“ಈ ಜಗತ್ತಿನ ಇತಿಹಸದಲ್ಲಿ ಯಾರೂ ನಿಮ್ಮಂತೆ ಇರಲಿಲ್ಲ. ಮತ್ತು ಮುಂದೆ ಬರುವ ಅನಂತ ಕಾಲದಲ್ಲೂ ಯಾರು ನಿಮ್ಮಂತೆ ಇರಲು ಸಾಧ್ಯವಿಲ್ಲ. ನೀವೇ ಮೂಲಭೂತರು . ನೀವು ಅಪರೂಪ . ನೀವು ವಿಶಿಷ್ಟವಾದವರು. ನಿಮ್ಮ ಅಪೂರ್ವು ವ್ಸಕ್ತಿತ್ವವನ್ನು ಆಚರಿಸಿ”.
- ಶ್ರೀ ಶ್ರೀ ರವಿಶಂಕರ್
ನಿಮ್ಮ ಇರುವಿಕೆಯ ಮಹತ್ವವನ್ನು ಬಹರಂಗ ಪಡಿಸಿ
ನೀವು ಗಮನಿಸಿದ್ದೀರಾ ? ಯಾವುದಾದರೂ ಒಂದು ಕೋಣೆಗೆ ಮಗು ಪ್ರವೇಶಿದರೆ ಸಾಕು, ಎಲ್ಲರ ಗಮನವೂ ಅದರತ್ತ ಸೆಳೆಯುತ್ತದೆ. ಮಗುವಿನ ಯಾವುದೇ ಪ್ರಯತ್ನವಿಲ್ಲದೆ ಕೇವಲ ಅದರ ಇರುವಿಕೆಯಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಇದು ಆತ್ಯಂತ ಸ್ವಾಭಾವಿಕವಾಗಿ ನಡೆಯುತ್ತದೆ. ನಮ್ಮ ಮಾತುಗಳಿಗಿಂತ ಹೆಚ್ಚಾಗಿ ನಮ್ಮ ಇರುವಿಕೆಯು ಎಲ್ಲವನ್ನು ತೋರ್ಪಡುತ್ತದೆ. ಆದರೆ ನಾವು ದೊಡ್ಡವರಾದಂತೆ ಈ ಅದ್ಬುತ ಅಂಶವನ್ನು ಮರೆತು ಬಿಡುತ್ತೇವೆ. ಹಿಂದಿನ ನೆನಪುಗಳು ಬುದ್ಧಿಯನ್ನು ಆವರಿಸಿ, ನಮ್ಮ ಇರುವಿಕೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ.
ಹಾಗಾದರೆ ನಮ್ಮ ಜೀವನದಲ್ಲಿ ಈ ಮಗುವಿನಂತಹ ಮುಗ್ಧ ಸ್ವಾಭಾವ, ಉಲ್ಲಾಸ, ಸ್ನೆಹಭಾವವನ್ನು ಮತ್ತೆ ತರುವುದು ಹೇಗೆ ? ‘ಜೀವನ ಕಲಾ ಕೇಂದ್ರದ ಅತ್ಯಂತ ಪ್ರಭಾವಶಾಲಿ ‘ ಸುದರ್ಶನ ಕ್ರಿಯೆ’ ಯಂತಹ ಉಸಿರಾಟದ ಕಲೆಯಿಂದ ಇದು ಸಾಧ್ಯವಾಗುತ್ತದೆ. ಈ ಉಸಿರಾಟದ ಕೌಶಲತೆಯು ನಮ್ಮ ದೇಹ, ಭುದ್ಧಿ, ಆತ್ಮ, ಹೀಗೆ ಭೇರೆ ಭೇರೆ ಮಟ್ಟಗಳಲ್ಲಿ ಸೇರಿಕೊಂಡಿರುವ ಒತ್ತಡ ಹಾಗೂ ಭೂತಕಲದ ಅನುಭವಗಳನ್ನು ತಗೆದುಹಾಕಿ , ನಮ್ಮ ಇರುವಿಕೆಯಲ್ಲಿರುವ ಮೋಹಕತೆಯನ್ನ ಸಜೀವಗೊಳಿಸುತ್ತದೆ.
ನೀವು ಎಷ್ಟು ಬೇಗ ಯಶಸ್ವಿಯಾಗಲು ಬಯಸುತ್ತೀರಾ ?
ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ಸನ್ನು ಕಾಣಲು ಭಯಸುತ್ತಾರೆ. ಆದರೆ ಕೇವಲ ಹಣಗಳಿಸುವುದು ಅಥವಾ ವೈಭದ ಜೀವನ ಬಾಳುವುದು ಯಶಸ್ವಿ ಜೀವನವೇ? ವ್ಯಕ್ತಿಯ ಬಳಿ ಬ್ಯಾಂಕ್ ನಲ್ಲಿ ಬೇಕಾದಷ್ಟು ಹಣವಿರಬಹುದು, ಆದರೆ ಅವನ ದೇಹ ವ್ಯಾಧಿಗ್ರಸ್ಥವಾದರೆ ಆ ವ್ಯಕ್ತಿಯವ ಸಂಪತ್ತನ್ನೂ ಅನುಭವಿಸಲಾರನು. ಸಾಕಷ್ಟು ಜನ ಹಣ ಸಂಪತ್ತುಗಳಿಸುವ ಅತುರತೆಯಲ್ಲಿ ಅರ್ಧ ಆರೋಗ್ಯವನ್ನು ಹಾಳು ಮಾಡಿಕೇಳ್ಳುತ್ತಾರೆ. ನಂತರ ಆ ಆರೋಗ್ಯವನ್ನು ಪುನ: ಪಡೆಯಲು ಅರ್ಧ ಸಂಪತ್ತನ್ನು ಕಳಿದುಕೊಳುತ್ತಾರೆ. ಇದು ನಿಜವಾದ ಯಶಸ್ಸೇ?
