ಪಿ. ಸಿ. ಒ. ಎಸ್. ಗೆ ಯೋಗದ ಚಿಕಿತ್ಸೆ

15 ವರ್ಷಗಳ ಹಿಂದೆ ನನಗೆ ಪಿ.ಸಿ.ಒ.ಎಸ್. ಇದೆ ಎಂದು ವೈದ್ಯರು ಕಂಡು ಹಿಡಿದರು.  ವೈದ್ಯರು ಮೊದಲು ಹೇಳಿದಾಗ ನನಗೆ ಬಹಳ ಭಯವಾಗಿತ್ತು.  ನನಗೆ ಸಂಶಯವಿತ್ತು ನನಗೆ ಮಕ್ಕಳಾಗುತ್ತದೋ ಇಲ್ಲವೋ ಎಂದು.    ನನ್ನ ಸ್ನೇಹಿತೆ ಯೋಗದ ಶಿಕ್ಷಕಿ ಮತ್ತು ನಾನು ಅವರಿಂದ ಯೋಗವನ್ನು ಕಲಿತು ಅಭ್ಯಾಸ ಪ್ರಾರಂಭ ಮಾಡಿದೆ. ನಿಧಾನವಾಗಿ ಅದು ಹೋಯಿತು ಮತ್ತು ಮನಸ್ಸು ಮುಂಚಿನಂತೆ ಬಹಳವಾಗಿ ತೂಗಾಡುವುದು ಹೋಯಿತು. ಈಗ ನನಗೆ 30 ವರ್ಷಗಳು ಮತ್ತು ಇಬ್ಬರು ಆರೋಗ್ಯಕರ ಮಕ್ಕಳ ತಾಯಿ.  ಇಷ್ಟು ಸುಂದರತೆಯ  ಜೀವನ ಇರಲಿಲ್ಲ.   - ಶ್ರೀಮತಿ ರುಚಿಕ, ಗೃಹಿಣಿ.

ಪ್ರಪಂಚದಲ್ಲಿನ ಬಹಳ ಹೆಂಗಸರಲ್ಲಿ ಶ್ರೀಮತಿ ರುಚಿಕ ಪಿ. ಸಿ. ಒ. ಎಸ್.  ಯಿಂದ ಬಳಲುತ್ತಿರುವವರಲ್ಲಿ  ಒಬ್ಬರಾಗಿದ್ದಾರೆ (ಆಕ್ರೋನಿಮ್ ಫಾರ್ ಪಾಲಿಸಿಸತಸ್ಟಿಕ್ ಓವರಿಯನ್ ಸಿಂಡ್ರೋಮ್).  ಹೆಸರು ಹೇಳುವಂತೆ ಇದು ಅಷ್ಟೊಂದು ಹೆದರುವಂತಹುದಲ್ಲ. ಈಗಿನ ಕಾಲದಲ್ಲಿನ ಹೆಂಗಸರಲ್ಲಿ ವೀರ್ಯೋತ್ಪತ್ತಿಯ ವಯಸ್ಸಿನಲ್ಲಿ ಪಿ. ಸಿ. ಒ. ಎಸ್. ಸಾಮಾನ್ಯವಾದುದಾಗಿದೆ. ಕನಿಷ್ಠ 5 ರಿಂದ 10 % ವರೆಗಿನ ಯುವತಿಯರು ( ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಹೆಲ್ತ್ ರಿಸರ್ಚ್) ಸಲಹೆಯಂತೆ  ಈ ಪರಿಸ್ಥಿತಿಗೆ ಒಳಗಾಗಿದ್ದಾರೆ.  ಹಾಗೂ ಬಹಳ ಜನರು ಈ ಪಿ. ಸಿ. ಒ. ಎಸ್. ಗೆ ಯೋಗವು ಅತ್ಯತ್ತಮವಾದ ಹಾಗೂ ಕ್ಷೇಮವಾದ ಮಾದರಿಯ ಚಿಕಿತ್ಸೆಯೆಂದು ಹೇಳಲ್ಪಟ್ಟಿದ್ದಾರೆ.

ನಿಮಗೇನಾದರೂ ಪಿ. ಸಿ. ಒ. ಎಸ್. ತೊಂದರೆಯಿದ್ದಲ್ಲಿ ಹೇಗೆ ಯೋಗವು ಸಹಕಾರಿಯಾಗುವುದು ಎಂಬುದನ್ನು ಓದಿ ತಿಳಿದುಕೊಳ್ಳಿರಿ.  ಏನಾದರೂ ಇಲ್ಲದೇ ಇದ್ದರೂ ಸಹ ಓದುವುದನ್ನು ಮುಂದುವರಿಸಿ ಏಕೆಂದರೆ ಯೋಗವು ಸಾಮಾನ್ಯವಾಗಿ ಏನಾದರೂ ತೊಂದರೆ ಇದ್ದಲ್ಲಿ ಅಥವಾ ಇಲ್ಲದಿದ್ದರೂ ಸಹ ಯಾವಾಗಲೂ ಸಹಕಾರಿಯಾಗುತ್ತದೆ.

ಪಿ. ಸಿ. ಒ. ಎಸ್. ಗೆ ವಿಶೇಷವಾದ ಕಾರಣವಿಲ್ಲ.  ಬಹಳ ವೈದ್ಯರು , ಈಗಿನ ಕಾಲದ ಆಧುನಿಕ ಜೀವನ ಶೈಲಿಯಲ್ಲಿ ಒತ್ತಡದ ಫಲಿತಾಂಶದಿಂದ ಹೀಗಾಗುತ್ತದೆ ಎಂದು ನಂಬಿದ್ದಾರೆ.

ಅಪೋಲೋ ಆಸ್ಪತ್ರೆಯ ಡಾ: ಪ್ರತಿಮಾ ಮಾಲಿಕ್, ಹೆರಿಗೆಯ ನಿಪುಣೆ, ಹೇಳುವಂತೆ, ಬಹಳವಾದ ಆಕಾಂಕ್ಷೆಯುಳ್ಳ, ಒತ್ತಡವಿರುವ, ಕಾರ್ಯನಿರತವಾಗಿರುವ ಈಗಿನ ಮಹಿಳೆಯರಲ್ಲಿ ಈ ಪಿ.ಸಿ.ಒ.ಎಸ್. ವನ್ನು ಬಹಳಷ್ಟು ಕಾಣಬಹುದು ಎನ್ನುತ್ತಾರೆ.

ನಿಮಗೆ ಪಿ.ಸಿ.ಒ.ಎಸ್. ಇದೆಯೇ ಎಂದು ಹೇಗೆ ಕಂಡುಹಿಡಿಯುವುದು?

  1. ಅಸಾಮಾನ್ಯ ಅಥವಾ ತಿಂಗಳಿನ ರಜಸ್ವಲೆತನವೇ ಇಲ್ಲದಂತಿರುವುದು.
  2. ಆಗಿಂದ್ದಾಗ್ಗೆ ಕೂದಲಿನ ನಷ್ಟ ಮತ್ತು ಮುಖದ ಮೇಲೆ, ಬೆನ್ನು, ಹೊಟ್ಟೆ, ತೋಳು ಮತ್ತು ಕಾಲುಗಳ ಮೇಲೆ ದಟ್ಟವಾದ ಕೂದಲಿನ ಬೆಳವಣಿಗೆ.
  3. ಬಹಳಷ್ಟು  ಮೊಡವೆ
  4. ಮನಸ್ಸಿನ ಭಾವನೆಗಳ ಬದಲಾವಣೆ
  5. ತೂಕದ ಏರಿಕೆ
  6. ಬಂಜೆತನ

ಜೀವನದ ಪ್ರತಿನಿತ್ಯದಲ್ಲಿ ಒತ್ತಡವನ್ನು ಪೂರ್ಣವಾಗಿ ಹೋಗಲಾಡಿಸದಿದ್ದರೂ, ನಾವು ಖಂಡಿತವಾಗಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಅದನ್ನು ಬೆಳೆಸಿ ವಿತರಿಸಬಹುದು.   ಇಂತಹ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನಗಳು ಸಹಾಯವಾಗುವುದು.

ಪಿ.ಸಿ.ಒ.ಎಸ್. ನಲ್ಲಿ ಯೋಗವು ಯಾವ ರೀತಿಯಲ್ಲಿ ಮಾದರಿಯಾಗಿರುತ್ತದೆ?

ಬರೀ ಶಾರೀರಿಕವಾಗಿಯಲ್ಲದೇ, ಈ ಯೋಗ ವಿಜ್ಞಾನವು  ಸುಪ್ತವಾಗಿ ಹಾಗೂ ಆಳವಾದ ಮಟ್ಟದಿಂದ ಮಟ್ಟದಲ್ಲಿ ಬಹಳ ಪ್ರಗತಿಪರವಾಗಿದೆ.  ವ್ಯವಸ್ಥೆಯಲ್ಲಿ ಆಳವಾಗಿ ಬಹಳವಾದ ಒತ್ತಡಗಳನ್ನು ಹೊರಹಾಕುವಲ್ಲಿ ಯೋಗವು ಸಹಾಯಕಾರಿಯಾಗಿ ಪಿ.ಸಿ.ಒ.ಎಸ್. ಚಿಹ್ನೆಯಲ್ಲಿ ಸುಧಾರಣೆಯನ್ನು ಕಾಣಬಹುದು.

ಆಸನಗಳು ( ಯೋಗದ ಭಂಗಿಗಳು) ಪಿ.ಸಿ.ಒ.ಎಸ್. ಗಾಗಿ ವಿನ್ಯಾಸವನ್ನು ರೂಪಿಸಿರುವುದು ಗರ್ಭಕೋಶದ ಸುತ್ತಳತೆಯಲ್ಲಿ ತೆರೆಯುವುದಕ್ಕೆ ಸಹಾಯಕವಾಗುತ್ತದೆ  ಹಾಗೂ ಪ್ರಾಣಾಯಾಮಗಳು ( ಉಸಿರಾಟದ ವ್ಯಾಯಾಮಗಳು) ಶಕ್ತಿಯುತವಾದ ಮಾದರಿಯಾಗಿದ್ದು ಅದು ಮನಸ್ಸನ್ನು ಶಾಂತವಾಗಿರಿಸಲು ಸಹಾಯವಾಗುತ್ತದೆ.  ಪೂರ್ಣ ಶರೀರ ವ್ಯವಸ್ಥೆಯನ್ನು ಈ ಎರಡೂ ಆಯಾಮಗಳಿಂದ, ಕೋಮಲವಾದ ಧ್ಯಾನಗಳಿಂದ ಆಳವಾದ ಮಟ್ಟಕ್ಕೆ ಹೇಗಿ ವಿಷವನ್ನು ಹಾಗೂ ಒತ್ತಡಗಳನ್ನು ಹೊರತೆಗೆಯಲು ಸಾಧ್ಯವಾಗುತ್ತದೆ.  ಕೊನೆಯದಾಗಿ, ಸ್ವಯಂ ಶ್ರೀ ಶ್ರೀ ರವಿಶಂಕರ್  ರಚಿಸಿರುವ   ಸುದರ್ಶನ ಕ್ರಿಯೆಯ ಶಕ್ತಿಯುತವಾದ ಮಂತ್ರದಿಂದ ನಕಾರಾತ್ಮಕ ಭಾವನೆಗಳು ಮತ್ತು ಮನಸ್ಸಿನ ಬದಲಾವಣೆಗಳಿಗೆ ಸಹಾಯಕವಾಗುತ್ತದೆ.

ಪಿ.ಸಿ.ಒ.ಎಸ್. ಗೆ ಯೋಗದ ಭಂಗಿಗಳು : ( ಡಾ: ಸೇಜಲ್ ಷಾ, ಜೀವನ ಕಲಾ ಯೋಗದ ಶಿಕ್ಷಕರು ರವರ ಸಲಹೆಯಂತೆ )

ಪಿ.ಸಿ.ಒ.ಎಸ್.ನಲ್ಲಿ ವಿಶ್ರಾಮವು ಒಂದು ಮುಖ್ಯ ಅಂಶವಾಗಿದೆ.  ನೀವು ಆಸನದೊಂದಿಗೆ ಉಸಿರಾಟವನ್ನು ಬಳಸಿ ವಿಶ್ರಮಿಸಬಹುದಾಗಿದೆ. ದೀರ್ಘವಾದ ಮತ್ತು ಆಳವಾದ ಉಸಿರಿನೊಂದಿಗೆ ಪ್ರತಿ ಭಂಗಿಯನ್ನು ಮಾಡಿರಿ.

ಸೂಚಿ: ಶ್ರೀ ಶ್ರೀ ಯೋಗ ಶಿಕ್ಷಕರ ಸನ್ನಿಧಿಯಲ್ಲಿ ಎಲ್ಲಾ ಯೋಗದ ಆಸನಗಳನ್ನು ಕೌಶಲ್ಯತೆಯುಳ್ಳ ಯೋಗದ ಶಾಲೆಯಲ್ಲಿ ಮಾಡಬೇಕಿದೆ. ಹೊಟ್ಟೆಗೆ  ಬಹಳವಾದ ಒತ್ತಡವನ್ನು ಹೇರುವ ಭಂಗಿಗಳನ್ನು ಪಿ ಸಿ ಒ ಉಳ್ಳ ಹೆಂಗಸರು ಮಾಡುವುದನ್ನು ನಿಷೇದಿಸಲಾಗಿದೆ.    ನೀವು ಪ್ರತಿ ಭಂಗಿಗಳನ್ನು ಮಾಡುವಾಗಲೂ ವಿಶ್ರಾಂತಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಿ.

