. ಕಾರ್ತಿಕ್ ಎಂಬ 30 ವರ್ಷದ ಯುವಕ ವ್ರುತ್ತಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಮತ್ತು ಪ್ರವ್ರುತ್ತಿಯಲ್ಲಿ ಛಾಯಗ್ರಾಹಕ. ಅವನು ವಾರದಲ್ಲಿ ಮಾಡುವ ಕೆಲಸದ ಸಮಯ ಸರಾಸರಿ 45 ರಿಂದ 50 ಘಂಟೆಗಳು. ಅವನು ಜೀವನದಲ್ಲಿ ತುಂಬಾ ಉತ್ಸಾಹಿಯಾಗಿದ್ದರೂ ಅವನ ಕೆಲಸದ ಒತ್ತಡದಿಂದಾಗಿ ಆರೋಗ್ಯದ ಹಾಗು ಶರೀರದ ಸಾಮತೋಲನದ ಕಡೆ ಗಮನ ಕೊಡಲು ಸಮಯ ಸಿಗುತ್ತಿರಲಿಲ್ಲ. ತುಂಬಾ ಹೊತ್ತು ಕಂಪೂಟರ್ನಲ್ಲಿ ಕೆಲಸ ಮಾಡಿತ್ತಿದ್ದುದರಿಂದ, ವಿರಾಮವಿಲ್ಲದೆ , ವೇಳೆಗೆ ಸರಿಯಾಗಿ ವಹಿಸಿರುವ ಕೆಲಸದ ಜವಾಬ್ದಾರಿ ಮುಗಿಸುವ ಆತುರದಲ್ಲಿ ಈಗ ಕಾರ್ತಿಕ್ ಬೆನ್ನುನೋವು, ಆಯಾಸ, ಮಲಬದ್ಧತೆಯಿಂದ ಬಳಲುತ್ತಿದ್ದಾನೆ.
. ಕಷ್ಟಪಟ್ಟು , ತ್ಯಾಗ ಮನೋಭಾವದಿಂದ ಕೆಲಸ ಮಾಡುವ ವಯಸ್ಸಿನಲ್ಲಿ ನಾವು ಆರೋಗ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಕೆಲವರು ಕೇವಲ ಕೆಲಸ, ವ್ಯಾಯಾಮ ಮಾಡಿ ತಮ್ಮ ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದೆಂಬ ಭ್ರಮೆಯಲ್ಲಿ ಇರುತ್ತಾರೆ. ಆದರೆ ಅಷ್ಟೇ ಪ್ರಾಮುಖ್ಯತೆಯನ್ನು ನಾವು ಸೇವಿಸುವ ಆಹಾರಕ್ಕೂ ನೀಡಬೇಕು.
ಆದರೆ ಕೇವಲ ಒಳ್ಳೇ ಆಹಾರವನ್ನು ತಿಂದರೇ ಆರೊಗ್ಯ ಬಂದೀತೆ??
ಇಲ್ಲ. ನಾವು ಸರಿಯಾದ ವಿಧದಲ್ಲಿ ಆಹಾರ ತಿನ್ನುವುದೇ ಅಲ್ಲದೇ ಅದನ್ನು ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯ. ಹೀಗೆ ತಿನ್ನಬೇಕು, ಹಾಗೇ ತಿನ್ನಬೇಕು ಎಂಬ ಯಾವ ನಿಯಮವಿಲ್ಲವಾದರೂ, ನಾವು ನಮ್ಮ ಸಾಮಾನ್ಯ ಪರಿಜ್ಞಾನದಿಂದ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸಬೇಕು
1. ನೀವು ತಿನ್ನುವ ಆಹಾರದ ಬಗ್ಗೆ ಗಮನವಿದೆಯೇ?
