ಕೊಲ್ಲಿ ದೇಶದ ಅಬುದಭಿಯಲ್ಲಿ ಸುಖದ ಜೀವನ ಸಾಗಿಸುತ್ತಿದ್ದ ನನಗೆ ಆಧ್ಯಾತ್ಮಿಕ ಪಿಪಾಸೆಯಂತೂ ಕಾಡುತ್ತಲೇ ಇತ್ತು. ಮೈಸೂರಿನಲ್ಲಿ
ಹುಟ್ಟಿ ಬೆಳೆದವಳಾದ ನಾನು ದೇವರು ಗುರುಗಳೆಂದರೆ ಅಪಾರ ಭಕ್ತಿ ಬೆಳೆಸಿಕೊಂಡವಳು. ಮಂತ್ರಾಲಯದ ರಾಘವೇಂದ್ರ ಸ್ವಾವಿಗಳು ನನ್ನ ಆರಾಧ್ಯ ದೈವ. ಯಜಮಾನರು ಅಬುದಭಿಯಲ್ಲಿ ಕೆಲಸ ತೆಗೆದುಕೊಂಡಾಗ ಅಲ್ಲಿನ ಬದುಕಿಗೆ. ಸುಲಭವಾಗಿ ಹೊಂದಿಕೊಂಡೆ. ಶಾಲೆಯಲ್ಲಿ ಶಿಕ್ಷಕಿಯ ಕೆಲಸ, ಹವ್ಯಾಸಕ್ಕೆ ಬರಹ ಹಾಗೂ ಹಲವಾರು ಸಾಂಸ್ಕೃತಿಕ ಹಾಗೂ ಸಮಾಜಿಕ ಸಂಘ ಸಂಸ್ಠೆಗಳಲ್ಲಿ ತೊಡಗಿಸಿಕಂಡು ದಿನ ಕಳೆಯುವುದೇ ತಿಳುಯುತ್ತಿರಲ್ಲಿಲ್ಲ. ಏನೂ ಕೊರತೆ ಇಲ್ಲ ಆದರೂ ಅಭಾವ!
೧೯೯೮ರ ಕೊನೆಯಲ್ಲಿ ನನಗೆ ವರದಾನವಾಗಿ ಸಿಕ್ಕಿದ್ದು ಜೀವನ ಕಲೆ ಶಿಬಿರ ೧೯೯೯ ಜನವರಿಯಿಂದ ನನಗೆ ಪುನರ್ಜನ್ಮವಾದ ಭಾವೆನೆ. ಉಸಿರಿರುವ ತನಕ ಸೇವೆಯಲ್ಲಿದ್ದು. ಈ ಜ್ಞಾನ, ಸತ್ಸಂಗದ ರುಚಿಯನ್ನು ಉಣಿಸಬೇಕು ಎನ್ನುವ ಉತ್ಸಾಹ ಆಕಾಂಕ್ಷೆಯಿಂದ ಮುಂದೆ ಹೊರೆಟೆ.ನನ್ನ ದೊಡ್ಡ ಸೌಭಾಗ್ಯ ಎಂದರೆ ನನ್ನ ಯಜಮಾನರು ನನ್ನ ಜೊತೆ ಶಿಬಿರ ಮಾಡಿ. ನನ್ನ ಜೊತೆ ಹೆಜ್ಜೆ ಹಾಕಲು ಉತ್ಸಾಹದಿಂದ ಮುಂದೆ ಬಂದುದ್ದು. ಹಾಗಿಲದ್ದಿದ್ದರೆ ಈ ಪಯಣ ಇಷ್ಟು ಆಹ್ಲಾದಾಯಕವಾಗಿ ಇರಲು ಸಾಧ್ಯ ಇರುತಿರಲಿಲ್ಲ. ಮಗಳು ಕೂಡಾ ಸೇವ ನಿರತಳು.