ಈ ಭಂಗಿಗಳು ತೂಕವನ್ನೂ ಸಹ ಕಡಿಮೆಗೊಳಿಸುತ್ತದೆ ( ಪಿ ಸಿ ಒ ಹೆಂಗಸರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಇದೆ)  . ಡಾ: ಸೇಜಲ್ ಷಾ ರವರು ಹೇಳುತ್ತಾರೆ:- ನೀವು ಶರೀರದ ತೂಕದಲ್ಲಿ  ಶೇಕಡಾ 5 ರಿಂದ 10 ರಷ್ಟು ಮಾತ್ರ ಯೋಗ ಮತ್ತು ಧ್ಯಾನಗಳಿಂದ ಕಡಿಮೆಗೊಳಿಸಿದರೂ ಅದು ಬಹಳವಾದುದ್ದಾಗಿದೆ.  ಇದು ನಿಮ್ಮ ಮನಸ್ಸಿಗೆ ವಿಶ್ರಾಮಕೊಡುವುದಲ್ಲದೇ ತೂಕದ ಹೆಚ್ಚಳದ ಒತ್ತಡವನ್ನು ಸುಲಭಗೊಳಿಸಿ ನಿಮ್ಮ ತಿಂಗಳಿನ ರಜಸ್ವಲೆಯನ್ನು ಸರಿಪಡಿಸುವಲ್ಲಿ ಸಹಾಯಕವಾಗುತ್ತದೆ.  ಪಿ.ಸಿ.ಒ.ಎಸ್. ನಲ್ಲಿ ಯೋಗ ಮತ್ತು ಧ್ಯಾನಗಳಿಗೆ ಸಾಕಷ್ಟು ಸಮಯವನ್ನು ಕೊಡುವುದು ಬಹಳ ಮುಖ್ಯವಾಗಿದೆ.

ಪಿ.ಸಿ.ಒ.ಎಸ್. ನಲ್ಲಿ ವಿಶ್ರಾಮವು ಒಂದು ಮುಖ್ಯ ಅಂಶವಾಗಿದೆ:  ಪ್ರಾಣಾಯಾಮವು ಉಸಿರಾಟದ ವ್ಯಾಯಾಮಕ್ಕೆ ಸಹಾಯವಾಗುವುದು, ಅಥವಾ ನೈಸರ್ಗಿಕವಾಗಿ ಪ್ರಾಣಾಯಾಮವು ಒತ್ತಡಗಳನ್ನು ಹೊರಬರಿಸುವ ದಾರಿಯಾಗಿದೆ.  ಡಾ: ಸೇಜಲ್ ಷಾ ರವರು ಹೇಳುತ್ತಾರೆ.ಪಿ.ಸಿ.ಒ.ಎಸ್. ಯಿಂದ ಬಳಲುತ್ತಿರುವ ಹೆಂಗಸರಿಗೆ  ಸ್ವಲ್ಪ ನಿಮಿಷಗಳ ಕಾಲದ ನಾಡಿ ಶೋಧನ ಪ್ರಾಣಾಯಾಮ ( ಒಂದರ ನಂತರ ಮೂಗಿನ ಹೊಳ್ಳೆಗಳಿಂದ ಉಸಿರಾಟ) ಮತ್ತು ಭ್ರಾಮರಿ ( ಜೇನಿನ ಪ್ರಾಣಾಯಾಮ) ಯನ್ನು ಮಾಡುವುದು ಒಳ್ಳೆಯ ಸಲಹೆಯಾಗಿದೆ. ಉಸಿರಾಟದ ಮಾರ್ಗಗಳಿಂದ ಈ ಪ್ರಾಣಾಯಾಮವು ಮನಸ್ಸಿನ ಒತ್ತಡವನ್ನು ಹೊರಹಾಕುವಲ್ಲಿ ಸಹಾಯಕವಾಗಿದೆ.

ಧ್ಯಾನವನ್ನು ಮಾಡಿ ಅಂತರವನ್ನು ಗಮನಿಸಿ.

ಸಲಹೆಗಳು

  1. ಜೈವಿಕ ಆಹಾರವನ್ನು ಬಳಸಿ ತಿನ್ನಿರಿ. ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರವನ್ನು ತ್ಯಜಿಸಿ.
  2. ಸಾಕಷ್ಟು ನೀರು ಕುಡಿಯಿರಿ.
  3. ನಿರಂತರವಾಗಿ ವ್ಯಾಯಾಮ ಮಾಡಿರಿ.  ನಿಮ್ಮ ತೂಕವನ್ನು ತಹಬದಿಯಲ್ಲಿಡಲು ವೇಗದ ಕಾಲ್ನಡಿಗೆಯು ಒಳ್ಳೆಯ ಸಲಹೆಯಾಗಿದೆ.
  4. ನೈಸರ್ಗಿಕ ಸ್ಥಳಗಳಿಗೆ ಭೇಟಿ ಕೊಟ್ಟು ಸ್ವಲ್ಪ ಸಮಯವನ್ನು ಒಬ್ಬರೇ ಕಳೆಯಿರಿ.
  5. ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಹೆಜ್ಜೆಯಿಡಿರಿ.  ಒಂದು ತೊಂದರೆಯನ್ನು ಯೋಚನೆ ಮಾಡುವುದರಿಂದ ಅದು ಇನ್ನೂ ಕಡಿಯಾಗುತ್ತದೆ
  6. ಸಂಗೀತದೊಂದಿಗೆ ಕೇಳಿ ಸ್ಪಂದಿಸಿ, ಪುಸ್ತಕಗಳನ್ನು ಓದಿರಿ, ತೋಟಗಾರಿಕೆಗೆ ಸ್ವಲ್ಪ ಸಮಯವನ್ನು ಬಳಸಿ