ಈಗಿನ ಆಹಾರ ಪಥ್ಯದ ಬಗ್ಗೆ ಗಮನವಿರಲಿ. ನೀವು ತಿನ್ನುವ ಆಹಾರಕ್ಕೆ ತಕ್ಕಂತೆ ದೈಹಿಕ ಶ್ರಮ ಪಡುತ್ತೀರಾ? ಚೆನ್ನಾಗಿ ಆಹಾರ ತಿಂದು ಅದನ್ನು ಸರಿಯಾದ ರೀತಿ ಜೀರ್ಣಿಸಿ ಕೊಳ್ಳಲು ನಿಮಗೆ ಸಮಯದ ಅಭಾವವೆ? ಆದ್ದರಿಂದ ತಿನ್ನುವ ಆಹಾರವು ಬೊಜ್ಜುಬರದೆ ಮತ್ತು ಸುಲಭವಾಗಿ ಜೀರ್ಣವಾಗುವ ಹಾಗಿರಬೇಕು. ಸ್ವಲ್ಪ ಹೊತ್ತು ಯೋಗದ ಕೆಲವು ಆಸನಗಳನ್ನು ಮಾಡಿದರೆ ದೇಹಕ್ಕೆ ಬೇಡದ ಕೊಬ್ಬನ್ನು ಕರಗಿಸಲು ಸಹಾಯವಾಗುವುದು.
2. ಹಸಿರು ತರಕಾರಿ, ಸೊಪ್ಪನ್ನು ಆಯ್ಕೆ ಮಾಡಿಕೊಳ್ಳಿರಿ
ನಿತ್ಯದ ಆಹಾರದಲ್ಲಿ ಸೊಪ್ಪನ್ನು ಸೇರಿಸಿದರೆ ಒಳಿತು. ಅದರಲ್ಲಿ ಪ್ರೋಟೀನ್, ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ನಾರಿನಾಂಶ ಹೆಚ್ಚಾಗಿ ಇರುವುದು. ಸೊಪ್ಪಿನಿಂದ ತಯಾರಿಸುವ ವಿವಿಧ ಬಗೆಗಳ ಆಹಾರಗಳು ತಯಾರಿಸಲು ಸುಲಭ, ಜೀರ್ಣವಾಗುವುದು ಸುಲಭ, ಆಯುರ್ವೇದದ ಪ್ರಕಾರ ಆಹಾರ ತಯಾರಿಕೆಯಲ್ಲಿ ಸಣ್ಣ ತರಬೇತಿ ತೆಗೆದುಕೊಂಡರೆ ಇನ್ನೂ ಬಗೆ ಬಗೆಯ ಖ್ಯಾದ್ಯಗಳನ್ನು ಕಲಿಯಬಹುದು.
3. ಯಾವಾಗ, ನೀರು ಕುಡಿಯಬೇಕು ತಿಳಿದಿದೆಯಾ
ನಾವು ಶಾಲೆಯಲ್ಲಿ ಕೇಳಿದ್ದು ಜ್ಞಾಪಕವಿದೆ. ನಮ್ಮ ದೇಹ ಶೇಕಡ 70% ರಷ್ಟು ನೀರಿನಾಂಶದಿಂದ ಕೂಡಿದೆ ಎಂದು. ನೀರಿನ ಮೂಲಕ ದೇಹಕ್ಕೆ ಬೇಕಾದ ಮಿನರಲ್ಸ್ ನ್ನು ಪಡೆಯಬೇಕು. ತುಂಬಾ ನೀರು ಕುಡಿಯುವದರಿಂದ ಚರ್ಮ ಕಾಂತಿಯುತವಾಗುವುದು, ಬೇಡದ ವಸ್ತುಗಳನ್ನು ದೇಹದಿಂದ ಹೊರಹಾಕುವುದು. ಊಟದ ಮಧ್ಯೆ ನೀರನ್ನು ಕುಡಿಯುವುದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿದಂತೆ. ಒಳ್ಳೆಯ ಅಭ್ಯಾಸವೆಂದರೆ ಊಟಕ್ಕೆ 30 ನಿಮಿಷ ಮೊದಲು ಅಥವ ಊಟದ ನಂತರ 30 ನಿಮಿಷ ಆದಮೇಲೆ ನೀರನ್ನು ಸೇವಿಸುವುದು.
4. ಸಾಕಷ್ಟು ಪ್ರೋಟೀನ್ ನಿಮ್ಮ ಆಹಾರ ಪಥ್ಯದಲ್ಲಿ ಸೇರಿಸಿ!
