ಬೇರೆ ಯೋಗಾಸನದಂತಲ್ಲದೆ, ಈ ತ್ರಿಕೋಣಾನಾಸನದ ಭಂಗಿಯಲ್ಲಿ ಶರೀರದ ಸಮತೋಲನೆಗಾಗಿ ಕಣ್ಣುಗಳನ್ನು ಬಿಟ್ಟಿರಬೇಕು
ತ್ರಿಕೋಣಾಸನದ ಭಂಗಿಯನ್ನು ಹೇಗೆ ಮಾಡುವುದು?
- ನೆಟ್ಟಗೆ ನಿಂತು ನಿಮ್ಮ ಪಾದಗಳನ್ನು ಬೇರ್ಪಡಿಸಿ ಆರಾಮವಾಗಿ ನಿಲ್ಲಿರಿ ( ಮೂರುವರೆಯಿಂದ ನಾಲ್ಕು ಅಡಿಯಷ್ಟು).
- ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಷ್ಟು ಹೊರಗೆ ತಿರುಗಿಸಿ ಹಾಗೂ ಎಡ ಪಾದವನ್ನು 15 ಡಿಗ್ರಿಗಳಷ್ಟು ತಿರುಗಿಸಿ.
- ಈಗ ನಿಮ್ಮ ಬಲ ಹಿಮ್ಮಡಿಯ ಮಧ್ಯಭಾಗವನ್ನು ಎಡಪಾದದ ಮಧ್ಯಕ್ಕೆ ಸಮನಾಗಿಸಿ.
- ನಿಮ್ಮ ಪಾದಗಳು ನೆಲವನ್ನು ಒತ್ತುತ್ತಿರುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ನಿಮ್ಮ ಶರೀರವು ಎರಡೂ ಪಾದಗಳ ಮೇಲೆ ಸಮಾನಾಂತರದಲ್ಲಿರಿಸಿ.
- ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ, ಹಾಗೂ ಬಿಡುವಾಗ ನಿಮ್ಮ ಶರೀರವನ್ನು ಬಲಭಾಗಕ್ಕೆ ಬಾಗಿಸಿ ಹಿಂಭಾಗ ಕೆಳಗಾಗಿಸಿ , ಸೊಂಟವನ್ನು ನೆಟ್ಟಗಾಗಿಟ್ಟುಕೊಂಡು , ನಿಮ್ಮ ಎಡಗೈಯನ್ನು ಗಾಳಿಯಲ್ಲಿ ಮೇಲೆತ್ತುತ್ತಿದಂತೆ ನಿಮ್ಮ ಬಲ ಕೈಗಳ ನೆಲದ ಕೆಳ ಭಾಗಕ್ಕೆ ಇಳಿಸಿರಿ. ಎರಡೂ ಕೈ ಗಳನ್ನು ಒಂದೇ ನೇರದಲ್ಲಿರಿಸಿ. * ನಿಮ್ಮ ಬಲ ಕೈಯನ್ನು ನಿಮ್ಮ ಮೊಳಕಾಲಿನ ಮುಂಭಾಗದಲ್ಲಿರಿಸಿ, ಅಥವಾ ನಿಮ್ಮ ಬಲ ಪಾದದ ಹೊರಗೆ ನೆಲದ ಮೇಲಿರಿಸಿ, ಏನೇ ಆದರೂ ನಿಮ್ಮ ಸೊಂಟವನ್ನು ಅಲುಗಿಸದೇ ಇರಿ. ನಿಮ್ಮ ಎಡ ತೋಳನ್ನು ಮೇಲ್ಚಾವಣಿಗೆ ವಿಸ್ತರಿಸಿ ನಿಮ್ಮ ಭುಜಗಳ ಮೇಲೆ ತನ್ನಿರಿ. ನಿಮ್ಮ ತಲೆಯನ್ನು ಯಾವ ಕಡೆಗೂ ತಿರುಗಿಸದೇ ಅಥವಾ ಎಡಕ್ಕೆ ತಿರುಗಿಸಿ ಕಣ್ಣುಗಳು ಎಡ ಕೈಗಳನ್ನು ನೋಡುತ್ತಿರಲಿ.