ಒತ್ತಡವು ಮನಸ್ಸಿನಿಂದ ಪ್ರಾರಂಭವಾಗಿ ಇದರ ಪರಿಣಾಮವು ಶರೀರದ ಮೇಲೆ ತೋರುವುದರಿಂದ ಮನಸ್ಸಿನ ಮಟ್ಟದಲ್ಲಿಯೇ ಇದನ್ನು ಮೊಟುಕುಗೊಳಿಸುವುದು ಮುಖ್ಯ ಅಂಶವಾಗಿದೆ.  ಇದನ್ನು ಧ್ಯಾನದ ಮೂಲಕ ಮಾಡಬಹುದು.    ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ರವರು ವೈಜ್ಞಾನಿಕವಾಗಿ ಇದರ ಬಗ್ಗೆ ಅವಲೋಕಿಸಿ ಈ ಅಭ್ಯಾಸದಿಂದ ಬಹಳಷ್ಟು ಆರೋಗ್ಯದಲ್ಲಿ ಉಪಯೋಗವಿದೆಯೆಂದು ಸ್ಪಷ್ಟಪಡಿಸಿದ್ದಾರೆ.

ಡಾ: ಸೇಜಲ್ ಷಾ ಹೇಳುತ್ತಾರೆ  " ನಾವು ಯಾವಾಗ ಆಳವಾಗಿ ಆತ್ಮಶೋಧನೆ ಮಾಡುತ್ತೀವೋ  ಆಗ ಒಳಗಿನಿಂದಲೇ ಗುಣ ಕಂಡುಬರುವುದು."  ಕೆಲವು ನಿಮಿಷಗಳು ನೆಟ್ಟಗೆ ಕಣ್ಣುಗಳನ್ನು ಮುಚ್ಚಿ ಕುಳಿತಾಗ ಪರಮಾವಧಿಯ ವಿಶ್ರಾಮ ದೊರಕುವುದು ಮತ್ತು ಸುಮ್ಮನೆ ಯೋಚಿಸುವ ಬದಲು ನಿಮ್ಮ ತೊಂದರೆಗಳಿಗೆ ಸರಿಯಾದ ಉತ್ತರವೂ ದೊರಕಿದಂತಾಗುವುದು .

ಬಹಳ ಹೆಂಗಸರಿಗೆ ಪಿ.ಸಿ.ಒ.ಎಸ್. ಇದೆಯೆಂದು ಅವರ ಚಿಕ್ಕ ಯೌವನದಲ್ಲೇ ತಿಳಿದಾಗ ಅವರು ಗೊಂದಲಕ್ಕೊಳಗಾಗುತ್ತಾರೆ ಹಾಗೂ ಆಶಾಭಂಗಗೊಳ್ಳುತ್ತಾರೆ.  ಸಮಗ್ರವಾದ ಯೋಗ ಮತ್ತು ಧ್ಯಾನಗಳನ್ನುಜೀವನದಲ್ಲಿ ಮುಂಚಿತವಾಗಿ ಕಲಿತು ಅಭ್ಯಾಸ ಮಾಡಿದಲ್ಲಿ ಶರೀರವನ್ನು ರೋಗಮುಕ್ತವನ್ನಾಗಿಸಿ ಮತ್ತು ಆರೋಗ್ಯದ ಮನಸ್ಸನ್ನು ಹೊಂದಬಹುದು.

ಪಿ.ಸಿ.ಒ.ಎಸ್. ಹೆಂಗಸರಿಗೆ ಸುದರ್ಶನ ಕ್ರಿಯೆಯು ಬಹಳಷ್ಟು ಸಹಾಯಕವಾಗಿದೆ

ಪಿ.ಸಿ.ಒ.ಎಸ್. ಅಸ್ವಸ್ಥತೆಯಿಂದ 9 ವರ್ಷಗಳಿಂದಲೂ ಇರುವ ಶ್ರೀಮತಿ ಸರೀನ ಮೆಹಬೂಬಾನಿಯವರು ಅವರ ಅನುಭವವನ್ನು ಹಂಚಿಕೊಂಡಿದ್ದಾರೆ.  " ನನಗೆ ಏನು ತೊಂದರೆಯೆಂದರೆ ನನ್ನ ಮುಖದಮೇಲೆಲ್ಲಾ ತುಂಬಾ ಮೊಡವೆಗಳು ಬಂದ್ದಿದ್ದು ಹಾಗೂ ಆಶಾಭಂಗವಾಗಿತ್ತು.  ಆದರೆ ನಾನು ಯಾವ ಧ್ಯಾನವನ್ನೂ ಮಾಡಲಿಲ್ಲ.  ನಾನು ನನ್ನ ಆಹಾರವನ್ನು ಮಾತ್ರ ಮಿತಗೊಳಿಸಿದ್ದೆ.  ಸ್ವಚ್ಚ ಆಹಾರಗಳು , ಹಸಿ ತರಕಾರಿಗಳು, ಬಹಳ ನೀರು ಕುಡಿಯುವುದು ಮತ್ತು ವ್ಯಾಯಾಮ .  ದಿನ ಕಳೆದಂತೆ, ನನ್ನ ಶರೀರವು ಗಾಳಿಯ ಹಾಗೆ ತುಂಬಿಕೊಂಡು ಬಹಳ ಭಾರವಾದವು ಹಾಗೂ ನಾನು ಅಂತರ್ಮುಖಿಯಾಗತೊಡಗಿದೆ.  ನನ್ನ ಸುದರ್ಶನ ಕ್ರಿಯೆಯ ಅಬ್ಯಾಸದಿಂದ ಬಹಳಷ್ಟು ಸಹಾಯವಾಗತೊಡಗಿತು.  ಅದು ನನಗೆ ಶಕ್ತಿ ಮತ್ತು ಚೈತನ್ಯವನ್ನು ತಂದುಕೊಟ್ಟು ಈಗ ನಾನು ಬಹಳಷ್ಟು ಸುಧಾರಿಸಿದ್ದೇನೆ".

ಸರೀನ ಹೇಳುತ್ತಾರೆ. ಸುದರ್ಶನ ಕ್ರಿಯೆಯು ಮನಸ್ಸಿನ ಸ್ಥಿಮಿತತೆಗೂ ಸಹ ಬಹಳ ಸಹಾಯವಾಗುತ್ತದೆ ಹಾಗೂ ನಕಾರಾತ್ಮಕ ಭಾವನೆಗಳೂ ಕಡಿಮೆಯಾದವು.  ಆರೋಗ್ಯಕರ ಆಹಾರ, ವ್ಯಾಯಾಮ, ಯೋಗ ಮತ್ತು ಧ್ಯಾನವು ಸರೀನರಿಗೆ ಚಿಹ್ನೆಯನ್ನು ಕಂಡು ಹಿಡಿಯುವುದರ ಜೊತೆಗೆ ತೊಂದರೆಯು ಇನ್ನೂ ಕಡೆಗಾಣುವುದನ್ನು ಕಂಡು ಹಿಡಿದಿದ್ದಾರೆ.  ಈಗ ಅವರಿಗೆ ಮೊಡವೆಗಳು ಕಡಿಮೆಯಾಗಿ ಯೋಚನೆಗಳು ಕಡಿಮೆಯಾಗಿವೆ.

ವಿಜ್ಞಾನ ಮತ್ತು ಆಧ್ಯಾತ್ಮಿಕತೆ:  ಕೈಯಿಂದ ಕೈನಲ್ಲಿ:

ಆಧುನಿಕ ವಿಜ್ಞಾವೂ ಸಹ ಯೋಗ ಮತ್ತು ಧ್ಯಾನಗಳ ಬೆಳವಣಿಗೆಯನ್ನು ಒಪ್ಪಿಕೊಂಡು ಜೀವನದ ಕೆಲವು ಜೀವನಶೈಲಿಯ ಅಸ್ತವ್ಯಸ್ಥತೆಗಳಾದ ಮಧುಮೇಹ ಮತ್ತು ಪಿ.ಸಿ.ಒ.ಎಸ್. ಗಳಿಗೆ ಚಿಕಿತ್ಸೆಯಾಗುವುದಾಗಿ ಹೇಳಿವೆ.  ವೈದ್ಯರು ಈಗ ಅವರ ಪಿ.ಸಿ.ಒ.ಎಸ್. ರೋಗಿಗಳಿಗೆ ಚಿಕಿತ್ಸೆಗಾಗಿ ಔಷಧಿಗಳನ್ನು ಹೇಳುವುದರ ಜೊತೆಗೆ ಕೆಲವು ನಿಮಿಷಗಳ ಪ್ರಾಣಾಯಾಮ ಮತ್ತು ಧ್ಯಾನಗಳ ಅಭ್ಯಾಸವನ್ನೂ ಮಾಡಲು ನಿರ್ದೆಶಿಸುತ್ತಾರೆ.  ಡಾ: ಛಾಯ ಪಾಟಿಲ್, ಹೆರಿಗೆಗಳ ಪರಿಣಿತಿ, ಫೋರ್ಟೀಸ್ ಆಸ್ಪತ್ರೆ, ಹೇಳುತ್ತಾರೆ, " ಇಂದಿನ ಯುಗದಲ್ಲಿ, ಒಳ್ಳೆಯ ಫಲಿತಾಂಶಕ್ಕಾಗಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಒಟ್ಟುಗೂಡಿಸಬೇಕು.  ಎರಡೂ ಒಂದರ ಜೊತೆಗೆ ಇನ್ನೊಂದರಂತೆ ನಡೆಯಬೇಕು.

ಪಿ.ಸಿ.ಒ.ಎಸ್.ಗೆ ಸರಿಯಾದ ಕಾರಣವು ಗೊತ್ತಿಲ್ಲದಿದ್ದರೂ , ದಯೆಯಿಂದ ವಿವಿಧ ಚಿಕಿತ್ಸೆಗಳು ದೊರಕುವುದು.  ಯೋಗ ಮತ್ತು ನಿಸರ್ಗವಾದ ಜೀವನದ ಬದುಕಿನ ದಾರಿಯೊಂದಿಗೆ ನೀವು ಕೆಲವನ್ನು ಆರಿಸಿಕೊಳ್ಳಬಹುದು. ಆದಾಗ್ಯೂ, ನಿಮ್ಮ ಅಭ್ಯಾಸವನ್ನು ನಿರಂತರವಾಗಿರಿಸಿಕೊಂಡಲ್ಲಿ ನೀವು ಉತ್ತಮ ಫಲಿತಾಂಶವನ್ನು ಕಾಣಬಹುದು.

ಹಾಗೂ, ಒಳ್ಳೆಯ ಸುದ್ದಿಯೆಂದರೆ, ನೀವೆಷ್ಟು ಯೋಗದ ಅಭ್ಯಾಸ ಮಾಡುತ್ತೀರೋ ಅಷ್ಟೇ ಫಲಿತಾಂಶವು ದೊರಕುತ್ತದೆ. ಅಂದರೆ ನೀವು ಸ್ವಲ್ಪವೇ ಸಾಧನೆ ಮಾಡಿದರೂ ಅದಕ್ಕೆ  ಫಲ ದೊರಕುತ್ತದೆ.

ದೀರ್ಘಕಾಲದ ಮತ್ತು  ಧೃಡವಾದ ಯೋಗಾಭ್ಯಾಸವನ್ನು ಮಾಡುವುದರಿಂದ ನಿಮ್ಮ ಪಿ.ಸಿ.ಒ.ಎಸ್. ಬಗೆಗಿನ ಯೋಚನೆಯನ್ನು ಬಿಡಬಹುದು.