ಸಾಕಷ್ಟು ಪ್ರೋಟೀನನ್ನು ತಿನ್ನುವ ಆಹಾರದಲ್ಲಿ ಸೇರಿಸಲೇಬೇಕು. ಬ್ರೋಕೋಲಿ, ಸೊಯಾಬೀನ್, ಕಾಳುಗಳು, ನಾರಿನ ತರಕಾರಿ, ಪಾಲಾಕ್ ಸೊಪ್ಪಿನಲ್ಲಿ ಹೆಚ್ಚು ಸಾಕಷ್ಟು ಪ್ರೋಟೀನ್ ನಿಮ್ಮ ಆಹಾರ ಪಥ್ಯದಲ್ಲಿ ಸೇರಿಸಿ! ಅಂಶ ಹೆಚ್ಚಾಗಿರುವುದು, ಕೊಬ್ಬಿನಾಂಶ ಕಡಿಮೆ ಇರುವ ಹಾಲಿನಿಂದ ತಯರಿಸಿದ ಪದಾರ್ಥಗಳನ್ನು ಸಹ ಪ್ರೋಟೀನ್ ನಿಂದ ಕೂಡಿದೆ. ನಾವು ನಿತ್ಯವು ತಿನ್ನುವ ಆಹಾರದಲ್ಲಿ ಇದರ ಬಗ್ಗೆ ಗಮನವಿಡಬೇಕು.
5.ಆಹಾರವನ್ನು ಚೆನ್ನಾಗಿ ಅಗೆದು ತಿನ್ನಿರಿ
ನೀವೇಲ್ಲರೂ ಹಸು ಆಹಾರವನ್ನು ಅಗಿದು ತಿನ್ನುವುದನ್ನು ಗಮನಿಸಿದ್ದೀರ? ಅದು ಕನಿಷ್ಟ 40-60 ಸಲ ಆಹಾರವನ್ನು ಅಗಿಯುವುದು!.
ಆಹಾರ ಜೀರ್ಣವಾಗಲು ಅತೀ ಸುಲಭವಾದ ಮಾರ್ಗ ಎಂದರೆ ಚೆನ್ನಾಗಿ ಅಗಿದು ತಿನ್ನುವುದು. ತುಂಬಾ ಜನರು ಅವಸರದಲ್ಲಿ ಆಹಾರ ತಿಂದು ಅಗಿಯುವುದನ್ನೇ ಮರೆಯುತ್ತಾರೆ. ಇದು ಒಳ್ಳೆಯದಲ್ಲ. ನಾವು ಚೆನ್ನಾಗಿ ಅಗಿದು ತಿಂದ ಆಹಾರ ಬೇಗ ಜೀರ್ಣವಾಗುವುದು, ಅಗಿಯದಿದ್ದರೆ ನಾವು ಸೇವಿಸಿದ ಆಹಾರ ಜೀರ್ಣವಾಗದೆ, ಪಚನಾಂಗಗಳಿಗೂ ತೊಂದರೆ ಕೊಡುವುದು. ಆದ್ದರಿಂದ ಚೆನ್ನಾಗಿ ಅಗಿದು ತಿಂದ ಆಹಾರ ಹೊಟ್ಟೆಯಲ್ಲಿ ಶೀಘ್ರವಾಗಿ ಜೀರ್ಣವಾಗುವುದಲ್ಲದೆ, ಹಲ್ಲು- ಒಸಡುಗಳಿಗೂ ಒಳ್ಳೆಯ ವ್ಯಾಯಾಮ ದೊರಕುವುದು.
