ಯೋಗ
ಯೋಗಾಸನಗಳು ದೇಹವನ್ನು ಸದೃಢಗೊಳಿಸಲು ಮತ್ತು ವಿಶ್ರಮಿಸಲು ಸಹಾಯ ಮಾಡುತ್ತವೆ. ಇಷ್ಟೇ ಅಲ್ಲದೇ ಇನ್ನೂ ಹೆಚ್ಚಿನದನ್ನು ಯೋಗವು ಹೊಂದಿದೆ.
ಸಂಸ್ಕೃತದ “ಯುಜ್” ಎಂಬ ಧಾತು ಪದದಿಂದ ಬಂದಿರುವ ಯೋಗ ಎಂಬ ಪದದ ಅರ್ಥವು “ಐಕ್ಯವಾಗುವುದು ಅಥವಾ ಸೇರುವುದು” ಎಂದರ್ಥ. ಯೋಗವು 5000 ವರ್ಷಗಳಿಗಿಂತಲೂ ಪುರಾತನವಾದ ಭಾರತೀಯ ಜ್ಞಾನವಾಗಿದೆ. ಅನೇಕ ರೀತಿಯ ಪ್ರಾಣಾಯಾಮ, ಆಸನ, ಮತ್ತು ಧ್ಯಾನದ ಮೂಲಕ ದೇಹ, ಮನಸ್ಸು ಮತ್ತು ಉಸಿರನ್ನು ಸಾಮರಸ್ಯಗೊಳಿಸುವುದೇ ಯೋಗ.
ಯೋಗವಿಜ್ಞಾನವು ಜೀವನ ವಿಧಾನದ ಸಂಪೂರ್ಣ ಸಾರವನ್ನು ಒಳಗೊಂಡಿದೆ. ಇವುಗಳನ್ನು, ಸ್ಥೂಲವಾಗಿ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ಮತ್ತು ರಾಜಯೋಗ ಎಂದು ವಿಂಗಡಿಸಲಾಗಿದೆ. ರಾಜಯೋಗವನ್ನು ಮತ್ತೆ ಎಂಟು ಭಾಗಗಳಾಗಿ ವಿಂಗಡಿಸಲಾಗಿದೆ. ರಾಜಯೋಗದಲ್ಲಿ ಸಮತೋಲನಗೊಳಿಸುವ ಮತ್ತು ಏಕೀಕರಿಸುವ ಈ ವಿವಿಧ ವಿಧಾನಗಳನ್ನು ಒಳಗೊಂಡಿದೆ.
ಜೀವನದಲ್ಲಿ ಅಮೋಘವಾದ ಪರಿವರ್ತನೆಯ ಅನುಭವ
ಯೋಗಾಸನಗಳು
ಯೋಗದ ದೈಹಿಕ ಅಭ್ಯಾಸವು ಸುಂದರವಾದದ್ದಾಗಿರುವುದಾದರೆ, ಆಸನಗಳು ನಿಮ್ಮ ವಯಸ್ಸು, ಫಿಟ್ನೆಸ್ ಮಟ್ಟ ಅಥವಾ ಆರೋಗ್ಯದ ಪರಿಗಣನೆಗಳಿಲ್ಲದೆ ಸಹಾಯ ಮಾಡುತ್ತವೆ ಮತ್ತು ನಿಮ್ಮನ್ನು ಬೆಂಬಲಿಸುತ್ತವೆ. ನೀವು ವಯೋವೃದ್ಧರಾಗಿದಂತೆ, ಯೋಗಾಸನಗಳ ಬಗ್ಗೆ ನಿಮ್ಮ ಅರಿವು ಮತ್ತಷ್ಟು ಗಹನವಾಗುತ್ತದೆ. ನೀವು ಶರೀರದ ಹೊಂದಾಣಿಕೆಗೆ ಗಮನಹರಿಸುವುದರಿಂದ ಒಳಗಿನ ಕ್ರಿಯೆಗಳ ಸುಧಾರಣೆಗೆ, ಕೊನೆಗೆ ನೀವು ಆಾಸನದಲ್ಲಿಯೇ ಕೇವಲ ಅನುಭವಿಸುವ ಹಂತಕ್ಕೆ ಸಾಗುತ್ತೀರಿ.
