ಜೀವನ ಕಲಾ ಕೇಂದ್ರವು ಆಧ್ಯಾತ್ಮಿಕತೆಯಲ್ಲಿ ತನ್ನ ಬೇರುಗಳನ್ನು ಹೊಂದಿ, ವಿಶ್ವದಾದ್ಯಂತ ಸಾವಿರಾರು ಜನರಿಗೆ ನಮ್ಮ ಗ್ರಹದ ಬಗ್ಗೆ ಗೌರವ ಹೆಚ್ಛುವಂತೆ ಪೋಷಿಸಿದೆ. ಈ ಭೂಮಿಯು ಬಂಡೆ, ಮರುಳು ಮತ್ತು ನೀರಿನಿಂದ ಮಾಡಲ್ಪಟ್ಟಿದ್ದರೂ ಸಹ ಆಧ್ಯಾತ್ಮಿಕತೆಯು ಇದನ್ನು ನಮ್ಮ ಕಾಳಜಿ ಕಳಕಳಿಗೆ ಸ್ಪಂದಿಸಿ, ಕಂಪಿಸುವ ಸಜೀವ ಗೃಹವೆಂದು ತಿಳಿದುಕೊಳ್ಳಲು ಸಹಾಯ ಮಾಡಿದೆ
ಶ್ರೀ ಶ್ರೀ ರವಿಶಂಕರ್ ರವರ ದೃಷ್ಟಿಯಿಂದ ಸ್ಪೂರ್ತಿಗೊಂಡು, ಸ್ವಯಂ ಸೇವಕರು ಒಗ್ಗಟ್ಟಿನಿಂದ ತಂಡ ತಂಡವಾಗಿ ಹೆಣಿದುಕೊಂಡು, ಹಲವಾರು ಪರಿಸರ ಸಂರಕ್ಷಣಿಯ ಯೋಜನೆಗಳನ್ನು ಪ್ರಾರಂಭಿಸಿ, ವಿಶ್ವದಾದ್ಯಂತ ಮುನ್ನಡೆಯುತ್ತಿದ್ದಾರೆ. ಮಿಷನ್ ಗ್ರೀನ್ ಅರ್ಥ್, ಯೋಜನೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ವೃಕ್ಷಾರೋಪಣಿ, ಕಲುಷಿತ ನದಿಗಳ ಸ್ವಚ್ಛತೆ, ನೀರಿನ ಸಂರಕ್ಷಣಿ ಮತ್ತು ಪುನರ್ಯೌವನಗೊಳಿಸುವಿಕೆ, ಸಾವಯವ ಕೃಷಿಯಿಂದ ಬಡ ರೈತರಿಗೆ ಶೂನ್ಯ ವೆಚ್ಚದ ರಾಸಾಯನಿಕ ರಹಿತ ಕೃಷಿಯನ್ನು ಕಲಿಸಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ
ಜೀವನ ಕಲಾ ಕೇಂದ್ರ ಪ್ರತಿಷ್ಠಾನವು, ಪ್ರಕೃತಿಯನ್ನು ಭವಿಷ್ಯದಲ್ಲಿ ಸಂರಕ್ಷಿಸಲು ಮತ್ತು ಪರಿಪಾಲನೆ ಮಾಡಲು, ಬಹಳ ಸಣ್ಣ ಪ್ರಾಯದಲ್ಲೇ ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ, ಮೌಲ್ಯಗಳನ್ನು ಎಳೆಯ ಮನಸ್ಸುಗಳಲ್ಲಿ ಅಳವಡಿಸುವುದು ಅನಿವಾರ್ಯವೆಂದು ಗುರುತಿಸಿದೆ. ಸಣ್ಣ ಪ್ರಾಯದ ಮಕ್ಕಳಿಗೆ ಹಾಗೂ ಯುವ ಜನರಿಗೆ ಇದರ ಅರಿವು ಮೂಡಿಸಲು, "ಹಳೇ ಬೇರು ಹೊಸ ಚಿಗುರು" ಎಂಬ ಕಾರ್ಯಕ್ರಮವನ್ನು ಈ ದೀರ್ಘಕಾಲದ ಕಾರ್ಯಕ್ರಮದಲ್ಲಿ ಪ್ರಮುಖ ಆವಿಭಾಜ್ಯ ಅಂಗವನ್ನಾಗಿ ಮಾಡಲಾಗಿದೆ.