ಧ್ಯಾನದಿಂದ ವ್ಯಕ್ತಿತ್ವ ಹೇಗೆ ವೃದ್ಧಿಸಿಕೊಳ್ಳುವುದು ?

ಇಲಿಯು ಸುತ್ತುವ ಪರಿಣತಿಯನ್ನು ಕಲಿತುರುತ್ತದೆ ಮತ್ತೆ ಎದ್ದು ಬಿದ್ದು ಆ  ಸುತ್ತುವ ಚಕ್ರದ ಮೇಲೆ ವಿಶ್ರಾಮವಿಲ್ಲದೆ ಸಮತೋಲನದಲ್ಲಿರಲು ಓಡುತ್ತಾ ಇರುತ್ತದೆ ಆದರೆ ಇದ್ದಲ್ಲೆ ಇರುತ್ತದೆ.  ನಮ್ಮ ಜೀವನವು ಹಾಗೆ ಅನ್ನಿಸ್ಸುತ್ತಾ ?  ಆ  ನಿರಂತರ ಚಕ್ರದಲ್ಲಿ ಸುತ್ತುವ ಪ್ರವೃತ್ತಿಯಿಂದ ಬಿಡುಗಡೆ ಆಗಿ ನಮ್ಮದೆ ರೀತಿಯಲ್ಲಿ ಜೀವನ ಸಾಗಿಸಲು ಕಾಲ ಮಿಂಚಿಲ್ಲ ಅಲ್ಲವೆ ? ಈ ಎರಡು ಜಿವನದ ಮಧ್ಯೆ ಸೇತು ನೀವೆ ಕಟ್ಟಲು ಸಾಧ್ಯ. ನಮ್ಮ ವ್ಯಕ್ತಿತ್ವ, ನಾವು ನೊಡಲು ಹೇಗೆ ಇದ್ದೀವಿ ಅನ್ನುವುದಕ್ಕಿಂತ ನಾವು ಯಾರು ಎಂಬ ಅಭಿವ್ಯಕ್ತಿಸುವ ಪ್ರವೃತ್ತಿ ಪ್ರಾಮುಖ್ಯತೆ ವಹಿಸಿತ್ತದೆ.  ನಿಮ್ಮ ಜೀವನದಲ್ಲಿ ಪರಿವರ್ತನೆ ಕಾಣಲು ನಿಮ್ಮದೆ ಆದ ಸ್ವಂತಿಕೆ ಮತ್ತು ಆಯ್ಕೆಯ ಜವಾಬ್ದಾರಿ ಮುಖ್ಯ  ಎನ್ನಿಸುವುದಿಲ್ಲವೆ ? ಹೌದು ಎನ್ನುವುದಾದರೆ, ಧ್ಯಾನವು ನಿಮ್ಮ ಮಾತುಗಳಲ್ಲಿ ಆ ಶಕ್ತಿಯನ್ನು ತುಂಬಬಹುದು.

ಧ್ಯಾನವು ನಿಮ್ಮ ವ್ಯಕ್ತಿತ್ವವನ್ನು ರೂಪಿಸಲು ಹೇಗೆ ಪರಿಣಾಮ ಮಾಡುತ್ತದೆಂದು ತಿಳಿಯುವುದೇ ಸ್ವಾರಸ್ಯವಾಗಿದೆ.   ಧ್ಯಾನ ಅಂದರೆ, ಒಂದು ಬಲ್ಬ್ ಗೆ ವಿದ್ಯುತ್ ಶಕ್ತಿ ಸರಬರಾಜು ಮಾಡಿದಂತೆ.  ಧ್ಯಾನವು ನಮ್ಮ ಸುಪ್ತಚೇತನದಲ್ಲಿ ಅಡಗಿರುವ ಅನಂತ ಶಕ್ತಿಯೊಡನೆ ಸಂಪರ್ಕ ಕಲ್ಪಿಸುತ್ತದೆ.  ನಾವು ಈ ಶಕ್ತಿಯ ಸಂಪರ್ಕದಲ್ಲಿದ್ದಾಗ, ನಮ್ಮ ತನು, ಮನ ಎಲ್ಲವು ತೆಜಸ್ಸಿನಿಂದ ತುಂಬಿ ನಮ್ಮ ಆಕರ್ಷಕ ವ್ಯಕ್ತಿತ್ವವಾಗಿ ಕಾಂತಿ ನಮ್ಮಿಂದ ಹೊಮ್ಮುತ್ತದೆ - ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಕೂಡ.  ಧ್ಯಾನವು ನಮ್ಮ ಈ ಎಲ್ಲ ಸ್ಥರಗಳನ್ನು ಹೇಗೆ ತೀಕ್ಷಣಗೊಳಿಸಿತ್ತದೆ ಎಂಬುದನ್ನು ಈ ಲೇಖನ ನಿಮಗಾಗಿ ವಿವರಿಸುತ್ತದೆ