  1. ಚಿಟ್ಟೆಯ ಭಂಗಿ: ಪಿ.ಸಿ.ಒ.ಎಸ್. ಗಳಿಗೆ ಉತ್ತವವಾಗಿ ಸಹಾಯಕವಾಗುತ್ತದೆ.  ನಿಮ್ಮ ಕಾಲುಗಳನ್ನು ಬಹಳವಾಗಿ ಹಾರಿಸಬೇಡಿ.  ಅದರ ಬದಲು ದೀರ್ಘ ಕಾಲ ಅದೇ ಭಂಗಿಯಲ್ಲಿರಲು ಪ್ರಯತ್ನ ಪಡಿರಿ.
  2. ಅದಕ್ಕೂ ಹೆಚ್ಚೆಂದರೆ ಸುಪ್ತಬಾಧಕೋನಾಸನವು ಚಿಟ್ಟೆಯ ಭಂಗಿಯಂತೆಯೇ ಸಹಾಯಕವಾಗುವುದು, ಈ ಬಾರಿ ಮಲಗಿಕೊಂಡು ಮಾಡುವುದು.  ಇದನ್ನು ಮಾಡುವುದರಿಂದಲೇ ಬಹಳಷ್ಟು ವಿಶ್ರಾಂತಿ ಸಿಗುವುದು. ಈ ಅನುಭವವನ್ನು ವೃದ್ದೀಕರಿಸಲು ಸ್ವಲ್ಪ ಕೋಮಲವಾದ ಸಂಗೀತವನ್ನು ಹಾಕಿಕೊಂಡು ಹಾಗೂ ಹಿಂಭಾಗಕ್ಕೆ ಮೆತ್ತನೆಯ ದಿಂಬನ್ನು ಹಾಕಿಕೊಳ್ಳಬೇಕು.  ಪ್ರಾರಂಭಿಕರಿಗೆ, ಮೆತ್ತನೆಯ ದಿಂಬನ್ನು ಉಪಯೋಗಿಸಿ ಈ ಭಂಗಿಯನ್ನು ಮಾಡುವುದು ಒಳ್ಳೆಯ ಸಲಹೆಯಾಗಿದೆ.
  3. ಭಾರದ್ವಾಜಾಸನ ( ಭಾರಧ್ವಾಜನ ತಿರುಗಿಸುವಿಕೆ)   ಕುಳಿತುಕೊಂಡು ಬೆನ್ನನ್ನು ತಿರುಗಿಸುವುದು . ಪಿ.ಸಿ.ಒ.ಎಸ್. ರೋಗಿಗಳಿಗೆ ಸಹಾಯವಾಗುವುದು
  4. ಚಕ್ಕಿ ಚಲನಾಸನ (ರುಬ್ಬುಗುಂಡನ್ನು ಆಡಿಸುವುದು)ವು ಬಹಳ ಸಾಮಾನ್ಯವಾದ ವ್ಯಾಯಾಮವಾಗಿದ್ದು ಬಹಳವಾದ ಉಪಯೋಗದ್ದಾಗಿದೆ. ಇದು ಲಿವರ್, ಕಿಡ್ನಿ, ಪ್ಯಾಂಕ್ರಿಯಾ, ಗರ್ಭಕೋಶ ಮತ್ತು ಜೀರ್ಣೋತ್ಪತಿ ಭಾಗಗಳಿಗೆ ಮಾಲೀಷ್ ಮಾಡುವುದರಲ್ಲಿ ಸಹಾಯಕವಾಗುತ್ತದೆ.
  5. ಶವಾಸನ(ಹೆಣದ ಭಂಗಿ) ಯ ಇನ್ನೊಂದು ಉಪಯುಕ್ತ ಭಂಗಿಯಾಗಿದೆ.  ಪಿ.ಸಿ.ಒ.ಎಸ್. ನಲ್ಲಿ ಹೆಚ್ಚು ಹೆಚ್ಚು ವಿಶ್ರಮಿಸಿದಲ್ಲಿ ನೀವು ಉತ್ತಮವಾದ ಅನುಭವವನ್ನು ಹೊಂದುತ್ತೀರಿ ಹಾಗೂ  ಎಲ್ಲಾ ಯೋಗ ಮಾಡಿದ ನಂತರ ಈ ಭಂಗಿಯು ಪೂರ್ಣ ವಿಶ್ರಾಂತಿಗೆ ಸಹಾಯಕವಾಗುವುದು.
  6. ಪದ್ಮಸಾಧನದ ಅಭ್ಯಾಸವು ಬಹಳವಾಗಿ ಪಿ.ಸಿ.ಒ.ಎಸ್. ರೋಗಿಗಳಿಗೆ ಉಪಯುಕ್ತವಾಗುವುದೆಂದು ಪರಿಗಣಿಸಲಾಗಿದೆ.
  7. ನೀವು ನಿಮ್ಮ ಒತ್ತಡವನ್ನು ದೀರ್ಘಕಾಲ ಹೊಟ್ಟೆಯ ಭಾಗಕ್ಕೆ ಹಾಕಿಲ್ಲವೆನ್ನುವುದನ್ನು ಖಚಿತ ಪಡಿಸಿಕೊಳ್ಳಿ.  ( ಧನುರಾಸನ , ವಿಪರೀತ ಶಲಬಾಸನ, ಭುಜಂಗಾಸನ ಮತ್ತು ನೌಕಾಸನ )
  8. ಕೆಲವು ಬಾರಿಯ ಸೂರ್ಯ ನಮಸ್ಕಾರವನ್ನು ವೇಗವಾಗಿ ಮಾಡುವುದರ ಮೂಲಕ ತೂಕದ ಕಡಿಮೆಗೆ ಒಳ್ಳೆಯದು: ಆದಾಗ್ಯೂ, ಇದನ್ನು ದೀರ್ಘವಾಗಿ ಕೆಲವೇ ಸುತ್ತುಗಳನ್ನು ಪ್ರತಿದಿನವೂ ಮಾಡುವುದರೊಂದಿಗೆ ಬಹಳಷ್ಟು ವಿಶ್ರಾಂತಿ ದೊರೆಯುತ್ತದೆ.