋಟದಿಂದ ಸಾಗುತ್ತಿರುವ ಜೀವನದಿಂದಾಗಿ, ನಮ್ಮ ದೇಹ ಹಾಗೂ ನಮ್ಮ ಆರೋಗ್ಯದ ಮೇಲೆ ಗಮನವನ್ನು ನೀಡಲು ಸಾಧ್ಯವಾಗದಂತಾಗಿದೆ. ನಮ್ಮ ದೇಹಕ್ಕೆ ಉಂಟಾಗಿರುವ ಹಾನಿಯನ್ನು, ಶ್ರೀ ಶ್ರೀ ಯೋಗದ (2ನೇ ಹಂತ) ಕಾರ್ಯಕ್ರಮದಿಂದ ಸರಿಪಡಿಸಿಕೊಳ್ಳಬಹುದಾಗಿದೆ. ಅನೇಕ ವರ್ಷಗಳಿಂದ ನಿಮ್ಮ ದೇಹದಲ್ಲಿ ಸೇರಿರುವ ಕಲ್ಮಶ ಹಾಗು ವಿಷಕಾರಿ ಅಂಶಗಳಿಂದಾಗಿ, ನಿಮ್ಮಲ್ಲಿ ಆಲಸ್ಯ, ಶರೀರದಲ್ಲಿ ಕಡಿಮೆ ಶಕ್ತಿಯ ಮಟ್ಟ ಹಾಗು ಮಂಕಾದ ಮನಸ್ಥಿತಿಗೆ ಕಾರಣವಾಗಿದೆ. ಶಕ್ತಿಶಾಲಿಯಾದ ಯೋಗಿಕ ಪ್ರಕ್ರಿಯೆಗಳು ನಮ್ಮನ್ನು ಸಮಗ್ರವಾಗಿ ಪೋಷಿಸುವುದಲ್ಲದೇ, ಇವೆಲ್ಲಾ ದುಷ್ಪರಿಣಾಮಗಳನ್ನು ಇಲ್ಲವಾಗಿಸುತ್ತದೆ.

ನಿಮ್ಮ ದೇಹವು ಸಹಜವಾಗಿ ತನ್ನಿಂದ ತಾನೇ ಗುಣಮುಖಗೊಳ್ಳುಲು ನೆರವಾಗಿ

ಯೋಗಿಕ ಶುದ್ಧೀಕರಣ

ಶಂಖ ಪ್ರಕ್ಷಾಳನ ಮತ್ತು ಜಲನೇತಿ, ಪ್ರಕ್ರಿಯೆ ಗಳಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಉಸಿರಾಟದ ವ್ಯವಸ್ಥೆಗಳು ಪುನಶ್ಚೇತವಾಗುತ್ತವೆ ಮತ್ತು ನಿಮ್ಮ ದೇಹದಲ್ಲಿ ಸೇರಿಕೊಂಡಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ.

ಪ್ರಾಣಾಯಾಮಗಳು ಮತ್ತು ಆಸನಗಳು

ನೀವು ಸಾಧನೆಯಲ್ಲಿ ಆಳವಾಗಿ ಹೋಗಲು ಸಾಧ್ಯ ಮಾಡುವಂತಹ ಹೊಸ ಪ್ರಾಣಾಯಾಮ ಮತ್ತು ಯೋಗಾಸನಗಳನ್ನು ಕಲಿಯಿರಿ.

ಸದೃಢವಾಗುವುದು ಮತ್ತು ಗುಣಮುಖಗೊಳ್ಳುವುದು

ಈ ಅನುಪಮವಾದ ಪ್ರಕ್ರಿಯೆಯು, ಎಲುಬಿನ-ಸ್ನಾಯುವಿನ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ, ಮತ್ತು ಪ್ರಾಣ ಶಕ್ತಿಯ ಸಂಚಾರವನ್ನು ಉತ್ತಮಗೊಳಿಸುವುದರೊಂದಿಗೆ ನಿಮ್ಮ ವ್ಯವಸ್ಥೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ.

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ಮುಂಬರುವ ಕಾರ್ಯಕ್ರಮಗಳು