ದೇವರನ್ನು ನಿರಾಕಾರವಾಗಿ ನೋಡುವುದೂ ಕಷ್ಟ, ಮತ್ತು ಸಾಕಾರವಾಗಿ ನೋಡುವುದೂ ಕಷ್ಟ, ದೇವರ ನಿರಾಕಾರತೆಯು ಭಾವಿಸಲು ಕಷ್ಟ ಸಾಧ್ಯ ಮತ್ತು ಸಾಕಾರವು ತುಂಬಾ ಮಿತಿಯುಳ್ಳದ್ದೆನಿಸುತ್ತದೆ. ಆದ್ದರಿಂದ ಕೆಲವು ಜನರು ಆಸ್ತಿಕರಾಗುವುದನ್ನು ಇಷ್ಟ ಪಡುತ್ತಾರೆ.
ನಾಸ್ತಿಕತೆಯು ಒಂದು ನೈಜತೆಯಲ್ಲ, ಇದು ಅನುಕೂಲಸಿಂಧುವಷ್ಟೆ. ಯಾವಾಗ ನಿಮಗೆ ಸತ್ಯದ ಪರಿಶೋಧನೆಗೆ ಮನಸಾಗುತ್ತದೆಯೋ ಆಗ ನೀವು ಯಾವುದನ್ನು ಇಲ್ಲವೆಂದು ಸ್ವೀಕರಿಸಿಲ್ಲವೋ ಅದನ್ನು ನಿರಾಕರಿಸುವಂತಿಲ್ಲ. ಒಬ್ಬ ನಾಸ್ತಿಕನು ದೇವರ ಇಲ್ಲದಿರುವಿಕೆಯನ್ನು ಪ್ರಮಾಣೀಕರಿಸದೆ ದೇವರನ್ನು ನಿರಾಕರಿಸುತ್ತಾನೆ. ದೇವರ ಇರುವಿಕೆಯನ್ನು ನಿರಾಕರಿಸಲು ನಿಮಗೆ ಅತಿಶಯವಾದ ಜ್ಞಾನವು ಬೇಕು, ಮತ್ತು ನಿಮಗೆ ಯಾವಾಗ ಅಪಾರವಾದ ಜ್ಞಾನವಿದೆಯೋ ಆಗ ದೇವರ ನಿರಾಕರಿಸಲಾರಿರಿ(ನಗು). ದೇವರು ಇಲ್ಲ ಎಂದು ಹೇಳಲು, ಒಬ್ಬ ವ್ಯಕ್ತಿಗೆ ಇಡೀ ವಿಶ್ವದ ಬಗ್ಗೆ ತಿಳುವಳಿಕೆ ಇರಬೇಕು. ಆದ್ದರಿಂದ ನೀವು ಪ್ರತಿಶತಃ 100 ರಷ್ಟು ನಾಸ್ತಿಕನಾಗಿರಲು ಸಾಧ್ಯವಿಲ್ಲ, ಮತ್ತು ನಾಸ್ತಿಕ ಎಂದರೆ ಕೇವಲ ನಿದ್ದೆ ಮಾಡುತ್ತಿರುವ ಒಬ್ಬ ಆಸ್ತಿಕ!
ಒಬ್ಬ ವ್ಯಕ್ತಿಯು, "ನಾನು ಏನನ್ನೂ ನಂಬುವುದೆಲ್ಲ" ಎಂದು ಹೇಳಿದಾಗ, ಕಡೆಯ ಪಕ್ಷ ಅವನು ತನ್ನನ್ನು ತಾನು ನಂಬುತ್ತಾನೆ - ಅಂದರೆ ತಾನು ಏನು ಎಂಬುದರ ಬಗ್ಗೆ ಅರಿವಿಲ್ಲದ ಅವನು ತನ್ನನ್ನು ತಾನು ನಂಬುತ್ತಾನೆ!
ಒಬ್ಬ ನಾಸ್ತಿಕನು ಎಂದಿಗೂ ಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ, ಏಕೆಂದರೆ ಪ್ರಾಮಾಣಿಕತೆಗೆ ಒಂದು ಆಳವಿರಬೇಕಾಗುತ್ತದೆ, ಮತ್ತು ಒಬ್ಬ ನಾಸ್ತಿಕನು ತನ್ನೊಳಗಿನ ಆಳಕ್ಕೆ ಇಳಿಯಲು ನಿರಾಕರಿಸುತ್ತಾನೆ. ಏಕೆಂದರೆ, ಆಳಕ್ಕೆ ಹೋದಷ್ಟೂ ಅವನಿಗೆ ಒಂದು ಪೂರ್ಣ ಖಾಲಿತನ(void)- ಎಲ್ಲ ಸಾಧ್ಯತೆಗಳು ಇರಬಹುದಾದ ಒಂದು ಜಾಗ - ಸಿಗುತ್ತದೆ. ಆಗ ಅವನು ತನಗೆ ಗೊತ್ತಿಲ್ಲದೆ ಅನೇಕ ರಹಸ್ಯಗಳ ನಿಗೂಢತಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆಗ ಅವನು ತನ್ನ ಅಜ್ನಾನವನ್ನು ಅಂಗೀಕರಿಸಬೇಕಾಗುತ್ತದೆ, ಆದರೆ ಅದಕ್ಕೆ ಅವನು ತಯಾರಿಲ್ಲ. ಏಕೆಂದರೆ ಅವನು ಪ್ರಾಮಾಣಿಕವಾಗಿ ತನ್ನ ಅಜ್ಞಾನವನ್ನು ಒಪ್ಪಿಕೊಂಡ ಕ್ಷಣ ತನ್ನ ನಾಸ್ತಿಕತೆಯ ಬಗ್ಗೆ ತೀವ್ರವಾಗಿ ಸಂಶಯಪಡಲು ಶುರುಮಾಡುತ್ತಾನೆ. ಒಬ್ಬ ಸಂಶಯ ರಹಿತ ನಾಸ್ತಿಕ ಸಿಗುವುದು ಅಸಾಧ್ಯವೇ ಸರಿ. ಆದ್ದರಿಂದ ನೀವು ಪ್ರಾಮಾಣಿಕ ಸಂಶಯರಹಿತ ನಾಸ್ತಿಕನಾಗಿರಲು ಅಸಾಧ್ಯ.
ಯಾವಾಗ ನಾಸ್ತಿಕನು ತನ್ನ ಅಜ್ಞಾನದ ಬಗ್ಗೆ ಅರಿವುಂಟಾಗುತ್ತದೆಯೋ ಆಗ ಅವನು ಏನು ಮಾಡುತ್ತಾನೆ? ಅವನು ಎಲ್ಲಿಗೆ ಹೋಗುತ್ತಾನೆ? ಒಬ್ಬ ಗುರುವಿನಲ್ಲಿಗೆ ಹೋಗುತ್ತಾನೆಯೇ? ಆಗ ಗುರುಗಳು ಏನು ಮಾಡುತ್ತಾರೆ?
(ಮುಂದಿನ ವಾರದ ಜ್ಞಾನಕ್ಕಾಗಿ ನಿರೀಕ್ಷಿಸಿ)
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Sciences)ಯಲ್ಲಿ ಪ್ರಮುಖ ವಿಜ್ಞಾನಿಗಳು ಮತ್ತು ಸಂಶೋಧಕರಿಂದ ಕಿಕ್ಕಿರಿದು ತುಂಬಿದ ಸಭಾಂಗಣದಲ್ಲಿ ಗುರುಗಳು ಉದ್ದೇಶಿಸಿ ಮಾತನಾಡಿದರು. "ವಿಜ್ಞಾನ ಮತ್ತು ಮಾನವೀಯತೆಯನ್ನು ಸೇರಿಸುವ ಸೇತುವೆ" ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದಕ್ಕಾಗಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಪ್ರಧಾನಮಂತ್ರಿಗಳ ಸಲಹೆಗಾರರಾಗಿದ್ದ ಅಬ್ದುಲ್ ಕಲಾಮ್ ರವರು ಗುರುದೇವರಿಗೆ ತಮ್ಮ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜೀವನ ಕಲಾ ಸಂಸ್ಥೆಯ ಭಾಗವಾಗಿ 109 ನೆಯ ರಾಷ್ತ್ರವಾಗಿ ಆಫ್ರಿಕಾದ ಮೊಜಾಂಬಿಕ್ ಸೇರ್ಪಡೆಯಾಯಿತು.