- ನಿಮ್ಮ ಜೀವನದ ಧ್ಯೇಯವನ್ನು ಗುರುತಿಸಿ.
- ಜೀವನದ ಮತ್ತು ಸೃಷ್ಟಿಯ ಆಧ್ಯಾತ್ಮಿಕ ರಹಸ್ಯಗಳನ್ನು ಅನ್ವೇಷಿಸಿ
- ಸ್ವತಂತ್ರತೆಯನ್ನು ಅನುಭವಿಸಿ ನಿಮ್ಮ ಅಂತರಾಳವನ್ನು ಶೋಧಿಸಿ
- ಜ್ಞಾನೋದಯಕ್ಕೆ ಸರಳ ಸೋಪಾನ
- ನಿರಂತರ ಸತ್ಯ, ಶ್ರೇಷ್ಠ ಜ್ಞಾನ, ಮತ್ತು ಅದ್ವಿತೀಯ ದೈವಾನಂದವನ್ನು ಗುರುಗಳ ಸಾನಿಧ್ಯದಲ್ಲಿ ಅನುಭವಿಸಿರಿ.
ಆಧ್ಯಾತ್ಮಿಕ ಮಾರ್ಗದ ಅನುಭವಗಳು ನಿಶ್ಚಿತ ಆದರೆ ವರ್ಣಿಸಲು ಕಠಿಣ
ಆಧ್ಯಾತ್ಮಿಕ ಪಯಣದ ಹಂತಗಳು
ಶರೀರ , ಮನಸ್ಸು ಹಾಗು ಆತ್ಮ ಸಮರಸಗೊಳಿಸಿ
ಮೊದಲ ಮೆಟ್ಟಿಲು ಸುದರ್ಶನ ಕ್ರಿಯೆಯನ್ನು ಕಲಿಯುವುದು : ಇದೊಂದು ಉಸಿರಾಟದ ಪ್ರಬಲ ಕಾರ್ಯತಂತ್ರವಾಗಿದ್ದು, ಶರೀರ, ಮನಸ್ಸು, ಮತ್ತು ಚೈತನ್ಯವನ್ನು ಪರಿಶುದ್ಧಗೊಳಸಿ ಸಮರಸಗೊಳಿಸುತ್ತದೆ. ತಡೆಗಟ್ಟಿದ ಒತ್ತಡವನ್ನು ಸಹಜವಾಗಿ ಮತ್ತು ಯಶಸ್ವಿಯಾಗಿ ನಿವಾರಿಸಲು ಸಾಧನವಾಗುತ್ತದೆ.
ಶಾಂತತೆ ನಿಮ್ಮ ಸಹಜ ಸ್ವಭಾವ
ಮೌನದ ಅಭ್ಯಾಸ ಕಲೆ :- ಇದು ಹೊರಗಿನ ಕಲರವಗಳಿಂದ ಚೇತನವನ್ನು ಪ್ರಜ್ಞಾಪೂರ್ವಕವಾಗಿ ಸ್ವತಂತ್ರಗೊಳಿಸುವುದು. ದೇಹ , ಮನಸ್ಸು ಮತ್ತು ಚೈತನ್ಯವನ್ನು ಮತ್ತೆ ಪ್ರಕ್ರಿಯೆಗೊಳಿಸಲು, ಹಲವಾರು ಸಂಪ್ರದಾಯಗಳು ಇದನ್ನು ಬಳಸಿದೆ. ಈ ಕಾರ್ಯಕ್ರಮ ನಮ್ಮನ್ನು ಸದಾ ಚಟುವಟಿಕೆಗಳಿಂದ ಕೂಡಿದ ಮನಸ್ಸಿನಿಂದ ದೂರ ಸಾಗಿಸಿ, ಅತ್ಯಂತ ಶಾಂತ ಚಿತ್ತಗೊಳಿಸಿ, ನವೀಕೃತವಾದ ಚೈತನ್ಯವನ್ನು ತುಂಬುತ್ತದೇ. ದೈನಂದಿನ ಜೀವನ ಸಾಗಿಸಲು ನಮ್ಮಲಿ ಹೊಸ ಹುರುಪನ್ನು ಬೆಳೆಸುತ್ತದೆ.
ನಿಮ್ಮ ಹ್ಲದಯಾಂತರಾಳದ ಸ್ಥಿತಿಯನ್ನು ಶೋಧಿಸಿರಿ
ಸಮಾಧಿ ಅಥವಾ ಧ್ಯಾನದಲ್ಲಿ ಮನಸ್ಸಿನ ಅಂತರಾಳವನ್ನು ಅನುಭವಿಸಲು, ನುರಿತ ಶಿಕ್ಷಕರಿಂದ ಮಂತ್ರವನ್ನು ಪಡೆಯುವುದು ಪ್ರಾಮುಖ್ಯವಾಗಿದೆ. ಸಹಜ ನಿರಾಯಾಸವಾದ ಧ್ಯಾನ ಕ್ರಮವು ಮನಸ್ಸಿನ ಆಳವಾದ ಪ್ರಶಾಚಿತ ಸ್ಥಿತಿಗೆ ಕರೆದೊಯ್ಯುವ ಸಾಧನವಾಗಿದೆ. ತತ್ಪಲವಾಗಿ ಮನಸ್ಸಿನೊಳಗಿನ ಬಂಧನಗಳು, ಹೆಪ್ಪುಗಟ್ಟಿದ ಒತ್ತಡಗಳನ್ನು ಕರಗಿಸಲು ತೆರವು ಮಾಡಿಕೊಡುತ್ತದೆ. ನಿರಂತರ ಈ ಅಭ್ಯಾಸದಿಂದ ಒಬ್ಬರ ಜೀವನದ ಗುಣಮಟ್ಟವೇ ಸಂಪೂರ್ಣವಾಗಿ ಬದಲಾಗಿ, ಪ್ರಶಾಂತ ಸ್ಥಿತಿಯನ್ನು ಸ್ಥಿರವಾಗಿರಿಸಿ, ಚೈತನ್ಯವನ್ನು ಹೆಚ್ಚಿಸಿ ವರ್ತಮಾನ ಸ್ಥಿತಿಯಲ್ಲಿ ಸಚೇತರಾಗಿರುವಂತೆ ಮಾಡುತ್ತದೆ.
ಅನುಗ್ರಹಿಸಲು ಮತ್ತು ಗುಣಪಡಿಸಲು ಶಕ್ತಿಯನ್ನು ಲಭಿಸಿಕೊಳ್ಳಿ
ಅನುಗ್ರಹವನ್ನು ಕೊಡುವ ಕಾರ್ಯಕ್ರಮವು, ಸಮೃದ್ಧತೆ, ಸಂತೃಪ್ತಿ, ಅನುಭೂತಿಯ ಸರಣ ಸೀಮೆಯನ್ನು ತಲುಪಿದ ಪೂರೈಸುವಿಕೆಯನ್ನು ಲಭಿಸುತ್ತದೆ. ಈ ಪೂರೈಸುವಿಕೆಯು ಪ್ರಜ್ಞಾಸ್ಥಿತಿಯ ಒಂದು ಸುಂದರಗುಣವಾಗಿದೆ. ಇದು ವ್ಯಕ್ತಿಗೆ ಅನುಗ್ರಹ ವಚನ ನೀಡುವ ಕ್ಷಮತೆಯನ್ನು ನೀಡಿ ಮತ್ತು ಗುಣಮುಕ್ತತೆಯ ಒಂದು ಸಾಧನವಾಗಿದೆ.
ಅನುಗ್ರಹ ನೀಡುವ ಉಪಸ್ಥಿತಿಯು ಕಾಳಜಿವಹಿಸುವ, ಹಂಚಿಕೊಳ್ಳುವ ಸೂಕ್ಷ್ಮಮತಿಯ ಕುರುಹು ಆಗಿದೆ. ಅಲ್ಲದೇ ಸಹಾಯ ಬಯಸಿದವರಿಗೆ, ಸೇವೆ ಒದಗಿಸಿಕೊಡುವ, ಶಾಂತಿ ಸಮರಸತೆಯನ್ನು ಹರಡುವ ಸ್ವರೂಪದವರಾಗಿರುತ್ತಾರೆ. ನೀವು ನೀಡುವ ಅನುಗ್ರಹ ಒಬ್ಬ ವ್ಯಕ್ತಿಯ ಜೀವನವನ್ನೇ ಪರಿವರ್ತಿಸಬಹುದಾಗಿದೆ.
ಕೃತಜ್ಞತೆಯಲ್ಲಿ ಅರಳುವಿಕೆ
ಆಧ್ಯಾತ್ಮಿಕ ಹಾದಿಯಲ್ಲಿ ಬಹಳ ಪರಿಶುದ್ಧವಾದ ಮತ್ತು ಶುಚಿತ್ವವಿರುವ ವಿಕಸಿಕ ಪ್ರಜ್ಞಾ ಸ್ಥಿತಿಯ ಪ್ರಕಟರೂಪವೇ ಕೃತಜ್ಞತೆ. ಅನಾದಿಕಾಲದಿಂದಲೂ ಪ್ರಶಸ್ತವಾದ (ಶ್ರೇಷ್ಠ) ವಿವೇಕವನ್ನು ಸಜೀವವಾಗಿಟ್ಟರುವ ನಮ್ಮ ಸದ್ಗುರುಗಳ ದೈವಾಂಶ ಸಂಪ್ರದಾಯಗಳಿಗೆ, ಗುರುಪೂಜೆಯು ಒಂದು ಕೃತಜ್ಞತೆಯ ಅಭಿವ್ಯಕ್ತಿ.
ಸಾಗರದೊಂದಿಗೆ, ಒಂದು ಹನಿಯು ಸಮನ್ವಯಗೊಂಡ ಭಾವನೆ ಬಂದಾಗ ಅದು ಸಾಗರದ ಶಕ್ತಿಯನ್ನೇ ಅನುಭವಿಸುತ್ತದೆ. ಅದೇ ರೀತಿಯಲ್ಲಿ, ನಾವು ಸದ್ಗುರುಗಳ ಸಂಸ್ಕೃತಿಯ ಪ್ರಾಕಾರಗಳಿಗೆ ಬಾಂಧವ್ಯವನ್ನು ಬೆಳೆಸಿಕೊಂಡಾಗ, ಅದು ಅನoತ ಶಕ್ತಿಯ ಮೂಲಾಧಾರವಾಗುತ್ತದೆ.