ಸ್ಮಾರ್ಟ್ ವಿಲೇಜ್ ಯೋಜನೆಯ ಉದ್ಘಾಟನೆ

ಸ್ಮಾರ್ಟ ವಿಲೇಜ್ ಎಂದರೇ ಜಾತಿ ಧರ್ಮದಿಂದ ಮತ್ತು ದುಶ್ಚಟಗಳಿಂದ ಮುಕ್ತವಾಗಿರಬೇಕು, ನಿರುದ್ಯೋಗಿಗಳು ಇರಬಾರದು, ಎಲ್ಲರೂ ಅಕ್ಷರಸ್ಥರಾಗಿರಬೇಕು, ಯಾರು ಬಡತನರೇಖೆಗಿಂತ ಕೆಳಗೆ ಇರಬಾರದು ಮತ್ತು ತಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಆಧ್ಯಾತ್ಮಿಕ ಗುರುಗಳು ಮತ್ತು ಜೀವನ ಕಲಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.

ಇತ್ತಿಚ್ಚಿಗೆ ಚಿಕ್ಕಮಗಳೂರು ಜಿಲ್ಲೆಯ ಸಾದರಹಳ್ಳಿ ಗ್ರಾಮವನ್ನು “ಮಾದರಿ ಹಳ್ಳಿ” ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಸ್ಥರು ಆರ್ಥಿಕ ಕಾರಣಗಳಿಂದಾಗಿ ನಗರಗಳಿಗೆ ತೆರಳುತ್ತಿದ್ದಾರೆ. ನಮ್ಮ ಹಳ್ಳಿಗಳನ್ನು ಆದರ್ಶಮಯವಾಗಿ ಮಾಡಿ ಮತ್ತೆ ಜನರನ್ನು ಕರೆತರಬೇಕು. ಎಲ್ಲರೂ ನಮ್ಮ ಹಳ್ಳಿಗಾಗಿ ದುಡಿಯಬೇಕು ಎಂದು ಕಿವಿ ಮಾತು ಹೇಳಿದರು.

 ಈ ಹಳ್ಳಿಯನ್ನು ದತ್ತುವಾಗಿ ಪಡೆದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮೊದಲ ಮಾದರಿ ಹಳ್ಳೀಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಗ್ರಾಮದಲ್ಲಿ 200 ಮನೆಗಳಿದ್ದು 840 ಜನಸಂಖ್ಯೆ ಇದೆ. ಇದು 8 ತಿಂಗಳ ಯೋಜನೆಯಾಗಿದೆ. ಇದಕ್ಕೆ ತಗಲುವ ಅಂದಾಜು ವೇಚ್ಚ 15 ಕೋಟಿ ರೂಪಾಯಿ.  ಈ ಯೋಜನೆಯು ಜೀವನ ಕಲಾ ಸಂಸ್ಥೆ ಮತ್ತು ಚಿಕ್ಕಮಗಳೂರು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ನಡೆಯುತ್ತಿದೆ.

“ಮಾದರಿ ಹಳ್ಳಿ”ಯಲ್ಲಿ ಒಂದು ಯೋಗ ಕೇಂದ್ರ, ಆಯುರ್ವೇದ ಸಂಶೋಧನಾ ಕೇಂದ್ರ, ರೈತ ತರಬೇತಿ ಕೇಂದ್ರ, ಸಾವಯವ ಕೃಷಿಗೆ ಸೌಲಭ್ಯ, ಗಿಡಮೂಲಿಕೆಗಳ ತೋಟ, ಗ್ರೀನ್ ಹೌಸ್, ದೇಶೀಯ ಹಸುಗಳಿಗಾಗಿ ಗೋಶಾಲೆ, ಡೈರಿ ಸೇಂಟರ್, ಹೊರಾಗಂಣ ಸಭಾಂಗಣ, ಕೆರೆ, ಕೆರೆಯಲ್ಲಿ ಬೋಟಿಂಗ್, ಉಧ್ಯನವನ, ಕುಡಿಯಲು ಶುದ್ಧವಾದ ನೀರು (ಶುದ್ಧ ಗಂಗಾ), ಮಕ್ಕಳಿಗೆ ಪಾರ್ಕ್ ಮತ್ತು ಕುಶಲ ತರಬೇತಿ ಕೇಂದ್ರ, ಇರಲಿದೆ.

ನಮ್ಮ ದೇಶದಲ್ಲಿ ನಗರಗಳಲ್ಲಿ ಸಿಗುವ ಎಲ್ಲಾ ಸೌಕರ್ಯಗಳು ಹಳ್ಳಿಗಳಲ್ಲಿ ಸಿಗುವುದಿಲ್ಲ. ಇಲ್ಲಿಯ ಜನರು ಆರ್ಥಿಕವಾಗಿವು ಹಿಂದಿದ್ದಾರೆ. ಸಣ್ಣ ಕೈಗಾರಿಕೆ ಮಾಡುವುದರಿಂದ ಅವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಬಲರಾಗಲು ಸಾಧ್ಯ ಇದಕ್ಕೆಲ್ಲ ಜನರಿಗೆ ತರಬೇತಿ ಕೊಡಲಾಗುವುದು ಎಂದು ಯೋಜನಾಧ್ಯಕ್ಷ ನಾಗರಾಜ ಗಂಗೊಳ್ಳಿ ಹೇಳಿದರು.

ಶ್ರೀ ಶ್ರೀಯವರು “ಸುಮೇರು ತೀರ್ಥ” ಎಂಬ ಆಸ್ಮೊಸಿಸ್‍ನ ನೀರಿನ ಶುದ್ಧೀಕರಣದ ಘಟಕವನ್ನು ಉದ್ಘಾಟಿಸಿದರು. ಈ ಘಟಕವು ಲಕ್ಯ ಹೋಬಳಿಯ ಗ್ರಾಮಗಳ 10,000 ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ಒದಗಿಸಲಿದೆ. ಈ ವರ್ಷದ ಮೇ ತಿಂಗಳಲ್ಲಿ ಇಂತಹ ಒಂದು ಘಟಕವನ್ನು ಈಗಾಗಲೇ ಸ್ಥಾಪಿಸಲಾಗಿದೆ.

ಚಿಕ್ಕಮಗಳೂರಿನ ವೇದವತಿಯ ಎರಡನೆಯ ಹಂತದ ಯೋಜನೆಯಿಂದಾಗಿ ಬಡತನದ ರೇಖೆಯ ಕೆಳಗೆ ಇರುವ 60,000 ಜನರಿಗೆ 100 ದಿನಗಳ ಖಚಿತವಾದ ನೌಕರಿ ಸಿಗಲಿದೆ. 90 ಕಿಮಿಗಳ ವ್ಯಾಪ್ತಿಯಲ್ಲಿರುವ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ವೇದವತಿ ನದಿಯು ಹರಿಯುತ್ತದೆ. ಈ ನದಿಯ ಮೊದಲನೇ ಹಂತದಲ್ಲಿ ನೀರಿನ ಸಂಪನ್ಮೂಲವನ್ನು ಪುನಶ್ಚೇತಗೊಳಿಸಿ, ಸುತ್ತಮುತ್ತಲು ಹಸಿರಿನ ಸಿರಿಯನ್ನು ಹೆಚ್ಚಿಸಲಾದ್ದರಿಂದ 49 ಹಳ್ಳಿಗಳಲ್ಲಿ ದಿನನಿತ್ಯದ ಜೀವನದಲ್ಲಿ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ.

     ನದಿಯ ಪುನಶ್ಚೇತನ ಯೋಜನೆಗಳ ಬಗ್ಗೆ ಮಾತನಾಡುತ್ತಾ ಶ್ರೀ ಶ್ರೀಯವರು “ಮಳೆಯ ಆಭಾವದಿಂದ ನದಿಗಳು ಬತ್ತಿ ಹೋಗಿ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಡಿಮೆ ಮಳೆ ಬಂದರು ಕೂಡ ನೀರು  ಗ್ರಾಮಸ್ಥರಿಗೆ ಸಿಗುವ ರೀತಿಯಲ್ಲಿ ಎಲ್ಲಿ ತರಹದ ಕೆಲಸಗಳು ಮಾಡಲಾಗುತ್ತಿದ್ದೆ” ಎಂದು ಶ್ರೀ ಶ್ರೀ ರವರು ನದಿಗಳ ಪುನಶ್ಚೇತನದ ಬಗ್ಗೆ ನುಡಿದರು