ಒಂದು ಕ್ಷಣ ಯೋಚಿಸಿ ಇನ್ನು ಮುಂದೆ ನಿಮ್ಮ ಯವುದೇ ಸಮಸ್ಯೆಯೂ ನಿಮಗೆ ಸಮಸ್ಯೆ ಎನಿಸುವುದಿಲ್ಲ. ಎಂತಹ ಸಮಸ್ಯೆಯನ್ನಾದರೂ ನೀವು ಮನ: ಪೂರ್ವಕವಾಗಿ ನಗುನಗುತ್ತಾ ಎದುರಿಸಲು ಸಶಕ್ತರಾಗುತ್ತೀರ. ಎಲ್ಲಾ ಸಮಸ್ಯೆಗಳನ್ನು ಒಂದು ಉತ್ತಮ ಅವಕಾಶವಾಗಿ ಪರಿವರ್ತಿಸಿಕೊಳ್ಳುತ್ತಿರ. ಇದೆಲ್ಲಾ ಒಬ್ಬ ಯಶಸ್ವಿ ವ್ಸಕ್ತಿಯ ಲಕ್ಷಣಗಳೆಂದು ನಿಮಗೆ ಅನಿಸುವುದಿಲ್ಲವೇ? ‘ಜೀವನ ಕಲಾ ಕೇಂದ್ರದ ಜೀವನ ಕೌಶಲಗಳು ನಿಮ್ಮನ್ನು ಹೀಗೆ ಪರಿವರ್ತಿಸುತ್ತದೆ.
ನಿಮ್ಮ ಜೀವನವನ್ನು ಯೇಗ, ಪ್ರಣಾಯಾಮ ಹಾಗೂ ಧ್ಯಾನದಿಂದ ಎಷ್ಟು ಬೇಗ ಶೋಧಿಸುವಿರೋ ಅಷ್ಟೇ ಬೇಗ ನಿಮ್ಮ ಜೀವನದ ಎಲ್ಲಿ ಸ್ಧರಗಳಲ್ಲು ಯಶಸ್ಸನ್ನು ಕಾಣುತ್ತೀರಿ.
ಯಾರಿಂದಲೂ ಅಲುಗಾಡಿಸಲಾರದ ಧೃಡ ವ್ಶಕ್ತಿತ್ವವನ್ನು ನಿಮ್ಮದಾಗಿಸಿಕೊಳ್ಳಿ
ಜ್ಞಾನ ಮತ್ತು ಸ್ವಸಹಾಯ ಪುಸ್ತಕಗಳು ಎಲ್ಲೆಡೆ ಸುಲಭವಾಗಿ ದೊರೆಯುತ್ತದೆ- ಆದರೆ ಒಬ್ಬ ವ್ಯಕ್ತಿಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಹಾಗೂ ಅವನ ಇರುವಿಕೆಯ ಅನುಭವವನ್ನು ಪುಸ್ತಕಗಳು ಕೊಡಲಾರವು. ನಮ್ಮ ಪುರಾತನ ಪದ್ಧತಿಗಳಾದ ಪ್ರಾಣಾಯಾಮ ಮತ್ತು ಧ್ಯಾನ ‘ಆರ್ಟ್ ಆಫ್ ಲಿವಿಂಗ್’ ನಲ್ಲಿ ಕಲಿಸಲಾಗುತ್ತದೆ. ಇದರಿಂದ ಒಬ್ಬ ವ್ಯಕ್ತಿಯ ಚೈತನ್ಯ, ಸೃಜನ ಶೀಲತೆ, ಹುಮ್ಮಸು, ಬುದ್ಧಿವಂತಿಕೆ ಹಾಗು ಉತ್ಸಾಹ ಉಧ್ದರವಾಗುತ್ತದೆ. ಅವನ ವ್ಯಕ್ತಿತ್ವವನ್ನು ಬಲಗೊಳಿಸುತ್ತದೆ.
ನಿಮ್ಮ ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಜೀವನದಲ್ಲ ನೀವು ಏನು ಬೇಕಾದರೂ ಸಾಧಿಸ ಬಲ್ಲಿರಿ. ಜಗತ್ತಿನ ಯಾವುದೇ ಶಕ್ತಿಯು ಅಲುಗಾಡಿಸಲಾಗದ ನಗೆಯೊoದಿಗೆ ಮುನ್ನಡೆಯುತ್ತಿರ. ಇದರಿಂದ ನಿಮ್ಮ ಸುತ್ತಲಿನ ವಾತಾವರಣದಲ್ಲೂ ಸಹ, ನೀವು ನಿಮ್ಮ ಪ್ರಭಾವ ಬೀರಿ ಇತರರಿಗೆ ಸ್ಪೂರ್ತಿದಾಯಕರಾಗುತ್ತೀರಿ.