ಜೀವನ ಎಂದ ಮೇಲೆ ಎಡರು ತೊಡರುಗಳು ಸಾಮಾನ್ಯ, ಅಸಾಮಾನ್ಯ ಏನೆಂದರೆ ಬೆಟ್ಟದ ಹಾಗೆ ಬಂದ ಕಷ್ಟಗಳು ಮಂಜಿನ ಹಾಗೆ ಕರಗುವುದು. ಅದಮ್ಯ ಶ್ರದ್ಧೆ ಹಾಗೂ ನಂಬಿಕೆಯಿಂದ ಶರಾಣಾಗತರಾದಾಗ, ಆರ್ತನಾದ ಮಾಡಿದಾಗ 'ಓ' ಎನ್ನದಿರಲಾರರು ನಮ್ಮ ಕರುಣಾಮಯಿ ಗುರುಗಳು. ಗುರುಗಳು ಇಲ್ಲದ ನಾನು ಹೇಗೆ ಅಷ್ಟು ವರ್ಷಗಳು ಜೀವಿಸಿದೆ ಎಂದು ಅಗಾಧ ಪಡುತ್ತೇನೆ.ನನ್ನ ಜೀವನದಲ್ಲಿ ಪ್ರತ್ಯಕ್ಷವಾಗಿ ಬರುವ ಮೊದಲು ಕೂಡ ಪರೋಕ್ಷವಾಗಿ ನನ್ನ ಕಷ್ಟ ಕಾಲದಲ್ಲಿ ಕೈ ಹಿಡಿದು ನಡೆಸಿದ್ದಾರೆ ಎನ್ನುವ ನಂಬಿಕೆ ನನಗೆ.
ಗುರುಗಳ ಸಾನಿಧ್ಯದಲ್ಲಿ ಎಷ್ಟೋ ಚಮತ್ಕಾರಿ ಘಟನೆಗಳು ನಡೆದಿದೆ.ರಾಘವೇಂದ್ರ ಸ್ವಾಮಿಯನ್ನೇ ಆರಾಧಿಸಿಕಂಡು ಬಂದ ನನಗೆ ಈಗ ಗುರೂಜಿಯ ಕಡೆಗೆ ಸೆಳೆತ ಹೆಚ್ಚಾಯಿತಲ್ಲ ಎನ್ನುವ ಕಳವಳ ಕಾಡಿದಾಗ, ಒಮ್ಮೆ ಗುರೂಜೀಯವರು ಸತ್ಸಂಗದಲ್ಲಿ ಕೂತಾಗ ರಾಘವೇಂದ್ರ ಸ್ವಾಮಿ ಬೃಂದಾವನದಲ್ಲಿ ಕೂತ ಹಾಗೆ ಕಾಣಿಸಿದರು. ದಂಗಾಗಿಬಿಟ್ಟೆ ಒಂದೆ ಗುರು ತತ್ವ.
ಅಬೂಧಬಿಯ ಕೆಲಸದಿಂದ ನಿವೃತ್ತ ಹೊಂದಿ ಬೆಂಗಳೂರಿನಲ್ಲಿ ನೆಲೆಸಲು ೨೦೦೪ರಲ್ಲಿ ವಾಪಸ್ಸು ಬಂದೆವು, ೪ ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಪುನರ್ವಸತಿ ಕಾರ್ಯಕ್ರಮ ನಡೆಸಿದೆವು. ಆನಂತರ ಒಂದು ದಿನ ನಮ್ಮ ಯಜಮಾನರು "ನಾವು ಏಕೆ ಒಂದು ಶಾಲೆಯನ್ನು ಖರೀದಿಸಿ ಗುರೂಜೀಯವರ ಮಾನವೀಯ ಮೌಲ್ಯಗಳನ್ನೊಡಗೊಂಡ ಶಿಕ್ಷಣ ಪದ್ದತಿಯನ್ನು ತರಬಾರದು" ಎಂದರು. ಹಾ ಯೋಚಿಸೋಣ ಎಂದೆ. ಇದಾದ ಕೆಲವೇ ಕೆಲವು ದಿನಗಳಲ್ಲಿ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಿಂದ ಕರೆ ಬಂತು "ಗುರೂಜೀಯವರ, ಪದವಿ-ಪೂರ್ವ ಕಾಲೇಜನ್ನು ನೋಡಿಕೊಳ್ಳುತ್ತಿರಾ" ಎಂದು ಕೇಳಿದರು.
ಮೂರು ವರ್ಷಗಳ ಕಾಲ ಸತತವಾಗಿ ಶಿಕ್ಷಣ ಪದ್ಧತ್ತಿಯಲ್ಲಿ ಒಳ್ಳೆ ಬದಲಾವಣೆ ತರಲು ಶ್ರಮಿಸಿ ಎಲ್ಲಾ ವಿದ್ಯಾರ್ಥಿಗಳ, ತಂದೆ ತಾಯಿಯರ ಪ್ರೀತಿಗೆ ಪಾತ್ರರಾದೆವು.
ಅಲ್ಲಿಯ ಸೇವೆಯ ನಂತರ ಸ್ವಲ್ಪ ಬಿಡುವು. ಆಗ ನಮ್ಮ ಯಜಮಾನರು "ನಡೆ ಕರ್ನಾಟಕ ಸುತ್ತಿ ಬರೋಣ ಹೇಗಿದ್ದರೂ ಬೆಡುವಿದೆಯಲ್ಲಿ" ಎಂದರು. ನಾವು ಹೊರಗಿನ ದೇಶದಲ್ಲಿ ೨೪ ವರ್ಷಗಳ ಕಾಲ ಇದ್ದು ಪಾಶ್ಚಾತ್ಯ ದೇಶಗಳು, ಉತ್ತರ ಭಾರತ ಹೀಗೆಲ್ಲಾ ಪ್ರವಾಸ ಮಾಡಿದ್ದೆವು.ಆದರೆ ನಮ್ಮದೇ ಆದ ಕರ್ನಾಟ ನೋಡಿರಲ್ಲಿಲ್ಲ ನನಗಂತೂ ಊರು ದೇಶ ನೋಡುವುದೆಂದರೆ ಬಹಳ ಆಸೆ. "ಸರಿ" ಅಂದೆ. ಇನ್ನೊಂದು ವಿಸ್ಮಯ. ಸ್ವಲ್ಪ ದಿನದ ನಂತರ ಶ್ರೀ ದೇವಾಂಗ್ ರವರಿಂದ ಕರೆ ಬಂದಿತು. ಆಗ ಅವರು ಗುರುಗಳ ಆಪ್ತ ಕಾರ್ಯದರ್ಶಿ ವಿಭಾಗದಲ್ಲಿದ್ದರು. ಗುರುಜೀಯವರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದರು. ತಕ್ಷಣವೇ ನಾವು ಗಂಗಾ ಕುಟೀರಕ್ಕೆ ದಾವಿಸಿ ತಲುಪಿ ಗುರುಗಳ ಮುಂದೆ ಗಂಡಾಯ ನಮಃ ಎಂದು ಕೂತಿಬಿಟ್ಟೆವು. ಈಗ ಕೇಳಿ ಗುರುಗಳು ಹೇಳುತ್ತಾರೆ. "ನೀವಿಬ್ಬರೂ ಹೀಗೆ ಮಾಡಿ ಪೂರ್ತಿ ಕರ್ನಾಟಕ ಓಡಾಡಿ ಜಿಲ್ಲೆ ಜಿಲ್ಲೆಗೂ ಭೇಟಿ ಕೊಟ್ಟು. ಅಲ್ಲಿ ಜಿಲ್ಲಾ ಅಭಿವೃದ್ಧಿ ಸಮಿತಿಗಳನ್ನು ರಚಿಸಿ " ಎಂದು! ಮತ್ತೆ ದಂದಾಗಿಸುವ ಸರದಿ ನಮ್ಮದು. ಈ ಮೂರು ವರ್ಷಗಳಲ್ಲಿ ೩೦ ಜಿಲ್ಲೆಗಳಲ್ಲಿ ಹಲವಾರು ಬಾರಿ ಭೇಟಿ ನೀಡಿ, ಅಲ್ಲಿನ ಶಿಕ್ಷಕರು, ಸ್ವಯಂಸೇವಕರರೊಡಗೂಡಿ ಸಮಿತಿಗಳನ್ನು ರಚಿಸಿದೆವು. ೫೦೦ಕ್ಕೂ ಹೆಚ್ಚು ಮಂದಿ ನಮ್ಮ ಸಮಿತಿಯಲ್ಲಿ ಸೇವೆ ಸಲ್ಲಿಸಲು ಮುಂದಾಗಿ ಬಿಂದ್ದಿದ್ದಾರೆ. ಇನ್ನೂ ಬೆರೆ ಬೆರೆ ಹಂತದಲ್ಲಿ ಸಮಿತಿಯನ್ನು ರಚಿಸುವ ಕಾರ್ಯಕ್ರಮ ಜಾರಿಯಲ್ಲಿದೆ. ೪ ಚಕ್ರದ ವಾಹನದಲ್ಲಿ ೫೦,೦೦೦ ಕಿ.ಮಿ. ಮೀರಿ ಪ್ರಯಾಣ ಮಾಡಿದ್ದೇವೆ.ಹೊದೆಡೆ ಎಲ್ಲಾ ನಮ್ಮ ಶಿಕ್ಷಕರು ನಮಗೆ ತಮ್ಮ ಊರಿನ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿದ್ದಾರೆ.ತಮ್ಮ ಪ್ರಾಂತ್ಯದ ರುಚಿ ರುಚಿಯಾದ ಖಾದ್ಯಗಳ ಸವಿಯನ್ನು ಉಣಿಸಿದ್ದಾರೆ. ಪ್ರೀತಿ ಸುರಿಸಿದ್ದಾರೆ. ಇನ್ನೇನು ತಾನೆ ಬೇಕು? ಸೇವೆಯ ಮೂಲಕ ಪೂರ್ತಿ ಕರ್ನಾಟಕದಲ್ಲಿ ಪ್ರೀತಿ ಬಾಂಧವ್ಯ ಬೆಳೆದಿದೆ.ಜೀವನ ಕಲೆಯ ಎಲ್ಲಾ ಅಂಗಗಳ ವಿಸ್ತರಣಾ ಕಾರ್ಯಕ್ರಮ ಮಾಡಿ ಎಂದು ಆದೇಶಿಸಿ, ಆಶೀರ್ವಾದ ಮಾಡಿಡಾರೆ ಗುರುಗಳು. ಈಗಿನ ಗುರಿ ಕರ್ನಾಟದಲ್ಲಿ ಸರ್ವತೋನ್ಮುಖ ಬೆಳವಣಿಗೆ ಆಗುವ ಹಾಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು.ಜಿಲ್ಲೆಗಳಲ್ಲಿ ನಮ್ಮ ಶಿಕ್ಷಕರರು ಹಾಗೂ ಸಮಿತಿಯವರೊಡನೆ ಅಲ್ಲಿನ ಮುಖ್ಯಸ್ಥರೊಡನೆ ಕೈ ಜೋಡಿಸಿ ಗುರುಗಳ ಕನಸಿನಂತೆ ಒಂದು ಸ್ವಚ್ಛ ಸುಂದರ ಸುಭದ್ರ ಸುಶಿಕ್ಷಿತ ಕರ್ನಾಟಕವನ್ನು ಕಟ್ಟುವುದು. ನಾನು ಪ್ರಪಂಚವನ್ನು ನೋಡುವುದೇ ಗುರುಗಳ ದೃಷ್ಠಿಕೋನದಿಂದ
ಸಿರಿಗನ್ನಡಂ ಗೆಲ್ಗೆ!