#1 ಆತ್ಮವಿಶ್ವಾಸ

ನಮ್ಮಲ್ಲಿ ಆತ್ಮವಿಶ್ವಾಸ ಉಂಟಾಗಲು, ಮೊದಲು ನಮ್ಮನ್ನು ಯಾವುದು ಯಾವುದು ತಡೆಹಿಡಿದು ನಿಲ್ಲಿಸುತ್ತಿದೆ ಎಂಬುದು ತಿಳಿದುಕೊಳ್ಳಬೇಕು.  ಸೋಲುಗಳು  ? ಕೈಬಿಟ್ಟುಹೋದ ಅವಕಾಶ? ಜನರ ನಿರೀಕ್ಷೇಗೆ ತಕ್ಕಾಗಿ ಸ್ಪಂದಿಸಲಾಗದಂತಹ ಸ್ಥಿತಿ ? ಕೀಳಿರಿಮೆ ಅಥವ ಬೆಲೆಯಿಲ್ಲದಂತಹ ಭಾವ ?  ಈ ಎಲ್ಲಾ ಕ್ಷಣಗಳೇ ತಡೆಯಲಾಗದಂತಹ ಪರಿಸ್ಥಿತಿ ತರಬಹುದು.  ಆದರೆ ಗಮನಿಸಿದ್ದೀರ, ಆ ಕ್ಷಣಗಳು ನಮ್ಮ ಜೀವನದಲ್ಲಿ ಬದಲಾವಣೆ ಬಂದು ಆ ಪರಿಸ್ಥಿತಿಯೇ ಅಸ್ತಿತ್ವದಲ್ಲಿಲ್ಲ. ನಾವು ಅದನ್ನು ಬಡದೆ ಹಿಡಿದುಕೊಂಡರೆ, ಕಸದ ಬುಟ್ಟಿ ಬಿಡದೆ ಹಿಡಿದುಕೊಂಡಂತೆ ಅದು ನಮ್ಮ ಮನಸ್ಸನ್ನು ಕ್ಷೊಭೆಗಳಿಸಿ ವಿಷಪೂರಿತಗೊಳಿಸುತ್ತದೆ.  ನೀವು ಧ್ಯಾನ ಮಾಡಿದಾಗ, ಆವಾಗ ಮನಸ್ಸು ನೋವಿನ ಅನುಭವವನ್ನು ಕಳಚಲು ಸುಲಭವಾಗುತ್ತದೆ.  ಧ್ಯಾನವು ನಿಮ್ಮನ್ನು ನೂತನ ವ್ಯಕ್ತಿಯನ್ನಾಗಿ ಮಾಡುತ್ತದೆ, ಸಹಜ ಸಮಾಧಿ ಧ್ಯಾನದ ಶಿಕ್ಷಕಿ ಪ್ರಿಯಾ ರಾವ್ ಹೇಳುತ್ತಾರೆ "ಧ್ಯಾನದಿಂದಾಗಿ ನೀವು ವರ್ತಮಾನದ ಕ್ಷಣದಲ್ಲಿ ಜೀವಿಸಲು ಶುರುಮಾಡುತ್ತೀರ.  ಇದು ವಿವಿಧ ತರಹ ಸಾಧ್ಯತೆಗಳ ದ್ವಾರ ತೆರೆಯುತ್ತದೆ.  ನೀವು ಎಷ್ಟು ಪ್ರಬಲರು ಎಂದು ಅನುಭವ ರೂಪಕ್ಕೆ ಬರುತ್ತದೆ ಮತ್ತು ನಿಸ್ಸಂಶಯವಾಗಿ, ನೀವು ಆತ್ಮವಿಶ್ವಾಸದಲ್ಲಿರುತ್ತೀರ.  ಧ್ಯಾನವು ನಿಮ್ಮಲ್ಲಿ  ಆತ್ಮವಿಶ್ವಾಸ ಮತ್ತು ಧೈರ್ಯಶಾಲಿಯ ಅನುಭವದ ಪ್ರಬುದ್ಧತೆ ತರುತ್ತದೆ.

