
ಸುದರ್ಶನಕ್ರಿಯಾ ಫಾಲೋ-ಅಪ್ಸ್
ನಿಮ್ಮ ಅಭ್ಯಾಸವನ್ನು ದೃಢಗೊಳಿಸಿ
ಸಕಾರಾತ್ಮಕ, ಆಧ್ಯಾತ್ಮಿಕ ಸಮುದಾಯದ ಹಾಗೂ ಆಧ್ಯಾತ್ಮಿಕ ವ್ಯಕ್ತಿಗಳ ಸಹವಾಸವನ್ನು ಆನಂದಿಸಿ. ಸನಾತನ ಜ್ಞಾನದ ಚರ್ಚೆಯಲ್ಲಿ ನಿರತರಾಗಿ. ನಿಮ್ಮ ದಿನನಿತ್ಯದ ಅಭ್ಯಾಸವನ್ನು ಬಿಡದೆ ಮುಂದುವರಿಸಲು ಸ್ಛೂರ್ತಿಯನ್ನು ಪಡೆಯಿರಿ.
* ಮುಖ್ಯ: ಫಾಲೋ-ಅಪ್ಸ್ ಕೇವಲ ಆರ್ಟ್ ಆಫ್ ಲಿವಿಂಗ್ ಪ್ರಮಾಣಿತ ಶಿಕ್ಷಕರಿಂದ ನಡೆಸಲ್ಪಟ್ಟ ಆರ್ಟ್ ಆಫ್ ಲಿವಿಂಗ್ ಕೋರ್ಸ್‌ನಲ್ಲಿ ಸುದರ್ಶನ್ ಕ್ರಿಯೆಯನ್ನು ಕಲಿತವರಿಗಾಗಿ ಮಾತ್ರ ಲಭ್ಯವಿದೆ.
ದೇಶಾದ್ಯಂತ, ಪ್ರತಿ ನಗರದಲ್ಲೂ ಉಚಿತ ಫಾಲೋ-ಅಪ್ ಗಳನ್ನು ನಡೆಸಲಾಗುತ್ತದೆ.
ಹುಡುಕಿ ಫಾಲೋ-ಅಪ್ಸ್ಫಾಲೋ-ಅಪ್ ಕಾರ್ಯಕ್ರಮದಿಂದ ನನಗೇನು ಪ್ರಯೋಜನ?

ನಿಮ್ಮ ವೈಯಕ್ತಿಕ ಅಭ್ಯಾಸಗಳ ಪುನರ್ಮನನ
ಹ್ಯಾಪಿಸೆಸ್ ಕಾರ್ಯಕ್ರಮದಲ್ಲಿ ನೀವು ಕಲಿತ ತಂತ್ರಗಳನ್ನು ಪುನರ್ಮನನ ಮಾಡಿಕೊಳ್ಳಿ. ನಿಮ್ಮ ದಿನನಿತ್ಯದ ಅಭ್ಯಾಸಗಳನ್ನು ಮುಂದುವರಿಸಲು ಉತ್ತೇಜನ ಪಡೆಯಲು ಫಾಲೋ-ಅಪ್ ಗಳು ಸಹಾಯಕ.

ಪ್ರಾಯೋಗಿಕವಾದ ಜ್ಞಾನ
ಪ್ರಾಚೀನ ಜ್ಞಾನವನ್ನು ಅರಿತುಕೊಂಡು ಅದನ್ನು ಆಧುನಿಕ ಜೀವನದ ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಲು ಕಲಿಯಿರಿ.

ಸಮುದಾಯದ ಸಂಬಂಧ
ಭಾರತದ ಮತ್ತು ಇತರ 180 ದೇಶಗಳ ಯಾವುದೇ ಸಕಾರಾತ್ಮಕ, ಆಧ್ಯಾತ್ಮಿಕ ಸಮುದಾಯದ ಸಹವಾಸವನ್ನು ಪಡೆಯಿರಿ.
ಆರ್ಟ್ ಆಫ್ ಲಿವಿಂಗ್ ನ ಫಾಲೋ-ಅಪ್ ಗಳೆಂದರೇನು?
ಜಗತ್ತಿನ ಎಲ್ಲೆಡೆಯೂ ಇರುವ ಆರ್ಟ್ ಆಫ್ ಲಿವಿಂಗ್ ಕೇಂದ್ರಗಳಲ್ಲಿ ಪ್ರತಿ ವಾರವೂ ಸಾಮೂಹಿಕವಾಗಿ ಯಾರು ಬೇಕಾದರೂ ಭಾಗವಹಿಸುವ ಫಾಲೋ-ಅಪ್ ಕಾರ್ಯಕ್ರಮಗಳು ನಡೆಯುತ್ತವೆ. ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಕಾರ್ಯಕ್ರಮ ಅಥವಾ ಯೆಸ್ ಪ್ಲಸ್ ಕಾರ್ಯಕ್ರಮವನ್ನು ಮಾಡಿರುವ ಎಲ್ಲರೂ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
ಉಚಿತವಾಗಿರುವ ಫಾಲೋ-ಅಪ್‌ಗಳನ್ನು ಆರ್ಟ್ ಆಫ್ ಲಿವಿಂಗ್ ಶಿಕ್ಷಕರು ನಡೆಸಿಕೊಡುತ್ತಾರೆ.
ಸಾಮೂಹಿಕ ಫಾಲೋ-ಅಪ್‌ಗಳು ನಿಮಗೆ ಉಸಿರಾಟದ ತಂತ್ರಗಳನ್ನು ಬಳಸಿ ನಿಮ್ಮ ಅನುಭವವನ್ನು ತಾಜಾಗೊಳಿಸಿಕೊಳ್ಳಲು, ನಿಮ್ಮ ವೈಯಕ್ತಿಕ ಅಭ್ಯಾಸಗಳನ್ನು ಮತ್ತಷ್ಟು ದೃಢಗೊಳಿಸಿಕೊಳ್ಳಲು ಹಾಗೂ ಸಮಾನಮನಸ್ಕರ ಸಮುದಾಯದೊಂದಿಗೆ ಇರುವ ಅವಕಾಶ ಒದಗಿಸುತ್ತದೆ.
ಜೀವನ ಪರಿವರ್ತನೆಯ ಅನುಭವ
ಸಂಸ್ಥಾಪಕರು, ದಿ ಆರ್ಟ್ ಆಫ್ ಲಿವಿಂಗ್
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿಯೆಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ಮೂಲಕ ವೈಯಕ್ತಿಕ ಮತ್ತು ಸಾಮಾಜಿಕ ಪರಿವರ್ತನೆಯನ್ನು ತರಬೇಕು ಎನ್ನುವ ಗುರುದೇವರ ದೂರ ದೃಷ್ಟಿಯಿಂದಾಗಿ, ಸುಮಾರು 180 ಕ್ಕೂ ಹೆಚ್ಚಿನ ದೇಶಗಳಲ್ಲಿ ಜಾಗತಿಕ ಚಳುವಳಿಯು ಉಂಟಾಗಿದೆ. ಇದರಿಂದಾಗಿ ಸುಮಾರು 800 ಮಿಲಿಯಕ್ಕಿಂತಲೂ ಹೆಚ್ಚಿನ ಜನರ ಜೀವನಮಟ್ಟದಲ್ಲಿ ಸುಧಾರಣೆಯುಂಟಾಗಿ ಅವರ ಬದುಕು ಉನ್ನತವಾದ ಸ್ತರಕ್ಕೆ ಪ್ರಗತಿ ಹೊಂದಿದೆ.