ಇನ್ನಷ್ಟು ತಿಳಿಯಿರಿಆರಂಭಿಕ ಹಾಗೂ ಉನ್ನತ ಕಾರ್ಯಕ್ರಮಗಳು
![yoga-outdoors-3C4A0852](https://www.artofliving.org/in-en/app/uploads/bis-images/98181/2023/10/yoga-outdoors-3C4A0852-1-315x150-f50_50.jpg)
ಶ್ರೀ ಶ್ರೀ ಯೋಗ ಕ್ಲಾಸಸ್ (ಲೆವೆಲ್ 1)
ಚೈತನ್ಯಶಾಲಿಗಳಾಗಿ • ನಿಮ್ಮ ಆರೋಗ್ಯ ಮತ್ತು ನಮ್ಯತೆಯನ್ನು ಸುಧಾರಿಸಿಕೊಳ್ಳಿ • ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ • ಮಾನಸಿಕ ಸ್ಥಿರತೆಯನ್ನು ಪಡೆಯಿರಿ
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
![Yoga What is yoga featured](https://www.artofliving.org/in-en/app/uploads/bis-images/98324/2024/07/Yoga-What-is-yoga-featured-315x150-f50_50.jpeg)
ಶ್ರೀ ಶ್ರೀ ಯೋಗ ಡೀಪ್ ಡೈವ್ (ಲೆವೆಲ್ 2)
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
ಪ್ರಾಣಾಯಾಮ
ಪ್ರಾಣಾಯಾಮವು ಶ್ವಾಸದ ವಿಸ್ತರಣೆ ಮತ್ತು ನಿಯಂತ್ರಣವಾಗಿದೆ. ಸರಿಯಾದ ಶ್ವಾಸೋಚ್ಛ್ವಾಸ ತಂತ್ರಗಳನ್ನು ಅಭ್ಯಾಸ ಮಾಡುವ ಮೂಲಕ ರಕ್ತ ಮತ್ತು ಮೆದುಳಿಗೆ ಹೆಚ್ಚಿನ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡಬಹುದು, ಇದು ಅಂತಿಮವಾಗಿ ಪ್ರಾಣ ಅಥವಾ ಜೀವಶಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮವು ವಿವಿಧ ಯೋಗಾಸನಗಳ ಜೊತೆಗೆ ಕೈಗೂಡುತ್ತದೆ. ಈ ಎರಡು ಯೋಗ ತತ್ವಗಳ ಸಮ್ಮಿಲನವು ಮನಸ್ಸು ಮತ್ತು ದೇಹವನ್ನು ಶುದ್ಧಗೊಳಿಸುವ ಮತ್ತು ಸ್ವಯಂ-ಶಿಸ್ತುಗೆ ಅತ್ಯುತ್ತಮ ರೂಪವೆಂದು ಪರಿಗಣಿಸಲಾಗುತ್ತದೆ. ಪ್ರಾಣಾಯಾಮ ತಂತ್ರಗಳು ನಮ್ಮನ್ನು ಧ್ಯಾನದ ಆಳವಾದ ಅನುಭವಕ್ಕೆ ತಯಾರಿಸುತ್ತವೆ.
ಇನ್ನಷ್ಟು ತಿಳಿಯಿರಿಸುದರ್ಶನ ಕ್ರಿಯೆಯನ್ನು ಕಲಿಯಿರಿ
![interactive processes during programs](https://www.artofliving.org/in-en/app/uploads/bis-images/98290/2023/07/interactive-processes-during-programs-315x150-f50_50.jpg)
ಹ್ಯಾಪಿನೆಸ್ ಪ್ರೊಗ್ರಾಮ್
ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳಲ್ಲಿ ಸಾಮರಸ್ಯವನ್ನು ತರುತ್ತದೆ • ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ
![Meditation_Meditation mantras tailor made for youth](https://www.artofliving.org/in-en/app/uploads/bis-images/98305/2023/12/canva-res_meditation-mantras-tailor-made-for-youth_i-gJp4VW4-L-315x150-f51_11.jpg)
ಹ್ಯಾಪಿನೆಸ್ ಪ್ರೋಗ್ರಾಮ್ ಫಾರ್ ಯೂಥ್
* ನಿಮ್ಮ ಕೊಡುಗೆ ಆರ್ಟ್ ಆಫ್ ಲಿವಿಂಗ್ನ ಹಲವಾರು ಸಾಮಾಜಿಕ ಯೋಜನೆಗಳಿಗೆ ಸಹಕಾರಿಯಾಗಲಿದೆ