ದೇವರ ಬಗ್ಗೆ ಉತ್ಕಟ ನಿರೀಕ್ಷೆ

ಉತ್ಕಟ ನಿರೀಕ್ಷೆಯೇ ದೇವರು. ಪ್ರಾಪಂಚಿಕ ವಸ್ತುಗಳ ಬಗ್ಗೆ ನಿಮಗಿರುವ ನಿರೀಕ್ಷಣೆ ನಿಮ್ಮನ್ನು ಜಡತ್ವಕ್ಕೆ ಒಯ್ಯುತ್ತದೆ. ಆದರೆ ಅನಂತತೆಯ ಬಗ್ಗೆ ಇರುವ ನಿಮ್ಮ ನಿರೀಕ್ಷಣೆ ನಿಮ್ಮನ್ನು ಉತ್ಸಾಹದೊಂದಿಗೆ ತುಂಬಿಸುತ್ತದೆ, ಯಾವಾಗ ನಿರೀಕ್ಷೆ ಕೊನೆಗಾಣುತ್ತದೆಯೋ ಆಗ ಜಡತ್ವ ಉಂಟಾಗುತ್ತದೆ. ಆದರೆ, ನಿರೀಕ್ಷೆಯು ಅದರೊಂದಿಗೆ ನೋವಿನ ಅನುಭವವನ್ನೂ ತರುತ್ತದೆ. ನೋವನ್ನು ತಡೆಯಲು ನೀವು ನಿರೀಕ್ಷೆಯನ್ನು ದೂರ ತಳ್ಳುತ್ತೀರಿ. ಆದರೆ ನೋವನ್ನು ಸಹಿಸುತ್ತಾ ನಿರೀಕ್ಷೆಯಲ್ಲಿ
ಮುಂದುವರಿಯುವುದು ಚಾಕಚಾಕ್ಯತೆ(ಜಾಣತನ). ನಿರೀಕ್ಷೆಯನ್ನು ದಾಟಲು ಒಂದು ಒಳದಾರಿಯನ್ನು ಹುಡುಕಲು ಪ್ರಯತ್ನಿಸಬೇಡಿ. ನಿರೀಕ್ಷೆಯನ್ನು ಚಿಕ್ಕದನ್ನಾಗಿ ಮಾಡಬೇಡಿ ಆದ್ದರಿಂದಲೇ ಇದು ನಿರೀಕ್ಷೆ ಎನ್ನುವುದು.(ನಗು)

(ದೈವಿಕತೆಗಾಗಿ ಅತೀವ ಹಂಬಲ) ನಿಜವಾದ ನಿರೀಕ್ಷೆಯು ಆನಂದದ ಅಲೆಗಳನ್ನು ತರುತ್ತದೆ. ಆದ್ದರಿಂದಲೇ ಹಿಂದಿನಕಾಲದಲ್ಲಿ ಈ ನಿರೀಕ್ಷೆಯನ್ನು ಹಾಡುವುದು ಮತ್ತು ಕಥೆಗಳನ್ನು ಕೇಳುವುದರ ಮೂಲಕ ಜೀವಂತವಾಗಿಡಲಾಗುತ್ತಿತ್ತು. ನಿರೀಕ್ಷೆಯನ್ನು ದಾಟಿದ ಮೇಲೆ(ಮೀರಿದ ಮೇಲೆ) ಬಾಂಧವ್ಯಗಳು, ತೀರ್ಪುಗಳು, ಅಸೂಯೆ ಮತ್ತು ಬೇರೆ ಎಲ್ಲ ನಕಾರಾತ್ಮಕ ಭಾವನೆಗಳು ಕಳಚಿಕೊಳ್ಳುತ್ತವೆ. ಕೇವಲ ವಿವೇಕ ಮತ್ತು ಆತ್ಮಜ್ಞಾನದಿಂದ ನೀವು ಈ ಬಾಂಧವ್ಯಗಳನ್ನು ಮೀರಿ ಮೇಲೇರಬಹುದು. ಕೆಲವು ಸಾರಿ ಜನರು (ದೈವಿಕತೆಗಾಗಿ ಹಂಬಲದಲ್ಲಿ) ನಿರೀಕ್ಷೆಯಲ್ಲಿ ವಿವೇಕ ಇರುವುದಿಲ್ಲ ಎಂದು ಭಾವಿಸುತ್ತಾರೆ. - ಇಲ್ಲ! ಅಂಥಹ ವಿವೇಕವು ರಸಹೀನವಾಗಿ ಒಣಗಿರುವುದು. ನಿಜವಾದ ವಿವೇಕದೊಡನೆ ಕೂಡಿದ ನಿರೀಕ್ಷೆಯು ಜೀವನವನ್ನು ರಸಮಯವಾಗಿ ಮಾಡುತ್ತದೆ.ದೇವರು ನಿಜವಾಗಿಯೂ ರಸಮಯನು! ದೇವರು ಬಗೆಗಿನ ನಿಮ್ಮ ಉತ್ಕಟ ನಿರೀಕ್ಷೆಯು ನಿಮಗೆ ಬೇರೆಯವರನ್ನು ಆಶೀರ್ವದಿಸುವ ಶಕ್ತಿಯನ್ನು ಕೊಡುತ್ತದೆ. ಏಕೆಂದರೆ, ನಿಮ್ಮಲ್ಲಿರುವ ಆ ನಿರೀಕ್ಷಯೇ ದೇವರು.