 

#2 ಸಕಾರತ್ಮಕ ಮನೋಭಾವ

ನೀವು ಗಮನಿಸಿದ್ದೀರ, ಸಂದೇಹ ಹೇಗೆ ನಕಾರತ್ಮಕತೆ ತರುತ್ತದೆಂದು ?  ನಿಮ್ಮ ಕೆಲಸ ಅಥವ ಸಾಮರ್ಥ್ಯದಲ್ಲಿ ಸಂದೇಹ ಬಂದಾಗ ನಿಮಗೆ ಆವಾಗ ನಿಷ್ಪ್ರಯೋಜಕ ಎಂಬ ಭಾವಬರುತ್ತದೆ. ಈ ವರ್ತುಲದಿಂದ ಹೊರಗೆ ಬರಬೇಕಾದರೆ ಧ್ಯಾನವು ಒಂದು ಮಾರ್ಗ.  ಧ್ಯಾನ ಶಿಕ್ಷಕ ಪರಿಣಿತರಾದ ಪ್ರಿಯಾ ರಾವ್ ಹೇಳುತ್ತಾರೆ "ಧ್ಯಾನವು ನಿಮ್ಮಲ್ಲಿ ಚೈತನ್ಯ ಶಕ್ತಿಯನ್ನು ತುಂಬುತ್ತದೆ, ಮತ್ತೆ ಚೈತನ್ಯಪೂರಿತ ಸ್ಥಿತಿಯೇ ಸಕಾರಾತ್ಮಕ ಲಕ್ಷಣ.  ನೀವು ಸಕಾರತ್ಮಕವಾಗಿದ್ದಾಗ ಸಂದೇಹ ಹಾಗು ನಕಾರತ್ಮಕ ಯೋಚನೆಗಳು ಹತ್ತಿರ ಕೂಡ ಸುಳಿಯಲಾರದು".  ಇದು ನೀವು ಜೀವನವನ್ನು ನೋಡುವ ಧಾಟಿಯೇ ಮಾರ್ಪಾಡಿಸುತ್ತದೆ, ಕಷ್ಟಕರ  ಸಂದರ್ಭದಲ್ಲೂ ಅವಕಾಶಗಳನ್ನು ಸೃಷ್ಟಿಸುತ್ತದೆ. ನಮ್ಮ ಸೂಕ್ಷ್ಮ ಸ್ಥರದಲ್ಲಿ, ವ್ಯಕ್ತಿ ಹೇಗೋ ಹಾಗೆ ಅದರಂತೆ ಪರ್ಸ್ಥಿತಿಗಳನ್ನು ಆಕರ್ಷಿಸುತ್ತದೆ, ಆದ್ದರಿಂದ ನೀವು ಸಕಾರತ್ಮಕವಾಗಿದ್ದಾಗ, ಅಪ್ರಯತ್ನವಾಗಿಯೇ, ಸಕಾರತ್ಮಕ ಸಂದರ್ಭಗಳನ್ನು ಆಕರ್ಷಿಸುತ್ತದೆ.   ಇದು ನಿಮ್ಮ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿಸುತ್ತದೆ ಮತ್ತೆ ನಿಮ್ಮ ದಾರಿಯಲ್ಲಿ ಅವಕಾಶಗಳನ್ನು ಆಕರ್ಷಿಸುತ್ತದೆ.  ನಿಮ್ಮ ಜೀವನವನ್ನು ಸಕಾರತ್ಮಕವಾಗಿಸಲು ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