- ನಿಮ್ಮ ಶರೀರವು ಪಕ್ಕಕ್ಕೆ ಬಾಗಿರುವುದನ್ನು ಗಮನಿಸಿ ಹಿಂದೆ ಅಥವಾ ಮುಂದಕ್ಕಿಲ್ಲದಿರಲಿ. ಜಠರ ಮತ್ತು ಎದೆಯು ಹಿಗ್ಗಿಸಿರಲಿ.
- ಆದಷ್ಟು ಹಿಗ್ಗಿಸಿ ಹಾಗೂ ಧೃಡತೆ ಇರಲಿ. ದೀರ್ಘವಾದ ಉಸಿರುಗಳನ್ನು ತೆಗೆದುಕೊಳ್ಳುತ್ತಿರಿ. ಪ್ರತಿ ಉಸಿರಿನ ಬಿಡುವಿಕೆಯಲ್ಲಿ ಶರೀರಕ್ಕೆ ಹೆಚ್ಚು ಹೆಚ್ಚು ವಿಶ್ರಾಂತಿಯನ್ನು ಕೊಡಿರಿ. ಶರೀರದೊಂದಿಗೆ ಮತ್ತು ಉಸಿರಿನ ಜೊತೆಗಿರಿ.
- ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಿದಂತೆ , ಮೇಲೆ ಬಂದು ನಿಮ್ಮ ತೋಳುಗಳನ್ನು ನಿಮ್ಮ ಪಕ್ಕಕ್ಕೆ ತನ್ನಿರಿ. ಮತ್ತು ನಿಮ್ಮ ಪಾದವನ್ನು ನೇರಗೊಳಿಸಿ. ಇದನ್ನೇ ಇನ್ನೊಂದು ಪಕ್ಕಕ್ಕೂ ಪುನ: ಬಳಸಿರಿ.
ತ್ರಿಕೋಣಾಸನದಿಂದ ಉಪಯೋಗ
- ಕಾಲುಗಳು, ಮಂಡಿಗಳು, ಪಾದದ ಕೋನಗಳು, ತೋಳುಗಳು ಮತ್ತು ಎದೆ ಇವುಗಳಿಗೆ ಶಕ್ತಿ ದೊರಕುವುದು.
- ಹಿಂಭಾಗ, ತೊಡೆ ಸಂದುಗಳು, ಮಂಡಿಯ ಹಿಂಭಾಗದ ಸ್ನಾಯುಗಳು ಮತ್ತು ಮೀನು ಖಂಡಗಳು: ಭುಜಗಳು, ಎದೆ ಮತ್ತು ಬೆನ್ನು ಮೂಳೆ ಇವುಗಳ ವಿಸ್ತರಣೆಯಾಗಿ ತೆರೆದುಕೊಳ್ಳುವುದು.
- ಮನಸ್ಸು ಮತ್ತು ಶಾರೀರಿಕತೆಯಲ್ಲಿ ಸಮಾನತೆ ಹೊಂದುವುದು.
- ತಿಂದ ಆಹಾರ ಅರಗುವಲ್ಲಿ ಸಹಾಯಕವಾಗುವುದು.
- ಆತಂಕ, ಒತ್ತಡ, ಬೆನ್ನು ನೋವು ಮತ್ತು ಸೊಂಟ ನೋವು ಕಡಿಮೆಯಾಗುವುದು.
ತ್ರಿಕೋಣಾಸನದಿಂದಾಗುವ ವಿರೋಧತೆ
- ತೀವ್ರವಾದ ಅರೆತಲೆ ನೋವು , ಅತಿಸಾರ, ಕಡಿಮೆ ಹಾಗೂ ಹೆಚ್ಚಿನ ರಕ್ತದೊತ್ತಡ, ಅಥವಾ ಕುತ್ತಿಗೆ ಮತ್ತು ಹಿಂದಿನ ಗಾಯಗಳು ಈ ಆಸನವನ್ನು ಮಾಡುವುದನ್ನು ನಿರಾಕರಿಸಬೇಕು. ( ಹೆಚ್ಚಿನ ರಕ್ತದೊತ್ತಡವಿರುವವರು ಈ ಭಂಗಿಯನ್ನು ಮಾಡಬಹುದು ಆದರೆ ಕೈಗಳನ್ನು ತಲೆಯ ಮೇಲಿನಿಂದ ತರುವುದನ್ನು ಮಾಡಬಾರದು. ಏಕೆಂದರೆ ರಕ್ತದೊತ್ತಡವು ಇದರಿಂದ ಹೆಚ್ಚಬಹುದು.)
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ.