ನಿಮ್ಮ ಕೂದಲನ್ನು ಎಳೆದು ಬೇರ್ಪಡಿಸಲು, ನಿಮ್ಮ ಹಲ್ಲುಗಳನ್ನು ಪುಡಿಮಾಡಲು ಮತ್ತು ನಿಮ್ಮ ಮುಷ್ಠಿಯನ್ನು ಬಿಗಿಗೊಳಿಸಲು ನೀವು ಬಯಸುವ ದಿನಗಳಿವೆಯೇ? ಸರಿ, ನಿಮ್ಮ ಮುಷ್ಠಿಯನ್ನು ಇನ್ನಷ್ಟು ಬಿಗಿಗೊಳಿಸಿ. ವಾಸ್ತವವಾಗಿ, ನಿಮ್ಮ ಇಡೀ ದೇಹವನ್ನು ಬಿಗಿಗೊಳಿಸಿ. ಉಸಿರನ್ನು ಹೊರತೆಗೆಯಿರಿ, ನಿಮ್ಮ ಹೊಟ್ಟೆಯನ್ನು ಹಿಸುಕಿಕೊಳ್ಳಿ, ಕೋಪಗೊಳ್ಳಿ ಮತ್ತು ನಿಮ್ಮ ತುಟಿಗಳನ್ನು ಒಟ್ಟಿಗೆ ಬಿಗಿಗೊಳಿಸಿ. ಮತ್ತು ಈಗ, ‘ಹಾ’ ಶಬ್ದದೊಂದಿಗೆ ಬಿಡಿ. ನೀವು ಯಾವುದನ್ನು ಹೆಚ್ಚು ಆನಂದಿಸಿದಿರಿ? ಮುಷ್ಠಿಯನ್ನು ಮುಚ್ಚಿಡುವುದು ಅಥವಾ ಬಿಡುವುದು ನೀವು ಯಾವುದನ್ನು ಆನಂದಿಸಿದ್ದೀರಾ?
ಮೇಲಿನವು ಅನೇಕ ಸೂಕ್ಷ್ಮ ಯೋಗ ತಂತ್ರಗಳಲ್ಲಿ ಒಂದಾಗಿದೆ. ಈ ಯೋಗ ವಿಶ್ರಾಂತಿ ತಂತ್ರಗಳ ವಿಭಿನ್ನ ಗುಣವೆಂದರೆ ಅವು ಸರಳ, ಸಂಕ್ಷಿಪ್ತ ಮತ್ತು ಸೂಕ್ಷ್ಮವಾಗಿವೆ. ಮತ್ತು ನಿಮ್ಮ ಕೂದಲನ್ನು ಎಳೆಯಲು ನಿಮಗೆ ಅನಿಸದ ದಿನಗಳಲ್ಲಿಯೂ ನೀವು ಅವುಗಳನ್ನು ಮಾಡಬಹುದು. “ಇದು ನಿಮಗೆ ವಿಶ್ರಾಂತಿ ಪಡೆಯಲು ತ್ವರಿತ ಮಾರ್ಗಗಳಲ್ಲಿ ಒಂದಾಗಿದೆ” ಎಂದು ಸೂಕ್ಷ್ಮ ಯೋಗದ ನಿಯಮಿತ ಅಭ್ಯಾಸಿ ಪಲ್ಲವಿ ಜೋಶಿ ಹೇಳುತ್ತಾರೆ. “ನೀವು ಇದನ್ನು ಯಾವಾಗ ಬೇಕಾದರೂ ಮತ್ತು ಎಲ್ಲಿಯಾದರೂ ಮಾಡಬಹುದು – ಮನೆಯಲ್ಲಿ ಕುಳಿತು, ನಿಮ್ಮ ಕೆಲಸದ ಸ್ಥಳದಲ್ಲಿ ಅಥವಾ ಕಾರು, ಬಸ್ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ” ಎಂದು ಮತ್ತೊಬ್ಬ ಸೂಕ್ಷ್ಮ ಯೋಗ ಪ್ರೇಮಿ ಹೇಳುತ್ತಾರೆ.
ಸೂಕ್ಷ್ಮ ಯೋಗಾಭ್ಯಾಸಕ್ಕೆ ಸೂಚನೆಗಳು
ಸೂಕ್ಷ್ಮ ಯೋಗಕ್ಕೆ ಯಾವುದೇ ಸಮಯ ಅಥವಾ ಸಿದ್ಧತೆ ಬೇಕಾಗಿಲ್ಲ. ಈ ಸಣ್ಣ ವ್ಯಾಯಾಮಗಳು ಸೂಕ್ಷ್ಮ ಶಕ್ತಿಯ ಮಾರ್ಗಗಳನ್ನು ತೆರೆಯುತ್ತವೆ, ಮತ್ತು 7 ನಿಮಿಷಗಳಷ್ಟು ಕಡಿಮೆ ಅವಧಿಯಲ್ಲಿ, ನೀವು ಹೆಚ್ಚು ಸ್ಪಷ್ಟವಾದ ವ್ಯತ್ಯಾಸವನ್ನು ಅನುಭವಿಸಬಹುದು.
- ಏನಾದರೂ ತಪ್ಪಾದಾಗ, ನಾವು ನಮ್ಮ ತಲೆಯ ಮೇಲೆ ಕೈಗಳನ್ನು ಇರಿಸಿ, ‘ಓ ದೇವರೇ!’ ಎಂದು ಹೇಳುತ್ತೇವೆ. ಮಸಾಜ್ ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ, ಮತ್ತು ಮನಸ್ಸು ವಿಶ್ರಾಂತಿ ಪಡೆದಾಗ, ಜೀವನವು ಸುಗಮವಾಗುತ್ತದೆ.

- ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳು ಬಳಸಿಕೊಂಡು ನಿಮ್ಮ ಹುಬ್ಬುಗಳನ್ನು 5-6 ಬಾರಿ ಪಿಂಚ್ ಮಾಡಿ. ನಾವು ಕೋಪಗೊಳ್ಳಲು 72 ಸ್ನಾಯುಗಳನ್ನು ಮತ್ತು ನಗಲು ಅರ್ಧದಷ್ಟು ಸ್ನಾಯುಗಳನ್ನು ಮಾತ್ರ ಬಳಸುತ್ತೇವೆ ಎಂದು ನಿಮಗೆ ತಿಳಿದಿದೆಯೇ?
- ನಿಮ್ಮ ಕಣ್ಣುಗಳನ್ನು 5-6 ಬಾರಿ ಗಡಿಯಾರದ ದಿಕ್ಕಿನಲ್ಲಿ ಮತ್ತು ನಂತರ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ.
- ನಿಮ್ಮ ಕಣ್ಣುಗಳನ್ನು ಬಿಗಿಯಾಗಿ ಹಿಸುಕಿ ಮತ್ತು ನಂತರ ಅವುಗಳನ್ನು ಅಗಲವಾಗಿ ತೆರೆಯಿರಿ. ಇದನ್ನು 10-15 ಬಾರಿ ಪುನರಾವರ್ತಿಸಿ.

- ನಿಮ್ಮ ಕಿವಿಗಳನ್ನು 10-15 ಸೆಕೆಂಡುಗಳ ಕಾಲ ಎಳೆಯಿರಿ. ಪ್ರಜ್ಞಾ (ಅರಿವು) ಹೆಚ್ಚಿಸುವ ಎಲ್ಲಾ ನರಗಳು ಕಿವಿಯ ಕೆಳಭಾಗದಲ್ಲಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವೊಮ್ಮೆ, ಪೋಷಕರು ಅಥವಾ ಶಿಕ್ಷಕರು ಮಕ್ಕಳ ಅರಿವನ್ನು ಹೆಚ್ಚಿಸಲು ಮತ್ತು ತಪ್ಪು ಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಅವರ ಕಿವಿಗಳನ್ನು ಎಳೆಯುತ್ತಾರೆ. ನೀವು ನಿಮ್ಮ ಕಿವಿಗಳನ್ನು ಎಳೆದರೆ, ಯಾರೂ ನಿಮ್ಮ ಕಿವಿಗಳನ್ನು ಎಳೆಯಬೇಕಾಗಿಲ್ಲ
- ನಿಮ್ಮ ಕಿವಿಗಳನ್ನು ಹಿಡಿದುಕೊಳ್ಳಿ ಮತ್ತು ನಿಮ್ಮ ಕಿವಿಗಳು ಬಿಸಿಯಾಗುವವರೆಗೆ ಅವುಗಳನ್ನು ಗಡಿಯಾರದ ದಿಕ್ಕಿನಲ್ಲಿ ಮತ್ತು ಗಡಿಯಾರಕ್ಕೆ ವಿರುದ್ಧವಾಗಿ (ಸೈಕಲ್ ಸವಾರಿ ಮಾಡಿದಂತೆ) ಚಲಿಸಿ.

- ಮೂರು ಬೆರಳುಗಳನ್ನು (ಮೊದಲ, ಮಧ್ಯ ಮತ್ತು ಉಂಗುರ ಬೆರಳು) ದವಡೆಯಿಂದ ಗಲ್ಲದವರೆಗೆ ಸರಿಸಿ ಮತ್ತು ನಿಮ್ಮ ಕೆನ್ನೆಗಳನ್ನು ಮಸಾಜ್ ಮಾಡಿ. ನೀವು ಇದನ್ನು ಮಾಡುವಾಗ ನಿಮ್ಮ ಬಾಯಿಯನ್ನು ತೆರೆದಿಡಬಹುದು. ನಿಮ್ಮ ದವಡೆಗಳ ನಡುವಿನ ಜಾಗದಲ್ಲಿ ನೀವು ಗಂಟುಗಳನ್ನು ಕಂಡುಕೊಂಡಿದ್ದೀರಾ? ಇದು ಒತ್ತಡವನ್ನು ಮರೆಮಾಡುವ ಸ್ಥಳವಾಗಿದೆ. ನೀವು ಎಷ್ಟು ‘ಗಂಟು’ ಆಗಿದ್ದೀರಿ ಎಂದು ನೋಡಿ ಮತ್ತು ಎಲ್ಲಾ ಗಂಟುಗಳನ್ನು ಸರಿಪಡಿಸಿ.
- ನಿಮ್ಮ ದವಡೆಯನ್ನು 8-10 ಬಾರಿ ತೆರೆಯಿರಿ ಮತ್ತು ಮುಚ್ಚಿರಿ.
- ನಿಮ್ಮ ಬಾಯಿಯನ್ನು ತೆರೆಯಿರಿ ಮತ್ತು ನಿಮ್ಮ ದವಡೆಯನ್ನು ಪಕ್ಕದಿಂದ ಪಕ್ಕಕ್ಕೆ 8-10 ಬಾರಿ ಚಲಿಸಿ.

- ನಿಮ್ಮ ಕುತ್ತಿಗೆಯನ್ನು ತಿರುಗಿಸಿ. ಉಸಿರನ್ನು ತೆಗೆದುಕೊಳುತ್ತಾ ನಿಮ್ಮ ತಲೆಯನ್ನು ಹಿಂದಕ್ಕೆ ತೆಗೆದುಕೊಳ್ಳಿ, ಊಸಿರು ಬಿಡುತ್ತಾ ನಿಮ್ಮ ತಲೆಯನ್ನು ಮುಂದಕ್ಕೆ ತರುತ್ತಾ ಗಲ್ಲದಿಂದ ಎದೆಗೆ ಸ್ಪರ್ಶಿಸಿ. ನಿಮ್ಮ ತಲೆಯನ್ನು ಗಡಿಯಾರದ ದಿಕ್ಕಿನಲ್ಲಿ ತಿರುಗಿಸಿ. ನೀವು ಮೇಲಕ್ಕೆ ಹೋಗುವಾಗ (ವೃತ್ತದ ಮೊದಲಾರ್ಧ) ಉಸಿರನ್ನು ಒಳಗೆಳೆದುಕೊಳ್ಳಿ ಮತ್ತು ನೀವು ಪ್ರಾರಂಭದ ಸ್ಥಾನಕ್ಕೆ (ವೃತ್ತದ ದ್ವಿತೀಯಾರ್ಧ) ಹಿಂತಿರುಗುವಾಗ ಉಸಿರನ್ನು ಹೊರಬಿಡಿ. ಇದನ್ನು 5-6 ಬಾರಿ ಗಡಿಯಾರದ ದಿಕ್ಕಿನಲ್ಲಿ ಮತ್ತು ನಂತರ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಪುನರಾವರ್ತಿಸಿ.
- ನಿಮ್ಮ ಕೈಗಳನ್ನು 2 ನಿಮಿಷಗಳ ಕಾಲ ಅಲ್ಲಾಡಿಸಿ. ನೀವು ಎಷ್ಟು ತೀವ್ರತೆಯಿಂದ ಅಲುಗಾಡಬೇಕು ಎಂದು ನೀವು ಯೋಚಿಸುತ್ತಿದ್ದರೆ, ನಾಯಿಗಳು ಮತ್ತು ಬೆಕ್ಕುಗಳು ತಮ್ಮ ದೇಹದ ಮೇಲೆ ನೀರು ಉಳಿಯಲು ಬಯಸದಿದ್ದಾಗ ಹೇಗೆ ದೇಹವನ್ನು ಅಲುಗಾಡಿಸುತ್ತದೆ ಎಂಬುದನ್ನು ನೋಡಿ. ಅವು ಎಲ್ಲವನ್ನೂ ಬದಿಗಿಟ್ಟು ಮುಂದುವರಿಯುತ್ತದೆ.ಆದ್ದರಿಂದ ಅಲುಗಾಡಿಸಿ, ಅಲ್ಲಾಡಿಸಿ, ನಿಮ್ಮ ಕೈಗಳನ್ನು ಅಲ್ಲಾಡಿಸಿ ಮತ್ತು ನಿಧಾನವಾಗಿ ಅವುಗಳನ್ನು ನಿಲ್ಲಿಸಿ ಮತ್ತು ಸುಮ್ಮನೆ ಕುಳಿತುಕೊಳ್ಳಿ.
ನೀವು ಈ ತಂತ್ರಗಳನ್ನು ಅಭ್ಯಾಸ ಮಾಡುವಾಗ, ಪ್ರತಿ ದೇಹದ ಚಲನೆ ನಿಮ್ಮ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ. ಪ್ರತಿಯೊಂದು ಸಣ್ಣ ಚಲನೆ ಅಥವಾ ಚಟುವಟಿಕೆಯು ಸ್ವಲ್ಪ ಒತ್ತಡವನ್ನು ಬಿಡುಗಡೆ ಮಾಡುತ್ತದೆ ಮತ್ತು ನಿಮ್ಮೊಳಗಿನ ಪ್ರಾಣ (ಶಕ್ತಿ) ಚಲನೆಯ ಕಾರ್ಯವಿಧಾನವನ್ನು ನೀವು ನಿಧಾನವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಬಹುದು. ಈ ಜ್ಞಾನವನ್ನು ಅಭ್ಯಾಸ ಮತ್ತು ಅನುಭವದಿಂದ ಮಾತ್ರ ಪಡೆಯಬಹುದು, ಓದುವ ಮೂಲಕ ಅಲ್ಲ.
ಇನ್ನೂ ಬಹಳಷ್ಟು ಇದೆ. ಸಂತೋಷದಿಂದ ಅಭ್ಯಾಸಮಾಡಿ!