6.ಎಣ್ಣೆಯ ಪದಾರ್ಥ ಸಿಹಿ- ತಂಪು ಪಾನೀಯಗಳಿಂದ ದೂರವಿರಿ
ನಾಲಿಗೆಗೆ ರುಚಿ ರುಚಿ ಎನಿಸುವ ಎಣ್ಣೆಯಿಂದ ತಯಾರಿಸಿದ ತಿಂಡಿಗಳು ದೇಹಕ್ಕೆ ತುಂಬಾ ಹಾನಿಕರ. ಅವುಗಳು ಅಷ್ಟು ಶುದ್ಧವಾಗಿರುವುದಿಲ್ಲ ಮತ್ತು ಅತೀ ಕೊಂಬ್ಬಿನಾಂಶದಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೇ ತಂಪು ಪಾನಿಯಗಳಲ್ಲಿ ಸಕ್ಕರೆ ಅಂಶ ಜಾಸ್ತಿ ಇರುವುದರಿಂದ, ಇವುಗಳಿಂದ ಸ್ತೂಲಕಾಯ, ಮಧುಮೇಹ, ದಂತಕ್ಷಯಗಳಿಂದ ದುಷ್ಪರಿಣಾಮಗಳು ಆಗುತ್ತದೆ. ಅದರ ಬದಲು ಒಂದು ತಿಳಿ ಮಜ್ಜಿಗೆ ಅಥವ ನಿಂಬೆ ಷರಬತ್ತು ಒಳಿತು
7. ಮನೆ ಅಡಿಗೆಯೇ ರುಚಿ – ಮನೆಯಲ್ಲೇ ತಯಾರಿಸಿ
ಅಂಗಡಿಯಿಂದ ಪಿಜ್ಜಾ ತರಿಸುವ ಬದಲು, ಅದನ್ನೇ ಮನೆಯಲ್ಲಿ ತಯಾರಿಸಿ. ರಾತ್ರಿಯೂಟವನ್ನು ಆಲಿವ್ ಎಣ್ಣೆಯಿಂದ ತಯಾರಿಸಿ, ಬದಲಿಗೆ ಸೂರ್ಯಕಾಂತಿ ಎಣ್ಣೆ, ಕಡಲೆಕಾಯಿ ಎಣ್ಣೆಗಳನ್ನು ಬಳಸಬೇಡಿ. ಇದರಿಂದ ಶುದ್ಧತೆಯ ಜೊತೆಗೆ ಮನೆಯವರ ಜೊತೆಯೂ ಕಾಲ ಕಳೆಯುವ ಸದಾಕಾಶ ಮತ್ತು ದುಡ್ಡಿನಲ್ಲೂ ಉಳಿತಾಯ ಮಾಡಬಹುದು.
8. ನಿಮ್ಮ ಆಹಾರದ ಮೇಲೆ ಗಮನವಿಡಿ
ನಮ್ಮಲ್ಲಿ ತುಂಬಾ ಜನ ಊಟ ಮಾಡುವಾಗ ಟಿ.ವಿ. ವೀಕ್ಷಣೆ ಅಥವಾ ಮೊಬೈಲ್ ಪೋನಿನಲ್ಲಿ ಮಾತಾನಾಡುತ್ತಾರೆ. ಹೀಗೆ ಮಾಡುವುದರಿಂದ ನಾವು ಎಷ್ಟು ತಿನ್ನುತ್ತೇವೆ ಎಂಬ ಪರಿವೇ ನಮಗೆ ಇರುವುದಿಲ್ಲ. ನಮ್ಮ ಹೊಟ್ಟೆ ತುಂಬಿದರೂ ಸಹ ನಾವು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಏಕೆಂದರೆ ನಮ್ಮ ಗಮನ ಎಲ್ಲೋ ಇರುವುದು. ಆದ್ದರಿಂದ ತಿನ್ನುವ ಕಡೆ ಮಾತ್ರ ಮನಸಿಟ್ಟು ಊಟದ ಸಮಯದಲ್ಲಿ ರಿಮೋಟ್, ಮೊಬೈಲ್ ಫೆÇೀನನ್ನು ಬದಿಗೆ ಇಲ್ಲವೇ ದೂರವಿಡಿ.
9. ಎಂದಿಗೂ ಬೆಳಗಿನ ಉಪಹಾರವನ್ನು ಸೇವಿಸಲು ಮರೆಯಬೇಡಿ!
ಬೆಳಗಿನ ಉಪಹಾರ ದಿನದ ಆಹಾರದಲ್ಲಿ ತುಂಬಾ ಮುಖ್ಯವಾದದು. ದಿನವಿಡೀ ಪಚನಕ್ರಿಯೆ ಸರಿಯಿರಬೇಕೆಂದರೆ ಎಂದಿಗೂ ಬೆಳಗಿನ ಉಪಹಾರ ಇಲ್ಲದೇ ಮನೆಯಿಂದ ಆಚೆ ಹೊರಡಬೇಡಿ.
10. ತಿನ್ನುವ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಿ!