 

#3 ನಿಮ್ಮ ಜೀವನದ ಗುರಿಯನ್ನು ಕಂಡುಕೊಳ್ಳುವುದು

ಯಾವುದೋ ಕಾಟಾಚಾರಕ್ಕೆ ಮಾಡುವ ಕೆಲಸಕ್ಕಿಂತ  ನಿಮಗಿಷ್ಟವಾದ ಯಾವುದಾದರು ಕೆಲಸ ಮಾಡಿದಾಗ ನಿಮ್ಮಗೆ ಸದ್ಭಾವ ಮೂಡಿದ್ದು ಗಮನಿಸಿದ್ದೀರ ? ವೈಯಕ್ತಿಕ ಶ್ರೇಷ್ಟತೆಯ ಸಾಧನೆಯ ಅಂತರರಾಷ್ಟ್ರೀಯ ಶಿಕ್ಷಕರಾದ ರಾಧಿಕಾ ಶ್ರೀವಾಸ್ತವ ಅವರ ಪ್ರಕಾರ ಜೀವನದಲ್ಲಿ ಬದ್ಧತೆಗಳ ಅದರದೇ ಸ್ಥಾನವಿದೆ; ಆದರೆ ನಾವು ಯಾರು ಮತ್ತು ನಮಗೆ ಜೀವನದಲ್ಲಿ ಏನು ಬೇಕು, ಇವು ನಮ್ಮ ಮಿತಿಗಳ ಬಗ್ಗೆ ಅರಿವು ಮೂಡಿಸಿ, ಶ್ರೇಷ್ಟತೆಯ ಸಾಧನೆಯತ್ತ ಕೊಂಡೊಯ್ಯುತ್ತದೆ.  " ಧ್ಯಾನದಲ್ಲಿ, ನಾವು ನಮ್ಮ ಅಂತರಾಳದ ಆತ್ಮದೊಂದಿಗೆ  ಸಂಪರ್ಕದಲ್ಲಿರುತ್ತೇವೆ.  ನಿಮ್ಮ ಜೀವನದಲ್ಲಿ ಸ್ವಯಮ್ ಪ್ರೇರೆಪಿಸುವ ಗುರಿಯನ್ನು ಕಂಡುಕೊಳ್ಳುವಿರಿ, ಯಾವುದು ನಿಮ್ಮ ನಿರಸ ದೈನಿಕ ಜೀವನದಲ್ಲಿ ಉತ್ಸವ, ಉಲ್ಲಾಸ ಹಾಗು ಉತ್ಸಾಹದ ಚಿಲುಮೆ ತರುತ್ತದೋ, ಅದನ್ನು ಕಂಡುಕೊಳ್ಳುವಿರಿ", ಪ್ರಿಯಾ ರಾವ್ ಹೇಳುತ್ತಾರೆ "ಒಂದು ವಿಧದಲ್ಲಿ, ಧ್ಯಾನವು ನಿಮ್ಮ ಜೀವನ ತುಂಬುತ್ತದೆ, ಏಕೆಂದರೆ, ಅದರಿಂದ ನಿಮ್ಮ ಎದೆಯಂತರಾಳದಲ್ಲಿರುವ ಕರೆಗೆ ಓಗುಡುತ್ತೀರಿ.  ನೀವ ಆನಂದದಿಂದಿದ್ದಾಗ, ಯಾಂತ್ರಿಕವಾಗಿರುವ ಕೆಲಸಗಳನ್ನೂ ಶೀಘ್ರ ನಿಭಾಯಿಸಿ, ನಿಮ್ಮ ಜೀವನಕ್ಕೆ ಅರ್ಥ ಕೊಡುವ ಪಥಕ್ಕೆ ಸಮಯವನ್ನೂ ಮಾಡಿಕೊಳ್ಳುತ್ತೀರ.  ನಿಮ್ಮ ಜೀವನದಲ್ಲಿ ಪರಿಪೂರ್ಣತೆ ಬಂದಾಗ, ಅದು ನಿಮ್ಮ ಮುಖದಲ್ಲಿ, ನಿಮ್ಮ ವ್ಯಕ್ತಿತ್ವದಲ್ಲಿ ಎದ್ದು ತೋರುತ್ತದೆ..

#4 ಕರುಣೆ

ನಿಮ್ಮ ಕಷ್ಟಕರ ಸನ್ನಿವೇಶದಲ್ಲಿ, ಯಾರಿಂದಲೋ ಅನಿರೀಕ್ಷಿತ ಸಹಾಯ ಸಿಕ್ಕಾಗ, ಅದು ನಿಮಗೆ ಒಳ್ಳೆಯ ಭಾವ ಮೂಡಿಸುವುದಿಲ್ಲವೆ?  ನೀವು ಸಂತೋಷದಿಂದಿದ್ದಾಗ, ನಿಮ್ಮಲ್ಲಿ, ಏನೋ ಒಂದು ವಿಕಾಸವಾಗುತ್ತದೆ.  ಇದು ಕರುಣೆಯ ಒಂದು ಆಯಾಮ - ನಮ್ಮ ಆಸುಪಾಸಿನಲ್ಲಿರುವ ಜನಗಳಲ್ಲಿ ಕರುಣಾಭಾವದಿಂದಿದ್ದಾಗ.    ಈ ಕರುಣೆಯ ಭಾವದ ಬೀಜ ಮೊಳಕೆಯಾಗಲು ಧ್ಯಾನವು ಸಹಾಯ ಮಾಡುತ್ತದೆ.  ರಾಧಿಕಾ ಶ್ರೀವಾಸ್ತವ ಹೇಳುತ್ತಾರೆ "ಎಲ್ಲರಲ್ಲೂ ನಿಮ್ಮನ್ನೂ ಸೇರಿಸಿ ಎನೋ ಒಂದು  ಅಪೂರ್ಣತೆ ಇದ್ದೇ ಇರುತ್ತದೆ ಎಂದು ಒಪ್ಪಿಕೊಂಡು ಸ್ವೀಕರಿಸಿದಾಗ ನಮ್ಮಲ್ಲಿ ನಾವಿ ಸ್ವಸ್ಥ, ಪ್ರೆಮದಿಂದಿರಲು ಸಾಧ್ಯ".  ಅಳಿಸಲಾಗದ ಉತ್ಸಾಹದ ಮನೊಭಾವ ನಿಮ್ಮ ಜೀವನದಲ್ಲಿ ಇವತ್ತಲ್ಲ ನಾಳೆ ಸಫಲತೆ ಕಟ್ಟಿಟ್ಟ ಬುತ್ತಿ ಮತ್ತು ಇದು ನಮ್ಮ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿಸುತ್ತದೆ.  ಯಾವ ವ್ಯಕ್ತಿ ತನ್ನೊಳಗೆ ಹಾಗು ಇತರರೊಂದಿಗೆ ಆರಾಮ ತರುವವರ ಒಡನಾಟವೇ ಆಹ್ಲಾದಕರ.  ನೀವು ಹೇಗೆ ಕರುಣಾಪೂರಿತವಾಗಿರಬಹುದು  - ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ

ಇನ್ನೂ ಹೆಚ್ಚಿನ ಮಾಹಿತಿ ಈ ಲೇಖನದ ಮುಂದಿನ ಭಾಗದಲ್ಲಿ ….