ಏನು ತಿನ್ನಬೇಕು, ಎಷ್ಟು ತಿನ್ನಬೇಕು ಎಂದು ತಿಳಿದರೆ ನಮ್ಮ ಪಚನಕ್ರಿಯೆಗೆ ತುಂಬಾ ಒಳಿತು. ವಜ್ರಾಸನದಲ್ಲಿ ಊಟವಾದ ನಂತರ ಸ್ವಲ್ಪ ಹೊತ್ತು ಕುಳಿತರೆ ಜೀರ್ಣಕ್ರಿಯೆಗೂ ಜಠರದಲ್ಲಿ ರಕ್ತ ಸಂಚಾರಕ್ಕೂ ಸಹಾಯ ಮಾಡಿದಂತಾಗುವುದು.
ಒಳ್ಳೆಯ ಆಹಾರ ನಿಮ್ಮ ದೈಹಿಕ ಮತ್ತು ಶಾರೀರಿಕ ಸ್ವಾಸ್ಥ್ಯಕ್ಕೂ ಒಳಿತು. ಆದ್ದರಿಂದ ಹಿಂದಿನ ಕಾಲದಲ್ಲಿ ಸಾಧು ಸಂತರು ಸಾತ್ವಿಕ ಆಹಾರವನ್ನೇ ಸೇವಿಸುತ್ತಿದ್ದರು. ಸಾತ್ವಿಕ ಆಹಾರ ತೆಗೆದುಕೊಂಡರೆ ಆಶ್ಚರ್ಯಕರ ರೀತಿಯಲ್ಲಿ ನಮ್ಮ ಸ್ವಭಾವವೂ ಬದಲಾವಣೆ ಹೊಂದುವುದು. ಸಾತ್ವಿಕ ಆಹಾರ ಅರಸಿ, ಸೇವಿಸಿ, ಚೆನ್ನಾಗಿ ಬಾಳಿರಿ.
ಜೀವನ ಕಲಾ ಯೋಗ ಕಾರ್ಯಕ್ರಮವು ಒಳ್ಳೆಯ ಸಾತ್ವಿಕ ಆಹಾರ ಮತ್ತು ಯೋಗದ ನಿತ್ಯ ಅಭ್ಯಾಸದಿಂದ ನಿಮ್ಮ ಜೀವನ ಶೈಲಿಯನ್ನೇ ಬದಲಾಯಿಸುವುದು. ಒಳ್ಳೆಯ ಆಹಾರದೊಂದಿಗೆ ಯೋಗಾಭ್ಯಾಸವೂ ಇದ್ದರೆ ಶಕ್ತಿವಂತರಾಗಿ, ಜೀವನದ ಎಲ್ಲ ವಿಷಯಗಳಿಗೂ ಗಮನ ಕೊಡುವಂತೆ ಆಗುವುದು. ಕೆಳಗೆ ಕೊಟ್ಟಿರುವ ಅರ್ಜಿಯನ್ನು ಭರ್ತಿ ಮಾಡಿಕೊಟ್ಟರೆ, ಜೀವನ ಕಲಾ ಯೋಗ ಇನ್ನೂ ಜಾಸ್ತಿ ನಿಮಗೆ ಈ ವಿಚಾರಗಳಲ್ಲಿ ಜ್ಞಾನವಂತರನ್ನಾಗಿ ಮಾಡುವುದು.
ಶಾರೀರಿಕ ಆರೋಗ್ಯದಿಂದ ನಿರುತ್ಸಾಹಿಯಾಗಿದ್ದೀರಾ? ಮಾನಸಿಕ ತುಮುಲಗಳು ನಿಮ್ಮ ವ್ರತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ದಾಳಿ ಮಾಡುತ್ತಿವೆಯಾ? ಕೆಳಗಿನ ಅರ್ಜಿಯನ್ನು ತುಂಬಿ, ಎಲ್ಲಾ ತೊಂದರೆ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ, ಸರಳ ಜೀವನವನ್ನು ಸಾಗಿಸಲು ಕನಿಷ್ಠ ಉಪಾಯಗಳಿಂದ ಸಹಜವಾಗಿ ನಿಮ್ಮ ಜೀವನ ಶೈಲಿಯು ಬದಲಾಗುವಂತೆ ಮಾಡಲು ಜೀವನ ಕಲಾ ಯೋಗದ ಸಹಾಯ ತೆಗೆದುಕೊಳ್ಳಿ.
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಯೋಗ ಬಲ್ಲವನಿಗೆ ರೋಗ, ಕಷ್ಟ ಕಾರ್ಪಣ್ಯಗಳೇನೂ ಇರುವುದೇ ಇಲ್ಲ